ಕವಿತೆ

ಸರಳ ಸಾಲುಗಳು – 2

೧.

ನೀನಿರದ ಕ್ಷಣ

ನಾನು, ನನ್ನ ಮನ

ಬರೀ ಮೌನ…..

 

೨ .

ಮತ್ತೆ ನೀನು ಕೈಚಾಚು

ಕೈಹಿಡಿವೆ ಎಂದೂ ಬಿಡದ ಹಾಗೆ..

ಎದೆಯ ಮೇಲೆ ಸುಮ್ಮನೆ ಗೀಚು

ಎಂದಿಗೂ ಅಳಿಸದ ಹಾಗೆ…

 

೩.

ಮಳೆಬಂದಾಗ

ಎಲೆಯ ಮೇಲೆ ಕುಣಿವ

ಮಳೆ ಹನಿಗಳ ಹಾಗೆ..

ನಿನ್ನ ಕಂಡಾಗ

ಎದೆಯ ಮೇಲೆ ಕುಣಿದಿವೆ

ನಿನ್ನದೇ ಕನಸುಗಳು….

 

೪.

ಈ ವಿರಹದ ಬಿಸಿಗೆ

ಕರಗಿದ ಮೌನವು

ಕಣ್ಣೀರಾಗಿ ಹೊರಹೊಮ್ಮಿದೆ..

ಎಷ್ಟು ಹೇಳಿದರೂ

ಮುಗಿಯದ ಮಾತುಗಳು

ಎದೆಯೊಳಗೆ ಉಳಿದುಕೊಂಡಿವೆ..

Photo by damn_unique

Facebook ಕಾಮೆಂಟ್ಸ್

ಲೇಖಕರ ಕುರಿತು

Vinaykumar Sajjanar

Engineer by profession and Author of two poem collection books named " Enna Todalu Nudigalu " and " Bhaavasharadhi" .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!