ಹಾರ್ ನಹೀ ಮಾನೂಂಗಾ ರಾರ್ ನಹೀ ಠಾನೂಂಗ ಕಾಲ್ ಕೇ ಕಪಾಲ್ ಪರ್ ಲಿಖ್ ತಾ – ಮಿಟಾತಾ ಹೂಂ ಗೀತ್ ನಯಾ ಗಾತಾ ಹೂಂ! 80ರ ಹರೆಯದಲ್ಲೂ ‘ಗೀತ್ ನಯಾ ಗಾತಾ ಹೂಂ’ ಎನ್ನುತ್ತಾ, ಜೀವನೋತ್ಸಾಹದಿಂದ ತುಂಬಿದ್ದ, ರಾಜಕಾರಣಿ ರೂಪದಲ್ಲಿದ್ದ, ಕವಿ, ಕನಸುಗಾರ, ದೇಶದ ಭದ್ರತೆಗೆ ಒಂದಿಷ್ಟು ಒತ್ತು ಕೊಟ್ಟುಸಾಕಾರಗೊಳಿಸಿದವರೇ ಅಟಲ್ ಬಿಹಾರಿ ವಾಜಪೇಯಿ. ಅಟಲ್ ಸುಖಾಸುಮ್ಮನೆ...
ಅಂಕಣ
ಕೊಳವೆಬಾವಿಗಳಿಗೆ ಪುನರ್ಜನ್ಮ ನೀಡುತ್ತಿರುವ – ರೆಬೆಲ್ಲೊ
ನೀರು ನಮ್ಮ ಮೂಲಭೂತ ಅಗತ್ಯ. ಇದು ಪ್ರಕೃತಿಯಿಂದ ಉಚಿತವಾಗಿ ಸಿಗುವ ಸಂಪನ್ಮೂಲ. ಆದರೆ ನೀರನ್ನು ಉಳಿಸುವ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದೀರಾ? ಇತ್ತೀಚಿನ ದಿನಗಳಲ್ಲಂತೂ ಮಾರ್ಚ್-ಏಪ್ರಿಲ್ ಬಂದರೆ ಸಾಕು ಕುಡಿಯಲು ನೀರಿಲ್ಲ ಎಂಬ ಕೂಗು. “ಕೆರೆಯ ನೀರನು ಕೆರೆಗೆ ಚೆಲ್ಲಿ” ಎಂಬಂತೆ ಮಳೆ ನೀರನ್ನು ಪುನಃ ಭೂಮಿಗೆ ಇಂಗಿಸಿದರೆ ಹೇಗೆ? ಇದರಿಂದ ಅಂತರ್ಜಲ ಮಟ್ಟವೂ...
ಸ್ವತಂತ್ರ ಭಾರತದಲ್ಲಿ ಮನರಂಜನೆಯ ಏಳು ದಶಕಗಳ ಪಯಣ!
ಇಪ್ಪತ್ತೈದು ವರ್ಷಗಳ ಹಿಂದೆ ಮನರಂಜನೆ ಎನ್ನುವುದಕ್ಕೆ ಏನಿತ್ತು? ಊರಲ್ಲಿ ಒಂದು ಟಿವಿ ಇರುತ್ತಿತ್ತು, ವಾರಕ್ಕೆ ಒಂದು ರಾಮಾಯಣ ಧಾರಾವಾಹಿ ಬರುತ್ತಿತ್ತು, ರೇಡಿಯೋದಲ್ಲಿ ವಾರ್ತೆ ಕೇಳುತ್ತಿದ್ದರು, ಅದರಲ್ಲೇ ಹಾಡುಗಳೂ ಬರುತ್ತಿದ್ದವು. ಪ್ರತಿಯೊಂದು ಮನೆಗೂ ಪೇಪರ್ ಎನ್ನುವ ಕಾನ್ಸೆಪ್ಟ್ ಇರಲೇ ಇಲ್ಲ. ಪೇಪರ್ ಓದಬೇಕು ಅಂದರೆ ಊರಿನ ಗ್ರಂಥಾಲಯಕ್ಕೆ ಹೋಗಬೇಕಿತ್ತು. ನಂತರ...
ಮೀಸಲು ಪರಿಷ್ಕರಣೆ ಸಾಧ್ಯವಿಲ್ಲವೆ?
