ಕವಿತೆ

ಕವಿತೆ

ಕಂದಪದ್ಯ – 3

ವ್ಯಾಘ್ರ-ಮನಸ್ಸು   ಕಾನನದ ಕ್ರೂರ ವ್ಯಾಘ್ರಕ್ಕೂ ಇರುವುದೊಂದು ಮುಗ್ಧತೆ ಬುದ್ಧಿ ಜೀವಿಯಾದ ಮಾನವನಿಗೇಕಿಲ್ಲ ಇಂದು ಮಾನವೀಯತೆ? ಹೊಟ್ಟೆ ತುಂಬಿದ ಮೇಲೆ ಹುಲಿಗೆ ಬೇಕಿಲ್ಲ ಬೇಟೆ ಖಜಾನೆ ತುಂಬಿ ತುಳುಕಿದರೂ ನಿಲ್ಲುವುದಿಲ್ಲ ಮಾನವನ ಹಣದ ಬೇಟೆ ವ್ಯಾಘ್ರನ ಮನವ ಸೋಲಿಸಿತ್ತು ಪುಣ್ಯಕೋಟಿ ಮಾನವನ ಮನಕ್ಕೆ ಸಾಲುವುದಿಲ್ಲ ಸಾವಿರ ಕೋಟಿ ಹುಲಿಗಿಲ್ಲ ನಾಳಿನ ಊಟದ ಚಿಂತೆ ಹಣವಿದ್ದ...

ಕವಿತೆ

ಇಲ್ಲಿ ಜಗದಾದಿ ಅಂತ್ಯವ ಕಂಡವರಾರು

ಇಲ್ಲಿ ಜಗದಾದಿ ಅಂತ್ಯವ ಕಂಡವರಾರು ನಿಲ್ಲದ ಕಾಲದ ಚಲನೆಯ ಬಲ್ಲವರಾರು ಬಂದುಹೋಗುವ ನಾಲ್ಕು ದಿನಗಳ ತಿಳಿದವರಾರು ಸಂಸ್ಕಾರದಿ ಗಟ್ಟಿ ಅಡಿಪಾಯ ಬರೆದು ಧರ್ಮಸೂತ್ರದಿ ನೀತಿಯ ಮಹಲು ಕೊರೆದು ಶಾಂತಿನೆಮ್ಮೆದಿಯ ಸರಳ ಬದುಕ ಬರೆದಿಟ್ಟರು ಸಂಸಾರ ಸಾಗರದಿ, ಅಪರಿಚಿತ ಹಾದಿಯಲಿ ದೀಪನೆಟ್ಟು ತನ್ನನ್ನೇ ಕಳೆದುಕೊಳ್ಳದಂತೆ ಮುನ್ನೆಡೆಸಿ ಶ್ರೇಷ್ಠ ಬದುಕಿನ ಸ್ಪಷ್ಟ ಚಿತ್ರಣವ ಆದರ್ಶಿಸಿ...

ಕವಿತೆ

ಏನೇ ಆಗಲಿ ನೀ ನಮ್ಮವನು

ಕಾವಿಯ ಕಾನದಿ ಅಡಗಿಸಿಟ್ಟೆವು, ಮಂತ್ರದ ಬೇಲಿಯ ಹಾಕಿಬಿಟ್ಟೆವು, ಗುಡಿಯ ಗೋಡೆಯಲಿ ಕೂಡಿಹಾಕಿದೆವು, ಏನೇ  ಆಗಲಿ  ನೀ ನಮ್ಮವನು…   ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು, ಭಾರಿ ಕೋರಿಕೆಗೆ ಮಹಲಿರಬೇಕು, ಬಳಿಯಲಿ ಕಾಣಲು ಅನುಮತಿಬೇಕು, ಜೇಬಿನ ತುಂಬಾ ನೋಟಿರಬೇಕು   ಆದರೂ ಬರುವೆವು … ಏಕೆ.. ಏನೇ  ಆಗಲಿ  ನೀ ನಮ್ಮವನು…   ನೀನಾರೆಂದೇ ತಿಳಿದಿಲ್ಲ, ನಿನ್ನ...

