ಪ್ರಚಲಿತ

ಬೀಫ್ ಮಸಾಲಾ ಬದಲು ಒಂದೆರಡು ಸಾಂತ್ವಾನದ ಮಾತುಗಳನ್ನಾಡಿದ್ದರೂ ಸಾಕಾಗಿರುತ್ತಿತ್ತು!

Beef_Masala_Pakistan_Nepal

ಅಗತ್ಯದಲ್ಲಿದ್ದವರಿಗೆ ಸಾಧ್ಯವಾದರೆ ಉಪಕಾರ ಮಾಡು ಇಲ್ಲದಿದ್ದರೆ ಸುಮ್ಮನೆ ಕೂಡು, ಆದರೆ ತಪ್ಪಿಯೂ ಅಪಕಾರ ಮಾಡಬೇಡ ಎಂಬ ಮಾತಿದೆ.ಪರೋಪಕಾರಾರ್ಥಮಿದಂ ಶರೀರಂ ಎನ್ನುವ ನಾವು ಹೆಚ್ಚಿನ ಸಂದರ್ಭಗಳಲ್ಲಿ ಉಪಕಾರವನ್ನೇ ಮಾಡುತ್ತೇವೆ. ದ್ರೋಹವನ್ನಂತೂ ಖಂಡಿತಾ ಮಾಡುವುದಿಲ್ಲ. ಆದರೆ ಕೆಲವು ಸಂಕುಚಿತ ಮನಸ್ಥಿತಿಯವರು ಸಂದರ್ಭ ಎಂತದ್ದೇ ಇದ್ದರೂ ಅಪಕಾರವನ್ನು ಮಾಡಿಯೇ ತೀರುತ್ತಾರೆ.

ಅದು ನೇಪಾಳದ ಪಾಲಿಗೆ ಮರ್ಮಾಘಾತ ನೀಡಿದ ಭೂಕಂಪ. ಪ್ರಕೃತಿಯ ರುದ್ರ ನರ್ತನಕ್ಕೆ ಹಲವಾರು ಬೃಹತ್ ಕಟ್ಟಡಗಳು, ದೇವಾಲಯಗಳು ನೇಪಾಳಿಗರ ಮೇಲೆಯೇ ಬಿತ್ತು. ಸಾವಿರಾರು ಜನರು ಮಡಿದರು. ಮನೆ ಮಠ, ಮನೆಯವರನ್ನೆಲ್ಲಾ ಕಳೆದುಕೊಂಡರು. ಅಲ್ಲಿ ಜೀವಕ್ಕಾಗಿ ಬವಣೆಯೆದ್ದಿದೆ. ಆಹಾರಕ್ಕಾಗಿ ಹಾಹಾಕಾರವೆದ್ದಿದೆ. ಅಂತಹ ಒಂದು ಜೀವನ್ಮರಣ ಸಂದರ್ಭದಲ್ಲಿ ನೆರೆಹೊರೆಯ ರಾಷ್ಟ್ರಗಳ ಅನುಕಂಪ, ಸಹಾಯಹಸ್ತದ ಅವಶ್ಯಕತೆ ನೇಪಾಳಕ್ಕಿತ್ತು. ಭಾರತ ಮೊತ್ತ ಮೊದಲಾಗಿ ಸ್ಪಂದಿಸಿತು. ಚೀನಾವೂ ನೆರವಿಗೆ ಧಾವಿಸಿತು. ಉಳಿದ ಕೆಲ ನೆರೆಹೊರೆಯ ರಾಷ್ಟ್ರಗಳೂ ಬಂದವು. ಆದರೆ ಸಹಾಯ ಮಾಡುತ್ತೇವೆಂದು ಬಂದವರ ಮತ್ತೊಂದು ಮುಖ ಅಲ್ಲಿ ಗೋಚರಿಸತೊಡಗಿತ್ತು.

