ಕವಿತೆ

ರಾಜ್ಯೋತ್ಸವ

ಎಲ್ಲೆಡೆ ಮಾವು ಹಲಸಿನ ತೋರಣ

ಪ್ರತಿ ಮನೆಯ ಮುಂದೆಯೂ ರಂಗೋಲಿಯ ಚಿತ್ರಣ;
ಸರ್ವರ ಕೈಯಲೂ ಮಂಗಳ ಕಂಕಣ
ವಿಜೃಂಭಿಸುತಲಿವೆಯೋ, ಓ ಇಂದು ರಾಜ್ಯೋತ್ಸವ!
ಕನ್ನಡ ತಾಯಿಗೆಲ್ಲೆಡೆ ಮೊಳಗಿದೆ ಜಯಘೋಷ
ಕನ್ನಡಿಗರ ಹೃದಯದಲರಳಿದೆ ಸಂಹರ್ಷ;
ತರಂಗದಿ ತೇಲುತಿದೆ ಇಂಪು ವಿಹಂಗಗಾನ
ಸರ್ವಾಂಗಗಳೂ ಮಾಡುತಿವೆ ಕನ್ನಡಾಂಬೆಯ ಧ್ಯಾನ
ಮಾಮರದ ಚಿಗುರು ತಾಯ್ಗೆ ಹಸಿರುಡುಗೆಯಾಗಿದೆ
ಕನ್ನಡ ಕುಸುಮದ ಕೆಂಪು ಅಂಬೆಗೆ ತಿಲಕವಾಗಿದೆ;
ಬಾನಲಿ ತೇಲ್ವ ಮೋಡ ಮಾತೆಗೆ ಬೆಳ್ಗೊಡೆಯಾಗಿದೆ
ಬನ್ನಿ ಸಂಭ್ರಮಿಸುವ ಎಲ್ಲಾ! ಓ, ಇಂದು ರಾಜ್ಯೋತ್ಸವ!
ಆಗಸದೆತ್ತರಕೆ ಹಾರಿದೆ ಕನ್ನಡ ಕೇತನ
ಹೆಮ್ಮೆಯಿಂ ಮೆರೆದಿದೆ ಕನ್ನಡಿಗನ ಚೇತನ;
ಅರಳಿದೆ ಮಂದಸ್ಮಿತ ತಾಯಿಯ ಮೃದು ವದನದಲಿ
ದನಿಗೂಡಿಸಿರೋ ನಮ್ಮೊಡನೆ, ಆಗಲಿ ಈ ನಾಡಲಿ
        ಪ್ರೀತಿ ಶಾಂತಿಯ ನಿತ್ಯೋತ್ಸವ……
-ಕವನ ವಿ ವಸಿಷ್ಠ
ಚಿಕ್ಕಮಗಳೂರು.

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!