-“ಮೊದಲ ಮಹಾಯುದ್ಧ ಕೊನೆಗೊಂಡ ಆರ್ಮಿಸ್ಟಿಸ್ ದಿನಕ್ಕೆ ನವೆಂಬರ್ 11, 2018ರಂದು ಸರಿಯಾಗಿ ನೂರು ವರ್ಷಗಳು. ಅಂದರೆ ಭಾರತೀಯರ ಬಲಿದಾನಕ್ಕೂ ಶತಮಾನದ ಶೋಕ. ಮರೆತಿರುವ ಇತಿಹಾಸವನ್ನು ನೆನಪಿಸುವ ಅವಕಾಶ.” ಕೇಸರಿ ಬಣ್ಣ ಎಂದರೆ ತ್ಯಾಗ, ಬಲಿದಾನದ ಸಂಕೇತ. ಕೇಸರಿ ಗೊಂಡೆಹೂವು (ಮಾರಿಗೋಲ್ಡ್) ಸುಲಭ ಲಭ್ಯತೆ, ಸುಗಂಧ, ಔಷಧೀಯ ಗುಣಗಳಿಗೆ ಹೆಸರುವಾಸಿ. ಇನ್ನು...
ಅಂಕಣ
ಪ್ರಾರಂಭಿಸದಿದ್ದರೆ ಕೊನೆಯಾಗುವುದಾದರೂ ಹೇಗೆ?
ನಮ್ಮಲ್ಲಿ ಒಂದು ಗಾದೆ ಮಾತು ‘ನಡೆಯುವ ಕಾಲೇ ಎಡುವುದು’ ಎನ್ನುತ್ತದೆ. ಅಂದರೆ ಯಾರು ನಡೆಯುತ್ತಾರೆ ಅವರು ಎಡವುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಿದ್ದರೂ ಕೊನೆಗೆ ಗುರಿ ಮುಟ್ಟುವುದು ಮಾತ್ರ ನಡೆಯುವನೇ ಹೊರತು, ಕುಳಿತು ಬರಿ ಮಾತಲ್ಲಿ ಕಾಲ ಕಳೆಯುವನಲ್ಲ ಎನ್ನುವುದು ಅರ್ಥ. ನಡೆಯದೆ ಇರುವವನು ಬೀಳದೆ ಇರಬಹುದು, ಆದರೇನು ಗೆಲುವಿಗೂ ಅಥವಾ ಸೋಲಿಗೂ ಆತ...
ಕನ್ನಡದ ನಗು – ಕನ್ನಡದ ಅಳು
ಮಾತೃಭಾಷೆ ಅಥವಾ ತಾಯ್ನುಡಿ ಎಂದರೇನು ಎಂದು ನಿಘಂಟಿನಲ್ಲಿ ಹುಡುಕಿದರೆ ತಾಯಿ ಹೇಳಿಕೊಟ್ಟ ಭಾಷೆ ಅಥವಾ ಪ್ರಥಮವಾಗಿ ಕಲಿತ ಭಾಷೆ ಎಂಬ ಅರ್ಥ ಸಿಗುತ್ತದೆ. ಪರಭಾಷೆಯಲ್ಲಿ ಕೇಳಿದ, ಓದಿದ ವಿಷಯಗಳನ್ನು ಮಾತೃಭಾಷೆಯ ಮೂಲಕವೇ ಅರ್ಥೈಸಿಕೊಳ್ಳುತ್ತೇವೆ. 19,000 ಕ್ಕೂ ಹೆಚ್ಚು ಭಾಷೆಗಳಿರುವ ಭಾರತದ ನಗರಗಳ ಇಂದಿನ ಯುವ ಜನಾಂಗ ಇಂಗ್ಲೀಷನ್ನು ಮಾತೃಭಾಷೆಯಾಗಿ ಬಳಸುತ್ತಿರುವುದು...
ಮನೆ ಪರಿಸರದಲ್ಲಿ ಬಸಳೆ
8ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಯ ಪರಿಸರದಲ್ಲಿ ಬಸಳೆ ಚಪ್ಪರ ಇಲ್ಲದ ಮನೆಗಳು ಬಹಳ ಕಡಿಮೆ. ಸುಲಭದಲ್ಲಿ ಅಡುಗೆ ಮನೆಗೆ ಒದಗುವ ಸಪ್ಪು ತರಕಾರಿಗಳಲ್ಲಿ ಬಸಳೆಯದ್ದು ದೊಡ್ಡ ಹೆಸರು. ಹಿಂದೆಲ್ಲ ಮಣ ನ ಮಡಿಕೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಬಸಳೆ ಚಪ್ಪರದ ಅಡಿಯಲ್ಲಿಯೆ ಮುಸುರೆ ತೊಳೆಯುತ್ತಿದ್ದರು. ಈಗಲೂ ಕೆಲವು ಕಡೆ ಈ ದೃಶ್ಯ ಕಂಡುಬರಬಹುದು. ಮಡಿಕೆಯಡಿಗೆ ಅಂಟಿದ ಮಸಿಯನ್ನು...
