ಬದುಕಲ್ಲಿ ನಾವು ಬಯಸಿದ್ದೆಲ್ಲಾ ಖಂಡಿತ ಸಿಗುವುದಿಲ್ಲ. ಹಾಗೆಂದು ನಿರಾಶರಾಗಬೇಕಿಲ್ಲ. ಬದುಕಿನ ನಿಯಮವೇ ಅದು. ಬಯಸಿದ್ದೆಲ್ಲ ಸಿಕ್ಕರೆ ಅದಕ್ಕೆ ನಾವು ಕೊಡುವ ಗೌರವ ಕೂಡ ಕಡಿಮೆಯಾಗುತ್ತದೆ. ಕೊನೆಗೂ ಬದುಕೆಂದರೆ ಪ್ರಯತ್ನವಷ್ಟೆ. ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರಬೇಕು, ನಾವು ಅಂದು ಕೊಂಡದ್ದ ಮಾಡಲು ಸದಾ ಶ್ರಮಿಸುತ್ತಿರಬೇಕು. ಆ ದಾರಿಯಲ್ಲಿ ಹಲವು ಬಾರಿ ನಿರೀಕ್ಷಿತ...
ಅಂಕಣ
ಬರ್ರಿ .. ಜರ್ಮನಿಯ ಮನಿಗ …
“ನಮ್ ಥರ ಸಂಸ್ಕೃತಿ, ಕುಟುಂಬವ್ಯವಸ್ಥೆ ಪ್ರಪಂಚದಲ್ಲೆಲ್ಲೂ ಇಲ್ಲ ಬಿಡಿ… ಫಾರಿನ್ ನಲ್ಲಿ ಮಾತೆತ್ತಿದರೆ ಡೈವೊರ್ಸು, ಮಕ್ಕಳಂತೂ ಕುಲಗೆಟ್ಟು ಹೋಗಿರ್ತಾರೆ….” ಇಂಥ ಮಾತುಗಳನ್ನು ನಾನು ಕೇಳಿದಾಗೆಲ್ಲ ಒಮ್ಮೆ ಒಂದು ಫಾರಿನ್ ಕುಟುಂಬದ ಜತೆ ಸ್ವಲ್ಪ ದಿನ ಇದ್ದು ಬರಬೇಕು… ಇದೆಲ್ಲ ನಿಜವಾ ಎಂದು ನೋಡಬೇಕು ಎಂದುಕೊಳ್ಳುತ್ತಿದ್ದೆ. ಅಂಥ ಅಪೂರ್ವ ಅವಕಾಶ ಕೊನೆಗೂ...
ಹೂವ ತೇರಲೊಬ್ಬ ದೇವರು!
“ಮುಂಜಾವಿನ ಕನಸಿನಲಿ ನೀ ನೀಡಿದ ಸಿಹಿವಚನ. ನನ್ನೊಲವೇ ಮರೆಯದೆಯೇ ಬಲುಬೇಗ ಈಡೇರಿಸು” ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿರುವ ಒಂದು ಹಾಡಿನ ಪಲ್ಲವಿ ಇದು. ಈ ಹಾಡಿನ ಚರಣದಲ್ಲಿ ಒಂದು ಸಾಲಿದೆ: `ಖುಷಿಯಲಿ ಕಂಪಿಸಿ ಮನಸೀಗ ಹೂವ ತೇರು’ ಎಂದು. ಅದೇಕೋ ಅರಿಯೆ, ಈ ಸಾಲಿನಲ್ಲಿರುವ ‘ಹೂವ ತೇರು’ ಪದ ತುಂಬ ಆಪ್ತವಾಯಿತು ನನಗೆ. ‘ತೇರು ಹೂವು’ ಎನ್ನುವ ಒಂದು ಬಗೆಯ ಹೂವಿದೆ. ನನಗೆ ಈ...
