ಅಂಕಣ ಸ್ಪ್ಯಾನಿಷ್ ಗಾದೆಗಳು

ವೇದ ಸುಳ್ಳಾದರೂ ಗಾದೆ ಸುಳ್ಳಾಗದು .

ಸಮಾನಾರ್ಥಕ ಸ್ಪಾನಿಷ್ ಗಾದೆ : ‘No hay proverbio falso’

ನಮ್ಮಲ್ಲಿ ಬಹಳ ಜನಜನಿತ ಗಾದೆಯೊಂದಿದೆ. ಗಾದೆಗಳ ಬಗ್ಗೆಯ ಗಾದೆ! ಅದೇ “ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎನ್ನುವುದು . ಹಿಂದೂಸಂಸ್ಕೃತಿಯಲ್ಲಿ ವೇದಗಳಿಗೆ ಮಹತ್ತರಸ್ಥಾನವಿದೆ. ವೇದ ಮತ್ತು ಉಪನಿಷತ್ತು ನಮ್ಮ ಜ್ಞಾನ ಭಂಡಾರಗಳಿದ್ದಂತೆ. ನಮ್ಮ ಹಿರಿಯರು ನಮಗಿಂತ ಹೆಚ್ಚಿನ ಉನ್ನತಿಯನ್ನು ವಿಜ್ಞಾನ ,ಗಣಿತ ಮತ್ತು ಕಲೆಯಲ್ಲಿ ಪಡೆದಿದ್ದರು ಎನ್ನುವುದು ಸಾದೃಶ. ನಮ್ಮ ವೇದಗಳಲ್ಲಿನ ಜ್ಞಾನವನ್ನು ತಮ್ಮ ಭಾಷೆಗೆ ಅನುವಾದ ಮಾಡಿಕೊಂಡು ನಂತರದ ದಿನಗಳಲ್ಲಿ ಆ ಜ್ಞಾನವನ್ನು ತಮ್ಮದೇ ಎನ್ನುವ ರೀತಿಯಲ್ಲಿ ಬಿಂಬಿಸಿದ್ದಾರೆ ಎನ್ನುವುದುಹಲವು ಪಂಡಿತರ ವಾದ. ಇಂದಿನ ಅನೇಕ ಆವಿಷ್ಕಾರಗಳನ್ನು ನೋಡಿದರೆ ಎಲ್ಲೋ ಒಂದು ಕಡೆ ಇದು ನಿಜವಿರಬಹದು ಎನ್ನುವ ಭಾವನೆ ನಮ್ಮದಾಗುತ್ತೆ. ನಮ್ಮ ವೇದಗಳು ಜ್ಞಾನದಸಾಗರ. ನಮ್ಮ ಹಿರಿಯರಿಗೆ ಹೊಸ ಆವಿಷ್ಕಾರಗಳ ಮಾಡಿ ಅವನ್ನು  ಜನ ಸಾಮಾನ್ಯನಿಗೆ ತಲುಪಿಸಿದರೆ ಆಗಬಹುದಾದ ದುಷ್ಪಾರಿಣಾಮಗಳ ಅರಿವಿತ್ತು.  ಅಲ್ಲದೆ  ಪರಿಸರ, ಪ್ರಕೃತಿನೀಡಿರುವ ಸಂಪನ್ಮೂಲಗಳ ಮಿತವಾದ ಬಳಕೆಯಿಂದ ಮಾತ್ರ ಬದುಕು ಸುಂದರವಾಗಿರುತ್ತದೆ ಎನ್ನುವ ಅರಿವೂ ಇತ್ತು .