ಘನ್ಯತ್ಯಾಜ್ಯ ಸಮಸ್ಯೆಗೆ ಪರಿಹಾರ – ಪರಿಸರ ಸಾಕ್ಷರತೆ – ಡಾ. ಟಿ.ವಿ. ರಾಮಚಂದ್ರ
ಡಾ. ಟಿ.ವಿ. ರಾಮಚಂದ್ರ ಅವರು ಬೆಂಗಳೂರಿನ ಪ್ರಸಿದ್ಧ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’ ಸಂಸ್ಥೆಯ ಪರಿಸರ ವಿಜ್ಞಾನಕೇಂದ್ರದಲ್ಲಿ ವಿಜ್ಞಾನಿಯಾಗಿದ್ದು ‘ಎನರ್ಜಿ ಆಂಡ್ ವೆಟ್‌ಲ್ಯಾಂಡ್ ರಿಸರ್ಚ್ ಗ್ರೂಪ್’ನ ಸಮನ್ವಯಾಧಿಕಾರಿಯೂ ಆಗಿದ್ದಾರೆ. ಪರಿಸರ ಮತ್ತು ತ್ಯಾಜ್ಯಸಮಸ್ಯೆಗಳ ಕುರಿತಾದ ಇವರ ಕಾಳಜಿ, ಆಳವಾದ ಅಧ್ಯಯನ ಬೆಂಗಳೂರಿನಂಥ ಬೃಹನ್ನಗರಗಳ...
ಬಿಟ್’ಕಾಯಿನ್ ಎಂಬ ವರ್ಚುವಲ್ ಕರೆನ್ಸಿ
ಸಮಯವು ಕಳೆದಂತೆ ನಮ್ಮ ಜಗತ್ತು ವಾಸ್ತವಿಕತೆಯಿಂದ ದೂರವಾಗುತ್ತ ವರ್ಚುವಲ್ ಲೋಕದತ್ತ ಮುಖಮಾಡುತ್ತಿದೆ. ಮೊಬೈಲ್ ಮತ್ತು ಇಂಟರ್ನೆಟ್’ನ ಕ್ರಾಂತಿ ನಮ್ಮ ವ್ಯಾಪ್ತಿಯನ್ನು ಹಿಡಿಮುಷ್ಟಿಗೆ ಸೀಮಿತವಾಗಿಸಿದೆ. ಶಾಪಿಂಗ್, ಶಿಕ್ಷಣ, ಬ್ಯಾಂಕಿಂಗ್ ಮತ್ತು ಸಾಮಾಜಿಕ ಸಂಬಂಧಗಳೆಲ್ಲವೂ ವರ್ಚುವಲ್ ಆಗುತ್ತಿವೆ. ಇವುಗಳ ಮುಂದುವರೆದ ಭಾಗವೇ ವರ್ಚುವಲ್ ಕರೆನ್ಸಿ. ಕಳೆದ ಕೆಲವರ್ಷಗಳಲ್ಲಿ...
ಕರಾವಳಿಯ ಸಾಹಿತ್ಯ ಕುಸುಮಗಳು
ಕನ್ನಡ ಸಾಹಿತ್ಯಕ್ಕೆ ಕರಾವಳಿ ಕರ್ನಾಟಕದ ಕೊಡುಗೆ ಅಪಾರವಾದದ್ದು. ಸಾಹಿತ್ಯದ ಎಲ್ಲಾ ಪ್ರಕಾರಗಳಿಗೆ ಅನನ್ಯ ಕೊಡುಗೆ ನೀಡಿದ ಹಲವರಿಗೆ ಜನ್ಮದಾತೆ ಕರಾವಳಿ. ಅಂತಹ ಕೆಲವರ ಪರಿಚಯದ ಪ್ರಯತ್ನ ಇಲ್ಲಿದೆ. ನಡೆದಾಡುವ ಜ್ಞಾನಕೋಶ ಕಾರಂತಜ್ಜ ಎಂದೇ ಚಿರಪರಿಚಿತರಾಗಿದ್ದ ಕೋಟ ಶಿವರಾಮ ಕಾರಂತರು ೧೯೦೨, ಅಕ್ಟೋಬರ್ ೧೦ರಂದು ಉಡುಪಿ ಜಿಲ್ಲೆಯ ಕೋಟ ಊರಿನಲ್ಲಿ ಜನಿಸಿದರು. ‘ಕಡಲ ತೀರದ...
