ಜಗತ್ತು ಸುತ್ತುವ ಆಸೆ, ಹಣ ಎರಡೂ ಇರದ ನನಗೆ ಅವೆರೆಡೂ ಬಯಸದೆ ಬಂದ ಭಾಗ್ಯ. ೨೦೦೦ ಮೇ ೨೪ ರಂದು ಪ್ರಥಮ ಬಾರಿಗೆ ಸ್ಪೇನ್ ನ ಬಾರ್ಸಿಲೋನಾದ ‘ಎಲ್ ಪ್ರಾತ್’ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುಂಚೆ ದುಬೈನಲ್ಲಿ ಮೂರು ತಿಂಗಳು ವಾಸ, ಕೆಲಸ ಮಾಡಿದ್ದ ಅನುಭವ ಬಿಟ್ಟರೆ, ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ ಕೂಡ ನೋಡಿರದ ಬದುಕು ನನ್ನದು. ಆಗಸ್ಟ್ ಪೂರ್ತಿ ತಿಂಗಳು...
ಪ್ರವಾಸ ಕಥನ
ಅಮೆರಿಕೆಯಲ್ಲಿ ಕೆಲಸ
ಈ ಹಿಂದೆ: ನಾವು ಅವರ ದೃಷ್ಟಿಗೆ ಬೀಳುತ್ತಲೇ ಓಡಿ ಬಂದು ಮುಖವಿಡೀ ನಗುತ್ತ ತಳ್ಳುಗಾಡಿಯನ್ನು ಎಳೆದುಕೊಂಡಾಗಲೆ ಸೇತುವೆಯನ್ನು ದಾಟಿದೆವು ಎಂದು ಮನಸ್ಸು ಹಗುರ. ಹಲವು ವರ್ಷಗಳ ನಂತರ ಮಕ್ಕಳ ಬಿಸಿ ಮೈ ತಡವಿ ಸುಖಿಸಿದ ಬೆಚ್ಚಗಿನ ಭಾವನೆ. ಚಳಿಗಾಳಿ ಬೀಸುತ್ತಿದ್ದರೂ ಮನಸ್ಸು ಖುಶಿಯಿಂದ ಬೆಚ್ಚಗಾಗಿತ್ತು. ತೂಗು ಸೇತುವೆಯಲ್ಲಿ ನನಗೆ, ನನ್ನಂತೆ ಹಲವರಿಗೆ ಕಲ್ಪನೆ...
ತೂಗು ಸೇತುವೆಯಲ್ಲಿ
ಏಳು ಸಮುದ್ರ ದಾಟುವುದೆಂದು ನಿಶ್ಚಯಿಸಿದಾಗ ಹೇಗೆ, ಯಾವಾಗ ಎಂದೆಲ್ಲಾ ನಿಗದಿಪಡಿಸಬೇಕಲ್ಲ. ನಿಶ್ಚಯ ಮಾಡಿದವರು ಮಕ್ಕಳು, ಕಾರ್ಯರೂಪಕ್ಕೆ ತರುವವರೂ ಮಕ್ಕಳು. ನಾವು ಕೀಲುಗೊಂಬೆಗಳು. ನಮಗೇನು ಗೊತ್ತಾಗಬೇಕು ಈ ಸಮುದ್ರ ದಾಟುವ ಪರಿ. ನಮ್ಮ ಕಲ್ಪನೆಯಲ್ಲಿ ನಾವು ಅಂದುಕೊಳ್ಳಬಹುದು, ಊರು-ಪರಊರು ಎರಡನ್ನೂ ಜೋಡಿಸುವ ಒಂದು ತೂಗು ಸೇತುವೆ ಇದ್ದರೆ ಯಾವ ಜಂಜಾಟವೂ ಇಲ್ಲದೆ ಕೈಚೀಲ...
