ಕವಿತೆ

ಕವಿತೆ

ಕೆಂಪು ಕವಿಯ ಅಳಲು

ಒಗ್ಗದವನು ಆಳಿದರೆ ಸಹಿಸುವುದೆ ಬೇಗೆ ಹಳೆ ತೆವಲುಗಳಿಗೆ ತೆರೆ ಎಳೆಯುವುದು ಹೇಗೆ! ಮೊನ್ನೆವರೆಗೂ ಜನರ ಅಮಾಯಕರೆಂದೆ ಬಗೆದೆ ನಿರಾಸೆ ದಾರಿಗುಂಟ ಕೈಹಿಡಿದು ನಡಿಸಿದೆ ಯಾವ ದೇಶದ ಚರಿತ್ರೆ ಹೆಮ್ಮೆಯದಿತ್ತೊ ಅಲ್ಲಿ ಕಪ್ಪು ಚುಕ್ಕೆಗಳ ಎಣಿಸಿ ತೋರಿಸಿದ್ದೆ ಹಳ್ಳಗಳ ತೋಡಿ ವಿಭಜನೆಯ ತೃಪ್ತ ಹಂಬಲದಲ್ಲಿ ದೊಂಬಿದಾಸರ ಅವರೊಳಗೆ ಇರಿಸಿಯೇ ಇದ್ದೆ! ಸತ್ಯ ಚರಿತ್ರೆಯ ಪುಟಗಳಿಗೆ ಮಸಿ...

ಕವಿತೆ

ಹೋಗುವುದೆಂದರೆ ಊರಿಗೆ

  ಹೋಗುವುದೆಂದರೆ ಊರಿಗೆ ಸ್ವರ್ಗವನ್ನೇ ಇಣುಕಿ ಬಂದಂತೆ. ಗಡಿಬಿಡಿಯಲಿ ಬಟ್ಟೆ ಬರಿಯನು ತುರುಕಿ ಬ್ಯಾಗಿನ ಹೊಟ್ಟೆ ಒಡೆಯುವಂತೆ. ಐದಾರು ಗಂಟೆ ಪಯಣ ಸಾಗುವುದು ಅರಿವಿಲ್ಲದೆ.   ಪ್ರತಿಗೇಟು ಕಂಬದ ಸದ್ದಿಗೆ ನನ್ನ ಬರುವಿಕೆ ನೋಡುವ ನನ್ನ ನಾಯಿ “ಬಂದ್ನಾ” ಎಂದು ರಸ್ತೆಯಿಂದ ಕೇಳುವ ಬಾಲ್ಯದ ಚಡ್ಡಿಗಳು ಯಾವ ಬಸ್ಸಿಗೆ ಬರಬಹುದು ಎಂದು ಲೆಕ್ಕ ಹಾಕುವ...

ಕವಿತೆ

ಮೆ(ಮ)ರೆಯದಿರು!

  ಊರಿನಲ್ಲಿರುವ ಕಲ್ಲು ದೇವರಿಗೆಲ್ಲ ವಿಧವಿಧ ಸೀರೆ ಉಡಿಸುತ್ತಾ ಮಾಡುವೆ ನೀ ನಮನ! ನಿನ್ನ ಮನೆಯಲ್ಲಿರುವ ನಿಜವಾದ ದೇವತೆಯ ಕಡೆ ನೀ ಹರಿಸಲಾರೆ ಕೊಂಚ ಗಮನ !   ಬೇಕಾದಷ್ಟು ಖರ್ಚು ಮಾಡಿ ದೇಗುಲದ ನಿರ್ಮಾಣಕ್ಕೆ ಮಿತಿಯಿಲ್ಲದೆ ಕೊಡುವೆ ಕೊಡುಗೆ! ದೇವರಂಥ ತಂದೆತಾಯಿಗಳ ಮನೆಯೆನ್ನುವ ದೇವಾಲಯದಿಂದ ವೃದ್ಧಾಶ್ರಮಕ್ಕೆ ಅಟ್ಟಿ ಆಚರಿಸುವೆ ನೀ ಬೀಳ್ಕೂಡುಗೆ!  ...

ಕವಿತೆ

ರಾಣಿ ??