ಹಿಂದುಸ್ತಾನ ಅತ್ಯಂತ ವೇಗವಾಗಿ ನೇಪಾಳಿಗರ ನೋವು ಸ್ವತಃ ತನ್ನ ನೋವೇ ಎಂದುಕೊಂಡು ಸೇನೆಯ ಮೂಲಕ ಸೂಕ್ತ ರಕ್ಷಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿತು. ಗಾಯಾಳುಗಳ ರಕ್ಷಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಸಂತ್ರಸ್ತರಿಗೆ ಸಾಧ್ಯವಾದಷ್ಟು ಆಹಾರ ಪೂರೈಸಿ ಇಡೀ ಜಗತ್ತಿನ ಪ್ರಶಂಸೆಗೆ ಪಾತ್ರವಾಯಿತು. ಆದರೆ, ಈ ಜಗತ್ತಿನಲ್ಲಿ ದೇವರು ಅಂತ ಇದ್ದ ಮೇಲೇ ಭೂತ ಅಂತ ಇದ್ದೇ ಇರತ್ತೆ. ಒಳ್ಳೆದೂ ಅಂತ ಇದ್ದ ಮೇಲೆ ಕೆಟ್ಟದ್ದೂ ಇದ್ದೇ ಇರತ್ತಂತೆ. ಹಾಗೆಯೇ ಅಲ್ಲಿ ಕಂಡದ್ದು ಕ್ರೈಸ್ತ ಮಿಷನರಿಗಳ ಮತಾಂತರದ ಹುನ್ನಾರ. ಭೂಕಂಪವಾದ ಕೆಲವೇ ಘಂಟೆಗಳಲ್ಲಿ, ಭಾರತಕ್ಕಿಂತಲೂ ಹೆಚ್ಚಿನ ವೇಗದಲ್ಲಿ ನೇಪಾಳಕ್ಕೆ ಓಡೋಡಿ ಬಂದ ಕೆಲ ಕ್ರೈಸ್ತ ಮಿಷನರಿಗಳು ಸಂತ್ರಸ್ತರ ವೀಕ್ನೆಸ್ಸನ್ನೇ ಬಂಡವಾಳವನ್ನಾಗಿಸಿಕೊಂಡು ಸಹಾಯದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸಿತು. ಈ ದರಿದ್ರ ಮಿಷನರಿಗಳ ಈ ಕ್ರುಕೃತ್ಯಕ್ಕೆ ಎಲ್ಲೆಡೆಯಿಂದ ಅಕ್ಕೋಶ ವ್ಯಕ್ತವಾಯಿತು. ಆದರೂ ಯಾರೂ ಕೂಡ ಹಿಂಜರಿಯಲಿಲ್ಲ. ರಕ್ಷಣಾ ಕಾರ್ಯ ಎಂದಿನಂತೆ ಮುಂದುವರಿಯಿತು.ಅಷ್ಟರಲ್ಲೇ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರ ಬಂದಿದೆ. ನೇಪಾಳದ ಸಂತ್ರಸ್ತರಿಗೆ ಆಹಾರ ಸಾಮಾಗ್ರಿಯನ್ನು ಪೂರೈಸುವ ನೆಪದಲ್ಲಿ ಪಾಕಿಸ್ತಾನ ದನದ ಮಾಂಸವನ್ನು ಕಳುಹಿಸುವ ಮೂಲಕ ತನ್ನ ಸಂಕುಚಿತ ಮನಸ್ಥಿತಿಯನ್ನು ತಾನೇ ಜಗಜ್ಜಾಹೀರುಗೊಳಿಸಿದೆ.

