ಎಲ್ಲೆಡೆ ಮಾವು ಹಲಸಿನ ತೋರಣ ಪ್ರತಿ ಮನೆಯ ಮುಂದೆಯೂ ರಂಗೋಲಿಯ ಚಿತ್ರಣ; ಸರ್ವರ ಕೈಯಲೂ ಮಂಗಳ ಕಂಕಣ ವಿಜೃಂಭಿಸುತಲಿವೆಯೋ, ಓ ಇಂದು ರಾಜ್ಯೋತ್ಸವ! ಕನ್ನಡ ತಾಯಿಗೆಲ್ಲೆಡೆ ಮೊಳಗಿದೆ ಜಯಘೋಷ ಕನ್ನಡಿಗರ ಹೃದಯದಲರಳಿದೆ ಸಂಹರ್ಷ; ತರಂಗದಿ ತೇಲುತಿದೆ ಇಂಪು ವಿಹಂಗಗಾನ ಸರ್ವಾಂಗಗಳೂ ಮಾಡುತಿವೆ ಕನ್ನಡಾಂಬೆಯ ಧ್ಯಾನ ಮಾಮರದ ಚಿಗುರು ತಾಯ್ಗೆ ಹಸಿರುಡುಗೆಯಾಗಿದೆ ಕನ್ನಡ ಕುಸುಮದ...
ಕವಿತೆ
ಐಟಿ ವಚನ
೧. ಓದಿದ್ದು ಡಯೊಡ್ ,ಟ್ರಾನ್ಸಿಸ್ಟರ್ ,ಸರ್ಕ್ಯುಟು ಕೆಲಸ ಮಾಡೋದು ಜಾವ, ಪಿಎಚ್ ಪಿ, ಡಾಟ್ ನೆಟು ಯಾಕಾದ್ರು ಇಂಜಿನಿಯರಿಂಗ್ ಮಾಡಿದ್ನೋ ಅನ್ನೋ ಡೌಟು ಐಟಿ ಸಾಕು, ಗವರ್ಮೆಂಟ್ ಕೆಲಸ ಬೇಕು ಅನ್ನೋ ಥಾಟು ಅವನೇ ನಮ್ಮ ಗ್ರೇಟು – ಐಟಿತಜ್ಞ ೨.ಕಸ್ಟಮರ್ ಗೆ ಕನ್ಫ್ಯೂಸ್ ಮಾಡಿಸಿ ಡೆವೆಲಪರ್ ಗೆ ದಿಗಿಲು ಬಡಿಸಿ ಮ್ಯಾನೇಜರ್ ಗೆ ಬಕೆಟ್ ಹಿಡಿದು ಆನ್ ಸೈಟ್ ಹೋಗಿ ಹಾರಡೊನ...
ಕೊಳಲ ನುಡಿಸುವ ಕೊರಳನರಸುತ…!!!
ಮುರಳಿಯ ನಾದ ಹೊಮ್ಮಿರೆ, ಗೋವುಗಳೆಲ್ಲ ಭಾವುಕವಾಗಿರೆ, ಹೊರಳಿತ್ತು ಗೋಪಿಕೆಯ ಮನ; ಮುರಳಿಯ ನುಡಿಸುವ ಕೊರಳನರಸುತ!!! ಸುಳಿದಾಡಿದಳಾಕೆ, ಬಯಕೆಗಳ ಬಳಿಯಲ್ಲಿ… ತೊಳಲಾಡಿದಳು ಮತ್ತೆ, ಸೆಳೆತಗಳ ಸುಳಿಯಲ್ಲಿ. ಏನೋ ಕಳೆದಂತೆ ಕಳವಳದಿ ಕಾತರಿಸಿ, ಸುರಿವ ಮಳೆಗರುಹಿದಳು… ಹರಿವ ಹೊಳೆಯ ಕಳುಹಿದಳು… ಮುರಳೀಧರನನ್ನು ಬಳಿಗೆ ಕರೆತರಲು. ವಿರಹಬೇನೆಗೆ ಬಳಲಿ...
