ಕವಿತೆ

ಕವಿತೆ

ಮಲ್ಲಿಗೆ ಕವನ

ಸಂಜೆಬಾನಂಗಳದಿ ಕೆಂಪು ಏರುತ್ತಲಿದೆ ನಿನ್ನನ್ನೇ ನೆನೆಯುತ್ತ ದಿನವು ಸಖಿಯೆ, ಯಾವುದೋ ನೋಟಕನ ಉಪಮೆಗೂ ಆಹಾರ ನಿನ್ನ ಕೆನ್ನೆಯ ಬಣ್ಣ ಸೂರ್ಯನೆರೆಯೆ! ಬಂದ ತಂಗಾಳಿಯೂ ಒಂದಿಷ್ಟು ತಂಪೆರೆದು ನೀನಿರದ ಅಸಹನೆ ತುಂಬುತಿಹುದು ಯಾವುದೋ ರಸಿಕನಾ ಎದೆಕಿಚ್ಚು ಹೆಚ್ಚುವುದು ನಿನ್ನ ಸಾಮೀಪ್ಯವನು ಹಾಡುತಿಹುದು ಮಲ್ಲಿಗೆಯ ಪೇಟೆಯಲಿ ನೀರ್ತಳಿದ ಹೂವುಗಳು ನಿನ್ನ ಮುಡಿಗೇ ಎಂದು...

ಕವಿತೆ

ಸರಳ ಸಾಲುಗಳು -1

೧. ನಿನ್ನನು ಮರೆತು ಬಿಡೋಣ ಅನ್ನುವಷ್ಟರಲ್ಲಿ ಹೃದಯದಲ್ಲಿ ನಿನ್ನ ನೆನಪುಗಳ ಪಥಸಂಚಲನ !   ೨. ನಿನ್ನ ನೆನಪುಗಳನ್ನು ಹೊದ್ದು ಮಲಗಿದ್ದ ನನಗೆ ಆಸರೆಯಾಗಿದ್ದು ಗಲ್ಲದ ಮೇಲೆ ಹರಿದಾಡಿದ ನಾಲ್ಕು ಕಣ್ಣೀರ ಸಾಲುಗಳು   ೩. ನೀನಾಡಿದ ಮಾತುಗಳೆನ್ನಲ್ಲಾ ನಾನು ಸಂಗ್ರಹಿಸಿದ್ದೇನೆ. ಒಂದು ಹೊತ್ತಿಗೆ ಹೊರತರಿಲಿದ್ದೇನೆ “ಮೌನದೊಳಗಿನ ಮಾತುಗಳು ” ಎಂಬ ಶೀರ್ಷಿಕೆಯಡಿ...

ಕವಿತೆ

ಜೀವನವೃಕ್ಷ

ಸಂಸಾರ ಬೀಜದೊಳಗಿಂದ ಮೊಳೆಯಿತೊಂದು ಜೀವನ ವೃಕ್ಷ..! ಆಗಸದೆತ್ತರಕ್ಕೆ ಬೆಳೆಯುವ ಹಂಬಲವಾದರೂ.. ಎಷ್ಟೊಂದು ಅಡೆತಡೆಗಳು..? ಮೃದುತಳಿರ ಚಿವುಟಿ ಕೆಣಕಿ ಮತ್ಸರಿಸುವ ಕೈಗಳು.. ಫಲಗಳ ಕುಟುಕಿ ನೋಯಿಸಲು ಹವಣಿಸುವ ಹಕ್ಕಿಗಳು.. ಎಳೆಬೇರ ತಿಂದು ಕೃಶವಾಗಿಸಿ ಬಾಧಿಸುವ ಹುಳುಗಳು.. ಉರಿಬಿಸಿಲ ಧಗೆಯಲಿ ದಹಿಸಿ ಬಾಡುವ ಹಸಿರೆಲೆಗಳು.. ಸಾರಸತ್ವವ ಹೀರಲು ಸುತ್ತಲೂ ಮುತ್ತಿರುವ ಕಳೆಗಳು...

