ಅಂಕಣ

ಆ ವಿಡಿಯೋ ಬೆತ್ತಲಾಗಿಸಿದ್ದು ಪಾಕಿಸ್ತಾನವನ್ನಲ್ಲ ದೇಶದೊಳಗಿರುವ ಪಾಕಿಸ್ತಾನಿ ಆತ್ಮಗಳನ್ನು!

18 ಸೆಪ್ಟೆಂಬರ್ 2016. ಬೆಳಗಿನ ಜಾವ ಇಡೀ ಭಾರತವೇ ಸಿಹಿ ನಿದ್ದೆಯಲ್ಲಿದ್ದಾಗ ಕಾಶ್ಮೀರದ ಉರಿಯಲ್ಲಿ ಭಾರತೀಯ ಸೈನ್ಯದ ಮೇಲೆ ಕುನ್ನಿ ಭಯೋತ್ಪಾದಕರು ಭೀಕರ ದಾಳಿ ನಡೆಸಿ 19 ವೀರ ಸೈನಿಕರು ಹುತಾತ್ಮರಾಗುತ್ತಾರೆ. ಬೆಳ್ಳಂಬೆಳಗ್ಗೆ ಈ ಸುದ್ದಿ ಇಡೀ ಭಾರತವನ್ನು ದಿಗ್ಭ್ರಾಂತಿಗೆ ದೂಡುತ್ತದೆ. ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ದೇಶಪ್ರೇಮಿಗಳನ್ನು ನಖಶಿಖಾಂತ ಉರಿಯುವಂತೆ ಮಾಡುತ್ತದೆ. ಆದರೆ ಕೇವಲ ಹನ್ನೊಂದು ದಿನಗಳಲ್ಲಿ ನಮ್ಮ ಸೈನಿಕರು ಸೇನಾ ನೆಲೆ ಮೇಲೆ ದಾಳಿ ನಡೆಸಿ 19 ವೀರ ಸೈನಿಕರನ್ನು ಬಲಿ ಪಡೆದಿದ್ದ ಗುಳ್ಳೆ ನರಿ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ನಾಯಿಗಳಂತೆ ಭಯೋತ್ಪಾದಕರನ್ನು ಹೊಡೆದುರುಳಿಸುತ್ತಾರೆ. ಮೊದಲೇ ಸಹೋದರ ಸೈನಿಕರನ್ನು ಕಳೆದುಕೊಂಡ ಸೇನಾ ಪಡೆಯ ಸದಸ್ಯರ ರಕ್ತ ಕೊತಕೊತನೆ ಕುದಿಯುತ್ತಿತ್ತು ನೋಡಿ. ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಸಿಬ್ಬಂದಿ ಮುಖ್ಯಸ್ಥ ದಲ್ಬೀರ್ ಸಿಂಗ್ ಮಾರ್ಗದರ್ಶನದಲ್ಲಿ ಉಗ್ರರ ರುಂಡ ಚೆಂಡಾಡಿದ್ದರು ನಮ್ಮ ಸೈನಿಕರು. ಉರಿ ದಾಳಿ ನಡೆದಿದ್ದಾಗ ಸೂತಕದ ಛಾಯೆ ಆವರಿಸಿದ್ದ ದೇಶದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತು. ಸಹಜವಾಗಿಯೇ ಎಲ್ಲಾ ಸುದ್ದಿ ಮಾಧ್ಯಮಗಳೂ ಇಷ್ಟವಿದ್ದೋ ಇಲ್ಲದೆಯೋ (ಸುದ್ದಿಮಾಧ್ಯಮಗಳಲ್ಲಿ ಕೆಲವರು ಪಾಕಿಸ್ತಾನದ ಪರ ಮಿಡಿಯುವ ನಿರೂಪಕರಿದ್ದಾರೆ!) ನಮ್ಮ ಸೈನಿಕರ ಸಾಧನೆಯನ್ನು ಕೊಂಡಾಡಿತು.

