Featured

Featured ಅಂಕಣ

ವಾಜಪೇಯಿಗೆ ಬಂದಂತಹ ಸ್ಥಿತಿ ಮೋದಿಗೂ ಬರಬಾರದಲ್ಲಾ?!

ಮೊರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಯಾಗಿದ್ದಾಗ ನೋಟಿನ ಅಪಮೌಲ್ಯ ಮಾಡಿದ್ದರೂ ಆವಾಗಿನ ಮತ್ತು ಈವಾಗಿನ ಭಾರತಕ್ಕೆ ತುಂಬಾನೇ ವ್ಯತ್ಯಾಸ ಇದೆ. ಆವತ್ತಿನಿಂದ ಈವತ್ತಿಗೆ ಭಾರತ ತುಂಬಾನೇ ಬೆಳೆದಿದೆ.ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಇಂತಹಾ ಒಂದು ನಿರ್ಧಾರ ತೆಗೆದುಕೊಂಡಿರುತ್ತಿದ್ದರೆ ಇಪ್ಪತ್ತನಾಲ್ಕು ಪಕ್ಷಗಳ ತಮ್ಮ ಸಮ್ಮಿಶ್ರ ಸರಕಾರ ಕ್ಷಣ ಮಾತ್ರದಲ್ಲಿ...

Featured ಅಂಕಣ

ಆ ಊರಿನ ಮನೆಗಳಿಗೆ ಬೀಗವೇ ಇಲ್ಲ!

ನೋಟು ಅಮಾನ್ಯ ಮಾಡಿರುವ ಕ್ರಮ ವಿರೋಧಿಸಿ ದೇಶಾದ್ಯಂತ ಹರತಾಳ ಮಾಡುತ್ತಿದ್ದಾರೆ ಇವತ್ತು ಒಂದು ಗುಂಪಿನ ಮಂದಿ. ಆ ಸುದ್ದಿ ಬಂದಾಗ, ನನ್ನ ಗಮನವನ್ನು ಮೊದಲು ಸೆಳೆದದ್ದು ಹರತಾಳವೆಂಬ ಶಬ್ದ. ತಾಳವೆಂಬುದು ವಿಷ್ಣು ಭಕ್ತರ, ಅಂದರೆ ವೈಷ್ಣವರ ವಾದ್ಯ. ಹರನದೇನಿದ್ದರೂ ಡಮರು, ಡೋಲು ಮುಂತಾದ ಚರ್ಮ ವಾದ್ಯಗಳು. ಹಾಗಿದ್ದ ಮೇಲೆ ಹರನಿಗೂ ತಾಳಕ್ಕೂ ತಾಳ ಮೇಳ ಕೂಡಿ ಬಂದದ್ದು ಹೇಗೆ...

Featured ಅಂಕಣ

ಬಿಡಿಸಲಾಗದ ಸೃಷ್ಟಿಯ ಕಗ್ಗಂಟುಗಳು

ಈ ಭೂಮಂಡಲದ ಮೇಲೆ ಮನುಷ್ಯ ಪ್ರಾಣಿ ಹುಟ್ಟಿದಾಗಿನಿಂದಲೂ ಸುಮ್ಮನೆ ಕೂರುವ ವ್ಯವಧಾನವನ್ನು ಕಲಿತಿಲ್ಲ. ತನ್ನ ಸುತ್ತಲಿನ ಪ್ರಪಂಚದ ರಹಸ್ಯಗಳನ್ನು ಅರಿತುಕೊಳ್ಳಲು ಹರಸಾಹಸವನ್ನೇ ಮಾಡಿದ್ದಾನೆ ಹಾಗೂ ಮಾಡುತ್ತಲೇ ಇದ್ದಾನೆ. ಪ್ರತೀ ತಲೆಮಾರುಗಳು ತಮ್ಮ ಕೈಲಾದಷ್ಟು ಹೊಸ ಹೊಸ ಅಧ್ಯಯನಗಳನ್ನು ಮಾಡುವುದರ ಮೂಲಕ ಹಲವಾರು ಸೃಷ್ಟಿಯ ರಹಸ್ಯಗಳನ್ನು ಅರಿಯಲು ಶತಾಯ ಗತಾಯ ಪ್ರಯತ್ನ...

