ಕವಿತೆ

ಅರುಣರಾಗಿನಿ

ಅಂಬರದಲ್ಲಿ ಮೂಡಿದ ಜೊನ್ನ
ನಾಂದಿಯಾಗಿದೆ ಅನುದಿನದ ಪರ್ವಕೆ;
ಧವಲ ಬಾನಲಿ ಲೋಹಿತ ವಿಹಂಗನಿಣುಕಲು
ಮೊಳಗಿದೆ ವಿಹಂಗಮ ಗೋಷ್ಠಿ…

ವಸಂತದ ನವಸುಮ ಮಧುವು
ನನ್ನೊಳ ಹೃದಯವ ಸವಿಯಾಗಿಸಿದೆ;
ಅಭ್ರಗಳಾಗರ ಸುಂದರ ಆಗಸ
ಮನಕೆ ಮಾಗಿಯ ತಂಪನೆರೆದಿದೆ..

ಭಾನು ಮೂಡಿ ಭಾವ ತುಂಬಿರಲು
ಸುರಿದಿದೆ ಜೇನ ತುಂತುರು ಹನಿ;
ಮಾಮರದ ನನೆಯಲಿ ತುಸು ಅಡಗಿ
ಗಾನಧುನಿ ಹರಿಸಿಹಳು ಅರುಣರಾಗಿನಿ….

ವೇಣು, ಸಾರಂಗಿ, ತಂಬೂರಗಳು
ಸಾಟಿಯಲ್ಲ ಇವಳ ಗೊಟ್ಟಿಗೆ;
ಕವಿಕವಿಗಳ ಸ್ಫೂರ್ತಿ, ನಾಡಿಗೆ ಕೀರ್ತಿ
ಮಾಗಿಸಖಿ ಕಲೋಪಾಸಿನಿ..

ಮಂಜುಕವಿದ ಮುಂಜಾವಿನಲಿ
ಹರಿಸಲಿವಳು ಗಾನಸುಧೆಯನು,
ಕುಣಿಯುವರು ಘನದಿವಿಜರು
ಮರೆಯುವರು ತನುಮನವನು…

ನನ್ನ ಬಾಳ ಸಖಿ ,ಈ ಅರುಣ ರಾಗಿನಿ
ಜೇನಕಂಠದ ಅನೂಕ ಸಂಗಿನಿ;
ಇವಳು ಹಾಡಲು ಎದೆಯಂಬುಧಿಯಲಿ
ಪುಟ್ಟುವುದು ಅತಿ ಮಧುರ ಮಧು ಪನಿ…

ಇವಳ ಗಾಯನಕೆ ಎಲ್ಲೆ ಇಲ್ಲ
ನಿಶೆಯಲೂ ಜೊನ್ನರಳಿಸುವಳು ಚಣದಿ;
ದಿನವೆಲ್ಲಾ ಹಾಡಿ ಮೂಡಲು ಬೈಗು
ಮರಳುವಳು ಮತ್ತೆ ಹಾಡ್ವ ಛಲದಿ……

Kavana V Vasishta

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!