ಜೂನ್ 5, ಇಂದಿನ ವಿಶೇಷತೆ ನಮಗೆ ಎಲ್ಲರಿಗೂ ಗೊತ್ತೇ ಇದೆ, ವಿಶ್ವ ಪರಿಸರ ದಿನಾಚರಣೆ. 1973 ರಿ೦ದ ವಿಶ್ವ ಪರಿಸರ ದಿನಾಚರಣೆ ಜಾರಿಗೆ ಬ೦ತು. ಈ ದಿನಾಚರಣೆಯ ಉದ್ಧೇಶ ಜನರಲ್ಲಿ ಪರಿಸರ ಕಾಳಜಿಯನ್ನು೦ಟು ಮಾಡುವದು ಮತ್ತು ಪರಿಸರ ರಕ್ಷಣೆ ಅವಶ್ಯಕತೆಯ ಪ್ರಚಾರ ಹಮ್ಮಿಕೊಳ್ಳುವದು. ಈ ದಿನಾಚರಣೆ, ವೃಕ್ಷಗಳನ್ನು ನೆಡುವ ಮೂಲಕ, ಜಲ ಮತ್ತು ವಾಯು ಮಾಲಿನ್ಯ ತಡೆವ ಕಾರ್ಯಕ್ರಮಗಳಿ೦ದ...
ಅಂಕಣ
ಜಿಗಣಿ ರಾಮಕೃಷ್ಣ, ಕತ್ತಲೆಯಿಂದ ಬೆಳಕಿನಡೆಗೆ
ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ನೇತ್ರ ದಾನ, ಮರಣಾ ನಂತರ ಕಣ್ಣನ್ನು ಮಣ್ಣು ಮಾಡದೆ ದಾನ ಮಾಡಿದರೆ, ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಸಾರುತ್ತಿರುವವರು, ಎಷ್ಟೋ ಅಂಧರಿಗೆ ಬೆಳಕು ನೀಡಿರುವಂತಹ ನಮ್ಮ ಹೊಸ ಬೆಳಕು ಟ್ರಸ್ಟ್ ನ ರಾಮಕೃಷ್ಣ ಅವರು. ದಿನ ನಿತ್ಯದ ಚಟುವಟಿಕೆಗಳಿಗೆ ಅತೀ ಮುಖ್ಯ ಅಂಗವೆಂದರೆ ಕಣ್ಣುಗಳು. ಗ್ರಾಮೀಣ ಮಟ್ಟದ ಜನತೆಯು ಉತ್ತಮ...
ಗದಾಯುದ್ಧ- ೮
ಗುರು ದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನು- ರ್ವರೆಯಂ ಕಾವ ಗುಣಕ್ಕೆ ನರ್ಮಸಚಿವಂ ಕ್ರೀಡಾರಸಕ್ಕಾನೆಯಾಳ್ ಗುರುಭಾರಕ್ಕಿರಿವಾಳ್ ರಣಕ್ಕೆ ತುರಿಲಾಳ್ ಕಟ್ಟಾಯದೊಳ್ ಮೇಳದಾಳ್ ಪರಿಹಾಸಕ್ಕೆನಿಸಿರ್ದನೆಂತು ಮರೆವಂ ದುರ್ಯೋಧನಂ ಕರ್ಣನಂ ಒಂದೊಂದು ಸಮಯದಲ್ಲಿ ಒಂದೊಂದು ರೀತಿ ನಮಗೊದಗುವ ಮಿತ್ರ ಇಲ್ಲದಿದ್ದಾಗ ಅನೇಕ ಮಂದಿಯನ್ನು ಕಳೆದುಕೊಂಡಾಗುತ್ತದೆ. ಅಂತೆಯೇ...
ನಾನು ಏಕೆ ಹೀಗೆ….?
ಮಾನವ ಜಗದ ಒಂದು ಹಗಳಿರುಳ ಜೀವನದಲ್ಲಿ ಅನೇಕ ಅನುಭವಗಳನ್ನು ಪಡೆಯುತ್ತಾನೆ. ಕೆಲವು ಒಳ್ಳೆಯ ಅನುಭವಗಳಾದರೆ, ಕೆಲವು ಕೆಟ್ಟ ಅನುಭವಗಳು. ಹಲವು ಸಲ ಅನುಮಾನ, ಅವಮಾನಗಳೇ ಅನುಭವವಾಗಿ ರೂಪಾಂತರವಾಗುತ್ತದೆ. ಕತ್ತಲ ಜೀವದ ಹೃದಯ ಕವಾಟಕ್ಕೆ ಇವುಗಳೇ ದಾರಿದೀಪವಾಗುತ್ತದೆ. ಜಗದಲ್ಲಿ ಉಚಿತವಾಗಿ ದೊರೆಯುವುದೆಂದರೆ ಅದು ಉಚಿತ ಸಲಹೆಗಳು, ಪರಪದೇಶಗಳು, ಹಿತೋಪದೇಶಗಳು ಎಲ್ಲರ ಮನದಲ್ಲೂ...
