ಅಂಕಣ

ಎವರೆಸ್ಟ್ ನ ತುದಿಯಲ್ಲಿ ಮತ್ತೆ ಮರುಹುಟ್ಟು ಪಡೆದಾಗ

Arunima Sinha

“ಅವಳು” ಭಗವಂತನ ಸೃಷ್ಟಿಯ ಸುಂದರವಾದ ರೂಪ.ಅಮ್ಮನಾಗಿ,ಅಕ್ಕನಾಗಿ,ಅಜ್ಜಿಯಾಗಿ,ತಂಗಿಯಾಗಿ,ಗೆಳತಿಯಾಗಿ ನಮ್ಮ ಮನಸ್ತಿತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಾಗಿ ಸಲಹುತ್ತಿರುವವಳು. ಹುಟ್ಟಿಸಿದವಳು ಹೆಣ್ಣು, ಬದುಕಿನ ಪಾಠ ಹೇಳಿದವಳು ಹೆಣ್ಣು,ಅಕ್ಕರೆಯ ಜಗಳಕ್ಕೆ ಕಿಚ್ಚು ಹಚ್ಚಿಸಿ ‘ಬಾ ತಮ್ಮಾ’ ಎಂದು ಮುದ್ದಿಸಿದವಳು ಹೆಣ್ಣು,ಸೋತು ಕೂತಾಗ ಸ್ನೇಹದ ಮಾತನ್ನಾಡಿ ಸಂತೈಸಿದವಳು ಹೆಣ್ಣು ,ಸಾಕಲ್ಲ ನಾನು ‘ಸ್ವಾಭಿಮಾನಿ’ಎಂದುಕೊಂಡು ತಿರುಗಲು… ನೀನೆಷ್ಟು ನೋವನ್ನುಣ್ಣುವೆ ಈ ಸಮಾಜದಲ್ಲಿ?ಯಾರಿಗೂ ಹೇಳಲಿಚ್ಚಿಸದೆ ನೀ ಅಂತರಂಗದಲ್ಲಿ ಬಚ್ಚಿಟ್ಟುಕೊಂಡ ದುಗುಡ,ದುಮ್ಮಾನಗಳೆಷ್ಟು? ನಿನ್ನಂತರಂಗದ ಮಾತಿಗೆ ಕಿವಿಕೊಡುವರಾರು?ನೀ ತೊಟ್ಟ ಉಡುಗೆಯಿಂದ,ನೀನಾಡುವ ಮಾತಿನಿಂದ ನಿನ್ನನ್ನ ಮನಬಂದಂತೆ ಸ್ರಷ್ಟಿಸುವ ಈ ಪುರುಷರನ್ನ ಹೇಗೆ ಸಹಿಸಿಕೊಳ್ಳುವೆ? ಹೀಗಿದ್ದರೂ ಮುಖದ ಮೇಲಿನ ನಿನ್ನ ನಗು ಮಾಸಲಿಲ್ಲವಲ್ಲ…..

ಸಮಾಜ ನಿನಗೇನನ್ನ ನೀಡಿತು? ಕ್ಷಮಿಸುವ ನಿನ್ನ ಗುಣದೆದುದರು ಅಹಂಕಾರದಿ ಮೆರೆವ ಗಂಡಸಿನ ನಗು ನಗಣ್ಯವೇ ಸರಿ. ಸಂಸಾರದೊಳಗಿನ ಅಸಹ್ಯವನ್ನ ಖಂಡಿಸಿದರೆ ಬಹಿಷ್ಕಾರವನ್ನ,ಸಮಾಜದ ಹುಳುಕುಗಳ ವಿರುದ್ದ ಹೋರಾಡಿದಾಗ ಹುಚ್ಚಿ ಎಂಬ ಹಣೆಪಟಗಟಿಯನ್ನ,ನಿನ್ನ ಮೇಲೆ ಎರಗಲು ಬಂದವರ ವಿರುದ್ಧ ಗುಡುಗಿದಾಗ ನಿನೇ ಸರಿ ಇಲ್ಲ ಎಂದು ಬರಿಯ ದೂರುಗಳನ್ನೇ  ಉಡುಗೊರೆಯಾಗಿ ನೀಡಿದರಲ್ಲ ಆಗಲೂ ನೀ ಬದುಕಿದೆ ಆಗ ಆ ಪ್ರತಿ ಯುದ್ದದಲ್ಲೂ ನಿನ್ನ ನಿಷ್ಕಲ್ಮಷ ಅಂತರಂಗ ಗೆದ್ದಿತ್ತು.. ಆಗ ಆ ನಿನ್ನ ನಗು ಸಮಾಜದ ವಿಷಜಂತುಗಳನ್ನ ನಡುಗಿಸಿತ್ತಲ್ಲ ಅದೆಷ್ಟು ಶಕ್ತಿ ನಿನಗೆ. ಇಷ್ಟೆಲ್ಲದರ ನಡುವೆ ಒಬ್ಬ ಯಶಸ್ವಿ ಮಹಿಳೆಯಾಗಿ ಜಗತ್ತಿಗೆ ತೆರೆದುಕೊಂಡ ನಿಮಗೆಲ್ಲ ನನ್ನ ಅನಂತ ನಮನಗಳು…ನನ್ನ ದೃಷ್ಟಿಯಲ್ಲಿ ಹೆಣ್ಣು ಒಂದು Inspiration.ಸಮಾಜದ ಅದೆಷ್ಟೋ ಸ್ತ್ರೀ ವಿರೋಧಿ ವಿಚಾರಗಳನ್ನ ಬದಿಗೊತ್ತಿ ತಾನೂ ಸ್ವಾಭಿಮಾನಿ ಎಂದು ಹೇಳುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳು ಖಂಡಿತವಾಗಲೂ ನಮಗೆ inspiration ಅಲ್ಲವೇ?”One Daughter is equal to 10 sons” ಪ್ರಸ್ತುತ ಈ ಸಾಲು ನೂರಕ್ಕೆ ನುರರಷ್ಟು ಸತ್ಯ. ಸಮಾಜ ದಿಕ್ಕರಿಸಿದಾಗ ಧೈರ್ಯದಿಂದ ತಲೆ ಎತ್ತಿ ನಿಂತ,ಹೀಯಾಳಿಸಿ ನಕ್ಕ ಸಮಾಜದ ಎದುರು ಸ್ವಾಭಿಮಾನದಿಂದ ಬದುಕುತ್ತಿರುವ ಹೆಣ್ಣು ಮಗಳೊಬ್ಬಳ ಜೀವನಗಾತೆ ತೆರೆದಿಡುವ ಚಿಕ್ಕ ಪ್ರಯತ್ನ ಮಾಡುತ್ತೇನೆ.