ವಿಷಯ ಇಷ್ಟೇ ಆಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ನಮ್ಮ ದೇಶದ ವಿರೋಧ ಪಕ್ಷಗಳಿಗೆ ತಮ್ಮ ಅಸ್ತಿತ್ವವನ್ನು ತೋರಿಸಲು ಒಂದು ಅಸ್ತ್ರ ಬೇಕಿತ್ತು. ತೋಳ ಹಸಿದಿತ್ತು ಅನ್ನ ಹಳಸಿತ್ತು ಎಂಬಂತೆ ಮೋದಿ ಸರಕಾರದ ವಿರುದ್ಧ ಮಾತಾಡಲು ಏನಾದರು ವಿಷಯಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದ ವಿರೋಧ ಪಕ್ಷಗಳಿಗೆ ಸಿಕ್ಕಿದ್ದು ಸರ್ಜಿಕಲ್ ಸ್ಟ್ರೈಕ್!!! ಸರ್ಜಿಕಲ್ ಸ್ಟ್ರೈಕ್ ನಕಲಿ, ಅಸಲಿಗೆ ಆ ರೀತಿಯ ಒಂದು ದಾಳಿ ನಡೆದೇ ಇಲ್ಲ. ಮೋದಿ ಸರಕಾರ ಸರ್ಜಿಕಲ್ ಸ್ಟ್ರೈಕ್ ಹೆಸರಲ್ಲಿ ಕ್ರೆಡಿಟ್ ತಗೊಳುತ್ತಿದೆ ಅಂತ ಪುಂಖಾನುಪುಂಖ ವ್ಯಾಖ್ಯಾನಗಳನ್ನು ಹರಿಯಬಿಟ್ಟವು. ಕಾಂಗ್ರೆಸ್ ಪಕ್ಷದ ಮುಂಬೈ ನಗರದ ಮುಖಂಡ ಸಂಜಯ್ ನಿರುಪಮ್ ಎಂಬ ಅವಿವೇಕಿ ನಾಯಕ ಸರ್ಜಿಕಲ್ ಸ್ಟ್ರೈಕ್ ಅಸಲಿಯತ್ತಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೊದಲಿಗ. ಆ ಕಾಲಕ್ಕೆ ಕುಂತರೂ ನಿಂತರೂ ಮೋದಿ ಜಪ ಮಾಡುತ್ತಿದ್ದ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆ ಮಾಡಿ ಅಂತ ಪ್ರಧಾನಿ ಮೋದಿಯವರಿಗೆ ಆಗ್ರಹಿಸಿ ತನ್ನ ಸಣ್ಣತನವನ್ನು ಮತ್ತೊಮ್ಮೆ ಬಯಲು ಮಾಡಿದ್ದರು. ಸಿಪಿಎಂ ಮುಖಂಎ ಸೀತಾರಾಮ್ ಯಚೂರಿ, ಕಾಂಗ್ರೆಸ್ ನಾಯಕರಾದ ಚಿದಂಬರಮ್ ಮತ್ತು ದಿಗ್ವಿಜಯ್ ಸಿಂಗ್ ಕೂಡಾ ನಮ್ಮ ಸೇನೆಯ ಕಾರ್ಯದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದರು. ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್ ನಡೆದು ಒಂದು ವಾರದ ನಂತರ ಮೋದಿಯವರನ್ನು ಖೂನ್ ಕೀ ದಲಾಲ್ (ಸಾವಿನ ದಲ್ಲಾಳಿ) ಅಂತ ಟೀಕೆ ಮಾಡಿದ್ದರು. ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸೋತು ಸುಣ್ಣವಾಗುತ್ತೆ. ಇನ್ನು ದೆಹಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಪ್ ಪಕ್ಷ ಸೋತು ಮಖಾಡೆ ಮಲಗುತ್ತದೆ. ಫಲಿತಾಂಶದ ನಂತರ ಆಪ್ ಪಕ್ಷದ ಕುಮಾರ್ ವಿಶ್ವಾಸ್ ಕೇಜ್ರಿವಾಲ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಬಾರದಿತ್ತು ಅಂತ ಅಭಿಪ್ರಾಯ ಪಡುತ್ತಾರೆ.

ಆದರೆ ಇದೀಗ ಸರ್ಜಿಕಲ್ ಸ್ಟ್ರೈಕ್ ನಡೆದು ಒಂದೂ ಮುಕ್ಕಾಲು ವರ್ಷದ ಬಳಿಕ ನಮ್ಮ ದೇಶದ ದೇಶವಿರೋಧಿ ಟುಕ್ಡೇ ಟುಕ್ಡೇ ಗ್ಯಾಂಗ್ ಹಾಗೂ ಅವಕಾಶವಾದಿ ರಾಜಕಾರಣಿಗಳ ಕೆನ್ನೆಯ ಮೇಲೆ ರಪರಪನೆ ಬಾರಿಸಿದಂತೆ ಸರ್ಜಿಕಲ್ ಸ್ಟ್ರೈಕ್ ದಾಳಿಯ ವಿಡಿಯೋ ಹೊರಗೆ ಬಂದಿದೆ. ದೇಶ ಪ್ರೇಮಿಗಳು ಮತ್ತೊಮ್ಮೆ ನಮ್ಮ ಹೆಮ್ಮೆಯ ಸೈನಿಕರ ಕಾರ್ಯವನ್ನು ನೋಡಿ ಕಣ್ತುಂಬಿಕೊಂಡರೆ ಈ ಭಾರತದಲ್ಲಿರೋ ಪಾಕಿಸ್ತಾನಿ ಆತ್ಮಗಳದ್ದು ಮತ್ತದೇ ಕಹಾನಿ. ಸಂಜಯ್ ನಿರುಪಮ್ ಈ ವಿಡಿಯೋ ಕೂಡಾ ನಕಲಿ ಅಂತ ಸರ್ಟಿಫಿಕೇಟ್ ಕೊಟ್ಟುಬಿಡುತ್ತಾರೆ! ನಿಜವಾಗಿಯೂ ಇದು ದೇಶದ ಜನ ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಪಡೋ ವಿಷಯ. ಆದರೆ ಯಾಕೋ ನಮ್ಮ ವಿಪಕ್ಷಗಳು ಸೈನಿಕರ ಸಾಧನೆಯ ಬಗ್ಗೆ ಪ್ರಶಂಸೆ ಮಾಡೋ ಬದಲು ಅವರ ಮನೋಬಲ ಕುಗ್ಗಿಸುವುದೇ ಬೇಕಾಗಿದೆಯೇನೋ ಅನ್ನಿಸುತ್ತದೆ.

