Featured

Featured ಅಂಕಣ

ಹರ್ಮನ್ ಹೆಸ್ಸೆ ಎಂಬ ಜರ್ಮನ್ ‘ಭಾರತೀಯ’…

‘ಸಿದ್ಧಾರ್ಥ’ ಎಂದು ಪುಸ್ತಕದ ಹೆಸರು ಕೇಳಿದಾಕ್ಷಣ ಮೊದಲು ನೆನಪಾಗಿದ್ದು ಗೌತಮ ಬುದ್ಧ. ಬುದ್ಧನಿಗೆ ಸಂಬಂಧಪಟ್ಟ ಪುಸ್ತಕವೆಂದೇ ಭಾವಿಸಿಯೇ ಓದಲು ಶುರುವಿಟ್ಟುಕೊಂಡಿದ್ದು. ಅದರೆ ಅದು ಸಂಪೂರ್ಣವಾಗಿ ಒಂದು ಕಾಲ್ಪನಿಕ ಕಥೆ ಎಂದು ನಂತರ ತಿಳಿದದ್ದು. ತನ್ನನ್ನು ತಾನು ಅರಿಯುವ ಹಂಬಲದಿಂದ ಹೊರಡುವ ಸಿದ್ಧಾರ್ಥನೆಂಬ ಹುಡುಗನ ಕಥೆ. ಭಾರತೀಯ ಧಾರ್ಮಿಕ ಅಲೋಚನೆಗಳನ್ನೊಳಗೊಂಡ ಈ...

Featured ಅಂಕಣ

ಕರ್ನಾಟಕದ ಇತಿಹಾಸದಲ್ಲಿ ಅಳಿಸಲಾರದ ಕಪ್ಪುಚುಕ್ಕಿ: ಶ್ರೀರಂಗಪಟ್ಟಣದ ಯಾತನಾಶಿಬಿರ

ಟಿಪ್ಪು ಮತಾಂಧನಾಗಿದ್ದ ಎಂಬುದಕ್ಕೆ ಸಾಕ್ಷಿ ಏನಿದೆ ಎಂದು ಮೈಸೂರಿನ ಮಾಜಿ ಸಂಸದ ಎಚ್. ವಿಶ್ವನಾಥ್ ಕೇಳಿದ್ದಾರೆ. ಹಿಟ್ಲರ್‍ನ ಬಗ್ಗೆ ಇಂಥದ್ದೇ ಒಂದು ಜೋಕ್ ಇದೆ. ಹಿಟ್ಲರ್‍ನಿಗೆ ವೈರಿಗಳಿರಲಿಲ್ಲ. ಯಾಕೆಂದರೆ ಅವರೆಲ್ಲರನ್ನೂ ಆತ ಪರಿಹರಿಸಿಬಿಟ್ಟಿದ್ದ – ಎಂದು. ವಿಶ್ವನಾಥ್ ಅವರು ಎತ್ತಿರುವ ಪ್ರಶ್ನೆ ಈ ನಗೆಹನಿಗೆ ಬಹು ಹತ್ತಿರದ್ದು. ತನ್ನ ವಿರೋಧಿಗಳನ್ನೂ ಅವರ...

Featured ಅಂಕಣ

ಶುಷ್ಕ ಅರ್ಥಶಾಸ್ತ್ರಕ್ಕೆ ಮಾನವೀಯ ಸ್ಪರ್ಶ : ರಿಚರ್ಡ್ ಥೇಲರ್ ಅವರಿಗೆ ನೊಬೆಲ್ ಪ್ರಶಸ್ತಿ

ಗಾಂಧಿ ಬಜಾರಲ್ಲಿ ತರಕಾರಿಯಂಗಡಿಯ ಮುಂದೆ ನಿಂತು “ಬೆಂಡೆಕಾಯಿ ಎಷ್ಟಮ್ಮ?” ಎಂದು ಕೇಳುತ್ತೀರಿ. “ಕಾಲು ಕೇಜಿಗೆ ಇಪ್ಪತ್ತೇ ರುಪಾಯಿ ಅಣ್ಣ” ಅನ್ನುತ್ತಾಳೆ ನಿಂಗಮ್ಮ. “ಸರಿ, ಕಾಲು ಕೆಜಿ ಕೊಡಮ್ಮ” ಎಂದು ಚೀಲ ತುಂಬಿಸಿಕೊಳ್ಳುತ್ತೀರಿ. ಅದರ ಮರುವಾರ ಮತ್ತೆ ಬಜಾರಲ್ಲಿಅದೇ ಅಂಗಡಿಯ ಮುಂದೆ ಅದೇ ಪ್ರಶ್ನೆ ಕೇಳಿದಿರೆನ್ನಿ. ಈ ಸಲ...

Featured ಅಂಕಣ

ಟಿಪ್ಪು ಜಯಂತಿಯ ಬೆನ್ನಿಗೇ ಶುರುವಾಯಿತು ಜೆಹಾದಿ ಕಗ್ಗೊಲೆಗಳ ಸಾಲು ಸಾಲು! ಯಾಕಿರಬಹುದು ಯೋಚಿಸಿದ್ದೀರಾ?