೨೦೧೧ ರ ಒಂದು ದಿನ ಲಕ್ನೋ ದಿಂದ ದೆಹಲಿಯಕಡೆಗೆ ಚಲಿಸುತ್ತಿದ್ದ ರೈಲಿನ General Compartment ನಲ್ಲಿ ಹೆಣ್ಣು ಮಗಳೊಬ್ಬಳು ಚಲಿಸುತ್ತಿದ್ದಳು,ವಾಸ್ತವದಲ್ಲಿ ಅವಳು ರಾಷ್ಟ್ರೀಯ ವಾಲೀಬಾಲ್ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಳು.ಅವಳ ದುರಾದೃಷ್ಟಕ್ಕೆ ಅವಳ ಕತ್ತಿನಲ್ಲಿದ್ದ ಬಂಗಾರದ ಸರವನ್ನ 4 ಜನ ಕದೀಮರು ಗಮನಿಸಿದ್ದರು,ಅವಳನ್ನ ಸುತ್ತುವರಿದ ಆ ನಾಲ್ಕುಜನ ಕಳ್ಳರು ಬಲವಂತದಿಂದ ಆ ಸರ ಕೀಳಲು ಪ್ರಯತ್ನಿಸುತ್ತಿದ್ದರು.ಆದರೆ ಅವಳು ಧೀರ ಹೆಣ್ಣು ,ಕ್ಷಣ ಕ್ಷಣಕ್ಕೂಆ ನಾಲ್ಕು ಜನ ಕಳ್ಳರನ್ನ ಪ್ರತಿರೋಧಿಸುತ್ತಿದ್ದಳು.ಅದೇ ಹೋರಾಡುವ ಗುಣ ಅವಳನ್ನ ಇಂದು ವಿಶ್ವದಲ್ಲಿ ಪ್ರಮುಖ ಹೆಣ್ಣಾಗಿ  ಮಾಡಿರಬಹುದು.ಆದರೆ ಇದನ್ನೆಲ್ಲ ಗಮನಿಸುತ್ತಿದ್ದ General Compartment ನ ಜನರುಗಳು ಮೂಕರಾಗಿ ನೋಡುತ್ತಿದ್ದರೆ ನರ ಸತ್ತ ಆ ನಾಗರೀಕರ ಮನಸ್ತಿತಿಯ ಅನಾವರಣ ಮಾಡಿಕೊಳ್ಳುವ  ಪ್ರಯತ್ನ ನಿಮಗೇ ಬಿಟ್ಟಿದ್ದೇನೆ.ಆದರೆ ಆ ಹೆಣ್ಣು ಮಗಳು ಆ ಕ್ಷಣ ಸೋತಿದ್ದಳು.ಚಲಿಸುತ್ತಿದ್ದ ರೈಲಿನಿಂದ ಅವಳನ್ನ ಹೊರನೂಕಿದ್ದರು.ಪುರುಷನ ರಾಕ್ಷಸೀಯ ಗುಣ ಮತ್ತೊಮ್ಮೆ ಹೊರಬಿದ್ದಿತ್ತು.ಅತೀವ ಹೋರಾಟದ ನಡುವೆಯೂ ಅವಳು ಚಲಿಸುತ್ತಿದ್ದ ರೈಲಿನಿಂದ ಹೊರತಳ್ಳಲ್ಪಟ್ಟಿದ್ದಳು. ಆ ಕ್ಷಣ ಕಲ್ಪಿಸಿಕೊಂಡರೂ ಮನಸ್ಸು ಭಾರವಾಗುತ್ತದೆ. ದುರಾದೃಷ್ಟಕ್ಕೆ ಕೆಳಕ್ಕೆ ಬಿದ್ದಾಗ ಅವಳ ಎಡಗಾಲು ಪಕ್ಕದ ಕಂಬಿಯ ಮೇಲಿತ್ತು ಆದರೆ ಮರು ಕ್ಷಣದಲ್ಲೇ ಇನ್ನೊಂದು  ರೈಲು ಅವಳ ಕಾಲನ್ನ ತುಂಡರಿಸಿಕೊಂಡು ಹೋಗಿತ್ತು. ಅರ್ದ ತಾಸಿನಲ್ಲಿ ಅವಳು ನೆನಸಿರದ ಆ ಕೆಟ್ಟ ಘಟನೆ ನಡೆದಿತ್ತು.ಅವಳು ೭ ತಾಸು ಅದೇ ಎರಡು ರೈಲ್ವೆ ಕಂಬಿಗಳ ನಡುವೆ ಹೊರಳಾಡುತ್ತಿದ್ದಳು.ತುಂಡಾದ ಕಾಲನ್ನ ರೈಲ್ವೇ  ಕಂಬಿಯ ನಡುವೆ ಓಡಾಡುತ್ತಿದ್ದ ಇಲಿಗಳು ತಿನ್ನುತ್ತಿದ್ದವು.