ಅಗತ್ಯದಲ್ಲಿದ್ದವರಿಗೆ ಸಾಧ್ಯವಾದರೆ ಉಪಕಾರ ಮಾಡು ಇಲ್ಲದಿದ್ದರೆ ಸುಮ್ಮನೆ ಕೂಡು, ಆದರೆ ತಪ್ಪಿಯೂ ಅಪಕಾರ ಮಾಡಬೇಡ ಎಂಬ ಮಾತಿದೆ.ಪರೋಪಕಾರಾರ್ಥಮಿದಂ ಶರೀರಂ ಎನ್ನುವ ನಾವು ಹೆಚ್ಚಿನ ಸಂದರ್ಭಗಳಲ್ಲಿ ಉಪಕಾರವನ್ನೇ ಮಾಡುತ್ತೇವೆ. ದ್ರೋಹವನ್ನಂತೂ ಖಂಡಿತಾ ಮಾಡುವುದಿಲ್ಲ. ಆದರೆ ಕೆಲವು ಸಂಕುಚಿತ ಮನಸ್ಥಿತಿಯವರು ಸಂದರ್ಭ ಎಂತದ್ದೇ ಇದ್ದರೂ ಅಪಕಾರವನ್ನು ಮಾಡಿಯೇ ತೀರುತ್ತಾರೆ...
ಪ್ರಚಲಿತ
ಆ ಇಂಜಿನಿಯರ್ ಮುಂದೆ ಈ ಇಂಜಿನಿಯರುಗಳೆಲ್ಲಾ ಯಾವ ಲೆಕ್ಕ?
ನೇಪಾಳ…! ನೇಪಾಳ ಎಂದೊಡನೆಯೇ ನೆನಪಿಗೆ ಬರುವುದು ಹಿಮಾಲಯ. ಅದು ಚಾರಣಿಗರ ಸ್ವರ್ಗ. ಘಟಾನುಘಟಿ ಸಂನ್ಯಾಸಿಗಳಿಗೆ ಸ್ಪೂರ್ತಿ ನೀಡಿದ, ಜ್ಞಾನೋದಯಕ್ಕೆ ಕಾರಣವಾದ ಸ್ಥಳವದು. ನೇಪಾಳವೆಂದರೆ ಆಸ್ತಿಕರ ಭೂ ಕೈಲಾಸ. ಶಿವ ಭಕ್ತರಿಗೆ ಪರಮ ಪಾವನವಾದ ಪಶುಪತಿನಾಥನಿರುವುದು ಇದೇ ನೇಪಾಳದಲ್ಲಿ. ಅತಿ ಸುಂದರವಾದ ಮಾನಸ ಸರೋವರವಿರುವುದೂ ನೇಪಾಳದಲ್ಲಿ. ನಯನ ಮನೋಹರ ಪುರಾತನ...
ನಿಜವಾಗಿಯೂ ಅಚ್ಚೇ ದಿನ್ ಬರುವುದು ಯಾರಿಗೆ?
ಭಾರತ ಈಗ ಮೊದಲಿನಂತಿಲ್ಲ. ಕತ್ತೆ ನಿಂತರೂ ಚುನಾವಣೆ ಗೆಲ್ಲಬೇಕು ಅಂದುಕೊಂಡಿದ್ದವರಿಗೆಲ್ಲಾ ಜನ ಅತ್ಯಂತ ಪ್ರಬುದ್ಧ ಉತ್ತರ ನೀಡಲಾರಂಭಿಸಿದ್ದಾರೆ. ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆ. ಹಗರಣಗಳ ಸರಮಾಲೆ, ದುರಾಡಳಿತದಿಂದ ದೇಶದ ಮಾನ ಹರಾಜು ಹಾಕಿದ್ದ ಯುಪಿಎಯನ್ನು ಇನ್ನಿಲ್ಲದಂತೆ ಕಿತ್ತೊಗೆದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಅಭೂತ ಪೂರ್ವ ಜಯವನ್ನಿತ್ತಿದ್ದಾರೆ ಜನ...
ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾ ಎಂದೆಲ್ಲಾ ಬೊಬ್ಬಿರಿಯುವ ಚಾನೆಲ್ ಗಳೇ ಮೀಡಿಯಾ ಮಾಫಿಯಾ ಬಗ್ಗೆ ಏಕೆ ಮೌನವಾಗಿದ್ದೀರಿ?