ಮೀನು ಪೇಟೆಯ ತಿರುವು
ತುಂಬು ಕುಟುಂಬದಲ್ಲಿ ತಾಯಿಗೆ ತನ್ನ ಮಗಳ ಮನೆಗೆ ಹೋಗಬೇಕೆಂದರೆ ಏನಾದರೂ ಕಾರಣ ಇರಬೇಕು. ಹಾಗೆಲ್ಲಾ ಸುಮ್ಮಸುಮ್ಮನೆ ಹೋಗೋದಕ್ಕೆ ಆಗೋದಿಲ್ಲ. ಪರ್ಮೀಷನ್ನು ಸಿಗೋದಿಲ್ಲ. ತಾಯಿ ಒಳೊಳಗೆ ತನ್ನ ಆಸೆ ಇರೋದನ್ನು ಅಡಗಿಸಿಕೊಂಡು. “ನನ್ನ ಮಗಳಿಗೆ ಅಮ್ಮನ ಕಾಣದೇ ಇದ್ರೆ ರಾಶಿ ಬೇಜಾರು ಬತ್ತೆ, ಒಂದು ಸರ್ತಿ ಹೋಗಿ ನೋಡ್ಕಂಡು ಬರದೆಯಾ. ಕನಸಲ್ಲೆಲ್ಲಾ ಬಂದೀಗೀದು. ಎಷ್ಟು...
ನಾಯಕತ್ವದ ಒಂದು ತೆರೆದ ಪುಸ್ತಕ ನೆಲ್ಸನ್ ಮಂಡೇಲಾ!
ಕಾಲ ಯಾರಿಗೂ ನಿಲ್ಲುವುದಿಲ್ಲ ಎನ್ನುತ್ತಾರೆ. ಆದರೆ ಮಂಡೇಲಾ ಅವರ ‘ಕಾಲ’ ಒಂದು ಕಾಲದಲ್ಲಿ ನಿಂತೇ ಹೋಗಿತ್ತು. ಬ್ರಿಟಿಷರು ಅವರನ್ನು ಇಪ್ಪತ್ತೇಳು ವರ್ಷಗಳ ಕಾಲ ಜೈಲಿನ ಒಂದು ಚಿಕ್ಕ ಕೋಣೆಯಲ್ಲಿ ಬಂಧಿಯಾಗಿಸಿದ್ದರು. ಒಂದೇ ಜನ್ಮದಲ್ಲಿ ಎರಡು ಬಾರಿ ಜೀವ ತಾಳಿದ ಮಹಾತ್ಮ ನೆಲ್ಸನ್ ಮಂಡೇಲಾ. ಅವರು ಮತ್ತೊಮ್ಮೆ ಜೈಲಿನಿಂದ ಜೀವಂತ ಹೊರಗೆ ಬರುತ್ತಾರೆ, ಎಂದು ದಕ್ಷಿಣ ಆಫ್ರಿಕಾದ...
ಸಮಯಕ್ಕಿಂತ ಬೇರೆ ಔಷಧವಿಲ್ಲ!
ಮನುಷ್ಯನ ಜೀವನದಲ್ಲಿ ಒಂದಲ್ಲ ಹಲವು ನೋವುಗಳು ಸಹಜ. ಬದುಕಿನುದ್ದಕ್ಕೂ ಒಂದಲ್ಲ ಒಂದು ಹಂತದಲ್ಲಿ ನೋವು ಎಲ್ಲರನ್ನೂ ಕಾಡಿಯೇ ಕಾಡಿರುತ್ತದೆ. ನೋವಿನ ಆ ದಿನ ಮತ್ತು ಮನಸ್ಥಿತಿ ಸದಾ ಇದ್ದರೆ? ಬದುಕು ಅಸಹನೀಯವಾಗುತ್ತದೆ. ಬದುಕಿನಲ್ಲಿ ನಾವು ಸಾಧಿಸಬೇಕು ಎಂದುಕೊಂಡದ್ದನ್ನು ಮಾಡಲು ಅಸಾಧ್ಯವಾಗುತ್ತದೆ. ಇಂತಹ ನೋವು ಅಥವಾ ಕಹಿ ಘಟನೆ ಮರೆಯಲು ಮತ್ತು ಎಂದಿನಂತೆ ಜೀವನ ಸಾಗಿಸಲು...
ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ!
ಬದುಕು ಎಷ್ಟು ವಿಚಿತ್ರ ಅಂತ ಹಲವು ಸಲ ಅನ್ನಿಸುತ್ತೆ. ಅದಕ್ಕೆ ಕಾರಣ ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಸಿಗಬೇಕಾದ ಮನ್ನಣೆ ಆತನಿಗೆ ಸಿಗಬೇಕಾದ ಹಣ ಸಿಗದೇ ಹೋಗುವುದು. ಇದು ಹಿಂದಿನಿಂದಲೂ ನಡೆದು ಬಂದಿದೆ ಅನ್ನುವುದಕ್ಕೆ ಮೇಲಿನ ಗಾದೆಯೇ ಸಾಕ್ಷಿ. ಹಿಂದೆ ವೃತ್ತಿಯಿಂದ ವ್ಯಕ್ತಿಯ ಪರಿಚಯ ಆ ಸಮುದಾಯದಲ್ಲಿ ಇರುತ್ತಿತ್ತು. ಹಾಲು ಮಾರುವವನನ್ನ ಹಾಲಪ್ಪ ಎಂದು, ಮಡಿಕೆ...