ಆ ೭ ಗಂಟೆಗಳಲ್ಲಿ ೪೯ ರೈಲುಗಳು ಓಡಾಡಿದ್ದವು.ಆದರೆ ಆ ಹುಡುಗಿ ಇನ್ನೂ ಜಿವಂತವಾಗಿದ್ದಳು.ಅದೇ ಹೋರಾಡುವ ಛಲ ಅವಳನ್ನ ಜೀವಂತವಾಗಿರಿಸಿತ್ತು.ಒಂದೆಡೆ ತುಂಡಾದ ಕಾಲು,ಇನ್ನೊಂದೆಡೆ ತನ್ನೆದುರೇ ತನ್ನ ತುಂಡಾದ ಕಾಲಿನಿಂದ ರಕ್ತ ಹೀರುತ್ತಿರುವ ಇಲಿಗಳು ಆದರೂ ನಾನು ಬದುಕಬೇಕೆಂಬ ಹಂಬಲ ಅವಳಲ್ಲಿತ್ತು.ಅವಳಿಗೆ ಆ ಕ್ಷಣ ತನ್ನ ಭವಿಷ್ಯದಲ್ಲಿ ತಾನು ಒಂಟಿ ಕಾಲಿಟ್ಟುಕೊಂಡು ಜೀವಿಸಬೇಕಾದ ದಿನಗಳ ಕಲ್ಪನೆ ಹಾದು ಹೋಯಿತು.ರಾಷ್ಟ್ರೀಯ ವಾಲೀಬಾಲ್ ತಂಡದ ಆಟಗಾರ್ತಿ  ಆಗಿದ್ದ ಅವಳು ಒಂದು ಕಾಲಿನಲ್ಲಿ ವಾಲಿಬಾಲ್ ಅಂತೂ ಆಡುವುದು ಕಷ್ಟವಾಗಿತ್ತು.ಇಷ್ಟೆಲ್ಲದರ ನಡುವೆಯೂ ಅವಳ ಅಂತಶಕ್ತಿ ಜಾಗೃತವಾಗಿತ್ತು “ನೀನು ಬದುಕಬೇಕು,ಹೋರಾಡಬೇಕು”ಎಂದಿತ್ತು.
ಉತ್ತರ ಪ್ರದೇಶದ ಬರೇಲಿಯ ಒಂದು ಹಳ್ಳಿಯ ರೈಲ್ವೇ ಕಂಬಿಯ ಮೇಲೆ ಜೀವಂತ ಅನಾಥ ಶವವಾಗಿ ಹೊರಳಾಡುತ್ತಿದ್ದ ಅವಳನ್ನ ಅಲ್ಲಿಯ ಜನಗಳು ಸ್ಥಳೀಯ ಸರಕಾರೀ ಆಸ್ಪತ್ರೆಗೆ ಸೇರಿಸಿದರು.ಆದರೆ ಆ ಆಸ್ಪತ್ರೆಯಲ್ಲಿ  ಅನಸ್ತೇಶಿಯವೇ ಇರಲಿಲ್ಲ ,ಅವಳು ಬದುಕಲು ಅವಷ್ಯವಾಗಿದ್ದ ರಕ್ತ ಕೂಡ ಅಲ್ಲಿರಲಿಲ್ಲ.ಆಗ ಆ ಹುಡುಗಿ “ಅನಸ್ತೇಷಿಯಾ ಇಲ್ಲದಿದ್ದರೂ ಪರವಾಗಿಲ್ಲ ನನಗೆ ಶಸ್ತ್ರಚಿಕಿತ್ಸೆ ಮಾಡಿ” ಅಂದುಬಿಟ್ಟಳು.ಅಭ್ಭಾ!!! ಅದೇನು ಧೈರ್ಯ. ಅಲ್ಲಿನ ವೈದ್ಯರುಗಳು ಮತ್ತು Pharmacist ಗಳು ರಕ್ತದ  ವ್ಯವಸ್ಥೆಯನ್ನ ಮಾಡಿದರು.   ಅವಳ ದೇಹಕ್ಕೆ ಅವಷ್ಯವಿದ್ದ ತುರ್ತು ಚಿಕಿತ್ಸೆಯನ್ನು ಮಾಡಿ ಅವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋ ದ KGMC ಗೆ ಕಳಿಸಲಾಯಿತು.ಅಷ್ಟರಲ್ಲಾಗಲೇ ಈ ಸುದ್ದಿ ಇಡೀ ದೇಶವನ್ನ ತಲುಪಿತ್ತು.ಈ ಸುದ್ದಿ ದೇಶದ ಕ್ರೀಡಾ ಸಚಿವನನ್ನೂ  ತಲುಪಿತ್ತು.ನಂತರ ಅವಳನ್ನ ಅಲ್ಲಿಂದ ದೆಹಲಿಯ AIIMS ಗೆ ಸ್ಥಳಾಂತರಿಸಲಾಯಿತು.ಅಲ್ಲಿ ಅವಳು ನಾಲ್ಕು ತಿಂಗಳುಗಳ ಕಾಲ ನರಕ ಯಾತನೆ ಅನುಭವಿಸಿದಳು.

