ಅದು ೨೦೦೪ರ ಸಮಯ ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಕಾಫಿ ಶಾಪ್ ತೆಗೆಯಲು ಪ್ರಸಿದ್ಧ ಐಟಿ ಕಂಪೆನಿಯಿಂದ ಅವಕಾಶ ಸಿಗುತ್ತದೆ. ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ಬಳಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಎಂಡಿಪಿ ಕಾಫಿ ಹೌಸ್ ಒಂದು ಉತ್ತಮ ಉದಾಹರಣೆ. ಒಂದು ಹತ್ತಾಯಿತು, ಹತ್ತು ನೂರಾಯಿತು. ಭಾರತದ ಉದ್ದಗಲಕ್ಕೂ ಕಾರ್ಪೊರೇಟ್ ವಲಯದಲ್ಲಿ ಇಂದು ಎಂಡಿಪಿ ಶಾಖೆಗಳಿವೆ...
ಅಂಕಣ
ಪಕೋಡವನ್ನಾದ್ರೂ ಮಾರಿ, ಚಹವನ್ನಾದ್ರೂ ಮಾರಿ, ನಿಮ್ಮನ್ನೇ ನೀವು ಮಾರ್ಕೋಬೇಡಿ!
ಒಂದು ಸಂದರ್ಶನದಲ್ಲಿ ಮೋದಿಜಿ ನಿರುದ್ಯೋಗದ ಕುರಿತು ಮಾತನಾಡುತ್ತಾ ಹೇಳುತ್ತಾರೆ ” ಕೇವಲ ಸರ್ಕಾರಿ ಕೆಲಸ ಅಥವಾ ಕಂಪನಿಯಲ್ಲಿ ಕೆಲಸ ಅಷ್ಟನ್ನೇ ಉದ್ಯೋಗ ಎಂದು ಪರಿಗಣಿಸಲು ಆಗುವುದಿಲ್ಲ. ಸಣ್ಣ ಪುಟ್ಟ ಉದ್ದಿಮೆ ನಡೆಸಿಕೊಂಡು ಹೋದರೂ ಅದು ಉದ್ಯೋಗವೇ. ನಿಮ್ಮ ಸ್ಟುಡಿಯೋ ಎದುರು ಒಬ್ಬ ಪಕೋಡವನ್ನು ಮಾರಿ ದಿನಕ್ಕೆ ಇನ್ನೂರು ರೂಪಾಯಿ ಗಳಿಸಿದರೆ ಅದು ಉದ್ಯೋಗ ಅಲ್ಲವೇ...
ಅವರು ವಿಜ್ಞಾನಕ್ಕೆ ಅಂಬೆಗಾಲಿಡುವ ಕಾಲಕ್ಕೆ ಇವನು ಶನಿಗ್ರಹದ ಉಪಗ್ರಹಗಳ ಮೇಲೆ ತನ್ನ ದೃಷ್ಟಿಯನ್ನು ಇಟ್ಟಿದ್ದ!
ಸೌರಮಂಡಲ, ಗ್ರಹಗಳ ಚಲನೆ, ಅವುಗಳ ನಡುವಿನ ಅಂತರ, ಚಂದಿರನ ಕಾಂತಿ, ಬೆಳಕಿನ ವೇಗ, ಭೂಮಿಯ ಸುತ್ತಳತೆ, ಗುರುತ್ವಾಕರ್ಷಣೆ ಮುಂತಾದವುಗಳ ಸಂಶೋಧಕರನ್ನು ಹೆಸರಿಸುತ್ತಾ ಹೋದಂತೆ ಕಲಿಯುಗದ ವಿಜ್ಞಾನದ ಪುಸ್ತಕಗಳನ್ನಷ್ಟೇ ಓದುತ್ತಾ, ಕಲಿಯುತ್ತಾ ಬೆಳೆದ ನಮಗೆ ಬೆಳ್ಳನೆಯ ಕೂದಲಿನ ಬಿಳಿಯ ವಿಜ್ಞಾನಿಗಳೇ ಕಣ್ಣ ಮುಂದೆ ಬರುತ್ತಾರೆಯೇ ವಿನಃ ಆ ಬೆಳ್ಳನೆಯ ಕೂದಲಿನ ಆಯಸ್ಸಿನ ಸಹಸ್ರಾರು...
