೨೦೧೬ ರಲ್ಲಿ ವಿಜಯ್ ಅವರ ಭೈರವ ಚಿತ್ರದಲ್ಲಿ ನಾನೊಬ್ಬ ಜಡ್ಜ್ ಪಾತ್ರವನ್ನು ನಿರ್ವಹಿಸುತ್ತಿದ್ದೆ. ವಿಜಯ್ ಅವರು ಒಬ್ಬ ಸಾಮಾಜಿಕ ಕಾರ್ಯಕರ್ತನ ಪಾತ್ರದಲ್ಲಿದ್ದರು ಸಹಜವಾಗಿಯೇ ಒಂದಿಷ್ಟು ಡ್ರಾಮಾಟಿಕ್ ಡೈಲಾಗ್’ಗಳನ್ನು ನೀಡಲಾಗಿತ್ತು. ನಾನು ಕೋರ್ಟ್ ದೃಶ್ಯದಲ್ಲಿ, ಪ್ರಮುಖವಾಗಿ ಕಾನೂನಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ವಲ್ಪ ನೈಜತೆಯನ್ನು ತರುವುದಕ್ಕಾಗಿ ಡೈರಕ್ಟರ್ ಜೊತೆ...
ಅಂಕಣ
ಇಲ್ಲಿಯ ತನಕ ನೊಣಕ್ಕೆ ಆರು ನೊಬೆಲ್ ಸಿಕ್ಕಿದೆ, ಗೊತ್ತಾ?
ಮನುಷ್ಯನಿಗೆ ವಿಚಾರ ಮಾಡುವ ಶಕ್ತಿ ಬಂದಾಗಿನಿಂದ ಆತ ಈ ಪ್ರಕೃತಿಯ ಹುಟ್ಟಿನ ಬಗ್ಗೆ ವಿಚಾರ ಮಾಡುತ್ತಲೇ ಇದ್ದಾನೆ. ಜಗತ್ತಿನ ಉದ್ಭವ ಹೇಗಾಯಿತು? ಈ ಪ್ರಪಂಚದಲ್ಲಿ ನಮಗಿಂತ ಹೆಚ್ಚು ಪ್ರಬಲವಾದ ಮತ್ತೊಂದು ಜೀವಿ ಇರಬಹುದೇ? ಪೃಥ್ವಿಯ ಹಾಗೆ ಜೀವಿಸಲು ಇನ್ನೊಂದು ಪ್ರದೇಶ ಇದೆಯೇ? ಆಕಾಶದಲ್ಲಿ ಏನಾಗುತ್ತಿದೆ? ಇವತ್ತಿಗೂ ರಾತ್ರಿ ಮನೆಯ ಅಟ್ಟದ ಮೇಲೆ ಬಂದು ಕೂತು ಆಕಾಶವನ್ನು...
ವಿಕ್ರಮ ಮತ್ತು ಬೇತಾಳ (ಒಂದು ಹೊಸಾ ಕಥೆ)
ಛಲ ಬಿಡದ ವಿಕ್ರಮ ದೀಪಾವಳಿ ಅಮಾವಾಸ್ಯೆಯ ಆ ರಾತ್ರಿ ಮತ್ತೆ ಸ್ಮಶಾನಕ್ಕೆ ಹೋಗಿ ಬೇತಾಳವನ್ನು ಹೆಗಲಿಗೇರಿಸಿಕೊಂಡು ಖಡ್ಗವನ್ನು ಕೈಯಲ್ಲಿ ಹಿಡಿದು ನಡೆಯತೊಡಗಿದನು. ವಿಕ್ರಮನ ಬೆನ್ನೇರಿದ ಬೇತಾಳ ಪ್ರತೀ ಸಾರಿಯಂತೆ ಮತ್ತೊಂದು ಹೊಸಾ ಕಥೆ ಹೇಳಲು ಶುರು ಮಾಡಿತು. “ರಾಜಾ ವಿಕ್ರಮಾ,ಒಂದಾನೊಂದು ಕಾಲದಲ್ಲಿ ಮಹೇಶನೂರು ಎನ್ನುವ ರಾಜ್ಯದಲ್ಲಿ ಜನಾನುರಾಗಿಯಾಗಿದ್ದ ರಾಜನ...