ಮೋದಿ ಸರಕಾರವನ್ನು  ಆಡಳಿತಾತ್ಮಕವಾಗಿ ಟೀಕಿಸುವ ಎಲ್ಲಾ ಹಕ್ಕು ವಿರೋಧ ಪಕ್ಷಗಳಿದೆ. ಆದರೆ ಮೋದಿ ಸರಕಾರವನ್ನು ಟೀಕಿಸುವ ಸಲುವಾಗಿ ಎಲ್ಲವನ್ನೂ ಪರಿತ್ಯಾಗ ಮಾಡಿ ದೇಶದ ಗಡಿಯಲ್ಲಿ ಹಗಲಿರುಳೂ ನಮ್ಮನ್ನು ಕಾಯುತ್ತಿರುವ ಸೈನಿಕರ ಜಂಘಾಬಲವನ್ನು ಉಡುಗಿಸಲು ಹೊರಡುವ ಊಸರವಳ್ಳಿ ರಾಜಕಾರಣಿಗಳು, ಬುದ್ಧಿ ಜೀವಿಗಳು ಕಾಯಕ ಎಷ್ಟು ಸರಿ ಅನ್ನುವುದು ಪ್ರಶ್ನೆ. ಕಾಂಗ್ರೆಸ್‌ ಪಕ್ಷ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ನೆಪದಲ್ಲಿ ಹಲವು ಭಾರಿ ನಮ್ಮ ಸೈನ್ಯದ ಬಗ್ಗೆ ಅನುಮಾನ ಪಟ್ಟದಿದ. ಸೇನಾ ಮುಖ್ಯಸ್ಥರನ್ನು ಸಡಕ್ ಕೇ ಗೂಂಡಾ( ಬೀದಿ ಬದಿಯ ರೌಡಿ) ಅಂತಲೂ ಕಾಂಗ್ರೆಸ್ ನಾಯಕನೊಬ್ಬ ಅಣಿಮುತ್ತನ್ನು ಉದುರಿಸಿದ್ದರು. ಸಮಾಜವಾದಿ ಪಕ್ಷದ ವಕ್ತಾರ ಘನ್ ಶ್ಯಾಮ್ ತಿವಾರಿ ಎಂಬಾತ ಟಿವಿ ಚರ್ಚೆಯೊಂದರಲ್ಲಿ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸರಕಾರ ವಿಪಕ್ಷದ ಒತ್ತಾಯಕ್ಕೆ ಮಣಿದಿದೆ ಎಂದಲ್ಲವೇ ಅರ್ಥ ಎಂಬಂತೆ ಮಾತಾಡುತ್ತಾನೆ. ಅರೇ ಹಾಗಾದರೆ ನಮ್ಮ ಸೇನಯೆ ಮುಂದಿನ ಎಲ್ಲಾ ಕಾರ್ಯಾಚರಣೆಗಳ ವಿಡಿಯೋ ಬಿಡುಗಡೆ ಮಾಡಿದರೆ ಮಾತ್ರ ನಮ್ಮ ವಿರೋಧ ಪಕ್ಷಗಳು ಅದನ್ನು ನಂಬುವುದಾ ಹಾಗಾದ್ರೆ? ಅರುಣ್ ಶೌರಿ, ಸಂಜಯ್ ನಿರುಪಮ್, ದಿಗ್ವಿಜಯ್ ಸಿಂಗ್, ಚಿದಂಬರಂ, ಕೇಜ್ರಿವಾಲ್, ಮಾಯಾವತಿ, ಟುಕ್ಡೇ ಗ್ಯಾಂಗ್, ಲ್ಯುತೇನ್ಸ್ ಮಾಧ್ಯಮಗಳಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ದೇಶದ ಮುಂದೆ ಕ್ಷಮೆಯಾಚನೆ ಮಾಡಬೇಕು. ಸೇನೆಯ ಹೆಸರನ್ನೇಳಿ ರಾಜಕೀಯ ಬೇಳೆಯನ್ನು ಬೇಯಿಸಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ ಈ ವ್ಯಕ್ತಿಗಳು. ಈ ವಿಡಿಯೋ ಹೊರಬಂದು ಪಾಕಿಸ್ತಾನಕ್ಕಿಂತ ಜಾಸ್ತಿ ಪತರಗುಟ್ಟಿ ಹೋದದ್ದು ಈ ಅವಕಾಶವಾದಿ ರಾಜಕಾರಣಿಗಳು. ಪಾಕಿಸ್ತಾನಕ್ಕಿಂತ ಜಾಸ್ತಿ ಬೆತ್ತಲಾದದ್ದು ದೇಶದಲ್ಲಿರೋ ಪಾಕ್ ಆತ್ಮಗಳು!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!