ನಿತ್ಯ ದ್ವಂದ್ವದೆ ಮಗ್ನ
ಮಂಕುತಿಮ್ಮನ ಕಗ್ಗ ೦೮೩ ಮಾನಸವ ಚಿಂತೆವಿಡಿದಂದೊರ್ವನೆರಡಾಗಿ| ತಾನದಾರೊಳೊ ವಾದಿಸುವನಂತೆ ಬಾಯಿಂ || ದೇನನೋ ನುಡಿಯುತ್ತ ಕೈಸನ್ನೆಗೈಯುವನು| ಭಾನವೊಂದರೊಳೆರಡು – ಮಂಕುತಿಮ್ಮ || ೦೮೩ || ಭಾನ : ಹೊಳಪು, ತೋರಿಕೆ (ಪ್ರಕಟ ಅಥವಾ ಪ್ರಕಾಶ ರೂಪದಲ್ಲಿರುವುದು) ನಮ್ಮ ಒಳಗಿನ ನೈಜ ಅನಿಸಿಕೆ ಏನಿರುತ್ತದೆಯೊ ಅದೇ ಯಥಾವತ್ತಾಗಿ ಬಾಹ್ಯದಲ್ಲು ಪ್ರಕಟವಾಗುವುದೆಂದು...
ಆಡುತ್ತ ಆಡುತ್ತ ಭಾಷೆ ಹಾಡುತ್ತ ಹಾಡುತ್ತ ರಾಗ!
ಬಾರ್ಸಿಲೋನಾ ನಗರಕ್ಕೆ ಕೆಲಸ – ಬದುಕು ಅರಸಿ ಬಂದು ವರ್ಷವೂ ತುಂಬಿರಲಿಲ್ಲ . ಹೇಗೋ ಕಷ್ಟಪಟ್ಟು ಸ್ಪಾನಿಷ್ ಭಾಷೆಯನ್ನು ಸಂವಹನಕ್ಕೆ ಬೇಕಾದಷ್ಟು ಕಲಿತಿದ್ದೆ. ಅಲ್ಲಿನ ಕಥೆ, ಕವನ, ಕಾದಂಬರಿಗಳ ಓದಬೇಕೆನ್ನುವ ಬಯಕೆ, ಅಲ್ಲಿಗೂ ನಮ್ಮ ಕನ್ನಡ ನಾಡಿಗೂ ಒಂದು ಸಾಂಸ್ಕೃತಿಕ ಸೇತುವೆ ಬೆಸೆಯಬೇಕೆನ್ನುವ ಯಾವ ಬಯಕೆಯೂ ಇಲ್ಲದ ಹೊಸದಾಗಿ ಕಾಣುತಿದ್ದ ಬದುಕನ್ನು ಹಸಿಹಸಿಯಾಗಿ...
ಈ ‘ಬಂದ್’ನ, ಜನುಮ ಜನುಮದ ಅನು’ಬಂದ್’ನ
ಬೇಕು ಬೇಡ ಎಂಬ ವಾಗ್ವಾದಗಳ ನಡುವೆಯೇ ಮತ್ತೊಂದು ಬಂದ್ ಬಂದು ಹೋಯಿತು. ಕಳೆದ ವಾರವಿಡೀ ಈ ಬಂದ್ ಬಗ್ಗೆಯೇ ಚರ್ಚೆ. ಎಷ್ಟೆಂದರೆ ಬಂದ್ ಮುಗಿದರೂ ಬಂದ್ ಬಗ್ಗೆ ನಡೆಯುತ್ತಿರುವ ಚರ್ಚೆ ಬಂದಾಗುವ ಲಕ್ಷಣ ಕಾಣುತ್ತಿಲ್ಲ. ಹೀಗೆ ಮತ್ತೆ ಮತ್ತೆ ಬಂದು ಬಂದು ವಕ್ಕರಿಸುವ ಬಂದ್‌ಗಳನ್ನು ಗಮನಿಸಿದರೆ, ಮರಳಿ ಬರುವುದು ಯುಗಾದಿ ಮಾತ್ರವಲ್ಲ ಬಂದ್ ಕೂಡಾ ಎಂದೆನಿಸದೇ ಇರದು. ನಾಡಿನ...
ಅಮಿತ್, ಮೋದಿ ಬಂದಾಗೆಲ್ಲ ಕರ್ನಾಟಕ ಬಂದ್ ಸಾಧ್ಯವೇ? ಸಾಧುವೇ?