ಕವಿತೆ

ಅರುಣರಾಗಿನಿ

ಅಂಬರದಲ್ಲಿ ಮೂಡಿದ ಜೊನ್ನ ನಾಂದಿಯಾಗಿದೆ ಅನುದಿನದ ಪರ್ವಕೆ; ಧವಲ ಬಾನಲಿ ಲೋಹಿತ ವಿಹಂಗನಿಣುಕಲು ಮೊಳಗಿದೆ ವಿಹಂಗಮ ಗೋಷ್ಠಿ… ವಸಂತದ ನವಸುಮ ಮಧುವು ನನ್ನೊಳ ಹೃದಯವ ಸವಿಯಾಗಿಸಿದೆ; ಅಭ್ರಗಳಾಗರ ಸುಂದರ ಆಗಸ ಮನಕೆ ಮಾಗಿಯ ತಂಪನೆರೆದಿದೆ.. ಭಾನು ಮೂಡಿ ಭಾವ ತುಂಬಿರಲು ಸುರಿದಿದೆ ಜೇನ ತುಂತುರು ಹನಿ; ಮಾಮರದ ನನೆಯಲಿ ತುಸು ಅಡಗಿ ಗಾನಧುನಿ ಹರಿಸಿಹಳು...

ಕವಿತೆ

ಇಳಿ ಸಂಜೆಯ ತಿಳಿ ಮೌನ…

ಕಡಲ ಮುಂದೆ ನನ್ನ ಹೆಗಲಿಗೆ ನೀನು ಒರಗಿ ಕೂತಿದ್ದನ್ನು ನೆನೆದು ಹೃದಯ ಕೊರಗುತ್ತಿದೆ .. ಪ್ರಾಣ ಬಿಡುವವರೆಗೂ ನೀನು ಬಿಡುಅಂದರೂ ಬಿಡಲೊಲ್ಲೆ ಎಂದು ನನ್ನ ಕೈ ಬೆರೆಳುಗಳ ಜೊತೆ ನಿನ್ನ ಕೈ ಬೆಸೆಯುತ್ತಿದ್ದನು ನೆನೆದು ಕಣ್ಣೀರು ಜಿನುಗುತ್ತಿದೆ .   ಇಳಿ ಸಂಜೆಯ ತಿಳಿ ಮೌನದಲ್ಲಿ ನೀನು ಆಡಿದ ಮಾತುಗಳನ್ನೆಲ್ಲಾ ಅಲೆಗಳು ಕೂಗಿ ಹೇಳಿದಂತಿದೆ .. ದಡದಲ್ಲಿ ನಾವಿಬ್ಬರೂ...

ಕವಿತೆ

ವೀರ ಸಾವರ್ಕರ್: ಕವನ

ವಿಶಾಲವಾರಿಧಿಯ ಹೆದ್ದೆರೆಯಮೇಲೆ ರತ್ನಗರ್ಭೆಯ ಸುತನ ಹೊತ್ತೊಯ್ದು ಭರದಿ ಸಾಗಿತ್ತೊಂದು ಕಡಲನೌಕೆ..! ಶೌರ್ಯತೇಜದ ಗಂಡುಗಲಿಯ ಕರೆದು ಸಾಗುವ ಜಂಬದಲಿ ಅದಕಿಷ್ಟು ಗರ್ವ…ಒಂದಿನಿತು ಹೆಮ್ಮೆ..! ಕೈಕಾಲ ಬಿಗಿದ ದಾಸ್ಯಶೃಂಖಲೆಯ ಯುಕ್ತಿಯಲಿ ಕಿತ್ತು ಬಿಸುಟೇಳುತಾ ವೀರ ಧುಮುಕಿದನಾ ಶರಧಿಯೊಳಗೆ..! ಹರಿದಿರುವ ಚರ್ಮ, ಒಸರುತಿರುವ ರಕ್ತ ಉಪ್ಪುನೀರಲಿ ಮುಳುಗೇಳುವ ದೇಹ...

ಕವಿತೆ

ಹೃದಯ…

ಪುಪ್ಪಸಕ್ಕೆ, ಹಸಿರ ಜೀವವ ತುಂಬುತ್ತಾ, ಸೋಡಾರಿನಂತೆ ಅಲ್ಲಾಡುವ ಉಸಿರಬತ್ತಿಯನ್ನು, ಅನಾಯಸವಾಗಿ ಚೇತನದಿಂದ, ಜಡದವರೆಗೆ ಚಾಲಿಸಿ ಶುಷ್ಕಕವಾಟಗಳಲ್ಲಿ ಶಾಂತಿ ತುಂಬಿದರೆ ತಂಪು ಶೈತ್ಯಾಗಾರ, ಪಾಪವ ತುಂಬಿದರೆ ಸುಡುಬಿಸಿಲು. ಗಾಜಿನ ಪಾರದರ್ಶಕತೆಗೆ ತಿಮಿರವೂ ಎದೆಯಲ್ಲೇ ಬೇಯುತ್ತಾ, ಅಂತರಾಳದ ಕೆಚ್ಚಿ ಕಿಚ್ಚು ಬಿಚ್ಚು ನುಡಿಗಳು, ದ್ವಂದ್ವ ವಿಚಾರಣೆಯಿಂದ ಜೀವ-ಜಲ ಪಡೆಯುವುದು...