Featured ಅಂಕಣ

ಮೊದಲು ಈ ಯೋಚನೆ ಬದಲಾಗಬೇಕಿದೆ

ಸರ್ಜಿಕಲ್ ಸ್ಟ್ರೈಕ್! ಭಾರತದ ಸೈನಿಕರು ಪಾಕ್ ವಿರುದ್ಧ ಮುಗಿಬಿದ್ದು ನಡೆದ ಕಾರ್ಯಾಚರಣೆಯಿದು. ಎಲ್ಲಾ ಕಡೆಗಳಿಂದಲೂ ಪ್ರಶಂಸೆಗಳ ಸುರಿಮಳೆ.  ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಭಾರತ ನಡೆಯನ್ನು ಪ್ರಶಂಸಿಸಿ ಸಂದೇಶ ಕಳುಹಿದ್ದರು. ಅಷ್ಟೇ ಏಕೆ ಅಫ್ಘಾನ್, ಬಾಂಗ್ಲಾ ದೇಶದಂತಹ ಮುಸಲ್ಮಾನ ರಾಷ್ಟ್ರಗಳೂ ಕೂಡ ಭಾರತದ ನಡೆಯನ್ನು ಹೊಗಳಿ ಪಾಕ್‍ಗೆ ಸಡ್ಡು ಹೊಡೆಯಿತು...

Featured ಅಂಕಣ

ಲಾಸ್ಟ್ ಬುಕ್..!

ಬರೆದದ್ದು ಮೂರು ಅದರಲ್ಲಿ ಇದು “ಲಾಸ್ಟ್ ಬುಕ್” ಏನಿದು ಎಂದು ಹುಬ್ಬೇರಿಸುವವರೇ ಹೆಚ್ಚು. ನನ್ನ ಮಗ ಅಭಿ ಕೇಳಿಯೇ ಬಿಟ್ಟ ‘ಪಪ್ಪಾ..ನೀ ಇನ್ನು ಮುಂದೆ ಪುಸ್ತಕ ಬರೆಯೋದೇ ಇಲ್ವಾ..?’ ಮುಗ್ಧ ಪ್ರಶ್ನೆ. ನನ್ನ ಹೆಂಡತಿನೂ ‘ಹೆಸರು ಚೆನ್ನಾಗಿದೆ ಆದರೆ ಬೇರೆಯದೂ ಇದ್ದಿದ್ದರೆ ಇನ್ನೂ ಚೆನ್ನಾಗಿತ್ತು’ ಎಂದು ಅರೆ ಮನಸ್ಸಿಂದಲೇ ಹೇಳಿದಳು. ನಿಮಗೂ ಅನ್ನಿಸಿರಬಹುದು ಯಾಕೀ ಟೈಟಲ್...

Featured ಅಂಕಣ

ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!

ಆ ರಾತ್ರಿ ದೇಶದ ಪ್ರಧಾನಿ ಇತಿಹಾಸವನ್ನೆ ನಿರ್ಮಿಸುವಂತಹ ಘೋಷಣೆ ಹೊರಡಿಸಿದರು. ಇನ್ಮುಂದೆ ಐನೂರು ಸಾವಿರ ನೋಟು ನಡೆಯುವುದಿಲ್ಲ. ಇದಕ್ಕೆ ಕಾರಣ ಇಂತಹದ್ದು ಇತ್ಯಾದಿ ಎಂದೆಲ್ಲಾ, ಒಂದು ದೇಶದ ಪ್ರಧಾನಿಯಾಗಿ ಹೇಳಬುಹುದಾದದ್ದನ್ನೆಲ್ಲಾ ಹೇಳಿ ಸಾವಿರ ವೊಲ್ಟ್ ಝಟಕಾ ಕೊಟ್ಟರು ನೋಡಿ. ಅವರು ಏನು ಮಾಡಿದರೂ ವಿರೋಧಿಸುವ ಬುಜೀಗಳಿಗೂ ಅದರ ಗಂಜಿದಾತರಿಗೂ ಅದನ್ನು ಅರಗಿಸಿಕೊಳ್ಳಲೇ...

Featured ಅಂಕಣ

ಕ್ವಾಟ್ರಂಗ್ಡಿ ಮುಂದೆ ಎಲ್ದೆಲ್ಡು ಗಂಟೆ ಕಾಯೋವಾಗ ಬರ್ದಿರೋ ಅಂಡುರಿ ನೋಟ್ ಬ್ಯಾನ್ ಆದ್ಮಾಕೆ ಯಾಕ್ಲಾ ಬತ್ತಿದೆ??

ಬಾರಪ್ಪಾ ಬಾ.. ನಿಮ್ ಮೋದಿ ಏನೋ ಭಾಳ ದೊಡ್ಡ ಸಾದ್ನೆ ಮಾಡೈತೆ ಅಂತ ಕೊಚ್ಕೊತಿದ್ದೆ ಅಲ್ವೇನ್ಲಾ?? ನೋಡ್ಲಾ ಇವಾಗ ನೋಟ್ ಬ್ಯಾನ್ ಮಾಡಿ ಏಟೋಂದು ಜನಕ್ಕೆ ಕಷ್ಟ ಆಗ್ತೈತೆ? ಎಲ್ಲುಗ್ಲಾ ಓಗ್ಬೇಕು ಚೇಂಜ್ ಇಲ್ಲಾಂದ್ರೆ ಅಂತ ಗೋಪಾಲಣ್ಣನ್ ಕಾಲೇಳೀತು ಮುರುಗನ್. ಈಗಿನ್ನೂ ಸಿವಾ ಅಂತ ಕಟ್ಟೆ ಮ್ಯಾಕೆ ಕುಂತಾವ್ನೆ.. ಯಾಕ್ಲಾ ಗೋಪಾಲಣ್ಣಿ ಮ್ಯಾಕೆ ಅಂಗೆ ಎರಗ್ತೀಯಾ, ವಸಿ ತಡ್ಕೋಳ್ಲಾ...