ಹಂಪಿಯೆನ್ನುವ ಅದ್ಭುತ
ದೇಶದ ಯುವಕ-ಯುವತಿಯರಲ್ಲಿರುವ ಸಿಂಹವನ್ನು ಬಡಿದೆಬ್ಬಿಸಿ ಭಾರತವನ್ನು ಮತ್ತೆ ವಿಶ್ವಗುರು ಮಾಡುವುದಕ್ಕೊಸ್ಕರ ರಾಜ್ಯದ ನಾನಾ ಭಾಗಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿರುವ ಯುವಕರು ಸೇರಿ 2014ರ ಜುಲೈ 27 ರಂದು ಬೆಂಗಳೂರಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುವುದರ ಮೂಲಕ “ಉತ್ತಿಷ್ಠ ಭಾರತ” ಉದ್ಘಾಟನೆಗೊಂಡಿತು. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಎಲ್ಲಾ...
ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ
ಮಣಿಪಾಲದಿಂದ ಹೊರಟಾಗಲೇ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಸೋಮೇಶ್ವರ ತಲುಪುತ್ತಿದ್ದಂತೆ ನಾಪತ್ತೆಯಾಗಿತ್ತು. ಮೋಡ ಮುಸುಕಿದ್ದರೂ ಮಳೆ ಬಂದುದರ ಕಿಂಚಿತ್ ಕುರುಹೂ ಅಲ್ಲಿರಲಿಲ್ಲ. ಮಂಜು ಮುಸುಕಿದ ಆಗುಂಬೆ ಘಟ್ಟ ಬೆಳಗಿನ ಇಬ್ಬನಿಯನ್ನು ಪ್ರೋಕ್ಷಿಸುತ್ತಾ ಸ್ವಾಗತವೀಯುತ್ತಿತ್ತು. ನೀವು ಕರಾವಳಿಯವರು ಅದೃಷ್ಟವಂತರು, ನಮಗೆ ಇಲ್ಲಿ ಮಳೆಯೇ ಇಲ್ಲ ಎಂದು ಸದಾ ಗೊಣಗುತ್ತಿದ್ದ...
ತಮಿಳುನಾಡಿನ ಸುಂದರ ದೇವಾಲಯಗಳು
ಕಳೆದ ದಸರಾದಲ್ಲಿ ಕಾಶೀ ವಿಶ್ವನಾಥನ ದರ್ಶನ ಪಡೆದಿದ್ದ ನಾವು ಈ ಬಾರಿಯ ದಸರಾ ರಜೆಯಲ್ಲಿ ರಾಮೇಶ್ವರ ಹೊರಡುವ ಯೋಜನೆ ಹಾಕಿಕೊಂಡಿದ್ದೆವು. ಕಾಶೀ ಹೋಗಿ ಬಂದ ವರುಷದೊಳಗೆ ರಾಮೇಶ್ವರಕ್ಕೆ ಹೋಗಬೇಕೆಂಬ ಪ್ರತೀತಿ ನಮ್ಮಲ್ಲಿದೆ ಮತ್ತು ಕಾಶೀಯಿಂದ ತಂದ ಗಂಗಾಜಲದಿಂದ ಶ್ರೀ ರಾಮನಾಥನಿಗೆ ಅಭಿಷೇಕ ಮಾಡಿಸಬೇಕೆಂಬ ಪ್ರತೀತಿ ಕೂಡ. ದಸರಾ, ವಾರಂತ್ಯ ಮತ್ತು ಗಾಂಧೀ ಜಯಂತಿಗಳಿಂದ...
ಲಡಾಖ್ ಹಾಗು ಭಾರತೀಯ ಸೇನೆ
ಇದೀಗಷ್ಟೇ ಸ್ವಾತಂತ್ರ್ಯ ದಿನ ಕಳೆದು ಹೋಗಿದೆ. ಪ್ರತಿ ವರುಷದಂತೆ ಈ ಬಾರಿಯೂ ಅದೇ ಸಂಭ್ರಮ ಸಡಗರದಿಂದ ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂಭ್ರಮಗಳೆಲ್ಲಾ ಮುಗಿಯುತ್ತಿದ್ದಂತೆ ಅದೊಂದು ವಾರ್ತೆ ನಮ್ಮ ವಾರ್ತಾಪತ್ರಿಕೆಗಳ ಮುಖಪುಟ ಸೇರಿಕೊಂಡಿತ್ತು. ಇನ್ನೂ ಮಾಸದ ನನ್ನ ಕೆಲ ಹೊಸ ನೆನಪುಗಳನ್ನು ಅದು ಕೆದಕತೊಡಗಿತು. “ಲಡಾಖ್’ನಲ್ಲಿ...