ಸ್ಮಶಾನದಲ್ಲಿಯ ಖರ್ಜೂರಗಳು!
‘…ದಾರಿಯುದ್ದಕ್ಕೂ ಯೋಚಿಸುತ್ತಿದ್ದೆ, ಜೀವ ಇದ್ದಾಗ ಪ್ರೀತಿಸುವ ದೇಹವನ್ನು ಜೀವ ಹೋದಾಕ್ಷಣ ಅದನ್ನು ಪ್ರೀತಿಸುವುದಿರಲಿ ಹತ್ತಿರ ಹೋಗುವುದಕ್ಕೂ ಹೆದರುತ್ತೇವೆ.’ ಎಲ್ಲರಂತಿರಲಿಲ್ಲ ಆ ಬ್ರಾಹ್ಮಣರ ಹುಡುಗ, ಸುಬ್ರಹ್ಮಣ್ಯ ಭಟ್ಟ. ಎಂಟೊಂಭತ್ತು ವರುಷದವ ಇರಬಹುದು. ಅವನ ಸಮಾನ ವಯಸ್ಕರಿಗಿಂತ ಆಟ ಪಾಠಗಳಲ್ಲಿ ಭಿನ್ನವಾಗಿದ್ದ. ಎಲ್ಲರಂತೆ ಅವನೂ ಶಾಲೆಗೆ...
’ಮಲೇಷಿಯಾ ಹೋಪ್ ಫಂಡ್’ – ವಿನೂತನ ರಾಷ್ಟ್ರವಾದ
ರಾಷ್ಟ್ರವಾದದ ವಿಚಾರ ಯಾವುದೇ ದೇಶವನ್ನು ಸೂಪರ್ ಪವರ್ ಮಾಡಬಲ್ಲದು ಮತ್ತು ಆ ದೇಶದ ಜನತೆಯಲ್ಲಿ ಹೊಸ ಚೈತನ್ಯವನ್ನು ತುಂಬಿ ನಿದ್ದೆಯಲ್ಲಿದ್ದವರನ್ನು ಬಡಿದೆಬ್ಬಿಸಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅವಸಾನದಂಚಿನಲ್ಲಿರುವ ದೇಶಕ್ಕೂ ಸಂಜೀವಿನಿಯಾಗಬಲ್ಲದು. ಬಹುತೇಕ ಜನರಿಗೆ ತಮ್ಮ ಹೋಮ್ ಲೋನ್, ಕಾರ್ ಲೋನ್’ನ ಈ.ಎಂ.ಐ. ಯಾವತ್ತೂ ನೆನಪಿನಲ್ಲಿ ಇರುತ್ತವೆ, ಆದರೆ...
ಆ ವಿಡಿಯೋ ಬೆತ್ತಲಾಗಿಸಿದ್ದು ಪಾಕಿಸ್ತಾನವನ್ನಲ್ಲ ದೇಶದೊಳಗಿರುವ ಪಾಕಿಸ್ತಾನಿ ಆತ್ಮಗಳನ್ನು!
18 ಸೆಪ್ಟೆಂಬರ್ 2016. ಬೆಳಗಿನ ಜಾವ ಇಡೀ ಭಾರತವೇ ಸಿಹಿ ನಿದ್ದೆಯಲ್ಲಿದ್ದಾಗ ಕಾಶ್ಮೀರದ ಉರಿಯಲ್ಲಿ ಭಾರತೀಯ ಸೈನ್ಯದ ಮೇಲೆ ಕುನ್ನಿ ಭಯೋತ್ಪಾದಕರು ಭೀಕರ ದಾಳಿ ನಡೆಸಿ 19 ವೀರ ಸೈನಿಕರು ಹುತಾತ್ಮರಾಗುತ್ತಾರೆ. ಬೆಳ್ಳಂಬೆಳಗ್ಗೆ ಈ ಸುದ್ದಿ ಇಡೀ ಭಾರತವನ್ನು ದಿಗ್ಭ್ರಾಂತಿಗೆ ದೂಡುತ್ತದೆ. ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ದೇಶಪ್ರೇಮಿಗಳನ್ನು ನಖಶಿಖಾಂತ ಉರಿಯುವಂತೆ...