ಪುಟ್ಟ ರೆಕ್ಕೆಗಳು ಗಾಜಿಗೆ ಬಡಿದುಕೊಳ್ಳುತ್ತ ಹಾರುವ ಸದ್ದು ಮತ್ತೆ ಬೀಳುವ ಸದ್ದು. ಸದ್ದು ಬಂದೆಡೆಗೆ ಹೋಗಿ ನೋಡಿದರೆ ದೊಡ್ಡ ನೊಣವೊಂದು ಕಿಟಕಿಯ ಗಾಜಿನಿಂದ ತೂರಿಕೊಂಡು ಹೊರಹೋಗಲು ಹವಣಿಸುತ್ತಿತ್ತು. ನಾನು ಕಿಟಕಿಯನ್ನು ತೆರೆಯಲು ಪಟ್ಟ ಪ್ರಯತ್ನ ಫಲಕೊಡಲಿಲ್ಲ. ಗಂಡಸರು ಹೆಂಗಸರೆನ್ನದೇ ಮನೆಮಂದಿಯೆಲ್ಲ ದುಡಿಯಲು ಹೋಗುವ ಮನೆಗಳಲ್ಲಿ ಕಿಟಕಿಗಳ ಬಾಗಿಲುಗಳನ್ನು ತೆರೆಯುವ...
Featured
ನಮೋ ‘ಅರಿಹಂತಾಯ’: ವಿಕ್ಷಿಪ್ತ ಶಕ್ತಿಗಳ ಅಣ್ವಸ್ತ್ರ ಬೆದರಿಕೆಗೆ ಭಾರತದ ಸುರಕ್ಷಾ ಕವಚ.
‘ಅರಿಹಂತ’ ಅಂದರೆ ಸಂಸ್ಕೃತ ಭಾಷೆಯಲ್ಲಿ ‘ಶತ್ರುಗಳ ವಿನಾಶಕ’ ಎಂದರ್ಥ (ಅರಿ=ಶತ್ರು. ಹಂತ=ವಿನಾಶಕ). ’ಐಎನ್‌ಎಸ್ ಅರಿಹಂತ್’ ಭಾರತದ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆ. ನವೆಂಬರ್ ೫ಕ್ಕೆ ಅರಿಹಂತ ಹಿಂದೂ ಮಹಾಸಾಗರದಲ್ಲಿ ಸುಮಾರು ೩೦೦ಮೀಟರ್ ಆಳಕ್ಕೆ ಧುಮುಕಿ ಮೊದಲ ಹಂತದ ಗಸ್ತು ಪರೀಕ್ಷಣವನ್ನು ಯಶಸ್ವಿಯಾಗಿ ಪೂರೈಸಿದೆ. ಇದರ ಲೋಕಾರ್ಪಣೆಯೊಂದಿಗೆ...
ಋತುಗಳೆಲ್ಲಿ ಕಳೆದುಹೋದವು?
“ಈ ಸಿಟಿಗಳಲ್ಲಿ ಸೀಜನ್ನುಗಳೇ (Season) ಇಲ್ಲ” ಎಂಬ ವಿಚಾರವನ್ನು ಪದೇ ಪದೇ ಎತ್ತಿ ಚರ್ಚಿಸಿ ನಮಗೆಲ್ಲ ಬೇಸರ ತರಿಸುತ್ತಿದ್ದ ಸಹೋದ್ಯೋಗಿಯೊಬ್ಬನಿದ್ದ. ಉಪಮನ್ಯು ಎಂದು ಹೆಸರು. `ಅಸ್ತವ್ಯಸ್ತವಾಗಿ ಹರಡಿಕೊಂಡ ಕಸದ ರಾಶಿಗಳು ಮತ್ತು ರಾಡಿಯಾದ ನೆಲವನ್ನು ನೋಡಿ ಮಳೆಗಾಲವೆಂದು ಭಾವಿಸಬೇಕು; ಧೂಳು ಗಾಳಿಯನ್ನು ನೋಡಿ ಚಳಿಗಾಲವನ್ನು ಕಲ್ಪಿಸಿಕೊಳ್ಳಬೇಕು; ಟಾರು...