ಬಲ್ಮೆ
ನಿನ್ನ ಉದರದ ವಿಶದ ಸರಸಿಯಲಿ ಕುಮುದ ಕುಡ್ಮಲವಾಗಿ ನಲಿದಿರುವೆ; ಅಲರಾಗಿ ಸುಗಂಧ ಬೀರಿ ಅಲಂಪು ನೀಡುವ ಕನಸ ಹೊತ್ತಿರುವೆ… ನಿನ್ನ ಬೆಚ್ಚನೆ ಪವಿತ್ರ ಗರ್ಭದೊಳು ಮುಗ್ಧ ಸ್ವಪ್ನಗಳ ಕಾಣೋ ಎಳೆಗೂಸು ನಾ; ಮುಂದೆ ಹೆಣ್ಣಾಗಿ, ಬಾಳಿನ ಕಣ್ಣಾಗಿ ಬಾಳಲಿರುವುದೇ ಧನ್ಯ ಜೀವನ… ಅಮಲ ಚಿತ್ತದ ರುಚಿರ ಪ್ರೇಂಖದಲಿ ಅಂಚಿತ ಸುಮಗಳ ಅರಳಿಸುವಾಸೆ; ವಿಕೃತ ಜಗದ ತೆರೆಯನು ಸರಿಸಿ...
ಸುಬ್ಬಂಣನ ತ್ರಿಪದಿಗಳು
೧. ದಕ್ಕದಿರೆ ಮಂತ್ರಿಪದ | ಪಕ್ಷವನು ತೊರೆಯುವರು ಉಕ್ಕಿ ಹರಿಯುವ ದೇಶಭಕ್ತಿಗಿದು ಬಲುದೊಡ್ಡ ಸಾಕ್ಷ್ಯ ನೋಡೆಂದ ಸುಬ್ಬಂಣ || ೨.ಬೆಕ್ಕಿಂಗೆ ಹಾಲೆರೆಯೆ |ನೆಕ್ಕದಿರ್ಪುದೆ ಇರುವೆ ಸಕ್ಕರೆಯ ಕಂಡು ತಾ ಮೆಲದಿಹದೆ ಕೊಡೆ ಲಂಚ ಮುಕ್ಕದವರಾರು ಸುಬ್ಬಂಣ || ೩.ಕಂಬವೇ ಕೈಯೊಡ್ಡಿ | ತಿಂಬ ಕಾಲವು ಬಂತು ತುಂಬಿ ಭ್ರಷ್ಟಾಚಾರ ದೇಶದಲಿ ಸುಜನರಿಗೆ ಕಂಬನಿಯದಾಯ್ತು ಸುಬ್ಬಂಣ || ೪...
ಪ್ರಕೃತಿ ಸ್ಪಂದನ
ಹೇರಿ ಹನಿಯ ಮಣಿಯ ಮಾಲೆ ಸೀರೆ ಹಸುರ ಸೆರಗು ಭಾರ ಸೂರೆಗೈವ ತೆನೆಯ ತೊನೆತ ನದಿಯ ಹಾಡಿಗೆ ನೇರ ನಕ್ಕ ಸೂರ್ಯಕಾಂತಿ ಬೀರಿ ನೋಟ ಸೃಷ್ಟಿಯರಳೆ ಸಾರೆ ಶುಭವ ಬಾನಿನುದಯವಾಯ್ತು ಮೆಲ್ಲಗೆ || ಖಾರವಾಗಿ ನೋಟವೆಸಗೆ ನೀರು ಹೆದರಿ ಮೇಲಕೇರಿ ಸೇರಿ ಮುಗಿಲ ನಾಡಿನಲ್ಲಿ ಸಂಘ ಕಟ್ಟಿರೆ ತಾರೆ ವರ್ಷಋತುವಿನಲ್ಲಿ ಹೇರಿ ಬಂದ ಮುತ್ತ ಮಾಲೆ ಧಾರೆಯುದುರೆ ಸುಪ್ರಭಾತ ಮರಳಿ ಧರಣಿಗೆ || ಕದ್ದು...
ಕಂದಪದ್ಯ 4
ಪ್ರೀತಿಯ-ಜ್ವಾಲೆ ಅತಿಯಾಗಿದೆ ಅತಿಯಾಗಿದೆ ಈ ಹೃದಯದಲಿ ಬಡಿತ ಮಿತಿಮೀರಿದೆ ಮಿತಿಮೀರಿದೆ ಈ ಮನದೊಳಗಿನ ತುಡಿತ ಮರೆಯಲಾರೆ ನಾ ನಿನ್ನ ರೂಪ ತಾಳಲಾರೆ ನಾ ಈ ವಿಲಾಪ ಕೊಡುವೆಯಾ ನನಗೆ ಪ್ರೀತಿಯ ವರವ ಎಂದೆಂದೂ ಬಿಡೆನು ನಾ ನಿನ್ನಾ ಕರವ ಮೊದಲಾ ನೋಟಕೆ ಏನೋ ರೋಮಾಂಚನ ಮಳೆ ಹನಿ ರೀತಿಯ ಪ್ರೀತಿ ಸಿಂಚನ ಬಡಿದೆಬ್ಬಿಸಿಹೆ ನನ್ನಾ ಮಲಗಿದ್ದ ಹೃದಯವ ಮೌನವಾಗಿಸಿಹೆ ನನ್ನೀ ಚಂಚಲ ಮನವ...