ನಮ್ಮ ದೇಶ, ಭವ್ಯ ಭಾರತ ಒಂದು ಮಹಾನ್ ರಾಷ್ತ್ರ ಎಂಬುದರಲ್ಲಿ ಸಂಶಯವಿಲ್ಲ ಬಿಡಿ. ವಿವಿಧತೆಯಲ್ಲಿ ಏಕತೆ ಎಂದೆಲ್ಲಾ ಕೊಚ್ಚಿಕೊಳ್ಳುವ ನಾವು ಅಸಲಿಯಾಗಿ ಇರುವ ವಿಷಯವನ್ನು ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರು ಅರಿತಂತಿಲ್ಲ. ಧರ್ಮ, ಜಾತಿ, ಭಾಷೆ, ಆಚರಣೆಗಳ ವಿಚಾರದಲ್ಲಿ, ಲೋಕದಲ್ಲೆಲ್ಲೂ ಕಾಣದ ವೈವಿಧ್ಯತೆ ನಮ್ಮಲ್ಲಿದೆ. ಬಹುಶಃ, ಇದೇ ಕಾರಣದಿಂದ ನಾವು ಇನ್ನು ಅಭಿವೃದ್ಧಿ...
ಬಿರಿಯಾನಿಯ ಐತಿಹ್ಯ!
ಹೊತ್ತು ಮುಳುಗಿ ಅದಾಗಲೇ ಕಪ್ಪು ಆಗಸದಲ್ಲಿ ತುಂತುರು ಚುಕ್ಕಿಗಳು ಮಿನುಗತೊಡಗಿವೆ. ತನ್ನೊಟ್ಟಿಗಿದ್ದ ನಾಲ್ವರು ಸೈನಿಕರು ತಮ್ಮ ತಮ್ಮ ಖಡ್ಗಗಳಿಂದ ಖಣಖಣ ಶಬ್ದವನ್ನು ಹೊಮ್ಮಿಸುತ್ತಾ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ. ಯುದ್ಧದ ಸ್ಥಳ ತಾನಿರುವ ಜಾಗದಿಂದ ಸುಮಾರು ಐವತ್ತು ಕ್ರೋಶ ದೂರದ್ಲಲಿದೆ. ಆನೆ, ಕುದುರೆ, ಒಂಟೆಗಳ ಜೊತೆಗೆ ಎರಡೂ ಕಡೆಯ ಲಕ್ಷಾಂತರ ಸೈನಿಕರ ರೋಷ...
ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ
ಈವತ್ತು ನಮ್ಮ ಬದುಕು, ನಮ್ಮ ಹಿರಿಯರು ಬದುಕಿದ ರೀತಿಗಿಂತ ಬಹಳ ಭಿನ್ನವಾಗಿದೆ. ಅವರು ವಿಷಯ ಯಾವುದೇ ಇರಲಿ ಅದನ್ನು ಸಲೀಸಾಗಿ ತೆಗೆದುಕೊಳ್ಳುತ್ತಿರಲಿಲ್ಲ. ವಿಷಯ ಸಾಧನೆ ಆಗುವವರೆಗೆ ಗೆದ್ದೆವೆಂದು ಬೀಗುತ್ತಿರಲಿಲ್ಲ. ಸಮಾಜದಲ್ಲಿ ಎಂದಿನಿಂದಲೂ ಒಂದಷ್ಟು ಸಂಖ್ಯೆಯ ಜನ ಕೆಲಸ ಆಗುವುದಕ್ಕೆ ಮುಂಚೆಯೇ ವಿಜಯಿಯಾದಂತೆ ಮರೆದಾಡುವವರು ಇದ್ದರು. ಅಂತವರನ್ನು ಕುರಿತು ಗೆಲುವಿಗೆ...
ಏರೆಗಾವುಯೆ ಈ ಕಿರಿ ಕಿರಿ!