Featured ಅಂಕಣ

ಟಾಟಾ ಹಿಸ್ಟರಿ, ಮಿಸ್ತ್ರಿ, ಮಿಸ್ಟರಿ, ಆ್ಯಂಡ್ ಫ್ಯೂಚರ್ !

ಒಂದು ಪತ್ರಿಕೆ ನಾಲ್ಕು ವರ್ಷದ ಹಿಂದೆ ಹೀಗೆ ಹೆಡ್ ಲೈನ್ಸ್ ಕೊಟ್ಟಿತ್ತು, ” ಮಿಸ್ಟರಿ ಎಂಡ್ಸ್, ಮಿಸ್ತ್ರಿ ಬಿಗಿನ್ಸ್”. ಅದೇ ಪತ್ರಿಕೆಯ ಹೆಡ್ ಲೈನ್ಸ್ ನಾಲ್ಕು ವರ್ಷಗಳ ನಂತರ ಹೀಗಿತ್ತು, ” ಮಿಸ್ತ್ರಿ ಎಂಡ್ಸ್, ಮಿಸ್ಟರಿ ಬಿಗಿನ್ಸ್”. ಸೈರಸ್ ಮಿಸ್ತ್ರಿಯವರನ್ನು ಟಾಟಾ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದು ವ್ಯಾಪಾರದ‌...

Featured ಅಂಕಣ

ಅನಾನುಕೂಲತೆಯಲ್ಲಿ ಉತ್ತಮವಾದದ್ದು ಯಾವುದು?

         ಮೊನ್ನೆ ಸುಮನಾ ಅವರು ಒಂದು ವೀಡಿಯೋ ಕಳುಹಿಸಿ ಕೊಟ್ಟಿದ್ದರು. ಗ್ಯಾಬಿ ಶುಲ್ ಎಂಬ ೧೪-೧೫ ವರ್ಷದ ಹುಡುಗಿಯೊಬ್ಬಳು ಬ್ಯಾಲೆ ನೃತ್ಯ ಅಭ್ಯಾಸ ಮಾಡುತ್ತಿರುವ ವೀಡಿಯೋ ಅದು. ಆಕೆ ಪ್ರೊಸ್ತೆಟಿಕ್ ಲೆಗ್ (ಕೃತಕ ಕಾಲು)ನ್ನು ಬಳಸಿ ಇತರರಂತೆಯೇ  ಆರಾಮಾಗಿ ನೃತ್ಯಾಭ್ಯಾಸ ಮಾಡುತ್ತಿದ್ದಳು. ತನ್ನ ಒಂಭತ್ತನೇ ವಯಸ್ಸಿನಲ್ಲಿ ಬೋನ್ ಕ್ಯಾನ್ಸರಿಗೆ ತುತ್ತಾಗಿ ಕಾಲು...

Featured ಅಂಕಣ

ಕನ್ನಡ ದಿನಪತ್ರಿಕೆಗಳ್ಯಾಕೆ ಹೀಗೆ?

ಒಂದೆರಡು ದಿನಗಳಿಂದ ವೈರಾಗ್ಯ ಬರುವ ರೀತಿಯಲ್ಲಿ ಕನ್ನಡದ ಪ್ರತಿಷ್ಠಿತ ಪತ್ರಿಕೆಗಳು ವರ್ತಿಸುತ್ತಿದೆ.  ಪತ್ರಿಕೋದ್ಯಮ ವ್ಯಾಪಾರವಾಗಿದೆ, ಉದ್ಯಮ ದೊಡ್ಡ ಮಟ್ಟದಲ್ಲಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೂ ಇತ್ತೀಚೆಗೆ ಅಗತ್ಯ ಮೀರಿದ ಪತ್ರಿಕೆಗಳ ವರ್ತನೆ ಓದುಗರಲ್ಲಿ ಇರುಸು ಮುರುಸು ಸೃಷ್ಟಿಸಿದೆ, ಸೃಷ್ಠಿಸುತ್ತಿದೆ. ಸರ್ಕಾರದ ವಿರುದ್ಧ ಪತ್ರಿಕೆಗಳ ಅತಿರೇಕದ ನಿಲುವು...