ಹೀಗೆ ವೇದಗಳಿಗೆ ನಮ್ಮಲ್ಲಿ ಅತ್ಯಂತ ಉನ್ನತ ಸ್ಥಾನವಿದೆ. ಇಂತಹ ವೇದ ಬೇಕಾದರೂ ಸುಳ್ಳಾಗಬಹದು ಆದರೆ ಗಾದೆ ಸುಳ್ಳಾಗುವುದಿಲ್ಲ ಎಂದು ಹೇಳಬೇಕೆಂದರೆ ಗಾದೆಯಲ್ಲಿ ವೇದಗಳಸಾರಗಳಲ್ಲಿ ಇರುವ ನಂಬಿಕೆಗಿಂತ ಹೆಚ್ಚಿನ ನಂಬಿಕೆ ಇದೆಯೆಂದು ಅರ್ಥವಲ್ಲವೇ?  ಹೌದು ಏಕೆಂದರೆ ವೇದ ಸೃಷ್ಟಿಸಿದವರು ಪಂಡಿತರು , ಜ್ಞಾನಿಗಳು. ಅವನ್ನು ಅರ್ಥ ಮಾಡಿಕೊಳ್ಳುವುದುಎಲ್ಲರಿಗೂ ಸಾಧ್ಯವಿಲ್ಲ! ಆದರೆ ಗಾದೆಗಳು ಜನಸಾಮಾನ್ಯರು ತಮ್ಮ ದಿನ ನಿತ್ಯದ ಭಾಷೆಯಲ್ಲಿ ತಮ್ಮ ಅನುಭವದ ಸಾರವನ್ನು ಕಟ್ಟಿಕೊಟ್ಟಿರುವುದು. ಹೀಗಾಗಿ ಜನಸಾಮಾನ್ಯರಲ್ಲಿವೇದಕ್ಕಿಂತ ಗಾದೆಯೇ ಹತ್ತಿರ. ಇದು ನಮ್ಮಲ್ಲಿ ಮಾತ್ರವಲ್ಲ ಹೆಚ್ಚು ಕಡಿಮೆ ಜಗತ್ತಿನ ಜನರೆಲ್ಲರ ನಂಬಿಕೆ .

ನಮ್ಮಲ್ಲಿ ವೇದವಿದೆ ಯೂರೋಪಿನಲ್ಲಿ? ಅಮೇರಿಕಾದಲ್ಲಿ? ಅಲ್ಲಿ ಬೈಬಲ್ ಇದೆ ಆದರೆ ಗಾದೆಯಲ್ಲಿ ಅದಕ್ಕಿಂತ ಗಾದೆ ಮೇಲು ಎಂದು ಹೇಳಿಲ್ಲ ಆದರೆ ‘ಸುಳ್ಳು ಗಾದೆ ಇಲ್ಲವೇ ಇಲ್ಲ’ ಎನ್ನುವಅರ್ಥ ಕೊಡುವ ‘No hay proverbio falso’ ಎನ್ನುವ ಮಾತಿದೆ . ಇದು ಸ್ಪೇನ್ ಮಾತ್ರವಲ್ಲದೆ ಪೂರ್ಣ ಲ್ಯಾಟಿನ್ ಭಾಷಿಕರಲ್ಲಿ ಮಾನ್ಯತೆ ಪಡೆದಿದೆ.

ಇಂಗ್ಲಿಷರು ಕೂಡ  ಬೈಬಲ್ ಬಗ್ಗೆ ಮಾತನಾಡುವುದಿಲ್ಲ ಬದಲಿಗೆ “There is no untrue proverb” ಎನ್ನುತ್ತಾರೆ .

ಸ್ಪಾನಿಷ್ ಭಾಷೆಯ ಅರ್ಥ ಮತ್ತು ಉಚ್ಚಾರಣೆ :

೧) NO   : ಅರ್ಥ ಇಲ್ಲ  ಉಚ್ಚಾರಣೆ  ನೋ

೨)HAY  : ಅರ್ಥ ಇದೆ . ಉಚ್ಚಾರಣೆ ಹಾಯ್ . ಇಲ್ಲಿನ ಸಂದರ್ಭದಲ್ಲಿ  ನೋ ಹಾಯ್ ಒಟ್ಟಿಗೆ ಓದಬೇಕು ಆಗ ಇಲ್ಲವೇ ಇಲ್ಲ ಎನ್ನುವ ಅರ್ಥ ನೀಡುತ್ತದೆ .

೩) proverbio  : ಅರ್ಥ ಗಾದೆ . ಉಚ್ಚಾರಣೆ ಪ್ರವರ್ಬಿಯೋ

೪) FALSO  :  ಪದಕೋಶದ ಪ್ರಕಾರ ತಪ್ಪು ಎನ್ನುವ ಅರ್ಥ ಕೊಡುತ್ತೆ ಸಂದರ್ಭದ ಪ್ರಕಾರ ಸುಳ್ಳು ಎನ್ನುವ ಅರ್ಥ .  ಫಾಲ್ಸೋ ಎನ್ನುವುದು ಉಚ್ಚಾರಣೆ .

 

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!