ಮತ ಖಾತ್ರಿಗಾಗಿ ಹೊರಟಿವೆ ರಥಯಾತ್ರೆಗಳು
ಬೇಸಿಗೆಯ ಕಾಲವೆಂದರೆ ಅದು ಜಾತ್ರೆಗಳ ಸೀಸನ್. ಜಾತ್ರೆಯ ವಿವಿಧ ಪ್ರಕ್ರಿಯೆಗಳಲ್ಲಿ ರಥೋತ್ಸವವೂ ಪ್ರಮುಖವಾದುದು. ಆದರೆ ಈ ಬಾರಿ ಮಾತ್ರ ಬೇಸಿಗೆಗೂ ಮುನ್ನವೇ, ಜಾತ್ರೆಗಳ ಆರಂಭಕ್ಕೂ ಮುಂಚಿತವಾಗಿಯೇ ತೇರುಗಳ ಬಗ್ಗೆ ಏರುಗತಿಯ ಚರ್ಚೆ ನಡೆಯುತ್ತಿದೆ. ರಥವನ್ನು ಸಜ್ಜುಗೊಳಿಸುವ ಸಿಂಗರಿಸುವ, ರಥ ಬೀದಿಯನ್ನು ನಿಶ್ಚಯಿಸುವ ಕೆಲಸಗಳು ಬಿರುಸಿನಿಂದ ನಡೆಯುತ್ತಿದ್ದು ಆ ಬಗ್ಗೆ...
ವೈಭವದ ಉತ್ಸವಗಳು ಬೇಕೆ??
ಹಬ್ಬ ಅಂದರೆ ಸಾಕು ನೂರಾರು ಕೆಲಸ. ಎಷ್ಟು ತಯಾರಿ ಮಾಡಿಕೊಂಡರೂ ಮುಗಿಯುವುದೇ ಇಲ್ಲ. ಹೀಗೆಯೇ ಹಬ್ಬದ ಕೆಲಸಗಳಲ್ಲಿ ಮಗ್ನಳಾಗಿದ್ದ ಅಮ್ಮನನ್ನು ಕರೆದುಕೊಂಡು ಬಂದು ಟಿ.ವಿ. ಮುಂದೆ ಕೂರಿಸಿ “ನೋಡು ಅಯೋಧ್ಯೆಯ ದೀಪಾವಳಿ” ಎಂದೆ. ಒಂದೂ ಮುಕ್ಕಾಲು ಲಕ್ಷಕ್ಕಿಂತಲೂ ಹೆಚ್ಚು ದೀಪಗಳಿಂದ ಕಂಗೊಳಿಸುತ್ತಿದ್ದ ಅಯೋಧ್ಯೆ, ಸರಯೂ ಆರತಿ, ಲೇಸರ್ ಶೋ ಇದನ್ನೆಲ್ಲಾ ನೋಡಿ “ಎಷ್ಟು...
ಸೃಷ್ಟಿಯನಾಗಿಸಿ ಒಡವೆ, ತೊಡುವ ತರುಣಿಯಂತೆ ಬೊಮ್ಮ..!
ಮಂಕುತಿಮ್ಮನ ಕಗ್ಗ ೦೭೮. ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ | ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ || ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ | ಮೆರೆಯುವನು ಪರಬೊಮ್ಮ – ಮಂಕುತಿಮ್ಮ || ೦೭೮ || ಮುಕುರ – ಕನ್ನಡಿ ವಿಲಸಿಪ – ವಿಲಾಸಪಡುವ ಹದಿಹರೆಯದ, ಪ್ರಾಯಕ್ಕೆ ಬಂದ ತರುಣ ತರುಣಿಯರ ಕೆಲವು ಚರ್ಯೆಗಳನ್ನು ಗಮನಿಸಿದ್ದೀರಾ? ತಮ್ಮ...
ವೇದ ಸುಳ್ಳಾದರೂ ಗಾದೆ ಸುಳ್ಳಾಗದು .
ಸಮಾನಾರ್ಥಕ ಸ್ಪಾನಿಷ್ ಗಾದೆ : ‘No hay proverbio falso’ ನಮ್ಮಲ್ಲಿ ಬಹಳ ಜನಜನಿತ ಗಾದೆಯೊಂದಿದೆ. ಗಾದೆಗಳ ಬಗ್ಗೆಯ ಗಾದೆ! ಅದೇ “ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎನ್ನುವುದು . ಹಿಂದೂಸಂಸ್ಕೃತಿಯಲ್ಲಿ ವೇದಗಳಿಗೆ ಮಹತ್ತರಸ್ಥಾನವಿದೆ. ವೇದ ಮತ್ತು ಉಪನಿಷತ್ತು ನಮ್ಮ ಜ್ಞಾನ ಭಂಡಾರಗಳಿದ್ದಂತೆ. ನಮ್ಮ ಹಿರಿಯರು ನಮಗಿಂತ ಹೆಚ್ಚಿನ ಉನ್ನತಿಯನ್ನು...