ಘಟನೆ ೧: ಬಿಜೆಪಿಯ ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಬು ವಾಲಿ ಅವರು ಗೆಸ್ಟ್ ಹೌಸ್ ಒಂದರಲ್ಲಿ ಯುವತಿಯರನ್ನ ಸಂಪೂರ್ಣವಾಗಿ ಬೆತ್ತಲುಗೊಳಿಸಿ ನೃತ್ಯ ಮಾಡಿಸುತ್ತಿರುವ ದೃಶ್ಯ ನಮ್ಮ ನಾಡಿನ ಹೆಸರಾಂತ ನ್ಯೂಸ್ ಚಾನೆಲೊಂದರಲ್ಲಿ ಹರಿದಾಡುತ್ತಿತ್ತು. ನಂಗಾನಾಚ್ ಪ್ರಕರಣದಲ್ಲಿ ಬಿಜೆಪಿ ನಾಯಕರುಗಳು ಭಾಗಿ ಅಂತ ಬೆಳ್ಳಂಬೆಳಗ್ಗೆ ಬೊಬ್ಬೆ ಹೊಡೆಯಲು...
ಸಿಂಪಲ್ ಆಗಿ ಒಂದು ಟಾರ್ಚರ್ !
ರಿಯಾಲಿಟಿ ಶೋ…ವಾಸ್ತವ ಕಾರ್ಯಕ್ರಮ…ಅದು ವಾಸ್ತವಕ್ಕೆ ಬಹು ಹತ್ತಿರವಾದ ಕಾರ್ಯಕ್ರಮ… ಆದರೆ ಯಾರ ವಾಸ್ತವ ಮಾನಸಿಕ ಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನುವುದು ಪ್ರಶ್ನೆ?? ರಿಯಾಲಿಟಿ ಶೋಗಳು ಎಂಬ ಅನಿವಾರ್ಯ ಕರ್ಮದಿಂದ ಎಂದಾದರೂ ಮುಕ್ತಿ ಸಿಗಬಹುದೇನೋ ಎಂಬ ಯೋಚನೆ ಹರಿದಾಡುತ್ತಲೇ ಇರುತ್ತದೆ. ಹೆಸರಿನಂತೆ, ರಿಯಾಲಿಟಿಯನ್ನು ತೋರಿಸಿದ್ದರೆ, ಇಂತಹ...
ಆಕೆ ಕೆಲವೊಮ್ಮೆ ಪಂದ್ಯ ಸೋತಿರಬಹುದು, ಅಷ್ಟೂ ಬಾರಿ ನಮ್ಮ ಮನಗೆದ್ದಿದ್ದಾಳೆ
ಸೈನಾ ನೆಹ್ವಾಲ್…. ಬಹುಶಃ ಕ್ರಿಕೆಟನ್ನು ಹೊರಗಿಟ್ಟು ನೋಡಿದಾಗ ಭಾರತೀಯ ಕ್ರೀಡಾರಂಗದಲ್ಲಿ ಬಹುವಾಗಿ ಕೇಳಿಬರುತ್ತಿರುವ ಹೆಸರಿದೊಂದೆ. ಕೆಲವು ವರ್ಷಗಳ ಹಿಂದೆ ಭಾರತೀಯ ಬ್ಯಾಡ್ಮಿಂಟನ್ ಲೋಕದಲ್ಲಿ ಜನಿಸಿದ ಸೈನಾ ಈಚೆಗಿನ ವರ್ಷಗಳಲ್ಲಿ ಗಳಿಸಿದ್ದು ಅಪಾರ. ವಿಶ್ವ ಕಪ್ ಸೆಮಿಫೈನಲ್ ನಲ್ಲಿ ಸೋತು ದೇಶವೇ ದುಃಖದಲ್ಲಿದ್ದಾಗ ನಂ.1 ಸ್ಥಾನಕ್ಕೇರಿ ಮರುದಿನವೇ ನಮ್ಮನ್ನೆಲ್ಲಾ...
ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ?
ಈ ಮಾತು ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯವರಿಗೆ ಸರಿಯಾಗಿ ಅನ್ವಯಿಸುತ್ತದೆ. ತನ್ನೆಲ್ಲಾ ವಿಧ್ಯೆಯನ್ನು ಧಾರೆಯೆರೆದು ಸಂಪೂರ್ಣ ಶಕ್ತಿಯನ್ನು, ರಾಜಕೀಯ ಯುಕ್ತಿಯನ್ನು ಪ್ರಯೋಗಿಸಿ ಬಿಜೆಪಿಯನ್ನು ಹೊಳೆ ದಾಟಲು ನೆರವಾದ ಅಂಬಿಗನನ್ನೇ ಹೊಳೆಗೆ ನೂಕಿದರಲ್ಲಾ? ತಪ್ಪು ಯಾರದ್ದೇ ಇರಲಿ ಆದರೆ ಇಂದು ಇಂತಹಾ ಸನ್ನಿವೇಶ ಬಿಜೆಪಿಯಲ್ಲಿ ಸೃಷ್ಟಿಯಾಗಿರುವುದು ದುರಂತವಲ್ಲದೇ...
