ಹ್ಯೂಮನ್ಸ್ ಆಫ್ ಬಾಂಬೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡ – ‘ನರೇಂದ್ರ ಮೋದಿ ಕಥನ – 1’
“ಎಂಟು ಜನರ ನನ್ನ ಕುಟುಂಬ 40×12 ಅಡಿಯ ಮನೆಯಲ್ಲಿ ವಾಸಿಸುತ್ತಿದ್ದೆವು – ಅದು ಸಣ್ಣ ಮನೆ, ಆದರೆ ನಮಗೆ ಸಾಕಾಗಿತ್ತು. ನಮ್ಮ ದಿನಚರಿಯು ಬೆಳಗ್ಗೆ 5 ಗಂಟೆಗೆ, ನನ್ನ ತಾಯಿಯು ನವಜಾತ ಶಿಶುಗಳಿಗೆ ಮತ್ತು ಸಣ್ಣಮಕ್ಕಳಿಗೆ ಸಾಂಪ್ರದಾಯಿಕ ಔಷಧ ಮತ್ತು ಆರೈಕೆಯನ್ನು ನೀಡುವುದರೊಂದಿಗೆ ಆರಂಭವಾಗುತ್ತಿತ್ತು. ನನ್ನ ತಾಯಿಗೆ ಶಿಕ್ಷಣವನ್ನು ಪಡೆಯುವ ಅದೃಷ್ಟ ಇರಲಿಲ್ಲ; ಆದರೆ ದೇವರು ಕರುಣಾಮಯಿ, ರೋಗಗಳನ್ನು ಗುಣಪಡಿಸುವ ಮತ್ತು ಆರೈಕೆಯನ್ನು ಮಾಡುವ ವಿಶಿಷ್ಟವಾದ ಶೈಲಿಯನ್ನು ಆಕೆ ಬಲ್ಲವಳಾಗಿದ್ದಳು. ಅಮ್ಮಂದಿರು ನಮ್ಮ ಮನೆಯ ಮುಂದೆ ಬೆಳಗ್ಗೆಯೇ, ನನ್ನ ತಾಯಿಯ ಸ್ಪರ್ಶ ಚಿಕಿತ್ಸೆಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದರು.
ಬಳಿಕ, ರೈಲ್ವೆನಿಲ್ದಾಣದಲ್ಲಿ ನನ್ನ ತಂದೆಯ ಟೀ ಸ್ಟಾಲ್ ತೆರೆದು, ಸ್ವಚ್ಛಗೊಳಿಸಿ ಶಾಲೆಗೆ ತೆರಳುತ್ತಿದ್ದೆ. ಶಾಲೆ ಮುಗಿಯುತ್ತಿದ್ದಂತೆ, ನಾನು ತಂದೆಗೆ ಸಹಾಯ ಮಾಡಲು ಓಡಿಬರುತ್ತಿದ್ದೆ, ಆದರೆ ನಾನು ನಿಜವಾಗಿಯೂ ದೇಶದ ಬೇರೆಬೇರೆ ಜನರನ್ನು ಭೇಟಿಯಾಗಲು ಕಾತರದಿಂದ ಎದುರುನೋಡುತ್ತಿದ್ದೆ. ಅಲ್ಲಿ ಬರುತ್ತಿದ್ದವರಿಗೆ ಚಹಾ ನೀಡುತ್ತಿದ್ದೆ ಮತ್ತು ಅವರ ಕಥೆಗಳಿಗೆ ಕಿವಿಯಾಗುತ್ತಿದ್ದೆ – ಹೀಗೆ ನಾನು ಹಿಂದಿ ಮಾತನಾಡಲು ಕಲಿತೆ. ಕೆಲವು ವ್ಯಾಪಾರಿಗಳು ‘ಬಾಂಬೆ’ ಬಗ್ಗೆ ಮಾತನಾಡುವುದು ಕೇಳುತ್ತಿದ್ದೆ. “ಎಂದಾದರೂ ನಾನು ಈ ಕನಸುಗಳ ನಗರವನ್ನು ನೋಡಲು ಸಾಧ್ಯವೇ?” ಎಂದು ಅಚ್ಚರಿಯಾಗುತ್ತಿದ್ದೆ. ನಾನು ಯಾವಾಗಲೂ ಕುತೂಹಲಕಾರಿಯಾಗಿದ್ದೆ – ನಾನು ಗ್ರಂಥಾಲಕ್ಕೆ ಹೋಗುತ್ತಿದ್ದೆ ಮತ್ತು ಅಲ್ಲಿ ಕೈಗೆ ಸಿಗುತ್ತಿದ್ದ ಪುಸ್ತಕಗಳನ್ನು ಓದುತ್ತಿದ್ದೆ. ನನ್ನ ಜೀವನದ ಮೊದಲ ಸಂಘದ ಸಭೆಯಲ್ಲಿ ಭಾಗವಹಿಸಿದಾಗ ನನಗೆ ಎಂಟು ವರ್ಷ ವಯಸ್ಸಾಗಿತ್ತು. ಒಂಬತ್ತು ವರ್ಷ ವಯಸ್ಸಾದಾಗ ಇತರರ ಜೀವನದ ಒಳಿತಿಗಾಗಿ ಶ್ರಮಿಸುವ ಪ್ರಯತ್ನದ ಭಾಗವಾಗಿದ್ದೆ. ಗುಜರಾತಿನ ಕೆಲವು ಭಾಗಗಳಲ್ಲಿ ಸಂಭವಿಸಿದ ನೆರೆ ಪರಿಹಾರದ ಸಂದರ್ಭದಲ್ಲಿ, ನೆರೆಯಿಂದ ತೊಂದರೆಗೆ ಒಳಗಾದವರಿಗಾಗಿ ನನ್ನ ಸ್ನೇಹಿತರೊಂದಿಗೆ ಸೇರಿ ಆಹಾರದ ಅಂಗಡಿಗಳನ್ನು ಹಾಕಿದ್ದೆವು. ಇದರಿಂದ ಹೆಚ್ಚಿನದ್ದನ್ನು ಮಾಡುವ ಇಚ್ಛೆ ನನ್ನಲ್ಲಿತ್ತು, ಆದರೆ ನಮ್ಮಲ್ಲಿ ಸಣ್ಣ ದಾರಿಗಳಿವೆ ಎನ್ನುವುದರ ಅರಿವಿತ್ತು. ಆದರೂ, ಆ ವಯಸ್ಸಿನಲ್ಲಿ ದೇವರು ನಮ್ಮನ್ನೆಲ್ಲಾ ಒಂದೇ ರೀತಿಯಾಗಿ ಮಾಡಿದ್ದಾನೆ ಎಂದು ಬಲವಾಗಿ ನಂಬಿದ್ದೆ. ನಾನು ಹುಟ್ಟಿದ ಸಂದರ್ಭ ಇಲ್ಲಿ ವಿಷಯವಾಗುವುದಿಲ್ಲ, ಬದಲಾಗಿ ನಾನು ಇನ್ನೂ ಹೆಚ್ಚಿನದ್ದಾಗಿರಬಹುದು. ಆದ್ದರಿಂದ ನೀವು ನನ್ನ ಕಷ್ಟ-ಹೋರಾಟಗಳು ಏನಿತ್ತು? ಎಂದು ಕೇಳಿದರೆ, ನನ್ನ ಉತ್ತರ – ‘ಏನೂ ಇರಲಿಲ್ಲ’ ಎಂದೇ ಆಗಿದೆ. ಏನೂ ಇಲ್ಲದ ಸ್ಥಿತಿಯಿಂದ ಬಂದೆ, ಐಷಾರಾಮಿ ತಿಳಿದಿರಲಿಲ್ಲ ಮತ್ತು ‘ಉತ್ತಮ’ ಜೀವನವನ್ನು ನೋಡಿರಲಿಲ್ಲ, ಆದ್ದರಿಂದ ನನ್ನ ಸಣ್ಣ ಪ್ರಪಂಚದಲ್ಲಿ ನಾನು ಸಂತೋಷದಿಂದ ಇದ್ದೆ.
ನನ್ನ ಹಾದಿ ಎಂದಾದರು ಕಷ್ಟವಾಗಿರುತ್ತಿದ್ದರೆ, ನನ್ನದೇ ಹಾದಿಯನ್ನು ಮಾಡಿಕೊಂಡೆ. ನನಗೆ ತೀಕ್ಷ್ಣವಾಗಿ ಮತ್ತು ಅಂದವಾಗಿ ಕಾಣಿಸಿಕೊಳ್ಳುವ ಅವಶ್ಯಕತೆಯಿತ್ತು. ಆದ್ದರಿಂದ ಇಸ್ತ್ರಿ ಮಾಡಿಕೊಳ್ಳುವುದು ಸಾಧ್ಯವಾಗದೇ ಇದ್ದರೂ, ಕಲ್ಲಿದ್ದಲ್ಲನ್ನು ಬಿಸಿ ಮಾಡಿ, ಹಳೆಯ ಲೋಟವನ್ನು ಬಟ್ಟೆಯೊಂದಕ್ಕೆ ಸುತ್ತಿ ನನ್ನ ಬಟ್ಟೆಗಳಿಗೆ ಒತ್ತುತ್ತಿದ್ದೆ. ಪರಿಣಾಮ ಒಂದೇ ಅಲ್ಲವೇ? ಮತ್ತೆ ಯಾಕೆ ದೂರು ಹೇಳಲಿ?
ಇವೆಲ್ಲಾ, ಇಂದು ನಾನು ಏನಾಗಿದ್ದೇನೋ ಅದರ ಮೊದಲಿನ ದಿನಗಳು. ಅಂದು ನನಗೆ ಇವೆಲ್ಲಾ ತಿಳಿದೇ ಇರಲಿಲ್ಲ. ಚಹಾ ನೀಡುತ್ತ ಓಡಾಡುತ್ತಿದ್ದ, ತಂದೆಯ ಚಹಾ ಅಂಗಡಿಯನ್ನು ಸ್ವಚ್ಛಗೊಳಿಸುತ್ತಿದ್ದ 8 ವರ್ಷ ವಯಸ್ಸಿನ ನರೇಂದ್ರ ಮೋದಿಯಲ್ಲಿ ಎಂದಾದರೂ ಭಾರತದ ಪ್ರಧಾನಿಯಾಗುವ ಕನಸು ಕಂಡಿದ್ದೆಯಾ, ಎಂದು ಕೇಳಿದರೆ – ಉತ್ತರ ಖಂಡಿತವಾಗಿಯೂ ಇಲ್ಲ ಎಂದೇ ಆಗಿದೆ. ಇದು ಯೋಚನೆಗೂ ಬಹಳ ದೂರದ್ದಾಗಿತ್ತು.
#TheModiStory
ಮೂಲ: ದಿ ಹ್ಯೂಮನ್ಸ್ ಆಫ್ ಬಾಂಬೆ