ಮಳೆಗಾಲ ಎಂದ ಮೇಲೆ ಮಳೆ ಬರಲೇಬೇಕು. ರಸ್ತೆಯ ‘ಇಂಗು’ಗುಂಡಿಗಳಲ್ಲಿ ನೀರು ತುಂಬಿರುತ್ತದೆ. ಆದರೆ ಈ ವಾಹನ ಚಾಲಕರಿಗೆ ಈ ರಸ್ತೆಯ ಮೇಲೆ ನಿಂತಿರುವ ನೀರು ಕಾಣುವುದಿಲ್ಲವೆಂದು ತೋರುತ್ತದೆ ಅಥವಾ ಆ ನೀರನ್ನು ಕಾಣುವಾಗ ವೇಗವನ್ನು ಹೆಚ್ಚಿಸುವ ಮನಸ್ಸಾಗುತ್ತದೆಯೋ ಏನೋ. ಇದರಿಂದ ಅವಸ್ಥೆ ಅನುಭವಿಸುತ್ತಿರುವವರು ಮಾತ್ರ ದಾರಿಹೋಕರು. ಬೆಳಂಬೆಳಗ್ಗೆ ಬಟ್ಟೆಗಳಿಗೆಲ್ಲಾ ಚೆನ್ನಾಗಿ...
ಅಪ್ರತಿಮ ವಂಚಕ
“ನನಗೆ ಒಂದು ಘಂಟೆ ಕಾಲಾವಕಾಶ ಕೊಡಿ. ನಾನು ಯಾವ ಜನರ ಬಳಿ ಸಾವಿರ ಸಾವಿರ ರೂಪಾಯಿ ದೋಚಿದ್ದೇನೋ ಅದೇ ಜನರ ಬಳಿ ಮತ್ತೊಮ್ಮೆ ದೋಚುತ್ತೇನೆ. ಅದೂ ಕೂಡ ಜನರು ಸ್ವ ಇಚ್ಛೆಯಿಂದ ಹಣ ನೀಡುವಂತೆ ಮಾಡುತ್ತೇನೆ.” (ಪೊಲೀಸರಿಗೆ ಹೇಳಿದ ಮಾತು.) ಡಾ. ರಾಜೇಂದ್ರ ಪ್ರಸಾದ್ ಈ ದೇಶ ಕಂಡ ಅತ್ಯುತ್ತಮ ರಾಷ್ಟ್ರಪತಿಗಳಲ್ಲೊಬ್ಬರು. ಅತೀ ದೀರ್ಘಾವಧಿ ಅಂದರೆ ಸುಮಾರು 12...
ಅಜ್ಜಿಯಾಟದಿ ಬೊಮ್ಮ (ಕಣ್ಣಾಮುಚ್ಚೆ ಕಾಡೇ ಗೂಡೆ..)
ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೮೨. ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು | ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ || ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು | ಎನ್ನುವಜ್ಜಿಯೊ ಬೊಮ್ಮ – ಮಂಕುತಿಮ್ಮ || ೦೮೨ || ಈ ಕಗ್ಗದ ಅದ್ಭುತ ನೋಡಿ : ಸೃಷ್ಟಿಯಾಟವನಾಡುತಿರುವ ಬೊಮ್ಮನನ್ನು ಕಣ್ಣಮುಚ್ಚಾಲೆಯಾಟ ಆಡಿಸುವ ಅಜ್ಜಿಗೆ ಸಮೀಕರಿಸಿ ಅವನ ಕಾರ್ಯವನ್ನು ಸರಳವಾಗಿ ವಿವರಿಸುವ...
ಮೂಲಭೂತ ಹಕ್ಕುಗಳು ಮತ್ತು ಸಾಂವಿಧಾನಿಕ ತಿದ್ದುಪಡಿಗಳು (1947-1977)
1950ರ ಜನವರಿ 26ರಂದು ಭಾರತದ ಸಂವಿಧಾನವು ಜಾರಿಗೆ ಬಂತು. ನಾಗರಿಕರ ಮೂಲಭೂತ ಹಕ್ಕುಗಳು (ಸಂವಿಧಾನ ಭಾಗ – 3) ಮತ್ತು ಸ್ವತಂತ್ರ ನ್ಯಾಯಾಂಗವನ್ನು, ಅತ್ಯಂತ ಪವಿತ್ರ ಮತ್ತು ಅಮೂಲ್ಯವೆಂದು ಸಂವಿಧಾನದಲ್ಲಿ ಪರಿಗಣಿಸಲಾಗಿದೆ. ಕಾನೂನಿನ ನಿಯಮ, ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು, ಅನಿಯಂತ್ರಿತ ಬಂಧನ ಮತ್ತು ಬಂಧನದಿಂದ ಸ್ವಾತಂತ್ರ್ಯ, ವಾಕ್‍ಸ್ವಾತಂತ್ರ್ಯದ ಹಕ್ಕು...