ಸೋಲಿಲ್ಲದ ಸರದಾರ ಆ ವಿಕ್ರಮಾದಿತ್ಯ
ಆ ವಿಕ್ರಮಾದಿತ್ಯನ ಗಜಪಡೆ ಯುದ್ಧಕ್ಕೆ ಅಣಿಯಾಯಿತೆಂದರೆ ಶತ್ರುಪಡೆ ಥರಗುಟ್ಟುತ್ತಿತ್ತು. ಬೆಟ್ಟಗಳನ್ನೇ ತಮ್ಮ ಸೊಂಡಿಲುಗಳಿಂದ ಕಿತ್ತು ಶತ್ರು ಸೈನ್ಯದ ಮೇಲೆ ಪ್ರಹಾರ ಮಾಡುತ್ತಿದ್ದ ಆ ಆನೆಗಳು ನೆಲ ಅದುರುವಂತೆ ರಭಸದಿಂದ ಶತ್ರುಸೈನ್ಯದ ಮೇಲೇರಿ ಹೋಗುವಾಗ ತಮ್ಮ ಸೊಂಡಿಲಿಗೆ ಕಟ್ಟಲಾದ ಖಡ್ಗ, ಭಲ್ಲೆಗಳಿಂದ ಶತ್ರುಗಳನ್ನು ತರಿಯುತ್ತಾ ಎಂತಹಾ ಮಹಾಸೈನ್ಯವನ್ನಾದರೂ ಧೂಳೀಪಟ...
ನನ್ನಮ್ಮ
“ಕಾಣದ ದೇವರು ಊರಿಗೆ ನೂರು , ಕಾಣುವ ತಾಯೇ ಪರಮ ಗುರು ” ಹೌದು ಗರ್ಭ ಕಟ್ಟಿದಂದಿನಿಂದ ತಾಯಿಯೊಂದಿಗಿನ ಅನೂಹ್ಯ ಸಂಬಂಧದ ಎಳೆಕವಲೊಡೆದು , ಬರಿ ಕಣ್ಣಿಗೆ ಕಾಣುವ , ಭಾವಿಸಿದಷ್ಟು ಮುಗಿಯದ, ಮರೆಯದಷ್ಟು ಸ್ಮೃತಿಗಳು, ಒಂಬತ್ತು ತಿಂಗಳ ಕಾಲ ಅಮ್ಮನುಂಡರೆ ನನಗೆ ತೃಪ್ತಿ, ಅಮ್ಮ ಉಸಿರಾಡಿದರೆ ನನಗೆ ಉಸಿರು, ಅದೇ ಇಂದು ನಾನುಂಡರೆ ಅಮ್ಮನಿಗೆ ತೃಪ್ತಿ , ಏನೋ...
ಎವರೆಸ್ಟ್ ನ ತುದಿಯಲ್ಲಿ ಮತ್ತೆ ಮರುಹುಟ್ಟು ಪಡೆದಾಗ
“ಅವಳು” ಭಗವಂತನ ಸೃಷ್ಟಿಯ ಸುಂದರವಾದ ರೂಪ.ಅಮ್ಮನಾಗಿ,ಅಕ್ಕನಾಗಿ,ಅಜ್ಜಿಯಾಗಿ,ತಂಗಿಯಾಗಿ,ಗೆಳತಿಯಾಗಿ ನಮ್ಮ ಮನಸ್ತಿತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಾಗಿ ಸಲಹುತ್ತಿರುವವಳು. ಹುಟ್ಟಿಸಿದವಳು ಹೆಣ್ಣು, ಬದುಕಿನ ಪಾಠ ಹೇಳಿದವಳು ಹೆಣ್ಣು,ಅಕ್ಕರೆಯ ಜಗಳಕ್ಕೆ ಕಿಚ್ಚು ಹಚ್ಚಿಸಿ ‘ಬಾ ತಮ್ಮಾ’ ಎಂದು ಮುದ್ದಿಸಿದವಳು ಹೆಣ್ಣು,ಸೋತು ಕೂತಾಗ...