ಆ ನಾಲ್ಕು ತಿಂಗಳುಗಳಲ್ಲಿ ನಮ್ಮ So Called ಮಾದ್ಯಮಗಳು ತಮಗೆ ಬೇಕಾದ ಹಾಗೆ ಸುಳ್ಳು  ಕತೆಯನ್ನ ಹೆಣೆದಿದ್ದರು.ಮತ್ತೊಮ್ಮೆ ಹೆಣ್ಣು ಎಡವುದನ್ನೇ ಕಾಯುವ ಈ ಸಮಾಜದ ವಿಕಾರ ಮನಸ್ಥಿತಿ ಅನಾವರಣಗೊಂಡಿತ್ತು.ಒಂದು ವಾಹಿನಿ ಅವಳು ಟಿಕೆಟ್ ತೆಗೆದುಕೊಂಡಿರಲಿಲ್ಲ ಹಾಗಾಗಿ TC ಬಂದಾಕ್ಷಣ ರೈಲಿನಿಂದ ಹಾರಿದಳು ಅಂದರೆ ಇನ್ನೊಂದು ವಾಹಿನಿ ಒಂದು ಹೆಜ್ಜೆ ಮುಂದೆ ಹೋಗಿ ಅವಳು ತುಂಬಾ depress ಆಗಿದ್ದಳು ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಳು ಎಂದು ಅಂತೆ ಕಂತೆಯ ಸುದ್ದಿಯನ್ನ ಬರೆದರು.news papers ಗಳೂ ಇದಕ್ಕೆ ಹೊರತಾಗಿರಲಿಲ್ಲ.ಸಾಧನೆಯ ಹಾದಿಯಲ್ಲಿದ್ದ ಹೆಣ್ಣೊಬ್ಬಳು ಸಮಯದ ಎದುರು ಸೋತಾಗ ಕೇಕೇಹಾಕಿ ನಗಲು ಅದೆಷ್ಟೋ  ಜನ ಕಾಯುತ್ತಿರುತ್ತಾರೆ ಇಲ್ಲಿಯೂ ಹಾಗೇ ಆಯಿತು.ಇದ್ಯಾವುದರ ಅರಿವಿಲ್ಲದೇ ಬದುಕಲೇಬೇಕೆಂಬ ಛಲದಿಂದ ಅಂತಶಕ್ತಿಯ ಸಹಕಾರದಿಂದ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದಳು ಆ ಹುಡುಗಿ.ಅಂತೂ ೪ ತಿಂಗಳು ೨೫ ದಿನಗಳ ಸಾವು ಬದುಕಿನ ಹೋರಾಟದವನ್ನ ಜಯಿಸಿಕೊಂಡು ಬಂದಳು, ಆದರೆ ಸಮಾಜ ಅವಳನ್ನ ನೋಡುವ ಪರಿ ಬದಲಾಗಿತ್ತು ಯಾವುದು ಸತ್ಯ ಆಗಿತ್ತೋ ಅದನ್ನು ಹೇಳಲು ಪ್ರಯತ್ನಿಸಿದಷ್ಟು ಜನರು ಇವಳನ್ನ ಹೀಯಾಳಿಸುವುದೂ ಜಾಸ್ತಿ ಅಗಿತ್ತು.ಅಂತ ಕಠಿಣ ಸಮಯದಲ್ಲಿ ಅವಳೊಡನೆ  ಅವಳ ಅಣ್ಣ ಮತ್ತು ಅಮ್ಮ ಬೆನ್ನೆಲುಬಾಗಿ ನಿಂತರು.”ನಾನು ಆತ್ಮಹತ್ಯೆಗೆ ಯತ್ನಿಸಲಿಲ್ಲ ನನ್ನನ್ನ ನಂಬಿ”ಎಂದು ಅಂಗಲಾಚಿಸಲು ಆ ಧೀರ ಹೆಣ್ಣಿಗೇಕೋ ಮನಸ್ಸಾಗಲಿಲ್ಲ.ಕೈ ಕಾಲು ದೇಹ ಸರಿ ಇದ್ದವರೂ ಮಾಡಲಾಗದ ಸಾಹಸವನ್ನ,ಸಾಧನೆಯನ್ನ ನಾನು ಮಾಡುತ್ತೇನೆ ಎಂದು ತನ್ನ ಭವಿಷ್ಯದ  ಬಗ್ಗೆ ಕಠಿಣ ನಿಲುವೊಂದನ್ನ ತಳೆದಿದ್ದಳು.ಅವಳು ತೆಗೆದುಕೊಂಡ ನಿರ್ಧಾರ 8848 feet ಎತ್ತರದ ಮೌಂಟ್ ಎವರೆಸ್ಟ್  ಅನ್ನ ಏರುವುದಾಗಿತ್ತು.ಏಷ್ಯಾದ ಅತೀ ಎತ್ತರದ ಪ್ರದೇಶ ಮೌಂಟ್ ಎವರೆಸ್ಟ್ .ದೇಹದ ಬಾಗಗಳೆಲ್ಲ ಸರೀ ಇರುವ ಅದೆಷ್ಟೋ ಜನರ ಕೈಯಲ್ಲೂ ಆಗದ ಸಾಹಸ ಮಾಡಲು ಹೊರಟಿದ್ದಳು ಆ ಹುಡುಗಿ.