ಭಾರತದ ಹಳ್ಳಿಗಳಲ್ಲಿ ಚಲಾವಣೆಯಾಗುವ ಭಾಗಶಃ ನೋಟುಗಳು ಯಾವುದಾದರೂ ಒಂದು ಅಡುಗೆ ಮಸಾಲೆಯ ವಾಸನೆಯನ್ನು ಹೊರಸೂಸುತ್ತವೆ. ಅದು ಸಾಸುವೆ, ಜೀರಿಗೆ, ಅರಿಶಿನ ಅಥವಾ ಇನ್ಯಾವುದೋ ಇರಬಹುದು, ಇದನ್ನು ಹೇಳಲು ಕಾರಣವೆಂದರೆ ಭಾರತೀಯರಲ್ಲಿ ಆನಾದಿ ಕಾಲದಿಂದಲೂ ಉಳಿತಾಯ ಅನ್ನೋದು ಜೀವನದ ಭಾಗವಾಗಿ ಬಂದಿದೆ. ಬ್ಯಾಂಕುಗಳ ಅಸ್ತಿತ್ವಕ್ಕೂ ಮೊದಲೇ ನಮ್ಮವರು ಹಣ ಉಳಿಸುವ ಅಭ್ಯಾಸ...
ಇತ್ತೀಚಿನ ಲೇಖನಗಳು
ಭೃಂಗದ ಬೆನ್ನೇರುವಾಗ ಕಂಡ ವಿಸ್ಮಯ
ಪ್ರತೀಬಾರಿ ಕುದುರೇ ಮುಖದ ತುತ್ತತುದಿ ತಲುಪಿ suicide pointನಂತಿರುವ ಬಂಡೆಯ ಮೇಲೆ ಕೂತು ಎದುರು ನೋಡಿದಾಗ ಮೋಡಗಳ ಮಧ್ಯದಲ್ಲೊಂದು ಅಣಬೆಯ ಹಾಗೆ ಧಿಡೀರನೆ ಎದ್ದು ನಿಂತಿರುವ ಮುಸುಕು ಮುಸುಕಾದ ಆಕೃತಿಯೊಂದು ಕಾಣುತ್ತಲೇ ಇತ್ತು. ಅದೊಂದು ಬೆಟ್ಟ ಯಾವುದೋ ಏನೋ ಎಂದು ಯಾವಾಗಲೂ ಕುತೂಹಲದಿಂದ ನೋಡುತ್ತಿದ್ದೆ. ಇದೇ ಅನುಭವ ಮತ್ತೊಮ್ಮೆ ಬಲ್ಲಾಳರಾಯನ ದುರ್ಗದ ಮೂಲಕ ಬಂಡಾಜೆ...
ಸಮಾಜ ಒಡೆಯುವ ಜಯಂತಿ, ಉತ್ಸವಗಳು ಬೇಕೆ…?
ಇಂದು ಜಯಂತಿ, ಒಂದು ಹಬ್ಬ ಹರಿದಿನ ಎನ್ನುವುದು ಖುಶಿಯಾಗಿ ಮನೆ ಮತ್ತು ಕುಟುಂಬ ಕೊನೆಗೆ ಸಮಾಜವೊಂದು ಸಂಪೂರ್ಣವಾಗಿ ಪಾಲ್ಗೊಳ್ಳುವಿಕೆಯ ಸಾಮೂಹಿಕ ಹಬ್ಬವಾಗಿರುತ್ತದೆಯೇ ಹೊರತಾಗಿ ಮುಖ ತಿರುವುವ, ಇದ್ದಬದ್ದ ಸಾಮರಸ್ಯದ ಸಂಬಂಧವೂ ಮುರಿದುಕೊಳ್ಳುವ ಜಾಡ್ಯವಾಗಬಾರದು. ಇವತ್ತು ಮನೆ, ವಠಾರಗಳಲ್ಲಿ ನಡೆಯುವ ಸಮಾರಂಭಗಳನ್ನು ಗಮನಿಸಿ. ಮನೆಯಲ್ಲಿಷ್ಟು ಸಂತಸ, ನೆಂಟರಿಷ್ಟರಿಗೆ...
