ನೆನಪನ್ನೇ ನೆಪವಾಗಿಸಿಕೊಂಡು ಕುಳಿತ ಘಳಿಗೆ ನೆನಪಾಗುತ್ತಿತ್ತು ಎಲ್ಲವೂ ಆ ಪುಟ್ಟ ಕೇರಿಯಲ್ಲಿ ಹವಣಿಸದೆ ಬಿಡದು ಮತ್ತೆ ತಲುಪಲು ಆ ಬೀದಿ ಹರಿವ ನೀರಿನಂತೆ ಪಯಣಿಸುತ್ತಿದೆ ಜೀವನ ಆಚರಣೆಯಲ್ಲಿ ನೆನಪಾಗುತ್ತಿತ್ತು ನನ್ನಲ್ಲೆ ಅಚ್ಚೆಯಾಗುಳಿದ ಬಾಲ್ಯ ನೆನಪಾಗುತ್ತಿತ್ತು ಗೆಳೆಯರೊಂದಿಗೆ ಬೆರೆತ ಕ್ಷಣ ನೆನಪಾಗುತ್ತಿತ್ತು ಭಿತ್ತಿಯ ಮೇಲೆ ನಾ ಚಿತ್ರಿಸಿದ ಚಿತ್ರ ವಾಸ್ತವಗಳ...
ಕವಿತೆ
ದೂರದಿಂದ ಪ್ರೀತಿಯಂತೆ ಕಂಡಿತ್ತು…
ವಾರದಲ್ಲಿಂದು ಮೂರನೆಯ ತಲೆಸ್ನಾನ ನೋಡಲು ಬರುವರಂತೆ ಭಾವನ ಕಡೆಯವರು ರೇಷಿಮೆಯ ಕೂದಲನ್ನು ಮತ್ತೆ ಸರಿಪಡಿಸಿಕೊಂಡೆ ಸೀರೆ ಕೆಳಗಾಯಿತೆಂದು ಕನ್ನಡಿ ಕೊಂಕು ಮಾಡಿತ್ತು ಕಾರಿನ ಸದ್ದೇಕೊ ವಾದ್ಯದಂತೆ ಕೇಳಿಸಿತು ಇಂದೇನು ಭಯವಿಲ್ಲ ನೋಡಲು ಕಾತರವಷ್ಟೆ ಕಿಟಕಿ ತೋರಿಸಿದ್ದು ಕಪ್ಪಂಗಿ ಮುಚ್ಚಿದ ಬೆನ್ನು ದಿಟ್ಟಿಸಿ ನೋಡುವಾಗ ಥಟ್ಟನೆ ತಿರುಗಿದ್ದ ಸರಳುಗಳ ಸೀಳಿ ಬಂದಿತ್ತು ದೃಷ್ಟಿ...
ಕಂದಪದ್ಯ
ಕನಸಿನ ತಾರೆ ಹೃದಯವೆಂಬ ಮನೆಗೆ ಬಂದ ಅತಿಥಿ ನೀ ಯಾರೇ? ಬಂದು ಮನವ ಕದ್ದೊಯ್ದ ನೀರೆ ನೀ ಯಾರೇ? ಚೆಲುವೆ ನೀ ಯಾರೆ? ಜನುಮ-ಜನುಮದ ಈ ಸಂಬಂಧಕೆ ಧಾರೆ ಎರೆದವರಾರೆ? ಎಲ್ಲೋ ಇದ್ದ ನನ್ನ ಮನಸ ನಿನ್ನತ್ತ ಸೆಳೆದ ನೀ ಯಾರೇ? ನನ್ನ ಮನಕೆ ಬಾಣ ಹೂಡಲು ಗುರಿ ಇಟ್ಟು ಕೊಟ್ಟವರಾರೆ? ಗಾಯವನ್ನು ಮಾಯ ಮಾಡಲು ಔಷಧಿ ಇತ್ತವರಾರೆ? ಒಂದೇ ನೋಟಕೆ ಮಿಂಚ ಹರಿಸಿದ ಅಕ್ಷಿರಾಣಿ ಯಾರೇ...