ದೇಶದ ಉಳಿವಿಗಾಗಿ ನೆತ್ತರ ಸಂಬಂಧ ಕತ್ತರಿಸಿಕೊಂಡ ವಿಜಯಲಕ್ಷ್ಮಿ ಪಂಡಿತ್ – ತೆರೆಮರೆಗೆ ಸರಿದು ಐವತ್ತು ವರ್ಷ
ಶ್ರೀಮತಿ ಗಾಂಧಿಯವರ ಬಗ್ಗೆ ನಿಮ್ಮ ಅಭಿಪ್ರಾಯ ಏನು? – ಪತ್ರಕರ್ತ ಆಕೆಯ ಬಳಿ ಕೇಳಿದ. ಉತ್ತರಿಸಲಿದ್ದ ಆಕೆಗೆ 78ರ ವೃದ್ಧಾಪ್ಯ. ಬೆಳ್ಳಿಗೂದಲು. ನೆರಿಗೆಗಟ್ಟಿದ ಹಣೆ. ಪುಟ್ಟ ಕಣ್ಣು. ಕುಗ್ಗಿದ ದೇಹ. ಆದರೆ ಆಕೆಯ ಉತ್ತರದಲ್ಲಿ ಅಂಥ ವೃದ್ಧಾಪ್ಯದ ಲಕ್ಷಣಗಳೊಂದೂ ಇರಲಿಲ್ಲ. ಅತ್ಯಂತ ಖಚಿತ ಧ್ವನಿಯಲ್ಲಿ, ಯಾವ ನಡುಕವೂ ಇಲ್ಲದೆ ಆ ವೃದ್ಧೆ ಹೇಳಿದರು: “ಆಕೆ...
ವಿಶ್ವಯುದ್ಧದ ಶತಮಾನ ಹೊಸ್ತಿಲಲ್ಲಿ ಭಾರತೀಯರ ಪರಾಕ್ರಮದ ಹಿನ್ನೋಟ; ಸಂಸ್ಮರಣೆಯ ಮುನ್ನೋಟ.
-“ಮೊದಲ ಮಹಾಯುದ್ಧ ಕೊನೆಗೊಂಡ ಆರ್ಮಿಸ್ಟಿಸ್ ದಿನಕ್ಕೆ ನವೆಂಬರ್ 11, 2018ರಂದು ಸರಿಯಾಗಿ ನೂರು ವರ್ಷಗಳು. ಅಂದರೆ ಭಾರತೀಯರ ಬಲಿದಾನಕ್ಕೂ ಶತಮಾನದ ಶೋಕ. ಮರೆತಿರುವ ಇತಿಹಾಸವನ್ನು ನೆನಪಿಸುವ ಅವಕಾಶ.” ಕೇಸರಿ ಬಣ್ಣ ಎಂದರೆ ತ್ಯಾಗ, ಬಲಿದಾನದ ಸಂಕೇತ. ಕೇಸರಿ ಗೊಂಡೆಹೂವು (ಮಾರಿಗೋಲ್ಡ್) ಸುಲಭ ಲಭ್ಯತೆ, ಸುಗಂಧ, ಔಷಧೀಯ ಗುಣಗಳಿಗೆ ಹೆಸರುವಾಸಿ. ಇನ್ನು...
ಕರಾವಳಿಯ ಸಾಹಿತ್ಯ ಕುಸುಮಗಳು
ಕನ್ನಡ ಸಾಹಿತ್ಯಕ್ಕೆ ಕರಾವಳಿ ಕರ್ನಾಟಕದ ಕೊಡುಗೆ ಅಪಾರವಾದದ್ದು. ಸಾಹಿತ್ಯದ ಎಲ್ಲಾ ಪ್ರಕಾರಗಳಿಗೆ ಅನನ್ಯ ಕೊಡುಗೆ ನೀಡಿದ ಹಲವರಿಗೆ ಜನ್ಮದಾತೆ ಕರಾವಳಿ. ಅಂತಹ ಕೆಲವರ ಪರಿಚಯದ ಪ್ರಯತ್ನ ಇಲ್ಲಿದೆ. ನಡೆದಾಡುವ ಜ್ಞಾನಕೋಶ ಕಾರಂತಜ್ಜ ಎಂದೇ ಚಿರಪರಿಚಿತರಾಗಿದ್ದ ಕೋಟ ಶಿವರಾಮ ಕಾರಂತರು ೧೯೦೨, ಅಕ್ಟೋಬರ್ ೧೦ರಂದು ಉಡುಪಿ ಜಿಲ್ಲೆಯ ಕೋಟ ಊರಿನಲ್ಲಿ ಜನಿಸಿದರು. ‘ಕಡಲ ತೀರದ...