ಚುಕ್ಕಿಗಳ ರಾಶಿಯಲ್ಲಿ….
ಶಬ್ದ ಪಂಜರದಲ್ಲಿ ಭಾವ ಹಕ್ಕಿಯ ಹಿಡಿದು ಕಾವ್ಯ ಕನಸನು ನಾನು ಹೆಣೆಯುತ್ತಿದ್ದೆ ಕಲ್ಪನೆಯ ಮಧುರ ನೆನಪುಗಳನಿರಿಸಿ ಸೃಜನ ಸುಖದಲಿ ನಾ ನಿನ್ನ ಮರೆತಿದ್ದೆ ಯಾವುದೋ ಘಳಿಗೆಯಲಿ ಹಕ್ಕಿ ಗೂಡುಬಿಟ್ಟು ಹಾರಿತು ನನ್ನ ಅರಿವಿಗೆ ಬಾರದೆ ಅಸ್ಥಿಪಂಜರದಂತೆ ಗೂಡು ಉಳಿದಿತ್ತು ಪದಗಳೇ ಕಳಚಿದವು ಹಾಡಿನಿಂದ ಹಕ್ಕಿ ಹಾರಿಹೋದ ಚಿಂತೆ ನನ್ನ ಮುತ್ತುತ್ತಿದ್ದಂತೆ ಮೇಲೆ ಮುಗಿಲಲ್ಲಿ...
ಕಾಣಿಸಿಕೊಳದವನ ಜಾಡಿನಲಿ..
ಮೂರ್ತ ದೃಶ್ಯದಲೊ, ಅಮೂರ್ತದದೃಶ್ಯದಲೊ ಸಂಕುಚಿತ ಗುಳಿಯಲೊ, ವಿಸ್ತಾರ ಬಯಲಲ್ಲೊ ಮಾರುವೇಷದಲೊ, ನಿಜರೂಪಿನ ಸಹಜದಲೊ ಕಾಣಿಸಿಕೊಳಬಾರದೆ ಬಂದು, ಕಣ್ಣ ಮುಂದೆಲ್ಲೊ || ನಿನ್ನ ಹೆಸರಿನದೆ ತತ್ತ್ವ , ನಿನದೆ ಸಿದ್ಧಾಂತ ನಿತ್ಯ ನಿನ್ನ ಬೋಧನೆ ಲಕ್ಷ್ಯ, ನಿನದೆ ಮಂತ್ರದ ಘೋಷ ನಿನ್ನದೆ ಪದಗಳಿಗೆ, ವ್ಯಾಖ್ಯಾನ ವಿವರಣೆ ಸಹಿತ ನಿನಗೆ ಮಾತ್ರವದೇಕೆ, ಅಡಗಿ ಕೂರೊ ಸ್ವಾರ್ಥ ? ||...
ಹನಿಗವನಗಳು
ಎಲ್ಲ ಕಾಲಕ್ಕೂ ನೋಡುತ್ತಾರೆ ಪಂಚಾಂಗದಲ್ಲಿ ರಾಹು ಕಾಲ ,ಗುಳಿಕ ಕಾಲ ಈಗೀಗ ಎಲ್ಲರೂ ತಪ್ಪದೆ ನೋಡಲೇಬೇಕು (ತಮ್ಮ ) ಅಂಗಾಂಗಗಳಿಗೆ “ಗುಳಿಗೆ ” ಕಾಲ ! ಲಂಚಾಯಣ ಅವನು ನೌಕರಿ ಸೇರಿದ ಹೊಸತು ತಲೆತುಂಬ ಕೂದಲು ಬಾಚಿಕೊಂಡ ; ಕಾಲಕ್ರಮೇಣ ಕೈ ತುಂಬಾ ಬಾಚಿಕೊಂಡ ! ಇಲ್ಲಿ ತನಕ ನನ್ನ ಹಿಡಿತಕ್ಕೂ ಸಿಗದೆ ಹಿಂದುರುಗಿಯೂ ನೋಡದೆ ಏರುತ್ತಲೆ ಹೋಯಿತು ಇಲ್ಲಿ...