ಅವಳು ಹೇಳುತ್ತಾಳೆ “ಕೇವಲ ನನ್ನಅಂತಃಶಕ್ತಿ ನನಗೆ ಸಾತ್ ನೀಡಿತು” ಎಂದು.ಕೆಲವೊಂದು ನಿರ್ದಾರವನ್ನ ತಗೆದುಕೊಂಡಬಹುದು ಅದರೆ ಅದನ್ನ ಸಾಧಿಸಲು ಹೊರಟಾಗ ಅದರ ನಾನಾ ಮಜಲುಗಳ ದರ್ಶನವಾಗುತ್ತದೆ ಅವಳಿಗೂ ಹಾಗೇ ಆಯಿತು.ಸಮಾಜ ಗಹಗಹಿಸಿ ನಕ್ಕಿತು,ಬೇರೆ ಏನಾದರು ಮಾಡು ಎಂದು ಹತ್ತಿರದವರು ಹೇಳಿದರು.ಇಲ್ಲ ಅವಳ ನಿರ್ಧಾರ ಅಚಲವಾಗಿತ್ತು ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ಹಠ ಅವಳಲ್ಲಿತ್ತು ಅಷ್ಟೇ ಅಲ್ಲದೇ ಬಹಳ ಮುಖ್ಯವಾಗಿ ಅವಳಿಗೆ sponsorship ಕೂಡ ದೊರಕಿತ್ತು.ಇಂತಹ ಸಮಯವನ್ನ ಅವಳು  ಕಳೆದುಕೊಳ್ಳಲು ತಯಾರಿರಲಿಲ್ಲ.ಅವಳಿಗೊಂದು ಧೈರ್ಯ ಹೇಳುವ ಮನಸ್ಸು ಬೇಕಿತ್ತು ಅದನ್ನ ಅವಳು ೧೯೮೪ ರಲ್ಲಿ ಎವರೆಸ್ಟ್ ಏರಿದ್ದ ಬಚೇಂದ್ರಿಪಾಲ್ ಅವಳಲ್ಲಿ ಕಂಡಿದ್ದಳು.ಅವರನ್ನು ಮೀಟ್ ಮಾಡಬೇಕೆಂಬ ಆಸೆಯನ್ನು ಅವಳ ಅಣ್ಣನ ಸಹಾಯದಿಂದ ಈಡೇರಿಸಿಕಂಡಳು.ಬಚೆಂದ್ರಿಪಾಲ್ ಇವಳ ಸಾಧನೆಯ ಹಂಬಲಕ್ಕೊಂದು ಸಲಾಮ್ ಎಂದಿದ್ದಳು,”ಇಂತಹ ಕಠಿಣ ಪರಿಸ್ಥಿತಿಯಲ್ಲೂ ಎವರೆಸ್ಟ್ ಏರುವ ಕನಸ ಹೊತ್ತಿರುವ ನಿನ್ನ ಅಂತಃಶಕ್ತಿ ನಿಜವಾಗಲೂ ಅಸಾಮಾನ್ಯವಾದದ್ದು ” ಎಂದು ಸಾಧನೆಗೆ ಬೆಂಬಲವಾಗಿ ನಿಂತರು.ಮೊಟ್ಟ ಮೊದಲನೆಯ ಬಾರಿಗೆ positive response ಕಂಡ ಆ ಹುಡುಗಿಗೆ ಧೈರ್ಯ ಇನ್ನೂ ಜಾಸ್ತಿ ಆಯಿತು.

ಮೌಂಟ್ ಎವರೆಸ್ಟ್ ಎರುವ ಪ್ರಕ್ರಿಯೆ ಶುರುವಾಯಿತು ಅವಳಿಗೆ ಅವಳ ಗುರು ‘ಶೇರ್ಪಾ ‘ ಮತ್ತು ಐದು ಮಂದಿ ಸಾತ್ ನೀಡಿದ್ದರು, ಆಗ ಅವಳಿಗೆ ಹಂತ ಹಂತವಾಗಿ ಕಷ್ಟಗಳ ದರ್ಶನವಾಗತೊಡಗಿತು. Road Head ನಿಂದ Base Camp ಗೆ ಚಲಿಸಲು ಸಾಮಾನ್ಯ ಜನರಿಗೆ ೨ ನಿಮಿಷ ಸಾಲದ ಸಾಕಿತ್ತು ಆದರೆ ಅದೇ ದೂರ ಚಲಿಸಲು ಅವಳಿಗೆ ೩ ತಾಸು ಬೇಕಾಗಿತ್ತು. ಆಗ ಶೇರ್ಪಾ  ‘ಮಗಳೇ ವಾಪಸ್ ಹೊರಟು ಬಿಡು ನಿನ್ನಿಂದ ಈ ಕೆಲಸ ಸಾಧ್ಯವಿಲ್ಲ ‘ ಎಂದು ಹೇಳುತ್ತಿದ್ದರು.ಅವಳ ಜೊತೆಗಿದ್ದವರೆಲ್ಲ “Take your own time,come slowly” ಎಂದು ಹೇಳಿ ಮನ್ನಡೆಯುತ್ತಿದ್ದರು.ಆಗೆಲ್ಲ ಅವಳು ಮನಸ್ಸಿನಲ್ಲಿಯೇ “Yess I can” ಎನ್ನುತ್ತಿದ್ದಳು ಮತ್ತು ನೀವು ಏರುವ ಮೊದಲು ನಾನು ಈ ಎವರೆಸ್ಟ್ ಅನ್ನು ಏರುತ್ತೇನೆ ಎಂದುಕೊಳ್ಳುತ್ತಿದ್ದಳು.