ಚೊಕ್ಕಾಡಿಯ ಕಾವ್ಯವೃಕ್ಷ
ಚೊಕ್ಕಾಡಿ ಸುಳ್ಯದ ಒಂದು ಪುಟ್ಟ ಹಳ್ಳಿ. ಇಲ್ಲಿ ವರ್ಷದ ಆರು ತಿಂಗಳು ಬಸಿರಿನ ಹೆಂಗಸಿನ ಏದುಸಿರಿನಂತೆ ನದಿ-ತೊರೆಗಳು ಉಕ್ಕಿ ಹರಿದರೆ ಮಿಕ್ಕ ಆರು ತಿಂಗಳು ಅವು, ಪೋಷಣೆಯಿಲ್ಲದೆ ಸೊರಗಿದ ತೆಳು ಜಡೆಯಂತೆ ಕಾಣುತ್ತವೆ. ಕುಮಾರನ ಹೆಸರಿದ್ದರೂ ಇಲ್ಲಿನ ಬೆಟ್ಟ, ಹತ್ತಿ ಬರುವ ಚಾರಣಿಗರಿಗೆ ನೀರಿಳಿಸದಿದ್ದರೆ ಕೇಳಿ! ಇನ್ನು ಮಳೆಗಾಲದಲ್ಲಿ ಮುಗಿಲ ಮುಸುಕಿನ ಮರೆಯಲ್ಲಿ ಆಕಾಶ...
ಪಟೇಲ್ ಎಂಬ ಉಕ್ಕಿನ ಪುರುಷ, ಸ್ವತಂತ್ರ ಭಾರತದ ಐಕ್ಯತೆಯ ಪ್ರತೀಕ
“ಪ್ರಾಚೀನ ಭಾರತ ಅನೇಕ ವರ್ಷಗಳ ಕಾಲ ಬ್ರಿಟಿಷರ ಗುಲಾಮಗಿರಿಯಲ್ಲಿತ್ತು ಎಂಬುದು ಅತ್ಯಂತ ತಲೆತಗ್ಗಿಸುವ ವಿಚಾರ. ಆದರೆ ಈಗ ಸ್ವಾತಂತ್ರ್ಯ ಲಭಿಸಿದೆ ಎಲ್ಲಾ ಭಾರತೀಯರ ಕರ್ತವ್ಯವೆಂದರೆ ಸ್ವತಂತ್ರ ಭಾರತ ಮತ್ತೊಮ್ಮೆ ಗುಲಾಮವಾಗದಂತೆ ನೋಡಿಕೊಳ್ಳಬೇಕು. ಏನಿದ್ದರೂ ಅದು ಮುಂದೆ ಸಾಗಬೇಕು, ಹಿನ್ನಡೆಯಬಾರದು ಆಗಲೇ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಒದಗುತ್ತದೆ.”...
ಮನಸ್ಸಿಗೆ ಮುದ ನೀಡಿದ ಸಿನಮಮ್ ಐಲ್ಯಾಂಡ್ ; ಉದಾರತೆಯಿಂದ ಜೀವಭಿಕ್ಷೆ ನೀಡಿದ ಉದವಳವೇ!
ನುವಾರ ಎಲಿಯಾದ ಸುಂದರ ಪ್ರಕೃತಿ ಸೌಂದರ್ಯ ಸವಿದು, ಅಲ್ಲಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಹಾರ್ಟನ್ ಪ್ಲೈನ್ಸ್ ಎನ್ನುವ ನ್ಯಾಷನಲ್ ಪಾರ್ಕ್ ನಲ್ಲಿ ಚಾರಣ ಮಾಡಿ ಬದುಕಿಗೆ ಬೇಕಾಗುವ ಅತಿ ಅವಶ್ಯಕ ಅನುಭವ ಪಾಠ ಕಲಿತು, ರಾತ್ರಿ ದಿಂಬಿಗೆ ತಲೆ ಕೊಟ್ಟದಷ್ಟೇ ನೆನಪು ದಣಿದ ದೇಹವನ್ನ ನಿದ್ರಾದೇವಿ ಯಾವಾಗ ಅವರಿಸಿಕೊಂಡಳೋ ತಿಳಿಯದು. ಮರುದಿನ ಬೆಳಿಗ್ಗೆ ನೂರಾರು ವರ್ಷ...
ಭಾರತ-ಜಪಾನ್, ಏಷ್ಯಾದ ಹೊಸ “ಭಾಯಿ ಭಾಯಿ”.
” 2018, ಅಕ್ಟೋಬರ್ 28 ಹಾಗೂ 29ರಂದು ಎರಡು ದಿನಗಳ ಕಾಲ ಭಾರತದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಇದು ಮೋದಿ-ಆಬೆ ನೇತೃತ್ವದಲ್ಲಿ ಉಭಯ ದೇಶಗಳ ನಡುವಿನ ಐದನೇ ವಾರ್ಷಿಕ ಶೃಂಗಸಭೆ. ಕಳೆದ ಐದು ವರ್ಷಗಳಲ್ಲಿ ಜಪಾನ್ ದೇಶಕ್ಕೆ ಪ್ರಧಾನಿಯವರ ಮೂರನೇ ಭೇಟಿ. ಹಾಗೂ ವಿವಿಧ...