ನದಿಗೆ ಗಡಿರೇಖೆಗಳ ಹಂಗಿಲ್ಲ. ಆದರೆ ಗಡಿರೇಖೆಗಳನ್ನು ಎಳೆದು, ಬಾಂದುಕಲ್ಲುಗಳನ್ನು ನೆಟ್ಟು, ಇದು ತನ್ನದು ಅದು ನಿನ್ನದು ಎನ್ನುವ ಮನುಷ್ಯನಿಗೆ ನದಿಯ ಹಂಗಿಲ್ಲದೆ ಬದುಕುವುದು ಹ್ಯಾಂಗ ಸಾಧ್ಯ! ಹಾಗಾಗಿಯೇ ನದಿಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ, ಒಂದು ದೇಶದಿಂದ ಇನ್ನೊಂದಕ್ಕೆ ಹರಿಯುವ ಸ್ಥಳಗಳಲ್ಲಿ ಬಗೆಹರಿಯದ ವಿವಾದಗಳು ಮೊಳಕೆಯೊಡೆದಿವೆ. ಕೆಲವು ಸಮಸ್ಯೆಗಳಿಗೆ ದಶಕ...
ಶಾನ್’ನ ಕಿಲಿಮಂಜಾರೋ ಹಾದಿ!
“ಪರ್ಯಟನೆ ಎನ್ನುವುದು ಎಲ್ಲದನ್ನು ಕಲಿಸಿಕೊಡುತ್ತದೆ. ಹಾಗೆಯೇ ಗಳಿಸಿಕೊಡುತ್ತದೆ ಕೂಡ, ಅದು ಜ್ಞಾನ ಆಗಿರಬಹುದು, ಹೊಸ ದೃಷ್ಟಿಕೋನ ಆಗಿರಬಹುದು, ಅನುಭವ ಆಗಿರಬಹುದು, ಇನ್ನು ಕೆಲವೊಮ್ಮೆ ಉತ್ಕಟ ಭಾವ ಆಗಿರಬಹುದು” ಎನ್ನುತ್ತಾನೆ ಶಾನ್. ಶಾನ್ ತಾನು ಏರಿದ ಏಳು ಪರ್ವತಗಳ ಕುರಿತು ಈ-ಬುಕ್ ಬರೆಯುವುದರ ಬಗ್ಗೆ ಹೇಳಿದಾಗ, ಪರ್ವತಗಳ ಬಗ್ಗೆ ಅಷ್ಟೊಂದು ಬರೆಯಬಹುದಾ...
ಆಧಾರ್ ಜೋಡಣೆಯಲ್ಲಿ ಹೋದ ಮಾನ ಅದ್ಯಾವ ಆಫರ್ ಕೊಟ್ಟರೂಬಾರದು!!
2017ರ ಸೆಪ್ಟೆಂಬರ್ ತಿಂಗಳು, ಹತ್ತಿರದ ಸಂಬಂಧಿಯೊಬ್ಬರು ಏರ್‘ಟೆಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಅದರಿಂದ ಹಣವನ್ನು ವರ್ಗಾಯಿಸುವ ಪರಿ ಹೇಗೆ ಎಂದು ಕೇಳಿದರು. ಇದ್ದಕ್ಕಿದ್ದ ಹಾಗೆ ಯಾಕೆ ಏರ್‘ಟೆಲ್ ಪೇಮೆಂಟ್ ಬ್ಯಾಂಕ್ ಬಗ್ಗೆ ವಿಚಾರಿಸುತ್ತಿದ್ದೀರಿ ಎಂದು ನಾನು ಕೇಳಿದೆ. ಅಡುಗೆ ಅನಿಲ ಸಬ್ಸಿಡಿ ಹಣ ನೋಂದಣಿ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿಲ್ಲ, ಬದಲಾಗಿ...
ಕನ್ನಡದ ಕವಿತೆಯ ಹಾಡುವಲ್ಲೆಲ್ಲ ಇರುವ ‘ಅನಂತ’ರು….
ನಮ್ಮ ಕನ್ನಡ ನಾಡಿನದ್ದು ಶ್ರೀಮಂತ ಸಂಸ್ಕೃತಿ. ಕನ್ನಡದ ಶ್ರೀಮಂತ ಸಂಸ್ಕೃತಿಯ ಕೀರ್ತಿ ಕಲಶವೇ ‘ಸುಗಮ ಸಂಗೀತ’. ಇಪ್ಪತ್ತನೇ ಶತಮಾನದ ಕಾಣಿಕೆಯಾದ ಸುಗಮಸಂಗೀತ ತನ್ನ ಹೆಸರಿನಲ್ಲಿಯೇ ಹೇಳುವಂತೆ ಸುಗಮವಾಗಿ ಹರಿಯುವಂತಹ ಒಂದು ಗಾಯನ ನಿರೂಪಣಾ ಶೈಲಿ. ಇದು ಹುಟ್ಟುವುದೇ ಕವಿತೆಯ ದರ್ಶನದಿಂದ. ಕವಿತೆಯ ಅರ್ಥವನ್ನು ತನ್ನ ವಿನೂತನ ನಿರೂಪಣೆಯಿಂದ ವ್ಯಾಖ್ಯಾನಿಸಿ...