ಅಟಲ್ ಗೆ ಭಾರತ ರತ್ನ ಕೊಡಬಾರದು ಎನ್ನುವುದಕ್ಕೆ ನಾಲ್ಕು ಕಾರಣಗಳು
ಅಟಲ್ ಗೆ ಭಾರತ ರತ್ನ ಕೊಡಬಾರದು ಎನ್ನುವುದಕ್ಕೆ ನಾಲ್ಕು ಕಾರಣಗಳು ಹೀಗೊಂದು ವ್ಯರ್ಥ ಪ್ರಲಾಪ ಅಂತರ್ಜಾಲದಲ್ಲಿ ಹರಿದಾಡುತ್ತಿದೆ… ಇಂಡಿಯನ್ ಟುಡೇ ಪತ್ರಕರ್ತ ಮಹಾಶಯನೊಬ್ಬ ಅಟಲ್ ಜೀ ಗೆ ಯಾಕೆ ಭಾರತ ರತ್ನ ಕೊಡಬಾರದಿತ್ತು ಅಂತ ಪಟ್ಟಿ ಮಾಡುತ್ತಾ ಸಾಗುತ್ತಾನೆ. ಹಾರ್ ನಹೀ ಮಾನೂಂಗಾ ರಾರ್ ನಹೀ ಠಾನೂಂಗ ಕಾಲ್ ಕೇ ಕಪಾಲ್ ಪರ್ ಲಿಖ್ ತಾ – ಮಿಟಾತಾ ಹೂಂ ಗೀತ್ ನಯಾ...
ವಿಶಿ: ಚೆಸ್ಸ್ ನಲ್ಲಿ ಸಾಮ್ರಾಟ್- ಈಗ ನಾಸಾದ ಪ್ಲಾನೆಟ್
ಒಂದಿಷ್ಟು ಚೆಸ್ ಮಾಸ್ಟರ್ ಗಳು ಹೊಸ ಸಾಫ್ಟವೇರ್ ಸೃಷ್ಟಿಸುತ್ತಾರೆ. ಹತ್ತು ಜನ ಮೇಧಾವಿಗಳು ತಮ್ಮ ಆಲೋಚನೆಗಳನ್ನು ಒಂದಾಗಿಸಿ ಕಂಪ್ಯೂಟರ್ ಗೆ ಫೀಡ್ ಮಾಡುತ್ತಾರೆ. ನೋಡ ನೋಡುತ್ತಲೇ ಕಂಪ್ಯೂಟರ್ ಗಣಿತದ ಲೆಕ್ಕಗಳಿಗೆ ಉತ್ತರ ನೀಡುವ ವೇಗದಲ್ಲೇ ಚೆಸ್ ಆಡುವುದನ್ನು ಕಲಿತು ಬಿಡುತ್ತದೆ. 1999 ರಲ್ಲಿ ಚೆಸ್ ಪ್ರೋಗ್ರಾಮ್ Frits ಸೃಷ್ಟಿಸಿದ ಚಾಣಾಕ್ಷರು ಯುವಕನೊಬ್ಬನಿಗೆ...
ಅಜಾತ ಶತ್ರು ‘ಭಾರತ ರತ್ನ’ರಾದುದು ಸುಮ್ಮನೇ ಅಲ್ಲ!
ಇಲ್ಲಾರೀ… ವಾಜಪೇಯಿ ಬಗ್ಗೆ ಎಷ್ಟು ಬರೆದರೂ ಸಾಕೆನಿಸುತ್ತಿಲ್ಲ.ಅವರ ಬಗ್ಗೆ ಸಂಶೋಧಿಸಿದಷ್ಟೂ ಮುಗಿಯುತ್ತಿಲ್ಲ. ಹೊಗಳಿದಷ್ಟೂ ಅಕ್ಷರಗಳು ಸಾಕಾಗುತ್ತಿಲ್ಲ. ಅಕ್ಷರಗಳೇ ಸಿಗುತ್ತಿಲ್ಲ. ಒಂದೇ ವಿಷಯದ ಬಗ್ಗೆ ಮತ್ತೆ ಮತ್ತೆ ಬರೆಯಲು ಬೋರೂ ಆಗುತ್ತಿಲ್ಲ. ಖಂಡಿತವಾಗಿಯೂ ಅವರ ಬಗ್ಗೆ ಓದಲು ನಿಮಗೂ ಬೋರಾಗುವುದಿಲ್ಲ. ಸಾಕು ಸಾಕೆಂದರೂ ಮತ್ತೆ ಓದೋಣವೆಂದೆನಿಸುತ್ತದೆ...