ಹೊಸ ವರ್ಷ ಬಂದಾಗ ಹಲವರು ಹೊಸ ಪ್ರತಿಜ್ಞೆ ಮಾಡುತ್ತಾರೆ. ಹಳೆಯದನ್ನು ಮರೆಯುತ್ತಾರೆ. ಅಲ್ಲೇ ಸುಳ್ಳಿನ ಮೂಟೆಯೊಂದನ್ನು ಕಟ್ಟುವ ಕಾರ್ಯ ಆರಂಭಗೊಳ್ಳುತ್ತದೆ. ಸತ್ಯದ ಬೇರುಗಳು ಎಲ್ಲೆಲ್ಲೋ ಹುದುಗಿಕೊಂಡಿರುತ್ತದೆ. ಹುಡುಕುತ್ತೀರಾ? ಇಬ್ಬರಿಗೂ ಗೊತ್ತು. ನಾವು ಹೇಳುತ್ತಿರುವುದು ಅಪ್ಪಟ ಸುಳ್ಳು. ಆದರೆ ಇಬ್ಬರೂ ನಾವಿಬ್ಬರು ಗಳಸ್ಯ ಕಂಠಸ್ಯ ಎನ್ನುತ್ತಾರೆ. ನಾವಿಬ್ಬರೂ...
ಅಂಕಣ
ಸಾವು ಸೋಲಲ್ಲ…!!
ಇಂದು ಜ್ಯಾಕ್ ಸೊಬಿಯಾಕ್ ನೆನಪಾಗುತ್ತಿದ್ದಾನೆ. ಇಂದು ಮಾತ್ರವಲ್ಲ ‘ಆಸ್ಟಿಯೋಸರ್ಕೋಮ’ ಎಂದಾಗ, ಗಿಟಾರ್’ನ್ನು ಕಂಡಾಗ, ಧೈರ್ಯ ಹಾಗೂ ಆತ್ಮವಿಶ್ವಾಸಗಳ ಮಾತುಗಳು ಬಂದಾಗೆಲ್ಲಾ ಆತ ನೆನಪಾಗುತ್ತಾನೆ. ಜ್ಯಾಕ್ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ಕೆಲ ವ್ಯಕ್ತಿಗಳು ನಮಗೆ ಹತ್ತಿರದಿಂದ ಪರಿಚಯವಿಲ್ಲದಿದ್ದರೂ, ಮುಖಾಮುಖಿಯಾಗಿ ಭೇಟಿಯಾಗಿಲ್ಲದಿದ್ದರೂ, ಅವರೊಂದಿಗೆ ಮಾತನಾಡದಿದ್ದರೂ...
ರಾಜಕಾರಣಿಗಳ ದುಂಡಾವರ್ತನೆಗೆ ಕೊನೆ ಎಂದು??
ಘಟನೆ ೧: ಗೂಂಡಾ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಸಮಾಜವಾದಿ ಪಕ್ಷದ ಆಜಂ ಖಾನ್ ಅಧಿಕಾರ ಕಳೆದುಕೊಂಡು ಮಾಜಿ ಸಚಿವನಾಗಿದ್ದರೂ ನೂತನ ಸರಕಾರ ಅಸ್ತಿತ್ವಕ್ಕೆ ಬರುವ ವರೆಗೆ ತನ್ನ ಅಧಿಕಾರ ಚಲಾವಣೆ ಮಾಡಬಹುದು ಅನ್ನುವ ಅಧಿಕಾರದ ಮದದಲ್ಲಿ ವಿಭಾಗೀಯ ಅಧಿಕಾರಿಯೊಬ್ಬರಿಗೆ ಆವಾಜ್ ಹಾಕುತ್ತಾರೆ. ರಸ್ತೆಯ ಗುಣಮಟ್ಟ ಕಳಪೆಯಾಗಿದ್ದರಿಂದ ಸಿಡಿಮಿಡಿಗೊಂಡು ಈ ರೀತಿಯ ರಸ್ತೆಗಳಲ್ಲಿ...