ಗಾಂಧಿ ಪಟೇಲರನ್ನು ಬಿಟ್ಟು ನೆಹರೂರನ್ನು ಪ್ರಧಾನಿ ಮಾಡಿದ್ದೇಕೆ?
History is written by the victors” ಈ ಮಾತು ಅಕ್ಷರಶಃ ಸತ್ಯ. ಭಾರತದ ಇತಿಹಾಸವನ್ನು ಬರೆದಿದ್ದು ಸ್ವಾತಂತ್ರ್ಯ ಚಳುವಳಿಯಲ್ಲಿ ತಾನೇ ವಿಜಯಿ ಎಂದು ಬಿಂಬಿಸಿಕೊಂಡ ಕಾಂಗ್ರೆಸ್ ಪಕ್ಷ. ಸುಳ್ಳಿನ ಕಂತೆಗಳನ್ನು ಪೋಣಿಸಿ ಅದನ್ನೇ ನಿಜ ಇತಿಹಾಸವೆಂದು ನಮ್ಮನ್ನು ನಂಬಿಸಿದವರು ಕಾಂಗ್ರೆಸ್ ಮತ್ತು ಅದರ ಮುಂಚೂಣಿ ನಾಯಕರಾದ ಗಾಂಧಿ ಮತ್ತು ನೆಹರೂ. ಅಧಿಕೃತ ಇತಿಹಾಸದ...
ಕಾಡಿನ ನಂಟು – ವ್ಯಕ್ತಿ ಚಿತ್ರ
ಅದು ಕಣಿಯಾರು ಮಲೆ , ಒಂದು ಕಾಲದಲ್ಲಿ ಸಸ್ಯಜನ್ಯ, ಪ್ರಾಣಿಗಳಿಂದ ತುಂಬಿದ್ದ ಸಮೃದ್ಧ ಅರಣ್ಯ , ಮೂಜುವಿನ ಕೂಗು , ಗೂಬೆಯ ಹಾಡು , ಪೊಟ್ಟ ಹಕ್ಕಿಯ ಕರ್ಕಶ ಧ್ವನಿ ಸಾಮಾನ್ಯವಾಗಿರುತಿತ್ತು. ಇಂದು ಸಹ ಒಂದಷ್ಟು ಇವುಗಳ ಸಂಖ್ಯೆಯಲ್ಲಿ ಅವರೋಹಣವಾಗಿದ್ರೂ ನೈಜತೆಯನ್ನು ಉಳಿಸಿಕೊಂಡು ಬಂದಿದೆ. ಕಾಡಿನ ತಪ್ಪಲಿನಲ್ಲಿರುವ ಅರಣ್ಯ ಇಲಾಖೆಯ ಗುಪ್ಪೆಯ ವರೆಗೆ ಒತ್ತುವರಿ ಮಾಡಿ ಮನೆ...
ನಾನಿದರ ತಾತ್ಕಾಲಿಕ ಒಡೆಯನಷ್ಟೇ
ಸೈರನ್ ಮೊಳಗಿಸುತ್ತಾ ಶರವೇಗದಲ್ಲಿ ಸಾಗುವ ಅಂಬ್ಯುಲೆನ್ಸ್ ಗಳು, ಕೈಕಾಲು ಮುರಿದ ಅಸಹಾಯಕ ಗಾಯಾಳುಗಳನ್ನು ಹೊತ್ತೊಯ್ಯುತ್ತಿರುವ ಗಾಲಿಕುರ್ಚಿಗಳು, ಅಂಗಾಂಗಗಳ ಸ್ವಯಂ ನಿಯಂತ್ರಣ ಕಳೆದುಕೊಂಡು ತುರ್ತುನಿಗಾ ಘಟಕದಲ್ಲಿ ಕೃತಕ ಉಸಿರಾಟ ಯಂತ್ರದಿಂದ ಆಮ್ಲಜನಕವನ್ನು ದೇಹಕ್ಕೆ ಪೂರೈಸಿಕೊಳ್ಳುತ್ತಾ ನಿಸ್ತೇಜ ಕಣ್ಣುಗಳಿಂದ ದೃಷ್ಟಿ ಕದಲಿಸದೆ ಮಲಗಿರುವ ರೋಗಿಗಳು… ಇದಲ್ಲವೇ...