ಅಂಕಣ

ಅಂಕಣ ಸ್ಪ್ಯಾನಿಷ್ ಗಾದೆಗಳು

ಬೀದೀ ಕೂಸು ಬೆಳೀತು, ಕೋಣೇ ಕೂಸು ಕೊಳೀತು!

ಇಂದಿನ ಗಾದೆ ವಿವರಿಸಲು ಒಂದು ಸಣ್ಣ ಕಥೆ ನಿಮಗೆ ಹೇಳಬೇಕಿದೆ. ಒಂದೂರು ಆ ಊರಿಗೊಬ್ಬ ರಾಜ. ಅವನಿಗೊಬ್ಬ ಮಂತ್ರಿ. ಒಂದು ದಿನ ರಾಜ ತನ್ನ ಮಂತ್ರಿಯ ಜೊತೆ ಬೇಟೆಗೆ ಹೊರಡುತ್ತಾನೆ. ಬೇಟೆಯೆಲ್ಲ ಮುಗಿದು ಅರಣ್ಯದಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತ ತನ್ನ ಮಂತ್ರಿಯ ಕುರಿತು ಹೇಳುತ್ತಾನೆ: “ಮಂತ್ರಿಗಳೇ ನಮ್ಮ ಅರಮನೆಯ ಹಿಂದಿನ ತೋಟದಲ್ಲಿ ಎಷ್ಟೊಂದು ಜನ ಮಾಲಿಗಳು...

ಅಂಕಣ

ಸಂಸ್ಕೃತದಲ್ಲಿ ಬರುತ್ತಿದೆ ಅನಿಮೇಷನ್ ಸಿನೆಮಾ – ‘ಪುಣ್ಯಕೋಟಿ’

‘ಪುಣ್ಯಕೋಟಿ’ ಹಸುವಿನ ಜಾನಪದ ಹಾಡು ಮತ್ತು ಕಥೆಯನ್ನು ಕರ್ನಾಟಕದ ಹಲವು ಪೀಳಿಗೆಯ ಮಕ್ಕಳು ಕೇಳುತ್ತಲೇ ಬೆಳೆದಿದ್ದಾರೆ. ಸಮಗ್ರತೆ, ಸಹಾನುಭೂತಿ, ನೈತಿಕತೆಯನ್ನು ಸಾರುವ ಪುಣ್ಯಕೋಟಿ ಕಥೆಯು ಮನುಷ್ಯರಲ್ಲಿ ಈ ಗುಣಗಳನ್ನು ಬಿತ್ತುವಲ್ಲಿ ಸಹಕಾರಿಯಾಗುತ್ತವೆ. ಹಲವು ರೂಪಾಂತರ, ವ್ಯಾಖ್ಯಾನಗಳ ಮೂಲಕ ಈ ಕಥೆಯು ಮತ್ತೆ ಮತ್ತೆ ಜನರನ್ನು ತಲಪುತ್ತಿದೆ. ಪ್ರಸಿದ್ಧ ಜಾನಪದ ಕಥೆಯಾದ...

ಅಂಕಣ

ಕಾಲಚಕ್ರದಲ್ಲಿ ಕ್ವಾಂಟಮ್ ಫಿಸಿಕ್ಸ್ ಮತ್ತು ವೇದಾಂತ

ಡ್ಯಾನ್ ಬ್ರೌನ್ ಎನ್ನುವ ಹೆಸರನ್ನು ನೀವು ಕೇಳಿರಬಹುದು. ‘ಡಿಸೆಪ್ಷನ್ ಪಾಯಿಂಟ್’, ‘ದ ಡಾವಿನ್ಸಿ ಕೋಡ್’, ‘ಇನ್’ಫೆರ್ನೋ’ ಎನ್ನುವಂತಹ ಥ್ರಿಲ್ಲರ್ ಕಾದಂಬರಿಗಳನ್ನು ಬರೆದಿರುವ ಈತ, ವಿಶ್ವದ ಬೆಸ್ಟ್ ಸೆಲ್ಲಿಂಗ್ ಲೇಖಕರುಗಳಲ್ಲಿ ಒಬ್ಬ. ಇಂತಹ ಡ್ಯಾನ್ ಬ್ರೌನ್’ಗೆ ಈಗ ಹೋಲಿಸುತ್ತಿರುವುದು ಅಶ್ವಿನ್ ಸಾಂಘಿಯವರನ್ನು. ಅಶ್ವಿನ್ ಅವರನ್ನು ‘ಭಾರತದ ಡ್ಯಾನ್ ಬ್ರೌನ್’ ಎಂದೇ...