ಬೇವು ನುಂಗಿ, ಬೆಲ್ಲ ಸವಿದು ನವಸಂವತ್ಸರವ ಸ್ವಾಗತಿಸೋ ಯುಗಾದಿ
ಋತುಗಳ ರಾಜ ವಸಂತ ಕಾಲಿಟ್ಟನೆಂದರೆ ಎಲ್ಲೆಲ್ಲೂ ಜೀವಕಳೆಯ ಸಂಭ್ರಮ ಪಲ್ಲವಿಸುತ್ತದೆ. ಹಳೆಬೇರಿನ ಆಧಾರದ ಮೇಲೆ ಹೊಸ ಚಿಗುರು ಬಿರಿಯುವ ಈ ಕಾಲ ಪ್ರಕೃತಿಯ ನಿರಂತರ ಚಲನಶೀಲತೆಯ ಮಹಾನ್ ದ್ಯೋತಕವೂ ಹೌದು ಮತ್ತು ಮಾನವನ ಬದುಕಿನ ಏರಿಳಿತಗಳನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ರೂಪಕವೂ ಹೌದು. ಹೊಸ ಟಿಸಿಲಿನ ಲವಲವಿಕೆ ಹಾಗೂ ತಾಜಾತನಗಳಂತಹ ಪ್ರಕೃತಿದತ್ತ ಪ್ರಭಾವಳಿಯೊಂದಿಗೆ...
ನಿಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮುನ್ನ ಸ್ವಲ್ಪ ಯೋಚಿಸಿ
ಅದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ವೃದ್ಧಾಶ್ರಮ. ಆತನಿಗೆ ವಯಸ್ಸು ಸುಮಾರು 80 ರ ಮೇಲಾಗಿರಬಹುದು. ಆತನ ಮಗ ಅವನನ್ನು ಅಲ್ಲಿ ತಂದು ಬಿಟ್ಟು ಸುಮಾರು 5 ರಿಂದ 6 ವರ್ಷಗಳೇ ಕಳೆದಿತ್ತು. ಈ 6 ವರ್ಷಗಳಲ್ಲಿ ಆತನ ಮಗ ಅವನನ್ನು ನೋಡಲು ಬಂದಿದ್ದು, ಕೇವಲ ಬೆರಳೆಣಿಕೆಯಷ್ಟು ಸಲ ಮಾತ್ರ. ಆತನ ಮಗನಿಗೆ ಹಣಕ್ಕೇನೂ ಕೊರತೆಯಿರಲಿಲ್ಲ, ತಿಂಗಳಿಗೆ ಲಕ್ಷಾಂತರ ರೂ...
ಆಸ್ಕರ್ : ಮರುಭೂಮಿಯ ಓಯಸಿಸ್`ನಂತೇಕೆ?
89 ವರ್ಷದ ಸುದೀರ್ಘ ಇತಿಹಾಸ. ದೇಶ ವಿದೇಶಗಳ ಸಾವಿರಾರು ಸ್ಪರ್ಧಿಗಳು. ಜಗತ್ತಿನ ಪ್ರತಿಯೊಬ್ಬ ಸಿನಿ ತಾರೆಯ ಮಹತ್ತರವಾದ ಕನಸು. ಕರಿ ಸೂಟು-ಬೂಟಿನ ಉಡುಗೆಯಿಂದ ಮಾತಿಗಿಳಿಯುವ ನಿರೂಪಕರು. ಅಲ್ಲಿ ನಿರೂಪಣೆಯ ಅವಕಾಶ ಸಿಕ್ಕರೂ ಅದೇ ಮಹಾನ್ ಸಾಧನೆ! ಅತಿ ಕ್ಲಿಷ್ಟವಾದ ಆಯ್ಕೆಯ ವಿಧಾನ. ಪ್ರಶಸ್ತಿಯ 24 ವರ್ಗಗಳು. ಪ್ರಶಸ್ತಿಯ ಮೊತ್ತ ಮಾತ್ರ ಶೂನ್ಯ! 3.8 ಕೆಜಿಯ ಪ್ರತಿಮೆ...
ಸಿಹಿ-ಕಹಿಯ ಸಮಾಚಾರ
ಸವಿ ಸವಿ ಸಡಗರ, ಸಂಭ್ರಮದ ಸುಮಧುರ ಕ್ಷಣಗಳೇ ಹಬ್ಬದ ಹಿಗ್ಗು. ಇವು ಬದುಕಿನ ಮಬ್ಬು ಮಾಸುವಂತೆ ಮಾಡಿ, ಮಾಸದ ಖುಷಿಯ ಕಳೆಯನ್ನು ಮೈಮನಗಳಲ್ಲೆಲ್ಲಾ ಹಬ್ಬಿಸಿಬಿಡುತ್ತವೆ. ಹಲವು ಹಬ್’ಗಳ ಜಪದಲ್ಲೇ ಮುಳುಗಿಹೋಗುವ ಇಂದಿನವರಿಗೆ ತಮ್ಮದೇ ಮನೆಯಲ್ಲಿ ನಡೆಯುವ ಹಬ್ಬಗಳ ಬಗ್ಗೆ ಮಾತ್ರ ಆಸಕ್ತಿಯೇ ಇಲ್ಲ. ಹಬ್ಬ ಹರಿದಿನವೆಂದರೇ ಸಿಹಿ. ಅದೇಕೆ ತಾರತಮ್ಯ? ಎಲ್ಲ ಹಬ್ಬಗಳಲ್ಲೂ...
