ಪ್ರೀತಿಯ-ಜ್ವಾಲೆ
ಅತಿಯಾಗಿದೆ ಅತಿಯಾಗಿದೆ ಈ ಹೃದಯದಲಿ ಬಡಿತ
ಮಿತಿಮೀರಿದೆ ಮಿತಿಮೀರಿದೆ ಈ ಮನದೊಳಗಿನ ತುಡಿತ
ಮರೆಯಲಾರೆ ನಾ ನಿನ್ನ ರೂಪ
ತಾಳಲಾರೆ ನಾ ಈ ವಿಲಾಪ
ಕೊಡುವೆಯಾ ನನಗೆ ಪ್ರೀತಿಯ ವರವ
ಎಂದೆಂದೂ ಬಿಡೆನು ನಾ ನಿನ್ನಾ ಕರವ
ಮೊದಲಾ ನೋಟಕೆ ಏನೋ ರೋಮಾಂಚನ
ಮಳೆ ಹನಿ ರೀತಿಯ ಪ್ರೀತಿ ಸಿಂಚನ
ಬಡಿದೆಬ್ಬಿಸಿಹೆ ನನ್ನಾ ಮಲಗಿದ್ದ ಹೃದಯವ
ಮೌನವಾಗಿಸಿಹೆ ನನ್ನೀ ಚಂಚಲ ಮನವ
ಇರುವೆಯಾ ಕೊನೆಯವರೆಗೂ ನನ್ನಾ ಜೊತೆ
ಸನಿಹವಾಗುವೆಯಾ ಹೇಳು ಪ್ರೀತಿ ದೇವತೆ
ಬೇಗನೆ ನೀಡು ನೀ ನನಗೆ ಉತ್ತರವ
ಬರೆಯುವೆ ನಿನಗೆ ರಕ್ತದಲ್ಲಿ ಪತ್ರವ
ನನ್ನ ಪಾಲಿಗೆ ನೀನು ಪ್ರೀತಿಯಾ ಜ್ವಾಲೆ
ನೀ ದೀಪವೋ ಸುಡುವ ಬೆಂಕಿಯೋ ಹೇಳು ಬಾಲೆ
ಏಳು ಜನ್ಮಕ್ಕೂ ತುಳಿಯುವೆಯಾ ನನ್ನಾ ಜೊತೆಗೆ ಸಪ್ತಪದಿ
ತೋರಿಸುವೆಯಾ ನನ್ನ ಜೀವನಕ್ಕೆ ಹೊಸ ಬೆಳಕಿನ ಹಾದಿ
ದಯಮಾಡಿ ಸ್ವೀಕರಿಸು ನನ್ನೀ ಕೋರಿಕೆ
ಗಾಯವಾದ ನನ್ನಾ ಹೃದಯಕೆ ನೀಡು ಚೇತರಿಕೆ.