ಟಿಪ್ಪು ಜಯಂತಿಯಿಂದ ಯಾರಿಗೆ ಉಪಕಾರ ಎಂದು ಕೆಲವರು ಕೇಳುತ್ತಿದ್ದಾರೆ. ಕಳೆದ ವರ್ಷ ಸರಕಾರ ಪ್ರತಿ ಜಿಲ್ಲಾಡಳಿತಕ್ಕೆ 50,000 ರುಪಾಯಿ, ಪ್ರತಿ ತಾಲೂಕು ಕಚೇರಿಗೆ 25,000 ರುಪಾಯಿ ಕೊಟ್ಟು “ಟಿಪ್ಪು ಸುಲ್ತಾನ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸತಕ್ಕದ್ದು” ಎಂಬ ಖಡಕ್ ಸುತ್ತೋಲೆ ಕಳಿಸಿತ್ತು. ನಮ್ಮೂರ ಕಡೆ ಒಂದು ತಾಲೂಕು ಪಂಚಾಯಿತಿಗೂ 25,000 ರುಪಾಯಿಗಳು...

Featured ಅಂಕಣ

ವಿಕ್ರಮ ಮತ್ತು ಬೇತಾಳ (ಒಂದು ಹೊಸಾ ಕಥೆ)

ಛಲ ಬಿಡದ ವಿಕ್ರಮ ದೀಪಾವಳಿ ಅಮಾವಾಸ್ಯೆಯ ಆ ರಾತ್ರಿ ಮತ್ತೆ ಸ್ಮಶಾನಕ್ಕೆ ಹೋಗಿ ಬೇತಾಳವನ್ನು ಹೆಗಲಿಗೇರಿಸಿಕೊಂಡು ಖಡ್ಗವನ್ನು ಕೈಯಲ್ಲಿ ಹಿಡಿದು ನಡೆಯತೊಡಗಿದನು. ವಿಕ್ರಮನ ಬೆನ್ನೇರಿದ ಬೇತಾಳ ಪ್ರತೀ ಸಾರಿಯಂತೆ ಮತ್ತೊಂದು ಹೊಸಾ ಕಥೆ ಹೇಳಲು ಶುರು ಮಾಡಿತು. “ರಾಜಾ ವಿಕ್ರಮಾ,ಒಂದಾನೊಂದು ಕಾಲದಲ್ಲಿ ಮಹೇಶನೂರು ಎನ್ನುವ ರಾಜ್ಯದಲ್ಲಿ ಜನಾನುರಾಗಿಯಾಗಿದ್ದ ರಾಜನ...

Featured ಅಂಕಣ

ವೈಭವದ ಉತ್ಸವಗಳು ಬೇಕೆ??

ಹಬ್ಬ ಅಂದರೆ ಸಾಕು ನೂರಾರು ಕೆಲಸ. ಎಷ್ಟು ತಯಾರಿ ಮಾಡಿಕೊಂಡರೂ ಮುಗಿಯುವುದೇ ಇಲ್ಲ. ಹೀಗೆಯೇ ಹಬ್ಬದ ಕೆಲಸಗಳಲ್ಲಿ ಮಗ್ನಳಾಗಿದ್ದ ಅಮ್ಮನನ್ನು ಕರೆದುಕೊಂಡು ಬಂದು ಟಿ.ವಿ. ಮುಂದೆ ಕೂರಿಸಿ “ನೋಡು ಅಯೋಧ್ಯೆಯ ದೀಪಾವಳಿ” ಎಂದೆ. ಒಂದೂ ಮುಕ್ಕಾಲು ಲಕ್ಷಕ್ಕಿಂತಲೂ ಹೆಚ್ಚು ದೀಪಗಳಿಂದ ಕಂಗೊಳಿಸುತ್ತಿದ್ದ ಅಯೋಧ್ಯೆ, ಸರಯೂ ಆರತಿ, ಲೇಸರ್ ಶೋ ಇದನ್ನೆಲ್ಲಾ ನೋಡಿ “ಎಷ್ಟು...

Featured ಅಂಕಣ ಪ್ರವಾಸ ಕಥನ

ತಮಿಳುನಾಡಿನ ಸುಂದರ ದೇವಾಲಯಗಳು

ಕಳೆದ ದಸರಾದಲ್ಲಿ ಕಾಶೀ ವಿಶ್ವನಾಥನ ದರ್ಶನ ಪಡೆದಿದ್ದ ನಾವು ಈ ಬಾರಿಯ ದಸರಾ ರಜೆಯಲ್ಲಿ ರಾಮೇಶ್ವರ ಹೊರಡುವ ಯೋಜನೆ ಹಾಕಿಕೊಂಡಿದ್ದೆವು. ಕಾಶೀ ಹೋಗಿ ಬಂದ ವರುಷದೊಳಗೆ ರಾಮೇಶ್ವರಕ್ಕೆ ಹೋಗಬೇಕೆಂಬ ಪ್ರತೀತಿ ನಮ್ಮಲ್ಲಿದೆ ಮತ್ತು ಕಾಶೀಯಿಂದ ತಂದ ಗಂಗಾಜಲದಿಂದ ಶ್ರೀ ರಾಮನಾಥನಿಗೆ ಅಭಿಷೇಕ ಮಾಡಿಸಬೇಕೆಂಬ ಪ್ರತೀತಿ ಕೂಡ. ದಸರಾ, ವಾರಂತ್ಯ ಮತ್ತು ಗಾಂಧೀ ಜಯಂತಿಗಳಿಂದ...