ಅಂಕಣ ಎವರ್'ಗ್ರೀನ್

ಮರುಭೂಮಿಯ ಮಲೆನಾಡು

ರಣಬಿಸಿಲ ಹೊಡೆತಕ್ಕೆ ಇದ್ದೆನೋ ಬಿದ್ದೆನೋ ಎನುತ ಎಲುಬುಗಟ್ಟಿದ ಹಕ್ಕಿಯೊಂದು ಕಷ್ಟಪಟ್ಟು ಹಾರತೊಡಗಿತ್ತು. ಕಾದ ನೀಲಾಕಾಶದಲ್ಲಿ  ಜ್ವಲಿಸುತ್ತಿರುವ ಸೂರ್ಯದೇವನ ಶಕ್ತಿ ವಾತಾವರಣದ ತಾಪಮಾನವನ್ನು 50 ಡಿಗ್ರಿಗಳವರೆಗೂ ತಲುಪಿಸಿದೆ. ಕೆಳನೋಡಿದರೆ ಕಾದ ಮರಳ ದೊಡ್ಡದೊಡ್ಡ ರಾಶಿಗಳು  ಕಳ್ಳ ನೆಪವನ್ನು ಒಡ್ಡಿ ಶಿಕಾರಿಗೆ ಕದ್ದು ಅಣಿಯಾಗಿವೆಯೇನೋ ಎಂದನಿಸುತ್ತಿದೆ. ಬೀಸುವ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಹಾವಪ್ಪ ಅಲ್ಲ ನಾಗಪ್ಪ

ಬದುಕು ಎಷ್ಟು ಸುಂದರ. ನಮ್ಮ ಹಿರಿಯರು ಒಂದಲ್ಲ ಹಲವು ಹತ್ತು ಬವಣೆಗಳನ್ನ ಅನುಭವಿಸಿ, ನಮ್ಮ ಮುಂದಿನ ಪೀಳಿಗೆ ಮತ್ತೆ ಅದೇ ಕಷ್ಟದ ಹಾದಿ ತುಳಿಯದಿರಲಿ ಎನ್ನುವ ಭಾವನೆಯಿಂದ ತಮ್ಮ ಜೀವನದ ಸಾರವನ್ನ ಆಡು ಮಾತಿನಲ್ಲಿ ಮತ್ತು ಗಾದೆಯ ರೂಪದಲ್ಲಿ ನಮಗೆ ಕಟ್ಟಿಕೊಟ್ಟಿದ್ದಾರೆ. ಅವರು ನಮಗೆ ನೀಡಿರುವ ಇಂತಹ ಬೆಲೆ ಕಟ್ಟಲಾಗದ ಮಾತುಗಳನ್ನ ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಕೋರ್ಟು...

ಅಂಕಣ

ಶಿಲೆಯಲ್ಲಿ ನೇಯ್ದ ಕಲೆಯ ಬಲೆ – ಬಸರಾಳು ಮಲ್ಲಿಕಾರ್ಜುನ ದೇವಾಲಯ

ರಾಷ್ಟ್ರಕವಿ ಕುವೆಂಪುರವರು ಒಂದೆಡೆ “ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯು” ಎನ್ನುತ್ತ ಶಿಲಾವೈಭವದ ದೇಗುಲವನ್ನು ಬಣ್ಣಿಸುತ್ತಾರೆ. ಹೊಯ್ಸಳರ ಕಾಲದ ಶಿಲಾದೇಗುಲಗಳಿಗೆ ಹೋಗುವುದೆಂದರೆ ಇತರ ಸಾಮಾನ್ಯ ದೇಗುಲಕ್ಕೆ ಹೋದಂತೆ ಹೋಗಿ ಆರತಿ, ತೀರ್ಥ ತೆಗೆದುಕೊಂಡು ಅರೆಗಳಿಗೆ ಕಣ್ಣುಮುಚ್ಚಿ ಪ್ರಾರ್ಥನೆ ಮಾಡಿ ಬರುವುದಲ್ಲ; ಇವೆಲ್ಲ...

ಅಂಕಣ

ಇದು ಗುಬ್ಬಿಯಾ ಕತೆ…!

ಮಟ ಮಟ ಮಧ್ಯಾಹ್ನ, ಸುಡು ಬಿಸಿಲು. ಸೂರ್ಯನ ಬೆಳಕು ಕಾಂಕ್ರೀಟ್ ರಸ್ತೆಗೆ ತಾಕಿ, ಪ್ರತಿಫಲಿಸಿ ಇಡಿ ವಾತಾವರಣವನ್ನು ಬಿಸಿಯಾಗಿಸಿದೆ. ಎಲ್ಲಿಂದಲೋ ಹಾರಿಬಂದ ಗುಬ್ಬಚ್ಚಿಯೊಂದು ತಾನು ತಂದಿದ್ದ ಕಾಳನ್ನು ಮರಿಯ ಬಾಯಿಗೆ ಹಾಕಿತು. ಬೆಳಗ್ಗಿನಿಂದ ಹಸಿವಿನಿಂದ ಒದ್ದಾಡುತ್ತಿದ್ದ ಆ ಮರಿಯು ಗಬಗಬನೇ ಆ ಕಾಳನ್ನು ನುಂಗಿ, ಮತ್ತೆ ಬಾಯ್ತೆರೆದು ನಿಂತಿತು. ತಾಯಿ ಹಕ್ಕಿಯಾದರೂ ಏನು...