ತಮಿಳುನಾಡಿನ ಸುಂದರ ದೇವಾಲಯಗಳು
ಕಳೆದ ದಸರಾದಲ್ಲಿ ಕಾಶೀ ವಿಶ್ವನಾಥನ ದರ್ಶನ ಪಡೆದಿದ್ದ ನಾವು ಈ ಬಾರಿಯ ದಸರಾ ರಜೆಯಲ್ಲಿ ರಾಮೇಶ್ವರ ಹೊರಡುವ ಯೋಜನೆ ಹಾಕಿಕೊಂಡಿದ್ದೆವು. ಕಾಶೀ ಹೋಗಿ ಬಂದ ವರುಷದೊಳಗೆ ರಾಮೇಶ್ವರಕ್ಕೆ ಹೋಗಬೇಕೆಂಬ ಪ್ರತೀತಿ ನಮ್ಮಲ್ಲಿದೆ ಮತ್ತು ಕಾಶೀಯಿಂದ ತಂದ ಗಂಗಾಜಲದಿಂದ ಶ್ರೀ ರಾಮನಾಥನಿಗೆ ಅಭಿಷೇಕ ಮಾಡಿಸಬೇಕೆಂಬ ಪ್ರತೀತಿ ಕೂಡ. ದಸರಾ, ವಾರಂತ್ಯ ಮತ್ತು ಗಾಂಧೀ ಜಯಂತಿಗಳಿಂದ...
ಪ್ರೇಮ ಹೊಸತಲ್ಲ, ಆದರೆ ಮತ ವಿಸ್ತಾರಕ್ಕೆ ಪ್ರೇಮದಸ್ತ್ರ ಭಾರತಕ್ಕೆ ಹೊಸತೇ!
ಪ್ರೇಮ ಎನ್ನುವುದು ಭಾರತೀಯ ಪರಂಪರೆಗೆ ಹೊಸದಾದ ಸಂಗತಿಯೇನಲ್ಲ. ಪ್ರೇಮ ಎನ್ನುವುದು ನಮ್ಮ ಪರಂಪರೆಯಲ್ಲಿ ಇರಲೇ ಇಲ್ಲ ಎನ್ನುವುದಕ್ಕೆ ಯಾವ ಮಾನ್ಯತೆಯ ಕಲ್ಪನೆಯೂ ಇಲ್ಲ. ಶಂಕರಾಚಾರ್ಯರ ಕಾಲದವರೆಗೂ ಸಂನ್ಯಾಸತ್ವವೂ ಕೂಡ ಭಾರತದಲ್ಲಿ ಕ್ರಮಸಂನ್ಯಾಸದ ರೂಪದಲ್ಲಿಯೇ ಇದ್ದದ್ದು. ಕ್ರಮಸಂನ್ಯಾಸ ಎಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಹೀಗೆ ನಾಲ್ಕೂ...
ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ
ಸ್ನಾನ ಮಾಡುವುದಿಲ್ಲವಂತೆ! ಊಟವಿಲ್ಲ, ನಿದ್ರೆಯಿಲ್ಲ; ಒಂದೆಡೆ ಕೂರದೆ ಸದಾ ಅತ್ತಿಂದಿತ್ತ ಓಡಾಡುತ್ತಲೇ ಇರುವರಂತೆ! ಉಡುಗೆಯ ಮೇಲೆ ಎಚ್ಚರವಿಲ್ಲ. ಮಾತಿನಲ್ಲಿ ಅರ್ಥವಿಲ್ಲ! ನಿತ್ಯಾಹ್ನಿಕವಿಲ್ಲ, ಶಾರದೆಯ ಪೂಜೆಯಿಲ್ಲ; ನರಸಿಂಹ ವನದಲ್ಲಿ ಏನನ್ನೋ ಗುನುಗುನಿಸುತ್ತಾ ಓಡಾಡುವರಂತೆ! ಮನಸ್ಸು ಉದ್ವಿಗ್ನವಾಗಿದೆಯಂತೆ! ಅವರಿಗೆ ಬುದ್ಧಿ ಭ್ರಮಣೆಯಂತೆ; ಪೂರ್ವಾಶ್ರಮದ ತಾಯಿ...