ಮಂಜಿನನಗರಿಯಲ್ಲೊಂದು ದಿನ…
ಎಲ್ಲಾ ಪ್ರವಾಸ ಕಥನಗಳೂ ಶುರುವಿಗೆ ಮುಂಚೆ ಡೋಲಾಯಮಾನ ಯೋಜನೆಗಳೇ ಆಗಿರುತ್ತವೆ. ಅದೂ ಈಗೀನ ಕಾಲದ ಕೂಲಿ ಕೆಲಸಮಾಡುವ ಗೆಳೆಯ ಬಳಗವನ್ನು ಕಟ್ಟಿಕೊಂಡು ಹೋಗುವುದು ಕಪ್ಪೆ ಹಿಡಿದು ಕೊಳಗ ತುಂಬಿದಂತೆ. ನಮ್ಮ ಯೋಜನೆಗಳು ಬಾಸಿನ ಹೆಂಡತಿ ಮಾಡಿದ ಅಡಿಗೆಯ ರುಚಿಯೋ , ಮನೆಯಲ್ಲಿ ಮಾಡಿದ ಜಗಳದ ಮೇಲೋ ನಿಂತಿರುವುದು ವಿಪರ್ಯಾಸ. ಅದನ್ನೆಲ್ಲಾ ಮೆಟ್ಟಿ ನಾವು ಯೋಜನೆ...
ಕರ್ನಾಟಕದ ತಿರುಪತಿ ಮಂಜುಗುಣಿ
ಸಹ್ಯಾದ್ರಿಯ ಮಡಿಲಿನಲ್ಲಿ ತಣ್ಣಗೆ ಮಲಗಿದ ಪುಣ್ಯಕ್ಷೇತ್ರ ಮಂಜುಗುಣಿ ಉತ್ತರಕನ್ನಡ ಜಿಲ್ಲೆ ಶಿರಸಿಯಿಂದ ಸುಮಾರು 27-28 ಕಿ.ಮಿ. ಹಾಗೂ ಅಂಕೋಲದಿಂದ 31-32 ಕಿ.ಮಿ. ದೂರದಲ್ಲಿದೆ. ಚಳಿಗಾಲದಲ್ಲಿ ಸುತ್ತುವರಿಯುವ ದಟ್ಟಮಂಜಿನಿಂದಾಗಿ ‘ಮಂಜುಗುಣಿ’ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಅರಣ್ಯದಿಂದ ಸುತ್ತುವರಿದ ಈ ಕ್ಷೇತ್ರವನ್ನು ‘ಕರ್ನಾಟಕದ ತಿರುಪತಿ’ ಎಂದೇ...
ಇನ್ನೂ ಒಂದೆರಡು ದಿನ ದುಬೈಯಲ್ಲಿದ್ದು ಬಿಡೋಣ ಅಂತನಿಸಿದ್ದು ಮಾತ್ರ ಸುಳ್ಳಲ್ಲ
ದುಬೈ ಪ್ರವಾಸ ಶುರುವಾಗುವ ಮುನ್ನವೇ ಪ್ರವಾಸದ ಅನುಭವವನ್ನು ಬರೆಯಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ. ಆದರೆ ಪ್ರವಾಸ ಮುಗಿಸಿ ಬರುವಷ್ಟರಲ್ಲಿ ಶುರುವಾದ ಕೆಲಸದ ಒತ್ತಡಗಳು ಅನುಭವವನ್ನು ಬರೆಯುವುದಕ್ಕೆ ಅನುಕೂಲ ಮಾಡಿಕೊಟ್ಟಿರಲಿಲ್ಲ. ಇವತ್ತು ಬರೆಯಬೇಕು ನಾಳೆ ಬರೆಯಬೇಕು ಎಂದುಕೊಳ್ಳುತ್ತಲೇ ಎರಡೂವರೆ ತಿಂಗಳು ಕಳೆದು ಹೋಗಿದ್ದೇ ಗೊತ್ತಾಗಲಿಲ್ಲ. ಇನ್ನು ಬರೆಯದಿದ್ದರೆ...