Featured ಪ್ರಚಲಿತ

ಇಂದು ಪೊಲೀಸರಿಗೆ ಒದ್ದವರೇ ನಾಳೆ ಮತ್ತೆ ಗದ್ದುಗೆಯಲ್ಲಿ ಕೂತರೆ ನಾವು ನೀವು ದೇಶಾಂತರ ಹೋಗಬೇಕಾದೀತು!

ಸಿದ್ದರಾಮಯ್ಯನವರ ಸರಕಾರದ ಸಾಧನೆ ಇದೀಗ ಇಲ್ಲಿಗೆ ಬಂದು ನಿಂತಿದೆ. ಮೊನ್ನೆಯಷ್ಟೇ ಐಬಿಎಮ್ ಉದ್ಯೋಗಿ ನಂದಿನಿ ಮೇಲೆ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಪುಂಡರು ದಾಳಿ ಮಾಡಿ ಆಕೆಯ ಕೈ ಮುರಿದು, ಹಣೆಯಲ್ಲಿ ರಕ್ತ ಬರುವಂತೆ ಹೊಡೆದು, ಕಾರಿನ ಗಾಜು, ಬಂಪರ್, ಟೈರ್ ಸಮೇತ ಎಲ್ಲವನ್ನೂ ಪುಡಿ ಮಾಡಿ ಹಾಕಿದ್ದರು. ಅಂದು ನಂದಿನಿಯವರು ಹೇಳಿದ್ದು ಒಂದೇ ಮಾತು: “ನನ್ನನ್ನು ಈ...

Featured ಪ್ರಚಲಿತ

ತನಿಖಾದಳದ ಕಲೆಗಾರನೂ ಕುಂಕುಮ ಶೋಭಿತ ಕೊಲೆಗಾರನೂ

ದಿನ ಹೋದಂತೆ ಎಸ್‍ಐಟಿ ಹಾಸ್ಯಾಸ್ಪದವಾಗುತ್ತಿದೆ. ಇವರು ನಿಜಕ್ಕೂ ತನಿಖೆ ಮಾಡುತ್ತಿದ್ದಾರಾ ಅಥವಾ ತನಿಖೆಯ ಹೆಸರಲ್ಲಿ ಅನಗತ್ಯ ಕಾಲಹರಣ ಮಾಡುತ್ತಿದ್ದಾರಾ ಎಂಬ ಅನುಮಾನಗಳು ರಾಜ್ಯದ ಜನರಲ್ಲಿ ಹೆಚ್ಚುತ್ತಿವೆ. ಇದಕ್ಕೆ ಇರುವ ಕಾರಣಗಳು: (1) ತನಿಖೆಯ ಪ್ರಾರಂಭದಲ್ಲಿ ಎಸ್‍ಐಟಿ “ಗೌರಿಯ ಕೊಲೆಯಾದಾಗ ಸ್ಥಳದಲ್ಲಿ ಯಾವ ಪ್ರತ್ಯಕ್ಷದರ್ಶಿಯೂ ಇರಲಿಲ್ಲ” ಎಂದು...

Featured ಅಂಕಣ

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ

ಸ್ನಾನ ಮಾಡುವುದಿಲ್ಲವಂತೆ! ಊಟವಿಲ್ಲ, ನಿದ್ರೆಯಿಲ್ಲ; ಒಂದೆಡೆ ಕೂರದೆ ಸದಾ ಅತ್ತಿಂದಿತ್ತ ಓಡಾಡುತ್ತಲೇ ಇರುವರಂತೆ! ಉಡುಗೆಯ ಮೇಲೆ ಎಚ್ಚರವಿಲ್ಲ. ಮಾತಿನಲ್ಲಿ ಅರ್ಥವಿಲ್ಲ! ನಿತ್ಯಾಹ್ನಿಕವಿಲ್ಲ, ಶಾರದೆಯ ಪೂಜೆಯಿಲ್ಲ; ನರಸಿಂಹ ವನದಲ್ಲಿ ಏನನ್ನೋ ಗುನುಗುನಿಸುತ್ತಾ ಓಡಾಡುವರಂತೆ! ಮನಸ್ಸು ಉದ್ವಿಗ್ನವಾಗಿದೆಯಂತೆ! ಅವರಿಗೆ ಬುದ್ಧಿ ಭ್ರಮಣೆಯಂತೆ; ಪೂರ್ವಾಶ್ರಮದ ತಾಯಿ...