ನಿರುಪಯೋಗಿಯ ಹನಿಗವನಗಳು
ದಿನ ಬೆಳಗಾದರೆ ಗೊಣಗುವರು ಬೆಂಗಳೂರಲ್ಲಿ ಟ್ರಾಫಿಕ್ಕು – ಟ್ರಾಫಿಕ್ಕು ಹೀಗೆಂದು ಕೊಳ್ಳುವುದ ನಿಲ್ಲಿಸಿಹರೇ ಹೊಸ ಕಾರು ಬೈಕು? ನಿರುಪಯೋಗಿ ———————————————————– ಎಷ್ಟು ಅಂತ ಹಾರ್ನ್ ಹೊಡಿತಿಯೆ ಒಸಿ ಸುಮ್ಕ್...
ನೆನಪು
ಬಿಡಿಸಲಾಗದ ಬಂಧ ನಮ್ಮದೀ ಸ್ನೇಹ ಒಮ್ಮೆ ಒಳನಡೆಯೆ,ಹೊರಬರಲಾಗದ ವ್ಯೂಹ ಇಂಥ ಬಂಧನದಿ ನಮ್ಮ ಸಿಲುಕಿಸಿ ಓ ಗೆಳತಿ, ಮರಳಿ ಬಾರದ ಕಡೆಗೆ ಯಾಕೆ ನೀ ನಡೆದಿ? ಎರಡು ದಶಕದ ಹಿಂದೆ ನಮ್ಮ ಬದುಕಿನಲಿ ಗೆಳೆತನದ ಹೊಸ ಭಾಷ್ಯ ಬರೆದೆ ಒಲವಿನಲಿ ಬರೆದ ಪ್ರತಿ ಪುಟಗಳಲೂ ನೆನಪುಗಳ ಸುಗ್ಗಿ ಒಮ್ಮೆ ಕಹಿ ಬೇವಾದರೆ,ಮತ್ತೊಮ್ಮೆ ಹುಗ್ಗಿ ಎಷ್ಟೋ ಕಾಲದ ಬಳಿಕ ಆಗಿಹುದು ಭೇಟಿ ಹೇಳಲುಳಿದಿಹ...
ರೇಷಿಮೆಯ ದಾರದಿ ಹರಿದ ಪ್ರೀತಿ….
ರೇಷಿಮೆಯ ದಾರವ ಹಿಡಿದು ತಂದಳು ತಂಗಿ ಅಣ್ಣನಿಗೆ ತಾ ಅದನು ಕಟ್ಟಲು ಮುದ್ದು ಮುಖದ ಚೆಲುವೆ ಹೆಸರು ಭಾನುಮತಿಯು ಆ ಮುಗ್ಧಮುಖಕೆ ಸರಿಸಾಟಿ ಯಾರೆನ್ನಲು ಅಣ್ಣನೆಂಬುವನವನೆ ನಮ್ಮ ಗೋಪಾಲಕೃಷ್ಣ ಕೊಳಲಿಗೇ ರಾಗವ ನೇಯುವವನು ಹರಿದು ಬಂದ ರಾಗದಿ ಜಗವ ನಲಿಸುತಾ ಪ್ರೀತಿಯ ಸುಧೆಯ ಕರೆಯುವವನು ನಮ್ಮ ಕೃಷ್ಣಯ್ಯನ ಮುದ್ದು ತಂಗಿಯು ಇವಳು ಕೌರವ ಕುಲದ ಹಿರಿ ಸೊಸೆಯು ಈಕೆ… ಸದಾ...
ಸುಬ್ಬಂಣನ ತ್ರಿಪದಿಗಳು
೧.ನಗೆಯುಳ್ಳ ಮೊಗ ಚೆಂದ | ಚಿಗುರುಳ್ಳ ಮರ ಚೆಂದ ಅಗರು ಗಂಧವೆ ಚೆಂದ ಪೂಜೆಯಲಿ ಸಜ್ಜನರ ಬಗೆಯು ಬಲು ಚೆಂದ ಸುಬ್ಬಂಣ || ೨.ಕ್ರಿಸ್ತನೆಂದರು ಕೆಲರು | ಅಲ್ಲನೆಂದರು ಹಲರು ಕೃಷ್ಣನೇ ಪರಮಾತ್ಮನೆಂದು ಹಲಜನರೆನುವ ತತ್ವ ತಾನೊಂದೆ ಸುಬ್ಬಂಣ || ೩.ನೋಟುಗಳ ಬಲದಿಂದ | ಓಟುಗಳ ಸಂಗ್ರಹಿಸಿ ಪೀಠವೇರುವ ಮಂದಿಯಿಂದ ದೇಶಕ್ಕೆ ಶನಿ- ಕಾಟವೆಂದೊರೆದ ಸುಬ್ಬಂಣ ||...