ಅಂಕಣ

ನೀರಿಗಿಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?

ಅದು ೨೦೦೩ರ ಡಿಸೆಂಬರ್ ತಿಂಗಳ ಕೊನೆಯ ದಿನ. ವರ್ಷದ ಕೊನೆಯ ದಿನದಂದು ಜಗತ್ತಿನೆಲ್ಲೆಡೆ ವಿವರಿಸಲಾಗದ ಹುಚ್ಚು ಉನ್ಮಾದ. ಜಗತ್ತನ್ನು ಗೆದ್ದೇ ಬಿಟ್ಟೆವು ಎನ್ನುವಂತ ಹುಮ್ಮಸ್ಸು. ಯುವಜನತೆಯಂತೂ ನಾಳೆ ಕಂಡವರಾರು ಎನ್ನುವ ಫಿಲಾಸಫಿ ಯಲ್ಲಿ ನಿತ್ಯ ಬದುಕುವರು. ಇನ್ನು ವರ್ಷದ ಕೊನೆಯ ದಿನ ಅಂದ ಮೇಲೆ ಕೇಳುವುದಿನ್ನೇನು? ೨೦೦೩ರ ವೇಳೆಗೆ ನಾನು ಬಾರ್ಸಿಲೋನಾ ಸೇರಿ ಆಗಲೇ ನಾಲ್ಕು...

ಅಂಕಣ

ಕನಸಿಗೆ ಜೀವ ಬಂದು ಈಗೊಂದು ವರ್ಷ….

ಅಬ್ಬಾ!! ಅಂತೂ ‘ನಮ್ಮ ಜಿಎಸ್ ಟಿ’ ಗೆ ಒಂದು ವರ್ಷ ತುಂಬಿತು. 2000ನೇ ಇಸ್ವಿಯಲ್ಲಿ ಅಟಲ್ ಜಿ ಕಂಡ ಕನಸನ್ನು ಈಡೇರಿಸಲು ಮೋದಿ ಬಂದರು. ಈಗ ಈ ಕನಸಿನ ಕೂಸಿಗೆ ಸಂಪೂರ್ಣ ಒಂದು ವರ್ಷ ತುಂಬಿದೆ. ಈ ಒಂದು ವರ್ಷದ ಹಾದಿ ಎಲ್ಲರಿಗೂ ಕಠಿಣವಾದದ್ದಂತೂ ಹೌದಾಗಿತ್ತು. ಸರಕಾರದ ಅವಿರತ ಶ್ರಮ,ಸನ್ನದು ಲೆಕ್ಕಿಗರ ಅಭಿನಂದನಾರ್ಹ ಕೆಲಸ  ಮತ್ತು ಸಾಮಾನ್ಯ ಜನರ ಅಪ್ರತಿಮ...

ಅಂಕಣ

“ಬಲೆಂಗಾರನ್ ತೂಯರ ಕುಡ್ಲಗು ಬಲೆ” – ಮಂಗಳೂರಿನಲ್ಲಿ ಜೇಡ ಮೇಳ

“ಏನು ಜೇಡಮೇಳವೇ? ಅಯ್ಯಪ್ಪ, ಮನೆಯನ್ನು ಗಲೀಜು ಮಾಡುವ ಜೇಡವೇ ಸಾಕು. ಇದರಲ್ಲೇನು ಹೊಸತು? ತಿಂಗಳಿಗೊಮ್ಮೆ ಮನೆಯೊಳಗೂ ಹೊರಗೂ ಬಲೆ ತೆಗೆದು ಸಾಕಾಗುತ್ತದೆ. ಸಾಲದಕ್ಕೆ ಅದನ್ನು ಕಂಡರೆ ಭಯ ಬೇರೆ. ಅಂಥಾ ಜೇಡಗಳಿಗೂ ಒಂದು ಮೇಳವೇ? ಈ ಅಷ್ಟಪದಿಯಲ್ಲಿ ಅಂಥಾ ಅಂದವೇನಿದೆ? ನಮಗೆ ಉಪಯೋಗವೇನಿದೆ?” ಎಂದು ತಿಳಿಯಲು ಮೇಳಕ್ಕೆ ಬನ್ನಿ. ಜುಲೈ ತಿಂಗಳ ಒಂದನೇ ತಾರೀಖು, ಭಾನುವಾರ...