ರೇಷಿಮೆಯ ದಾರವ ಹಿಡಿದು ತಂದಳು ತಂಗಿ
ಅಣ್ಣನಿಗೆ ತಾ ಅದನು ಕಟ್ಟಲು
ಮುದ್ದು ಮುಖದ ಚೆಲುವೆ ಹೆಸರು ಭಾನುಮತಿಯು
ಆ ಮುಗ್ಧಮುಖಕೆ ಸರಿಸಾಟಿ ಯಾರೆನ್ನಲು
ಅಣ್ಣನೆಂಬುವನವನೆ ನಮ್ಮ ಗೋಪಾಲಕೃಷ್ಣ
ಕೊಳಲಿಗೇ ರಾಗವ ನೇಯುವವನು
ಹರಿದು ಬಂದ ರಾಗದಿ ಜಗವ ನಲಿಸುತಾ
ಪ್ರೀತಿಯ ಸುಧೆಯ ಕರೆಯುವವನು
ನಮ್ಮ ಕೃಷ್ಣಯ್ಯನ ಮುದ್ದು ತಂಗಿಯು ಇವಳು
ಕೌರವ ಕುಲದ ಹಿರಿ ಸೊಸೆಯು ಈಕೆ…
ಸದಾ ನನ್ನ ನೆನಸಿ ರಕ್ಷಿಸುತಿರು ಎನುತಾ
ದಾರವನು ಕಟ್ಟಿದಳು ಅಣ್ಣನಾ ಕೈಗೆ
ಬನ್ನಿರೆಲ್ಲಾ ಆಚರಿಸುವಾ ಈ ಹಬ್ಬವನು
ಸಹೋದರತ್ವದ ಸಂದೇಶದಲಿ ಮುಳುಗಿ
ಕಾಯ್ವನು ನಮ್ಮಣ್ಣ ಎಂದು ಮೆರೆಯಲು ತಂಗಿ
ಇದಕ್ಕಿಂತ ಹಿರಿದು ಬಾಗಿನ ಏನು ಬಯಸಿಹಳು