ಪ್ರಕೃತಿ
ಒಣಗಿ ಬಣಗುಡುತ್ತಿದ್ದ ಇಳೆಯ ಮೇಲೆ.. ಜಿನುಗುತಿದೆ ಮಳೆಹನಿಯ ಮುತ್ತಿನಾ ಮಾಲೆ.! ಪ್ರಕೃತಿಯ ಮೈತುಂಬಾ ಜಲಧಾರೆಯ ಜಳಕ.. ಸಸ್ಯಶ್ಯಾಮಲೆಯ ಮೈಮನಕೆ ಹರುಷದಾ ಪುಳಕ.! ಒಣಕೊಂಬೆಯ ಮೇಲೆಲ್ಲಾ ಮೂಡುತಿದೆ ಚಿಗುರು.. ಬರಡು ಬಯಲಿನ ತುಂಬಾ ಹಾಸುತಿದೆ ಹಸಿರು.! ಜೀವಸಂಕುಲಕ್ಕೆಲ್ಲಾ ಉಸಿರನುಣಿಸುವ ಮಾತೆ.. ಕಲ್ಪನಾತೀತವೀ ವೃಕ್ಷಮಾತೆಯ ಮಮತೆ.! ಕಾಣದಾ ಕೈಯೊಂದು ಮಾಡುತಿದೆ ಪವಾಡ...
ಸರಳ ಸಾಲುಗಳು – 2
೧. ನೀನಿರದ ಕ್ಷಣ ನಾನು, ನನ್ನ ಮನ ಬರೀ ಮೌನ….. ೨ . ಮತ್ತೆ ನೀನು ಕೈಚಾಚು ಕೈಹಿಡಿವೆ ಎಂದೂ ಬಿಡದ ಹಾಗೆ.. ಎದೆಯ ಮೇಲೆ ಸುಮ್ಮನೆ ಗೀಚು ಎಂದಿಗೂ ಅಳಿಸದ ಹಾಗೆ… ೩. ಮಳೆಬಂದಾಗ ಎಲೆಯ ಮೇಲೆ ಕುಣಿವ ಮಳೆ ಹನಿಗಳ ಹಾಗೆ.. ನಿನ್ನ ಕಂಡಾಗ ಎದೆಯ ಮೇಲೆ ಕುಣಿದಿವೆ ನಿನ್ನದೇ ಕನಸುಗಳು…. ೪. ಈ ವಿರಹದ ಬಿಸಿಗೆ ಕರಗಿದ ಮೌನವು ಕಣ್ಣೀರಾಗಿ ಹೊರಹೊಮ್ಮಿದೆ...
ಬೆಳಕು ಬಾಗಿಲು
ಜಗದ ಡೊಂಕ ಕಳೆಯಲು ಬಾಗಿಲೆಲ್ಲಿದೆ ಗೋಲಕೆ..? ತೋರೋ ಹರಿಯೇ, ಮನದ ಗೋಡೆಗೆ, ತಿಮಿರದ ಬಾಗಿಲ… ಹೃದಯ ಕವಾಟವ ತೆರೆದು, ಮಲಿನ ಜೀವ-ಜಲವ ಶುದ್ಧಿ ಸಿದ್ಧಿಸಿದಂತೆ, ಮಾಡೋ ಹರಿಯೇ, ನನ್ನ ಮನದ ಜೀವವಾಯುವ. ಪಾಪ-ಪುಣ್ಯಗಳ ಭ್ರಾಂತಿ ಜನನ ಮರಣದ ವರ್ತುಲಗಳ ಭೀತಿ. ತೋರೋ ಹರಿಯೇ, ಪರಿಪೂರ್ಣ ಛಾಪು ಈ ಜೀನಕೆ ಶಾಂತಿಯ ಕಾನನದಲ್ಲಿ ಕಾಣದ ಆತ್ಮನ ಬಾಣ, ಅವಿರ್ಭಾವ ಅವಭೃಥ ಅಮೃತದ...