ಅವಳ ಆತ್ಮಸ್ತೈರ್ಯದೆದುರು ಬೆರೆಲ್ಲ ನಗಣ್ಯವಾಗಿತ್ತು. ಅಲ್ಲಿಂದ ಅವರೆಲ್ಲ camp 3 ತಲುಪಿದ್ದರು,ನಿಜವಾದ mountaineering ಶುರುವಾಗುವುದು Camp 3 ರಿಂದ -೬೦ಡಿಗ್ರೀ ಸೆಲ್ಸಿಯಸ್ ನ ಆ ವಾತಾವರಣದಲ್ಲಿ ಚಲಿಸುವುದೆಂದರೆ ಸುಲಭದ ಮಾತಲ್ಲ. Camp3 to South Col Summit ನ ನಡುವಿನ ಪಯಣ ಅವಳನ್ನು ಸ್ವಲ್ಪ ಭಯಕ್ಕೆ ನೂಕಿತ್ತು ಕಾರಣ mountaineering ಗೆ ಬರುವ ಅದಷ್ಟೋ ಜನರುಗಳು ಸೋಲುವುದು ಇದೇ ಹಾದಿಯಲ್ಲಿ .ಅಲ್ಲಿ ಅವಳು ಬಾಂಗ್ಲಾದೇಶೀ ಮಹಿಳೆಯೋರ್ವಳು ಸಾವಿನ ತುತ್ತತುದಿಯಲ್ಲಿ ಆಕ್ಸಿಜೆನ್ ಇಲ್ಲದೇ ನರಳುತ್ತಿರುವುದನ್ನ ನೋಡಿ ಭಯಗೊಂಡಳು.ಆಗ ಅವಳಂದುಕೊಂಡಿದ್ದು ನಿಮ್ಮೆಲ್ಲರ ಪ್ರತಿನಿಧಿಯಾಗಿ ಈ ಎವರೆಸ್ಟ್ ಅನ್ನ ಏರಿಯೇ ತೀರುತ್ತೇನೆ ಎಂದು.ಅಬ್ಬಾ ಅಲ್ಲಿಂದ ಮುಂದೇ Hillary Step ಅದೊಂದನ್ನ ದಾಟಿದರೆ ಅವಳು ಏಷ್ಯಾದ ಟಾಪ್ ಸ್ಥಳವನ್ನು ತಲುಪುತ್ತಿದ್ದಳು.Hillary Step ಗೆ ಬರುತ್ತಿದ್ದಂತೆ ಮತ್ತೆ ಶೇರ್ಪಾ ವಾಪಸ್ ಹೊರಟುಬಿಡು ಎಂದರು ಆಗ ಅವಳು ‘ಇಲ್ಲ ಇಡೀ ಭಾರತಕ್ಕೆ ನಾನು ಉತ್ತರಕೊಡಬೇಕು,ನಾನೂ ಕೂಡ ಏನನ್ನಾದರೂ ಸಾಧಿಸಬಲ್ಲೇ ಎಂದು ಹೇಳುವ ಸಮಯ ಬಂದಿದೆ ಇನ್ನು ವಾಪಸ್ ಹೋಗಲಾರೆ’ ಎಂದಳು.Yess! !!ಅವಳಂದುಕೊಂಡಿದ್ದು ಮುಂದಿನ ಅರ್ಧ ತಾಸಿನಲ್ಲಿ ನಡೆದುಹೋಯಿತು. April 11,2011 ರಂದು ರೈಲ್ವೇ ಕಂಬಿಗಳ ನಡುವೆ ನರಳುತ್ತ ಮಲಗಿದ್ದ ಆ ಹುಡುಗಿ May 21,2013 ರ ೧೦.೫೫ ನಿಮಿಷಕ್ಕೆ ಏಷ್ಯಾದ ಎವರೆಸ್ಟ್ ನ ತುತ್ತ ತುದಿ ತಲುಪಿದ್ದಳು.Prosthetic ಕೃತಕ ಎಡ ಕಾಲನ್ನ ಹೊಂದಿದ್ದ ಅವಳು ಅಸಾಮಾನ್ಯವಾದ ಸಾಧನೆಯೊಂದನ್ನ ಮಾಡಿದ್ದಳು.ಅವಳ ಜೊತೆಗಿದ್ದ ಶೇರ್ಪಾ ನ ಕಣ್ಣಂಚು ಈ ಹುಡುಗಿಯ ಸಾಧನೆಯನ್ನ ಕಂಡು ಒದ್ದೆಯಾಗಿತ್ತು.ಭಾರತೀಯ ತ್ರಿವರ್ಣ ದ್ವಜ ಹಿಡಿದು ಜೋರಾಗಿ ಚೀರಿದಳು.ಶೇರ್ಪಾನ ಬಳಿ photo ತೆಗೆಸಿಕೊಂಡಳು.ಅಷ್ಟೇ ಅಲ್ಲದೇ ಒಂದು ಚಿಕ್ಕ video ವನ್ನೂ ಮಾಡಿಸಿದಳು ಅದೇಕೆಂದರೆ ಅವಳಿಗೆ ಅರಿವಿತ್ತು ತಾನು ವಾಪಸ್ ಆಗಲು ಬೇಕಾಗುವಷ್ಟು  ಆಕ್ಸಿಜನ್ ತನ್ನಬಳಿ ಇಲ್ಲ ಎಂಬುದು.