ನಾನಿಲ್ಲಿ ರಾಣಿ, ನನ್ನಂತೆ ನಡೆವರು ಎಲ್ಲ, ನನಗಾವ ನಿಯಮವಿಲ್ಲ!   ಮುಂಜಾನೆ ಮಂಜಲ್ಲಿ ಹಸಿರೆಲೆ ಮೇಲೆ ವಿಶ್ರಮಿಸುವ ಇಬ್ಬನಿ ನಾ, ಸ್ವಚ್ಚಂದ ಆಕಾಶದಲ್ಲಿ ಊರಗಲದ ರೆಕ್ಕೆ ಕಟ್ಟಿ ಹಾರುವ ಹಕ್ಕಿ ನಾ, ಕಡಲಿನೊಡಲಿನಲ್ಲಿ ಬೆಚ್ಚನೆ ಚಿಪ್ಪಲ್ಲಿ ಕಣ್ಮುಚ್ಚಿರುವ ಮುತ್ತು ನಾ..   ನವಿಲಂತೆ ನರ್ತಿಸಿದೆ, ಕೋಗಿಲೆಯಂತೆ ಹಾಡಿದೆ, ಮಿಂಚಂತೆ ಮಿನುಗಿದೆ, ಮೀನಂತೆ ಈಜಿದೆ...

ಕವಿತೆ

‘ಸಾರಿಗೆ’..

ರಾಗ ಹಿಂಜುತಿದೆ ಸುಣ್ಣದುಂಡೆಯ ಹೆಣಕೆ ವಾಯುವಿಹಾರದ ಸಮಯ.. ಅಷ್ಟಷ್ಟೇ ಪೋಷಕಾಂಶ ತೇಗಿದ್ದಷ್ಟೇ, ಕಡಲಿನಲ್ಲಿ ಉಪ್ಪು ಹುಟ್ಟಿದ್ದು ತಿಳಿಯಲಿಲ್ಲ… ಬತ್ತಿಸಿಕೊಳ್ಳುವ ಗುಣವೂ ಇದೆ ಗಾಳಿಗೆ, ಯಾರೂ ಅರುಹಲಿಲ್ಲ.. ದೊಡ್ಡ ನೀಲಿ ಚಾದರದಲ್ಲಿ ಗುದ್ದಲಿಗಳ ಅತಿಕ್ರಮಣ ನಿಯತ ಆಕಾರಕ್ಕೆ ತೊಳೆದಿಟ್ಟ ಹಲ್ಲುಗಳ ಬಣ್ಣ.. ತೇಪೆಗಳ ತುದಿಯಲ್ಲಿ ರಕ್ತ ಇಣುಕುವುದಿಲ್ಲ...

ಕವಿತೆ

ಶಿಲೆಯಾದಳವಳು

      -ಅಂದು- ಜನುಮದ ಪ್ರೀತಿಯನ್ನೆಲ್ಲ ಅಮೃತವನ್ನಾಗಿಸುತ್ತಿದ್ದಳು ಮಮತೆಯನ್ನೆಲ್ಲ ಎದೆಯಲ್ಲಿ ಹಾಲಾಗಿ ಬಚ್ಚಿಡುತ್ತಿದ್ದಳು||   ಎದೆಯಲ್ಲುಕ್ಕುವ ಹಾಲ ಮನತಣಿಯೇ ಕುಡಿಸುತ್ತಿದ್ದಳು ಬೆಚ್ಚಗಿನ ಅಪ್ಪುಗೆಯಿತ್ತು ಮನಸಾರೆ ಮುದ್ದುಗರೆಯುತ್ತಿದ್ದಳು||   ನಕ್ಷತ್ರ ತಾರೆಗಳ ಬಳಿ ಕರೆದು ಹೊಟ್ಟೆತುಂಬಿ ಉಣಿಸುತ್ತಿದ್ದಳು ಚಂದಮಾಮ ಕಥೆ ಹೇಳಿ ಚೆಂದನಿದ್ದೆ...

ಕಥೆ ಕವಿತೆ

ಇಬ್ಬನಿಯಲಿ ಅವಳ ಕಂಡಾಗ..

ಅರೆ ಮಲೆನಾಡಿನ ಸುಂದರ ತಾಣವದು. ಸುತ್ತಲೂ ಹಸಿರು. ಹಸಿರಿನ ನಡುವೆ ಹಸಿರಾಗಿ ನಿಂತಿರುವ ಸುಂದರ ಬೆಟ್ಟ. ಬೆಟ್ಟದ ಮೇಲೂಂದು ದುರ್ಗಾಂಬಿಕೆಯ ಮಂದಿರ. ಬೆಳಗ್ಗೆ ಎದ್ದೊಡನೆ ಬೆಟ್ಟ ಏರಿದರೆ ಸಾಕು ಕವಿತೆ ಗೀಚಲು ಎಲ್ಲಿಲ್ಲದ ಹುಮ್ಮಸ್ಸು ಬರುತ್ತಿತ್ತು. ಸ್ವಲ್ಪ ಹೊತ್ತು ಆರೋಗ್ಯಕ್ಕಾಗಿ ಅಲ್ಲೇ ತಾಲೀಮು ನಡೆಸಿ ಆಮೇಲೆ ಕವಿತೆಯನ್ನು ಬರೆಯಲು ದಿಬ್ಬದ ಕಲ್ಲಿನ ಮೇಲೆ ಕುಳಿತೆ...

