ಎಲ್ಲ ಕಾಲಕ್ಕೂ
ನೋಡುತ್ತಾರೆ ಪಂಚಾಂಗದಲ್ಲಿ
ರಾಹು ಕಾಲ ,ಗುಳಿಕ ಕಾಲ
ಈಗೀಗ ಎಲ್ಲರೂ ತಪ್ಪದೆ
ನೋಡಲೇಬೇಕು
(ತಮ್ಮ ) ಅಂಗಾಂಗಗಳಿಗೆ
“ಗುಳಿಗೆ ” ಕಾಲ !
ಲಂಚಾಯಣ
ಅವನು ನೌಕರಿ
ಸೇರಿದ ಹೊಸತು
ತಲೆತುಂಬ ಕೂದಲು
ಬಾಚಿಕೊಂಡ ;
ಕಾಲಕ್ರಮೇಣ
ಕೈ ತುಂಬಾ
ಬಾಚಿಕೊಂಡ !
ಇಲ್ಲಿ ತನಕ
ನನ್ನ ಹಿಡಿತಕ್ಕೂ ಸಿಗದೆ
ಹಿಂದುರುಗಿಯೂ ನೋಡದೆ
ಏರುತ್ತಲೆ ಹೋಯಿತು
ಇಲ್ಲಿ ತನಕ …
ಇಳಿಸಬೇಕೆಂದರೂ ಇಳಿಯದ
ನನ್ನ ತೂಕ !
ಕ್ಷೀರಾಭಿಷೇಕ
ಗುಡಿಯಲ್ಲಿ ನಿತ್ಯವೂ
ದೇವರಿಗೆ ಕ್ಷೀರಾಭಿಷೇಕ
ನಮ್ಮ ಮನೆಯಲ್ಲಿ
ಒಲೆಗೇ ಕ್ಷೀರಾಭಿಷೇಕ !
ಪ್ರೀತಿಗಾಗಿ
ಪ್ರಿಯೆ ! ನಿನ್ನ ಪ್ರೀತಿಗಾಗಿ
ಹೇಳು ಏನು ಮಾಡಲಿ ?
ಇಗೋ ಈ ಸಾಗರದಲ್ಲಿ
ಮುಳುಗಲೂ ನಾ ರೆಡಿ
ಅದರೇನು ಮಾಡಲಿ
ನನಗೀಗ ನೆಗಡಿ !