ಚೊಕ್ಕಾಡಿಯ ಕಾವ್ಯವೃಕ್ಷ
ಚೊಕ್ಕಾಡಿ ಸುಳ್ಯದ ಒಂದು ಪುಟ್ಟ ಹಳ್ಳಿ. ಇಲ್ಲಿ ವರ್ಷದ ಆರು ತಿಂಗಳು ಬಸಿರಿನ ಹೆಂಗಸಿನ ಏದುಸಿರಿನಂತೆ ನದಿ-ತೊರೆಗಳು ಉಕ್ಕಿ ಹರಿದರೆ ಮಿಕ್ಕ ಆರು ತಿಂಗಳು ಅವು, ಪೋಷಣೆಯಿಲ್ಲದೆ ಸೊರಗಿದ ತೆಳು ಜಡೆಯಂತೆ ಕಾಣುತ್ತವೆ. ಕುಮಾರನ ಹೆಸರಿದ್ದರೂ ಇಲ್ಲಿನ ಬೆಟ್ಟ, ಹತ್ತಿ ಬರುವ ಚಾರಣಿಗರಿಗೆ ನೀರಿಳಿಸದಿದ್ದರೆ ಕೇಳಿ! ಇನ್ನು ಮಳೆಗಾಲದಲ್ಲಿ ಮುಗಿಲ ಮುಸುಕಿನ ಮರೆಯಲ್ಲಿ ಆಕಾಶ...
ಪಟೇಲ್ ಎಂಬ ಉಕ್ಕಿನ ಪುರುಷ, ಸ್ವತಂತ್ರ ಭಾರತದ ಐಕ್ಯತೆಯ ಪ್ರತೀಕ
“ಪ್ರಾಚೀನ ಭಾರತ ಅನೇಕ ವರ್ಷಗಳ ಕಾಲ ಬ್ರಿಟಿಷರ ಗುಲಾಮಗಿರಿಯಲ್ಲಿತ್ತು ಎಂಬುದು ಅತ್ಯಂತ ತಲೆತಗ್ಗಿಸುವ ವಿಚಾರ. ಆದರೆ ಈಗ ಸ್ವಾತಂತ್ರ್ಯ ಲಭಿಸಿದೆ ಎಲ್ಲಾ ಭಾರತೀಯರ ಕರ್ತವ್ಯವೆಂದರೆ ಸ್ವತಂತ್ರ ಭಾರತ ಮತ್ತೊಮ್ಮೆ ಗುಲಾಮವಾಗದಂತೆ ನೋಡಿಕೊಳ್ಳಬೇಕು. ಏನಿದ್ದರೂ ಅದು ಮುಂದೆ ಸಾಗಬೇಕು, ಹಿನ್ನಡೆಯಬಾರದು ಆಗಲೇ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಒದಗುತ್ತದೆ.”...
ಕೈತೋಟದೊಳಗೆ ಅಲಸಂಡೆ
ಅಲಸಂಡೆ ನಮ್ಮ ಅಡುಗೆ ಮನೆಗೆ ಸುಲಭದಲ್ಲಿ ಒದಗುವ ತರಕಾರಿ. ಬಹುಶಃ ಎಲ್ಲ ವಯೋಮಾನದವರು ಇಷ್ಟಪಡುವ ತರಕಾರಿ. ಇದು ಎಲ್ಲ ಋತುಗಳಲ್ಲೂ ಬೆಳೆಯಬಲ್ಲುದು. ಅಲಸಂಡೆಯ ತಳಿ ವೈವಿಧ್ಯ ಅನೇಕ. ಬೆರಳಿನಷ್ಟು ಉದ್ದದ ಅಲಸಂಡೆಯಿಂದ ಹಿಡಿದು ಮೀಟರ್ ಉದ್ದದ ಅಲಸಂಡೆಯವರೆಗೆ ಅನೇಕ ಬಣ್ಣದ ಮತ್ತು ಗಾತ್ರದ ಅಲಸಂಡೆಗಳಿವೆ. ಬಳ್ಳಿಯಾಗಿ ಹಬ್ಬುವ ಅಲಸಂಡೆಯ ಜೊತೆಗೆ ಎರಡಡಿ ಮಾತ್ರ ಬೆಳೆಯ ಬಲ್ಲ...