ಹಾ..! ನಂಬಲೇಬೇಕು ನೀವು. ಪಾಕಿಸ್ತಾನದಿಂದ ಬಂದ ಆಹಾರ ಸಾಮಾಗ್ರಿಗಳಲ್ಲಿ ದನದ ಮಾಂಸವಿರುವುದನ್ನು ಭಾರತದಿಂದ ರಕ್ಷಣಾ ಕಾರ್ಯಕ್ಕಾಗಿ ತೆರಳಿದ್ದ ವೈದ್ಯರ ತಂಡ ಧೃಢಪಡಿಸಿದೆ. ಆ ಪ್ಯಾಕೆಟ್ ಗಳೆಲ್ಲಾ ಪಾಕಿಸ್ತಾನದಲ್ಲೇ ತಯಾರಾಗಿದೆ ಎಂಬುದಕ್ಕೆ ಪುರಾವೆ ಆ ಪ್ಯಾಕೆಟ್ ನಲ್ಲೇ ಸಿಕ್ಕಿದೆ. ಭಾರತೀಯ ಡಾಕ್ಟರೊಬ್ಬರು ಹೇಳುವಂತೆ ಅಲ್ಲಿನ ಜನರಿಗೆ ಆ ಪ್ಯಾಕೆಟ್ಟಿನೊಳಗೆ ಏನಿದೆಯಿಂದು ಗೊತ್ತಿರಲಿಲ್ಲ. ಅದು ದನದ ಮಾಂಸವೆಂದು ತಿಳಿದಾಗ ಅದನ್ನವರು ಸಾರಾಸಗಟಾಗಿ ತಿರಸ್ಕರಿಸಿದರು. ಆ ಮೂಲಕ ನೀರಲ್ಲದೆ ಸತ್ತರೂ ಪರವಾಗಿಲ್ಲ ಆದರೆ ನಿಮ್ಮ ದನದ ಮಾಂಸವನ್ನು ಮುಟ್ಟುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ. ಪಾಪ.. ನೇಪಾಳಿಗರು ಕುಡಿಯಲು ನೀರಿಲ್ಲದೆ, ತಿನ್ನಲು ಆಹಾರವಿಲ್ಲದೆ ತಮ್ಮವರನ್ನು ಕಳೆದುಕೊಂಡ ದುಃಖದಿಂದ ಬಳಲಿದ್ದರು. ಅಂತವರಿಗೆ ಪಾಕಿಸ್ತಾನ ಮಹದುಪಕಾರವನ್ನೇ ಮಾಡಿದೆ. ಅಲ್ಲಿನ ಜನರ ಭಾವನೆಗಳ ಮೇಲೆ ಸವಾರಿ ಮಾಡಿದೆ.

ನಿಮಗೆಲ್ಲರಿಗೂ ಗೊತ್ತಿರುವಂತೆ ನೇಪಾಳ ಜಗತ್ತಿನ ಏಕೈಕ ಹಿಂದೂ ರಾಷ್ಟ್ರ. ಅಲ್ಲಿ ಯಾವುದೇ ಜಾತ್ಯಾತೀತತೆಯ ಮುಖವಾಡವಿಲ್ಲ. ಹಾಗೆಯೇ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಮೊದಲ ಮತ್ತು ಒಂದೇ ಒಂದು ದೇಶ ನೇಪಾಳ. ಅಲ್ಲಿ ಗೋಹತ್ಯೆ ಮಾಡಿದವರಿಗೆ ಹನ್ನೆರಡು ವರ್ಷಗಳ ಶಿಕ್ಷೆಯಿದೆ. ಅಲ್ಲಿನ ಜನರು ಗೋಹತ್ಯೆ ಮಾತ್ರವಲ್ಲ, ಸ್ತ್ರೀಹತ್ಯೆಯನ್ನೂ ಸಹಿಸುವುದಿಲ್ಲ. ಜೀವ ಹೋಗುವಂತಹಾ ಸಂದರ್ಭ ಬಂದರೂ ಗೋಮಾಂಸ ಭಕ್ಷಿಸಲಾರರು. ಅದೆಲ್ಲದರ ಅರಿವಿದ್ದೂ ಪಾಕಿಸ್ತಾನ ಭೂಕಂಪ ಪೀಡಿತರಿಗೆ ಬೀಫ್ ಮಸಾಲ ಸಾಗಾಟ ಮಾಡಿದೆ. ನೋಡಿ ನಮ್ಮ ಬಾಂದವರದ್ದು ಸಣ್ಣತನ! ಎಷ್ಟಾದರೂ ದನದ ಮಾಂಸ ಸಾಗಾಟ ಮಾಡುವುದು ನಿಮ್ಮ ಕುಲಕಸುಬು ತಾನೆ!