`ಹರಿದು ಕೂಡುವ ಕಡಲು’ –(ನಲವತ್ತೈದು ಗಜಲ್‍ಗಳು)
ಕವಿ: ಗಣೇಶ ಹೊಸ್ಮನೆ, ಪ್ರಕಾಶಕರು: ಲಡಾಯಿ ಪ್ರಕಾಶನ, ಗದಗ, ಪ್ರಕಟಣೆಯ ವರ್ಷ: 2014, ಪುಟಗಳು: 68, ಬೆಲೆ: ರೂ.60-00 ಗಣೇಶ ಹೊಸ್ಮನೆಯವರ ಈ ಗಜಲ್ಸಂಕಲನ ಪ್ರಕಟವಾಗಿ ವರ್ಷವೇ ಕಳೆದಿದೆ. ತುಂಬ ತಡವಾಗಿ `ಈಹೊತ್ತಿಗೆ’ಗಾಗಿ ಇದನ್ನು ತೆರೆಯುತ್ತಿದ್ದೇನೆ. ಇದೊಂದು ಬಹಳಒಳ್ಳೆಯ ಕೃತಿ. ಗಣೇಶ ಅಪರೂಪಕ್ಕೆ ಒಳ್ಳೆಯ ಕವಿತೆ...
ದೇಶ ಕಾಯೋ ನಮ್ಮ ಹೆಮ್ಮೆಯ ಸೈನಿಕರಿಗೊಂದು ಸಲಾಂ
ವರ್ಷ ಕಳೆದು ಮತ್ತೆ ದೀಪಾವಳಿ ಹಬ್ಬ ಬಂದಿದೆ, ಆದರೆ ನಮ್ಮ ಹಳ್ಳಿಗಳ ಕಡೆ ಹಬ್ಬ ಆಚರಿಸುವ ಉತ್ಸಾಹ ಮಾತ್ರ ಕೊಂಚ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತದೆ. ಕಾಲ ಕಾಲಕ್ಕೆ ಸುರಿಯಬೇಕಾಗಿದ್ದ ಮಳೆರಾಯ ಮುನಿಸಿಕೊಂಡಿದ್ದಾನೆ,ಭೂತಾಯಿಯ ನಂಬಿ ಅವಳ ಒಡಲಿಗೆ ಸುರಿದಿದ್ದ ಬೀಜರಾಶಿ ಫಲ ಕೊಡುವ ಬದಲು ಸುಟ್ಟು ಕರುಕಲಾಗಿದೆ, ಬೇಸಿಗೆ ಕಾಲದಲ್ಲಿ ಆಸರೆಯಾಗಬೇಕಿದ್ದ ಕೆರೆ ಕಟ್ಟೆಗಳ ನೀರು...
ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಮೋದಿಯವರು ಆಯ್ಕೆ ಮಾಡಿಕೊಂಡ...
ಭಾರತದ ಉತ್ತರದ ಕಟ್ಟ ಕಡೆಯ ಹಳ್ಳಿ ‘ಮಾನಾ ‘. ಇದು ಪವಿತ್ರ ಬದರೀನಾಥ ಕ್ಷೇತ್ರದಿಂದ ಮೂರು ಕಿಲೋಮೀಟರ್ ದೂರದಲ್ಲಿ, ಬಹುತೇಕ ಟಿಬೆಟಿಯನ್ ಬುಡಕಟ್ಟಿನ ಭೋಟಿಯಾ ಎಂಬ ಸಮುದಾಯ ವಾಸಿಸುವ ,ಸುಮಾರು ಇನ್ನೂರು ಇನ್ನೂರೈವತ್ತು ಮನೆಗಳಿರುವ ಹಳ್ಳಿ. ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ಈ ಹಳ್ಳಿ ಸಮುದ್ರಮಟ್ಟದಿಂದ ೩೨೦೦ ಮೀಟರ್ ಅಂದರೆ ಸರಾಸರಿ ಸುಮಾರು ೧೦,೨೨೯...
