ಅಂಕಣ

ಎಂ.ಡಿ.ಪಿ. ಕಾಫಿಹೌಸ್ – ಮತ್ತೊಂದು ಹೊಸ ಔಟ್’ಲೆಟ್

ಅದು ೨೦೦೪ರ ಸಮಯ ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಕಾಫಿ ಶಾಪ್ ತೆಗೆಯಲು ಪ್ರಸಿದ್ಧ ಐಟಿ ಕಂಪೆನಿಯಿಂದ ಅವಕಾಶ ಸಿಗುತ್ತದೆ. ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ಬಳಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಎಂಡಿಪಿ ಕಾಫಿ ಹೌಸ್ ಒಂದು ಉತ್ತಮ ಉದಾಹರಣೆ. ಒಂದು ಹತ್ತಾಯಿತು, ಹತ್ತು ನೂರಾಯಿತು. ಭಾರತದ ಉದ್ದಗಲಕ್ಕೂ ಕಾರ್ಪೊರೇಟ್ ವಲಯದಲ್ಲಿ ಇಂದು ಎಂಡಿಪಿ ಶಾಖೆಗಳಿವೆ. ಇನ್ಫೋಸಿಸ್ ಮತ್ತು ಟಿ.ಸಿ.ಎಸ್.ನಂತಹ ದೈತ್ಯ ಐಟಿ ಕಂಪನಿಗಳು ಎಂ.ಡಿ.ಪಿ.ಯನ್ನು ಬೆಸ್ಟ್ ವೆಂಡರ್ ಪಾರ್ಟ್ನರ್ ಎಂದು ಗುರುತಿಸಿ ಸನ್ಮಾನಿಸಿವೆ. ಹೀಗೆ ಕಾರ್ಪೊರೇಟ್ ವಲಯದಲ್ಲಿ ಮತ್ತು ಅಲ್ಲಿನ ಐಟಿ ಪ್ರೊಫೆಷನಲ್’ಗಳ ಮನಸ್ಸಿನಲ್ಲಿ ಎಂ.ಡಿ.ಪಿ. ಜಾಗ ಪಡೆದಿದೆ. ನಿರಂತರವಾಗಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿರುವುದು, ನಗುಮುಖದಿಂದ ಗ್ರಾಹಕರಿಗೆ ಸೇವೆ ನೀಡುವುದರ ಜೊತೆಗೆ  ರುಚಿ ಮತ್ತು ಶುಚಿತ್ವ ಎಂ.ಡಿ.ಪಿ.ಯ ಟ್ರೇಡ್ ಮಾರ್ಕ್.

ಕಾರ್ಪೊರೇಟ್ ವಲಯದಲ್ಲಿ ಜೈತಯಾತ್ರೆ ಮುಂದುವರಿಸಿಕೊಂಡು ಬರುತ್ತಿದ್ದರೂ ಸಾರ್ವಜನಿಕರಿಗಾಗಿ ಎಂ.ಡಿ.ಪಿ. ಶಾಖೆಗಳು ಇರಲಿಲ್ಲ. ಸಾರ್ವಜನಿಕರಿಗೆ ಎಂ.ಡಿ.ಪಿ. ಶುಚಿ ರುಚಿಯ ಸೇವೆ ನೀಡಬೇಕೆನ್ನುವ ಮಹದಾಸೆಯಿಂದ ಮೂರು ವರ್ಷಗಳ ಕೆಳಗೆ ಜಯನಗರದ ಶಾಲಿನಿ ಗ್ರೌಂಡ್ ಮುಂಬಾಗ ಎಂ.ಡಿ.ಪಿ. ಕಾಫಿಹೌಸ್ ತಲೆಯೆತ್ತಿತ್ತು. ಜಯನಗರದ ಜನತೆಯ ಪ್ರೀತಿ ವಿಶ್ವಾಸದಿಂದ ಅದು ಇಂದು ಯಶಸ್ವಿ ಔಟ್ಲೆಟ್. ಅಲ್ಲಿ ಸಿಕ್ಕ ಜಯ ವೈಟ್’ಫೀಲ್ಡ್ ನಲ್ಲಿರುವ ಐಟಿಪಿಎಲ್ ಹಿಂಭಾಗದ ಗೇಟ್ ಬಳಿ ಇನ್ನೊಂದು ಔಟ್ಲೆಟ್ ತೆಗೆಯಲು ಪ್ರೇರಣೆ ನೀಡುತ್ತದೆ. ಕಳೆದ ಎರಡು ವರ್ಷದಿಂದ ಅದೂ ಕೂಡ ಜಯಭೇರಿ ಬಾರಿಸುತ್ತಿದೆ. ರಾಗಿಗುಡ್ಡದ ಬಳಿ ಶೀಘ್ರದಲ್ಲಿ ಇನ್ನೊಂದು ಮಳಿಗೆ ಬರಲಿದೆ. ಜೊತೆಗೆ ನಾಗರಬಾವಿಯ ಅನ್ನಪೂರ್ಣೇಶ್ವರಿ ಲೇಔಟ್ ನಲ್ಲಿ ಕೂಡ ಎಂಡಿಪಿ ಔಟ್ಲೆಟ್ ಬರಲಿದೆ. ಮೈಸೂರಿನ ’ಮಾಲ್ ಆಫ್ ಮೈಸೂರು’ನಲ್ಲಿ ಕಳೆದ ಎರಡು ವರ್ಷದಿಂದ ಮಳಿಗೆ ನಡೆಸಿಕೊಂಡು ಬರುತ್ತಿದ್ದಾರೆ.

ಇದೇ ಸೋಮವಾರ ಅಂದರೆ ಫೆಬ್ರುವರಿ ಐದರಂದು ಸಂಜೆ ಐದರಿಂದ ಆರುಗಂಟೆಯ ನಡುವೆ; ಕಮರ್ಷಿಯಲ್ ಸ್ಟ್ರೀಟ್’ನಿಂದ ಕೇವಲ ನೂರೈವತ್ತು ಅಡಿ ದೂರದಲ್ಲಿರುವ ‘ವೀರ ಪಿಲ್ಲೈ ಸ್ಟ್ರೀಟ್’ನಲ್ಲಿ ಎಂಡಿಪಿ ಕಾಫಿ ಹೌಸ್  ಜನರ ಸೇವೆಗೆ ತೆರೆದುಕೊಳ್ಳಲಿದೆ. ಈ ಪ್ರದೇಶದ ಸುತ್ತ ಮುತ್ತ ಶುಚಿ -ರುಚಿ ಜೊತೆಗೆ ಜೇಬಿಗೂ ಭಾರವಾಗದ ಗ್ರಾಹಕ ಸೇವೆ ನೀಡುವ ಉತ್ತಮ ಗುಣಮಟ್ಟದ ಹೋಟೆಲ್ ಕೊರತೆ ಎಂಡಿಪಿ ಕಾಫಿಹೌಸ್ ಅನ್ನು ಇಲ್ಲಿಗೆ ಕರೆ ತಂದಿದೆ .

ಬನ್ನಿ ಎಂಡಿಪಿ ಜನರ ಸೇವೆಗೆ ತೆರೆದುಕೊಳ್ಳುವ ಈ ಸಮಯದಲ್ಲಿ ನೀವು ನಮ್ಮ ಜೊತೆಗಿರಿ ..

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!