ಇವೆಲ್ಲಾ ಅವಾಂತರದ ನಂತರದ ಪಾಕಿಸ್ತಾನದ ವಿದೇಶಾಂಗ ವಕ್ತಾರೆ ಬಾಯಿಬಿಟ್ಟಿದ್ದಾಳೆ. “ನನಗೆ ಈ ವಿಷಯ ತಿಳಿದೇ ಇರಲಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧೀಕಾರದಿಂದ ಕಳುಹಿಸಲಾಗಿರುವ ಈ ಆಹಾರ ಸಾಮಾಗ್ರಿಗಳಿಗೆ ನಾನು ಜವಾಬ್ದಾರಳಲ್ಲ” ಎನ್ನುವ ಮೂಲಕ ತನ್ನ ಜವಾಬ್ದಾರಿಯಿಂದ ನೈಸಾಗಿ ನುಣುಚಿಕೊಂಡಿದ್ದಾಳೆ ಮತ್ತು ಈ ಅವಾಂತರವನ್ನು ವಿದೇಶಾಂಗ ಇಲಾಖೆಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧೀಕಾರಕ್ಕೆ ವರ್ಗಾಯಿಸಿದ್ದಾಳೆ. ಆದರೆ ಆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧೀಕಾರವೇನು ಭಾರತದ್ದೇ? ಪಾಕಿಸ್ತಾನದ್ದೇ ತಾನೆ? ವಿಪತ್ತಿನ ಸಂದರ್ಭದಲ್ಲಿ ನಮಗೆ ತಕ್ಷಣಕ್ಕೆ ಬೇಕಾಗುವುದು ನೀರು, ಡ್ರೈ ಫ್ರೂಟ್ಸ್, ಪಾನೀಯ, ರೋಟಿ ಮತ್ತು ಇತರ ಸಾತ್ವಿಕ ಆಹಾರಗಳು. ಅಂತಹಾ ಆಪತ್ತಿನ ಸಂದರ್ಭಗಳಲ್ಲಿ ಜೀವಚೈತನ್ಯಕ್ಕಾಗಿ ಆಹಾರ ಬೇಕೇ ವಿನಹ ಹೊಟ್ಟೆ ತುಂಬ ತಿಂದು ತೇಗಲು ಅಲ್ಲ. ಇದರ ಅರಿವು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧೀಕಾರಕ್ಕೆ ಇಲ್ಲವೇ? ಅದರಲ್ಲೂ ನೇಪಾಳ ಹಿಂದೂ ರಾಷ್ಟ್ರವೆಂದು ಗೊತ್ತಿದ್ದೂ ದನದ ಮಾಂಸವನ್ನು ಕಳುಹಿಸಿದ್ದು ಪಾಕಿಸ್ತಾನದ ಹುಚ್ಚಾಟವಲ್ಲವೇ? ನೇಪಾಳಿಗರೇನು ದನದ ಮಾಂಸವೇ ಬೇಕೆಂದು ದುಂಬಾಲು ಬಿದ್ದಿದ್ದರೆ? ದನದ ಮಾಂಸ ಸಪ್ಪ್ಲೈ ಮಾಡಲು ನೇಪಾಳದಲ್ಲೇನು ರಂಝಾನ್ ಹಬ್ಬ ಏರ್ಪಾಟಾಗಿತ್ತಾ? ಮುಂದೆ ಪಾಕಿಸ್ತಾನದಲ್ಲೂ ಪ್ರಕೃತಿ ವಿಕೋಪ ಸಂಭವಿಸಿದಾಗ ನಾವುಗಳು ಹಂದಿ ಮಸಾಲ ಪಾರ್ಸೆಲ್ ಮಾಡಿದರೆ ಹೇಗಿರಬಹುದು ಪಾಪಿಗಳೇ?