ಕವಿತೆ

‘ಹನಿ ಬರಹ’ – ೫ ಹನಿಗವನಗಳ ಸಂಗ್ರಹ

ಕಳ್ಳಿ ಇವಳು ಕದಿಯಬಂದಿಹಳಿವಳು ನನ್ನ ಕನಸುಗಳ. ಅವಳಿಗೇನು ಗೊತ್ತು? ನನ್ನ ಕನಸುಗಳಲೆಲ್ಲ ಅವಳೇ ಇರುವವಳೆಂದು! ನಾ ನಗುತ್ತಿದ್ದೆ; ಅವಳನೇ ಅವಳು ಕದಿಯಬಂದಿಹ ಪರಿಯ ಕಂಡು   ಅರಿಯದ ನಗು ಗೊತ್ತಿಲ್ಲ ಏಕೋ ಅರಿವಿಲ್ಲದಂತೆಯೇ ನಗುವೊಂದು ಮೂಡುವುದು ಅವಳ ಕಂಡಾಗ ಎದೆಬಡಿತ ಏರುವುದು; ಅವಳು ಕೂಡ ನನ್ನ ಕಂಡು, ನಕ್ಕು ಗೆಳತಿಯ ಹಿಂದೆ ಬಚ್ಚಿಕೊಂಡಾಗ.   ಕಾಡಿಗೆ ಅವಳ...

ಕವಿತೆ

ಕೆಲವು ಸಾಲುಗಳು

1. ಆಳಬೇಡ ತಂಗಿ ಅಳಬೇಡ ಆದುದರ ನೆನೆದು ಮರುಗಬೇಡ ಎಲ್ಲರಲ್ಲೂ ಇರುತ್ತದೆ ದುಃಖದ ಕಾರ್ಮೋಡ ಭೂ-ಆಗಸದ ನಡುವೆ ಇರುವಂತೆ ಮೋಡಮೀನಿಗೆ ನೀರು, ನೀರಿಗೆ ಮೀನು ಇದ್ದಂತೆ,ನಿನಗೆ ನಾನು ನನಗೆ ನೀನು ಬದುಕಿ ತೋರಿಸೋಣ ಕಮ್ಮಿಯಿಲ್ಲನಾವು ಯಾರಿಗೇನು.   2.  ಹೇಗೆ ಸಾಬೀತು ಪಡಿಸಲಿ ನನ್ನ ಪ್ರೀತಿಯನ್ನ ನಿನ್ನ ಮಾತುಗಳೇ ನನಗೆ ನೀರು-ಅನ್ನ ನೀನು ಕೊಡಬಹುದು ಸಾರ್ಥಕತೆಯನ್ನ...

ಕವಿತೆ

ಕಂದಪದ್ಯ – 2

ಕನ್ನಡ ನಾಡು ಕನ್ನಡ ನಾಡು ಕನ್ನಡ ನಾಡು ಕನ್ನಡ ನಾಡು ಕರುನಾಡು ನಮ್ಮೀ ಹೆಮ್ಮೆಯ ಬೀಡು ಕರು ನಾಡು ಸಂಸ್ಕೃತಿಯ ಗೂಡು ಸರ್ವ ಧರ್ಮಗಳ ತವರೂರು ಇಲ್ಲಿ ಹಬ್ಬಿದೆ ಬಾಂಧವ್ಯದ ಬೇರು ಈ ಸುಂದರ ನಾಡಿಗೆ ಬೇಕಿದೆ ಪೋಷಣೆ ಈ ಸುಂದರ ಭಾಷೆಗೆ ಬೇಕಿದೆ ರಕ್ಷಣೆ ಕಾವೇರಿ ನೀರಿಗಾಗಿ ಎದ್ದಿದೆ ಹಾಹಾಕಾರ ಕನ್ನಡ ಭಾಷೆಯ ಮೇಲೇಕಿಲ್ಲ ಕಿಂಚಿತ್ ಮಮಕಾರ ಕೊಟ್ಟ ಎಲ್ಲವನು ಪಡೆಯುವ ನಾವು...

ಕವಿತೆ

ಸುಪ್ತಪ್ರಜ್ಞೆ

ಹೃದಯದ ನವರಂಗಿನ ಅಂಚಿತ ಲೋಕದಲಿ ಹೊನ್ನೊಳೆಯಂತೆ ಹೊಳೆವ ಹೊಂಗನಸ ಹೊದಿಕೆ; ಮಾಯಾಲೋಕದ ಮಿಥ್ಯೆಗಳು, ಹುಸಿ ಆಸೆಗಳು ಎಲ್ಲವನ್ನೂ ನಿನ್ನ ಕೆನ್ನಾಲಿಗೆ ಚಾಚಿ ನುಂಗಿದೆ|| ಕಾಮನಬಿಲ್ಲಿನ ಕಾಂತಿಯಡಿಯಲಿ ಸುಖವಾಗಿ ಹೊಸಹಕ್ಕಿಯ ಮಧುರ ಇಂಚರಕೆ ಕಿವಿಯಾಗಿ ಮೈಮರೆಸಿ ಸೊಗ ನೀಡಿದ್ದ ಸವಿನಿದಿರೆಯನು ತುಡುಕಿ ಸೆಳೆದು ದೂರತೀರಕೆ ಒಗೆದೆ|| ವಿಧವಿಧ ವಿಶಿಷ್ಟ  ಭಕ್ಷ್ಯಗಳು ನಾಲಗೆಯಲಿ...