ಹಾಗಾಗಿ ತಾನೇನಾದರೂ ಜೀವಂತ ಮರಳದಿದ್ದರೆ ಈ video ಆದರೂ ಮರಳಲಿ ಅದರಿಂದ ಅದೆಷ್ಟೋ ಸೋತ ಮನಸ್ಸುಗಳಿಗೆ  ಒಂಚೂರಾದರೂ ಆತ್ಮವಿಶ್ವಾಸ ದೊರಕಬಹುದು ಎಂಬುದು ಅವಳ ಆಶಯವಾಗಿತ್ತು. ಅವಳು ಮಾಡಿದ ಸಾಧನೆ ನಿಜವಾಗಿಯೂ ಅಸಮಾನ್ಯವಾದದ್ದು.೨೧st May ೨೦೧೩ ನಮಗೆಲ್ಲ ಪ್ರೇರಣೆಯ ದಿನ ಅಂತ ಬಾವಿಸೋಣ.ಒಂದು video capture ಮಾಡಿದ ನಂತರ ಅವರಿಬ್ಬರು ಕೆಳಗಿಳಿಯಲು ಶುರು ಮಾಡಿದರು.  Camp 4 ರಿಂದ Summit(top of the hill) ಗೆ ೩೫೦೦feet.Summit ನಿಂದ Camp 4 ಗೆ ಬರುವಷ್ಟರಲ್ಲಿ ಅವಳ ಆಕ್ಸಿಜನ್ ಮುಗಿಯುವ ಹಂತಕ್ಕೆ ಬಂದಿತ್ತು,ಇನ್ನೂ ಮುಕ್ಕಾಲು ಬಾಗ ಪಯಣ ಮಿಕ್ಕಿತ್ತು.  ಶೇರ್ಪಾ ಬೇಗ ಬೇಗ ಚಲಿಸಲು ಮೇಲಿಂದ ಮೇಲೆ ಸೂಚನೆ ನಿಡುತ್ತಿದ್ದರು.ಕೃತಕ prosthetic ಕಾಲು ಕಳಚಿ ಬೀಉವುದೊಂದು ಬಾಕಿ ಇತ್ತು.ಬಲಗಾಲಿನ ಮೇಲೆ ಭಾರ ಜಾಸ್ತಿ ಆಗುತ್ತಲಿತ್ತು.ಯಶಸ್ವಿಯಾಗಿ ಸಾಧನೆ ಮಾಡಿದ್ದ ಆ ಹುಡುಗಿ ಜಿವಂತವಾಗಿ ಮರಳುವುದು ಸಂಶಯವಾಗಿತ್ತು, ಶೇರ್ಪಾ ವೇಗವಾಗಿ ಚಲಿಸುತ್ತಲೇ ಇದ್ದರು.ಅವರಿಗದು ಅನಿವಾರ್ಯವಾಗಿತ್ತು. ಒಂದು ಕೈಯಲ್ಲಿ Roaf ಹಿಡಿದಿದ್ದ ಅವಳ ಕೃತಕ ಕಾಲಿನಿಂದ ರಕ್ತ ಚಿಮ್ಮುತ್ತಿತ್ತು.Roaf ಹಿಡಿದ ಕೈ ಮರಗಟ್ಟಲು ಶುರುವಾಗಿತ್ತು.ಕೈ ಕಪ್ಪು ಬಣ್ಣಕ್ಕೆ ತಿರುಗಲು ಶುರುಮಾಡಿತ್ತು,ಅದೇನಾದರು ನೀಲಿ ಬಣ್ಣಕ್ಕೆ ತಿರುಗಿದರೆ ಅನಿವಾರ್ಯವಾಗಿ ಕೈ ಕತ್ತರಿಸಲೇಬೇಕಿತ್ತು.ಆದರು ತಾನು ಜೀವಂತವಾಗಿ ತೆರಳಬೇಕೆಂಬ ಅಂತಃಶಕ್ತಿ ಅವಳನ್ನ ಚಲಿಸುವಂತೆ ಮಾಡಿತ್ತು.ಆದರೆ ಅದಾಗಲೇ ಅವಳ ಆಕ್ಸಿಜನ್ ಖಾಲಿಯಾಗಿತ್”ತು.Luck Favours to those who have the passion to win” ಈ ಮಾತು ಸತ್ಯವಾಯಿತು ಕೆಳಗಡೆಯಿಂದ ಗುಡ್ಡ ಏರುತ್ತಿದ್ದ ಬ್ರಿಟಿಷ್ ಯುವಕ ಹವಾಮಾನ ಕಾರಣದಿಂದ ಮತ್ತೆ ಮೇಲಕ್ಕೆ ಏರಲಾಗದೇ ವಾಪಸ್‍ಸಾಗುವವನಿದ್ದ ಆಗ ಅವನ ಬಳಿ ಇದ್ದ extra ಆಕ್ಸಿಜನ್ packet ಅನ್ನು ಅವಳಿಗೆ ನೀಡಿದ. God supported her .ಅವಳ ಅದಮ್ಯ ಉತ್ಸಾಹಕ್ಜೆ ದೇವರೂ ತಲೆದೂಗಿದ್ದ. ಅವಳು ಯಶಸ್ವಿಯಾಗಿ mountaineering ಅನ್ನು ಮಾಡಿದ್ದಳು.