ಕವಿತೆ

ಸುಂದರ ಕವನ: “ನೀನು”

ಅಮವಾಸ್ಯೆ ಹೃದಯಕ್ಕೆ ಹುಣ್ಣಿಮೆ ಬೆಳಕನು ಚೆಲ್ಲಿ ನನ್ನ ಬೆಳದಿಂಗಳಾದೆ   ಎದೆಯ ತೋಟದ ಎಲೆಯ ತುದಿಗೆ ಮುತ್ತಿಕ್ಕುವ ಇಬ್ಬನಿಯಾದೆ   ಕಣ್ತೆರದು ಕಾಣುವ ಕನಸಿನ ಪರಿವಿಡಿ ಪುಟದ ಸಾಲದೆ   ಕನಸಿನ ಮನಸಿಗೆ ಬದುಕಿನ ಉಸಿರಿಗೆ ಒಲವಿನ ಹೆಸರಾದೆ   ಹೇಳದ ಮಾತಿನ ಮೌನದ ಮಾತದೆ ನನ್ನ ದನಿಯಾದೆ ಮೌನದ ಇನಿಯಾದೆ         Photo by...

ಕವಿತೆ

ಸುಂದರ ಕವನ: ಮಳೆ

ಬಾನಿನ ತುಂಬೆಲ್ಲಾ ಮೋಡಗಳ ಚಿತ್ತಾರ ಬರಿದಾದ ಭುವಿಯಲಿ ಗಾಳಿಯಾ ಸಂಚಾರ! ತಂಗಾಳಿ ಸ್ಪರ್ಶಕೆ ಕಾರ್ಮುಗಿಲು ಕರಗಿತು ಮುತ್ತಿನ ರೂಪದಲಿ ಹನಿ ಭುವಿಯ ಚುಂಬಿಸಿತು!! ಕೆಂಪಾದ ಭುವಿಯಿಂದು ತಂಪಾಯಿತೀಗ ಭೋರ್ಗರೆದು ಬರುತಿರಲು ಮೊದಲ ವೃಷ್ಟಿ! ಮನಸಾರೆ ಮಿಂದು ಮನಸೂರೆಗೊಂಡು ಜೀವಕಳೆ ಪಡೆಯಿತು ಸಕಲ ಸೃಷ್ಟಿ!! ನೊಂದಂತ ಮನಕೆ ಸಾಂತ್ವಾನದ ರೀತಿ ಬೆಂದಂತ ಭುವಿಗೆ ಈ ಮಳೆಯ ಬರುವು...

ಕವಿತೆ

ಬದುಕು

ಬದುಕೆಂದರೆ ಹೀಗೆ.. ಬಗೆಬಗೆಯ ಭಾವಗಳ ಬೇಗೆ.! ಒಮ್ಮೆ ಮನವರಳಿಸುವ ತುಂಬಿರುವ ಸಂಭ್ರಮ.. ಮತ್ತೆ ಮನವನಳಿಸುವ ಹುಚ್ಚು ಭ್ರಮನಿರಸನ.! ಮುನ್ನಡಿಯಿಡಲಾರದಂತೆ ಕಣ್ಣು ಮಬ್ಬಾಗಿಸುವ ಕತ್ತಲು.. ಮತ್ತೆಲ್ಲೋ ಮೂಡಿ ಬರುವ ಭರವಸೆಯ ಬೆಳಕ ಹೊನಲು.! ತತ್ತರಿಸಿರುವ ಬದುಕಿಗಾಗಿ ವಿಧವೆಯರ ಅರಚಾಟ.. ಹೊಸತನದ ಭವಿಷ್ಯದೆಡೆ ನವ ಮುತ್ತೈದೆಯ ನೋಟ.! ಒರಗಿದರೂ ನಿದಿರೆ ಕೊಡದ ಸಿರಿತನದ ಮೃದು...