ಜಗತ್ತಿನ ಹಲವು ರಾಷ್ಟ್ರಗಳ ಲೆಕ್ಕದಲ್ಲಿ ಭಾರತ ಹಾವಾಡಿಗರ ದೇಶ. ಭಾರತವೆಂದರೆ ಮತಾಂಧರ, ಕೋಮುವಾದಿಗಳ ರಾಷ್ಟ್ರ. ಹಾಗಾಗಿಯೇ ನಾವು ಯೆಮೆನ್ ನಿಂದ ಹಿಂದೂ ಮುಸ್ಲಿಮರೆನ್ನದೆ ಅಲ್ಲಿಂದ ಭಾರತೀಯರೂ ಸೇರಿ ಬೇರೆ ಬೇರೆ ದೇಶಗಳ ನಾಗರೀಕರನ್ನು ರಕ್ಷಿಸಿದ್ದು . ಎಲ್ಲರಿಗಿಂತ ಮೊದಲು ನೇಪಾಳದ ರಕ್ಷಣೆಗಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಂಡು ಜಗತ್ತಿನ ಉಳಿದ ರಾಷ್ಟ್ರಗಳಿಗೂ ಮಾದರಿಯಾಗಿದ್ದು.! ಪರಮ ಕೋಮುವಾದಿಗಳಾದ ನಮ್ಮ ಅರೆಸ್ಸೆಸ್ ನವರೂ ಕೂಡಾ ತನ್ನ ಕಾರ್ಯಕರ್ತರ ಮೂಲಕ ಸಮರೋಪಾದಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು.! ನಾವೂ ಕೂಡಾ ಕ್ರೈಸ್ತ ಮಿಷನರಿಗಳಂತೆ ನೇಪಾಳದಲ್ಲಿರುವ ಹಿಂದೂವಲ್ಲದವರನ್ನು ಮತಾಂತರಕ್ಕೆ ಯತ್ನಿಸಬಹುದಿತ್ತು. ಪಾಕಿಸ್ತಾನದಂತೆ ಮಾಂಸ ಸಾಗಾಟ ಮಾಡಬಹುದಿತ್ತು. ಆದರೆ ನಾವು ಯಾವತ್ತೂ ಅಂತಹ ಸಣ್ಣ ಕೆಲಸಕ್ಕಿಳಿಯುವವರಲ್ಲ. ‘ವಸುದೈವ ಕುಟುಂಬಕಂ’ ಎನ್ನುತ್ತಾ ಹೆಜ್ಜೆಯಿಟ್ಟಿದ್ದೇವೆ ಎನ್ನುವ ಹೆಮ್ಮೆ ನಮಗಿದೆ. ಆದರೆ ಒಂದಂತೂ ಸತ್ಯ ‘ಯಾರೇನೇ ಹೇಳಲಿ, ನಾನು ಮಾತ್ರ ಹೀಗೆಯೇ’ ಎಂದು ಹುಚ್ಚಾಟ ನಡೆಸಿದಷ್ಟೂ ತಲೆತಗ್ಗಿಸಬೇಕಾಗುವುದು ಪಾಕಿಸ್ತಾನವೇ! ವಿಸ್ತೀರ್ಣದಲ್ಲಿ ನೇಪಾಳಕ್ಕಿಂತ ದೊಡ್ಡದಾಗಿದ್ದರೂ ಭಾಂಧವ್ಯದ, ಮಾನವೀಯತೆಯ ವಿಚಾರದಲ್ಲಿ ಜಗತ್ತಿನ ಈ ಪುಟ್ಟ ರಾಷ್ಟ್ರದ ಮುಂದೆ ಪಾಕಿಸ್ತಾನ ಸಣ್ಣದಾಗಿಬಿಟ್ಟಿದೆ. ಸಹಾಯದ ನೆಪದಲ್ಲಿ ಬೀಫ್ ಮಸಾಲ ಬದಲು ಒಂದೆರಡು ಸಾಂತ್ವಾನದ ಮಾತುಗಳನ್ನಾಡಿದ್ದರೂ ಸಾಕಾಗಿರುತ್ತಿತ್ತು. ಪಾಕಿಸ್ತಾನ ಇಷ್ಟು ಸಣ್ಣದಾಗುತ್ತಿರಲಿಲ್ಲ.

ಪಾಕಿಸ್ತಾನದ ಈ ದುಷ್ಟಬುಧ್ಧಿಯನ್ನು ನೋಡಿದ ನಂತರ ನನ್ನ ಮನಸಿನಲ್ಲಿ ಮೂಡಿದ ಕಟ್ಟಕಡೇಯ ಪ್ರಶ್ನೆ- ದನದ ಮಾಂಸ ತಿನ್ನಿ ಎಂದು ಇತ್ತೀಚೆಗಷ್ಟೇ ಕರೆ ನೀಡಿದ್ದ ನಮ್ಮ ಕಾರ್ನಾಡರೇನಾದರೂ ನೇಪಾಳಕ್ಕೆ ದನದ ಮಾಂಸವನ್ನು ಕಳುಹಿಸಿ ಎಂದು ಆದೇಶಿಸಿದ್ದರಬಹುದೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!