arunima-220513-inner

ನಾನು ಇಷ್ಟೊತ್ತು ನಿಮಗೆ ಹೇಳಿದ ಕತೆ ಯಾರದ್ದು ತಿಳಿಯಿತಾ? ಅದು ಅರುಣಿಮಾ ಸಿನ್ಹಾ ಎಂಬ ಹುಡುಗಿಯ ಕತೆ ಇದು. ಅರುಣಿಮಾ, ಚಿಕ್ಕ ಚಿಕ್ಕ ವಿಷಯಕ್ಕೆ ಬೇಸರಮಾಡಿಕೊಳ್ಳುವ,ಜಿಗುಪ್ಸೆ ಹೊಂದುವ ಅದಷ್ಟೋ ಮನಸ್ಸುಗಳಿಗೆ ಮಾದರಿಯಾಗಿ ನಿಲ್ಲುತ್ತಾಳೆ. ಈಗಾಗಲೆ ವಿಶ್ವದ ೪ Continent ಗಳ ಎತ್ತರದ ಪ್ರದೇಶಗಳನ್ನ ಏರಿರುವ ಅರುಣಿಮಾ ನಮಗೆಲ್ಲ role model ಆಗಿ ನಿಲ್ಲುತ್ತಾರೆ.ಏಷ್ಯಾದ ಎವರೆಸ್ಟ್, ಆಫ್ರಿಕಾದ ಕಿಲಿಮಂಜಾರೋ,ಯುರೋಪಿನ ಎಲ್ಬುರ್ಜ ಹಾಗು ಆಸ್ಟ್ರೇಲಿಯದ ಎತ್ತರದ ಪ್ರದೇಶಗಳನ್ನ ಏರಿ ತ್ರಿವರ್ಣ ಧ್ವಜವನ್ನು   ಹಾರಿಸಿದ್ದಾಳೆ. ಇದನ್ನೆಲ್ಲ ನೋಡುತ್ತಿದ್ದರೆ ಭಾರತ ವಿಶ್ವಗುರು ಆಗುವುದರಲ್ಲಿ ಸಂಶವೇ ಇಲ್ಲ ಅನ್ನಿಸುತ್ತಿದೆ.ಅರುಣಿಮಾ ನಮ್ಮ ಮನಸ್ಸುಗಳನ್ನ ಬಹುಬೇಗ ಆವರಿಸಿಕೊಳ್ಳುತ್ತಾಳೆ.ಅವಳನುಭವಿಸಿದ ನೋವನ್ನು ಅದೆಷ್ಟೋ ಹೆಣ್ಣು ಮಕ್ಕಳು ಅನುಭವಿಸಿದ್ದಾರೆ ಮತ್ತು ಅನುಭವಿಸುತ್ತಿದ್ದಾರೆ. ಸಮಾಜದ ಕುರುಡು ,ಮೂಢ ಮನಸ್ಥಿತಿಯನ್ನ ಕೊನೆಗಾಣಿಸಬೇಕೆಂದರೆ ಅರಣಿಮಾ ತರಹದ ಹೆಣ್ಣುಮಕ್ಕಳಿಂದ ಮಾತ್ರ ಸಾಧ್ಯ. ಅರುಣಿಮಾಳ ಈ ಸಾಧನೆಯನ್ನ ಪರಿಗಣಿಸಿ ಸರಕಾರ ಅತ್ಯುನ್ನತ ಪದ್ಮ ಪ್ರಶಸ್ತಿಯನ್ನ ನೀಡಿದೆ. ಅರುಣಿಮಾ ಬರೆದ ‘Born Again on Top of the hill’ ಪುಸ್ತಕವನ್ನು ಸ್ವತಃ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು. ಬಹುಮುಖ್ಯವಾಗಿ ಅರಣಿಮಾ ಸಿನ್ಹಾ ನಮ್ಮ Yuva Brigade ನ mentor ಗಳಲ್ಲಿ ಒಬ್ಬರು.ಕರ್ನಾಟಕದ ಅದೆಷ್ಟೋ ಯುವ ಮನಸ್ಸುಗಳಿಗೆ ಮಾದರಿ ಈ ‘ಅರುಣಿಮಾ’.

ಅರುಣಿಮಾ ಸಿನ್ಹಾಳ ನಾಲ್ಕು ಸಾಲು ಯಾವಾಗಲೂ ನನ್ನನ್ನ ಪ್ರೇರೇಪಿಸುತ್ತದೆ ಅದು :
“ಅಭೀ ತೊ ಇಸ್ ಭಾಂಚ್ ಕಿ ಅಸಲೀ ಉಡಾನ್ ಬಾಕೀ ಹೈ,ಅಭೀ ತೋ ಇಸ್ ಪರಿಂಧೇ ಕಿ ಇಂತಹಾನ್ ಬಾಕೀ ಹೈ,ಅಭಿ ಅಭಿ ಮೇನೆ ಲಾಗಾ ಹೈ ಸಮುಂದರೋಂ ಕೊ,ಅಭೀ ತೋ ಪೂರಾ ಆಸಮಾನ್ ಬಾಕೀ ಹೈ “
ಈ ಮೇಲಿನ ಸಾಲುಗಳು  ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಕಿಚ್ಚನ್ನು ನಿಮ್ಮಲ್ಲಿ ಹಚ್ಚುವುದರಲ್ಲಿ ಅನುಮಾನವೇ ಇಲ್ಲ.

ಅರುಣಿಮಾ ಸೋಲನ್ನ ಬಲ್ಲಳು,ಕ್ಲಿಷ್ಟ ಪರಿಸ್ಥಿತಿಯನ್ನು ನಿಬಾಯಿಸುವುದನ್ನ ಬಲ್ಲಳು,ಸಮಾಜದ ಧೂಷಣೆಯನ್ನ ಹತ್ತಿರದಿಂದ ಬಲ್ಲಳು ಹಾಗೂ ಬಹುಮುಖ್ಯವಾಗಿ ತನ್ನೊಳಗಿನ ಆತ್ಮಸ್ತೈರ್ಯವನ್ನ ಬಲ್ಲವಳಾಗಿದ್ದಳು ಹಾಗಾಗಿ ಇಡೀ ವಿಶ್ವವನ್ನ ಗೆದ್ದಳು.ಅರುಣಿಮಾಗೆ ಒಂದು ಸಲಾಂ!

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!