ಕವಿತೆ

ಸೈನಿಕ

ಸೈನಿಕನು ನಾನು ದೇಶ ಕಾಯುವೆನು ಬಂದೂಕು ಮಾತ್ರ ನನ್ನೊಡಲ ಜೀವ ಹರಿಯಬಿಟ್ಟಿಹೆನಿಲ್ಲಿ ನಾಲ್ಕು ಸಾಲುಗಳಲಿ ಸುಖದ ಬಾಳಿನ ನನ್ನ ಮನಸಿನ ಭಾವ ಮಂಜಿನಾ ಗುಡ್ಡದಲಿ, ಕಲ್ಲು ಮುಳ್ಳುಗಳ ಮೇಲೆ ಬೆನ್ನು-ಹೊಟ್ಟೆಯ ಮೇಲೆ ಗುಂಡು ಮದ್ದುಗಳು ಶತ್ರುಗಳ ಮೇಲೆ ಮುಗಿಬೀಳುವವರಿಗಲ್ಲಿ ತಿಳಿಯಬಹುದೇ? ದೇಹ ಹೊಕ್ಕಿರುವ ಗುಂಡುಗಳು. ದೇಶಕಾಯುವುದೊಂದೆ ನನ್ನ ಗುರಿಯಹುದು ಆಸೆ ಆಕಾಂಕ್ಷೆಗಳು...

ಕವಿತೆ

ಸುಬ್ಬಂಣನ ತ್ರಿಪದಿಗಳು

೧.ಭಿನ್ನ ಅಭಿರುಚಿಯ ಪತಿ|ತನ್ನತನವಿರದ ಸತಿ ಸನ್ನಡತೆಯಿರದವರ ಸಹವಾಸದಲಿ ಶಾಂತಿ ಶೂನ್ಯ ಕಾಣಯ್ಯ ಸುಬ್ಬಂಣ ೨.ತ್ಯಾಗವಿಲ್ಲದ ಯಾಗ|ರಾಗವಿಲ್ಲದ ಭೋಗ ಮೇಘವಿರದಾಷಾಢದಾಕಾಶದಿಂದ ಉಪಯೋಗವಿಲ್ಲೆಂದ ಸುಬ್ಬಂಣ ೩.ಬಂಗಾರ ಕಂಡಾಗ | ಅಂಗನೆಯು ತಾನೊಲಿಗು ಸಿಂಗರದಿ ನಲಿಗು ಬಲು ತೆರದಿ ಪತಿ ಬಡವನಿರೆ ಹಂಗಿಸುವಳೆಂದ ಸುಬ್ಬಂಣ ೪.ಕವಿಯ ಬಾಳಿನ ಬಗೆಯ |ಸವಿಯೆಂದು ತಿಳಿಯದಿರು ಸವಿಯ...

ಕವಿತೆ

ಕರಿಛಾಯೆ

ನೀರವತೆಯಲಿ ಪವಡಿಸಿದ್ದ ನೆಲವ ತೋಯಿಸಿದೆ ಲೋಹಿತ ರಕ್ತತೈಲ; ರವಿಯೂ ಹೇಸಿಗೆಯಿಂ ಮಂದನಾದ ಭುಗಿಲೇಳಲು ಕ್ರೌರ್ಯದ ರಣಜ್ವಾಲಾ|| ಲವಲೇಶವೂ ಇರಲಿಲ್ಲ ಆ ದೀನಕಂಗಳಲಿ ರುದಿರಕೋಡಿ ಕಾಣುವ ರಣಕಲ್ಪನೆ; ಇನ್ನೂ ಅರಳದ ಕುಟ್ಮಲಗಳನು ಬೂದಿಯಾಗಿಸಿತು ರಣೋಪಾಸನೆ|| ಅನುದಿನ ಲೋಹಿತ ಧುನಿಯದೇ ಚಿತ್ರಣ ವಿರಮಿಸಿದ್ದವು ಕ್ಷಣ ಎಳೆರೆಪ್ಪೆಗಳು; ಹೊಂಗನಸ ತೆರೆ ಸರಿಸಿ ಅನಂತನಿಶೆಯ...