ಕವಿತೆ

“ಗೊತ್ತಿಲ್ಲ”

ಬಿದ್ದ ಮಳೆಗೆ ನೆಲ ತುಂಬ ಹಸಿರು ಚಿಗುರಿದೆ ಬೀಜ ಉತ್ತವರಾರೋ ? ಗೊತ್ತಿಲ್ಲ, ಎಳೆಯ ಮಗು ನಿದ್ದೆಯಲಿ ನಗುತಲಿದೆ ನಗಿಸಿದವರಾರೋ ? ಗೊತ್ತಿಲ್ಲ, ಹಣತೆ ಉರಿದು ಬೆಳಕ ಚೆಲ್ಲುತಿದೆ ದೀಪ ಎಲ್ಲಿಂದ ಬಂತೋ ? ಗೊತ್ತಿಲ್ಲ, ಅರಳಿದ ಹೂವು ತೋಟದ ತುಂಬ ಕಂಪ ಸೂಸಿದೆ ಆ ಕಂಪ ಯಾರು ನೀಡಿದರೋ ? ಗೊತ್ತಿಲ್ಲ, ನನಗೆ ಅದು-ಇದು ಅವನು-ಅವಳು ತುಂಬಾ ಇಷ್ಟ ಈ ಇಷ್ಟ ಎಲ್ಲಿಂದ ಬಂತೋ ...

ಕವಿತೆ

ಅವಳು ಸ೦ಭಾಳಿಸುವಳು

ಅಡುಗೆ ಮನೆಯ ತನಕ ಓಡಿ ಹಾಲುಕ್ಕದ೦ತೆ ಉಳಿಸುವಳು ಚಿಕ್ಕಪುಟ್ಟ ಮಾಮೂಲಿಕ್ಷಣಗಳ ಸೇರಿಸುವುದರಲಿ ಭಗ್ನ ಕನಸುಗಳ ದುಃಖ ಮರೆಯುವಳು ಸಮಯದಲಿ ಅನ್ನ ಹತ್ತದ೦ತೆ ತಡೆಯುವಳು ಎಷ್ಟೋಆಸೆಗಳನು ತಾನೇ ಸುಟ್ಟು ಬೂದಿ ಮಾಡುವಳು ಚಿಕ್ಕ ಗಾಜಿನತಟ್ಟೆ ಒಡೆಯದ೦ತೆ ಜಾಗ್ರತೆವಹಿಸುವಳು ಒಡೆದ ಮಹತ್ವಾಕಾ೦ಕ್ಷೆಗಳ ಸೌಧ ತಾನೇ ಉರುಳಿಸುವಳು ಬಟ್ಟೆಯಲಿರುವ ಕಲೆಗಳ ಉಳಿಯದ೦ತೆ ಹೋಗಲಾಡಿಸುವಳು ತಾಜಾ...

ಕವಿತೆ

ಹನಿಗವನಗಳು – ಮೌನ

ನಿಶೆಯೆಲ್ಲಿ ಜಗ ಮಲಗಿದೆ ಮೌನದ ಭುಗಿಲೆದ್ದಿದೆ ಶಬ್ಧ ಕೇಳಿಸದು ಯಾಕೆ? ಅದು ಮೌನ   ***   ಮೌನದ ಬಾಗಿಲಲ್ಲಿ ಶಬ್ಧಗಳ ತೋರಣ ಇಲ್ಲವಾದಲ್ಲಿ ಮೌನಕೆ ಬಾಗಿಲಿಲ್ಲ.   *** ಮೌನ ಪುಟದಲಿ ಮೊದಲ ಪದ ಮೌನ, ಇಲ್ಲಿ ಭಾವನೆ ಮೌನ, ಇಲ್ಲಿ ಕಲ್ಪನೆ ಮೌನ ಕನಸುಗಳು ಮೌನ ನೆನಪುಗಳೂ ಮೌನ   ***   ಆಶುಭಾಷಣಕಾರನಿಗೆ ವಿಷಯ ‘ಮೌನ’ವಾಗಿತ್ತು...