ನನಗೂ ಒಂದು ಮನಸ್ಸಿದೆ…
“ನಾನು ಹೆಣ್ಣಾದರೆ ಏನಂತೆ, ಮನುಷ್ಯಳಲ್ಲವೇ? ಈ ಜಗದಲ್ಲಿರೋ ಪಾಪವನ್ನೆಲ್ಲ ನನ್ನ ಮೇಲೆ ಹೊರಿಸಿದ ಜನರಿಗೆ, ನನಗೂ ಒಂದು ಮನಸ್ಸಿದೆ ಎಂದು ಯಾವಾಗ ತಿಳಿಯುವುದು? ಎಂದಿನಿಂದಲೂ ಈ ಅನ್ಯಾಯ ನನ್ನ ಮೇಲೇ ಏಕೆ? ಆ ದಿನ ನಾನು ನನ್ನವನನ್ನು ಮೊದಲ ಬಾರಿ ಕಂಡಾಗ, ನನ್ನ ಅದೃಷ್ಟವೇ ಅದೃಷ್ಟವೆಂದು ಹಿಗ್ಗಿದ್ದೆ. ನನ್ನ ಸಖಿಯರಿಗೆಲ್ಲಾ ಅವನನ್ನು ತೋರಿಸಿ ನನ್ನ ಅದೃಷ್ಟವ...
ಅವರವರ ಭಾವಕ್ಕೆ ಅವರವರ ಭಕುತಿಗೆ
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೨ ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ | ಮುಗಿವ ತರಣಿಯ ರಕ್ತ ಹಿತವೆನಿಸದೇಕೋ ! || ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ | ಬಗೆವೆನ್ನ ಮನಸಿನೊಳೊ ? – ಮಂಕುತಿಮ್ಮ || ೦೫೨ || ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ | ನೀಲಾಕಾಶದ ಮುದವೀವ ಭಾವವನ್ನು ಯಾರು ತಾನೆ ಅಲ್ಲಗಳೆಯಲಾದೀತು? ಅದು ಎಲ್ಲರಿಗು ಹಿತವೆನಿಸುವ...
ಅಂಗನವಾಡಿಯಲ್ಲಿ ಇದ್ದಾಗಿಂದ ಕೇಳ್ತಿದ್ದೇನೆ ಈ ಸಮಸ್ಯೆ, ಇನ್ನೂ ಬಗೆಹರಿದಿಲ್ವಾ?
ಹಾಗೊಂದು ಶೀರ್ಷಿಕೆಯನ್ನು ಬರೆದೆನಾದರೂ ನಾನು ಅಂಗನವಾಡಿ, ನರ್ಸರಿ, ಪ್ರೀಸ್ಕೂಲು ಇತ್ಯಾದಿಗಳಿಗೆ ಹೋದವನಲ್ಲ. ನೇರ ಒಂದನೇ ತರಗತಿಗೆ, ಅದೂ ಒಂದು ತಿಂಗಳು ತಡವಾಗಿ ಸೇರಿದವನು ನಾನು. ನಾನು ಶಾಲೆ ಸೇರುವ ಹೊತ್ತಿಗೆ ಒಂದನೇ ಕ್ಲಾಸಿನ ಉಳಿದ ಹುಡುಗರೆಲ್ಲ ಅಆಇಈಗಳ ನದಿ ದಾಟಿ ಕಕ್ಕಗಗ್ಗಗಳ ಬೆಟ್ಟವನ್ನೇರಿ ಪಪ್ಪಬಬ್ಬಮ್ಮಗಳ ಬಯಲವರೆಗೆ ಬಂದುಬಿಟ್ಟಿದ್ದರು. ಕಾಲೇಜಿನಲ್ಲಾದರೆ...