ಅಂಕಣ

ಅಂಕಣ

ಸೋಷಿಯಲ್ ಐಸೋಲೇಷನ್’ ಎಂಬ ಕ್ಯಾನ್ಸರ್ ಸೈಡ್ ಎಫೆಕ್ಟ್!

“ಆಮ್ ಐ ಕರ್ಸಡ್” ಎಂಬ ಪ್ರಶ್ನೆಯನ್ನ ಓದಿ ನಿಟ್ಟುಸಿರಿಟ್ಟೆ. ಕ್ಯಾನ್ಸರ್ ಅಂದಾಕ್ಷಣ ಸೋಶಿಯಲ್ ಡಿಸ್ಕ್ರಿಮಿನೇಷನ್, ಸೋಶಿಯಲ್ ಐಸೋಲೇಷನ್ ಎಂಬಂತಹ ಪದಗಳು ಕೂಡ ಸಾಮಾನ್ಯವಾಗಿ ಕೇಳಿ ಬರುತ್ತದೆ. ಕ್ಯಾನ್ಸರ್ ಖಾಯಿಲೆಯ ಸೈಡ್ ಎಫೆಕ್ಟ್’ಗಳೇ ಇವೆಲ್ಲ. ಒಂದೆಡೆ ಕೀಮೋನಿಂದಾಗಿ ದೈಹಿಕ ಸೈಡ್ ಎಫೆಕ್ಟ್’ಗಳನ್ನು ಅನುಭವಿಸುವಂತಾದರೆ, ಇನ್ನೊಂದೆಡೆ ಸೋಶಿಯಲ್ ಐಸೋಲೇಷನ್ ಎಂಬಂತಹ...

Featured ಅಂಕಣ

ಅಪ್ಪನಂತಾಗದ ದಿಟ್ಟ ಮಗಳು ಇಂದಿರಾ!

ಇಂದಿರಾ ಗಾಂಧಿಯವರ ವ್ಯಕ್ತಿತ್ವವನ್ನು ಅವಲೋಕಿಸುವಾಗ, ಆಕೆಯಲ್ಲೊಂದು ಅಭದ್ರತಾ ಭಾವವಿದ್ದಿದ್ದದ್ದು ಕಾಣುತ್ತದೆ. ಆ ಅಭದ್ರತೆಯ ಭಾವವೇ ಆಕೆಯ ವರ್ತನೆಯನ್ನು ನಿಯಂತ್ರಿಸುತ್ತಿತ್ತು. ಸಿಟ್ಟು, ಸೇಡು, ಸರ್ವಾಧಿಕಾರಿ ಮನಸ್ಸು, ಸಂಶಯ, ಅಸಹನೆ, ಅಳುಕು ಇವೆಲ್ಲವೂ ಮೊಳಕೆಯೊಡೆದದ್ದೇ ಆ ಅಭದ್ರತೆಯ ಕಾರಣದಿಂದ. ಅವರ ಜೀವನದ ವೈರುಧ್ಯಗಳನ್ನೇ ನೋಡಿ, ಒಮ್ಮೊಮ್ಮೆ ಗಟ್ಟಿತನದಿಂದ...

ಸ್ಪ್ಯಾನಿಷ್ ಗಾದೆಗಳು

ಸಂಸಾರ ಗುಟ್ಟು  ವ್ಯಾದಿ ರಟ್ಟು !

ಸ್ಪೇನ್’ನಲ್ಲಿ ಜನರ ನಡುವೆ ಇಂದಿಗೂ ಈ ಒಂದು ಆಡು ಮಾತು ಬಳಕೆಯಲ್ಲಿದೆ . ಜಗತ್ತು ವೇಗವಾಗಿ ಬದಲಾಗುತ್ತ ಬಂದಿದೆ . ಅದರಲ್ಲೂ ಯೂರೋಪಿನ ಜನ ತಾವಾಯಿತು ತಮ್ಮ ಕಣ್ಣಿನಲ್ಲಿನ ಬೊಂಬೆಯಾಯಿತು ಅನ್ನುವಷ್ಟು ಸಂಕುಚಿತ ಜೀವನದಲ್ಲಿ ಮುಳುಗಿ ಹೋಗಿದ್ದಾರೆ . ಹಿಂದೆಲ್ಲಾ ಕುಟುಂಬಗಳು ದೊಡ್ಡದಿದ್ದವು , ಅಲ್ಲಿನ ನೋವು ನಲಿವು ಎರಡೂ ಹೆತ್ತವರ ಅಥವಾ ಹಿರಿಯರ ಮುಂದೆ ಮುಕ್ತವಾಗಿ...

ಅಂಕಣ

ಪದ್ಮಾವತಿಯ ಇತಿಹಾಸವನ್ನು ಯಥಾವತ್ ಇಳಿಸಲೇನು ಧಾಡಿ?

“ಬರೇ ರಾಣಿಯೊಬ್ಬಳೇಕೆ; ನಿಮ್ಮ ಜನಾನವನ್ನು ಅಲಂಕರಿಸಲು ರಾಣೀವಾಸದ ಸುಂದರ ಸ್ತ್ರೀಯರೆಲ್ಲರೂ ಬರುತ್ತಿದ್ದಾರೆ ಜಹಂಪನಾ” ಎನ್ನುವ ಮಾತು ಮತ್ತೆ ಮತ್ತೆ ಕಿವಿಯಲ್ಲಿ ಅನುರಣಿಸಿ ಸುಲ್ತಾನನ ಕಾಮದ ಹುಚ್ಚು ಕೆರಳುತ್ತಿದೆ. ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಬರುವ ದೃಶ್ಯವನ್ನು ನೋಡಿದ ಮೇಲಂತೂ ಸ್ವರ್ಗಕ್ಕಿನ್ನು ಮೂರೇ ಗೇಣು ಎಂಬಂತೆ ಹುಚ್ಚನಂತೆ ಕುಣಿಯುತ್ತಾನೆ...

Featured ಅಂಕಣ ಕೇಳೋದೆಲ್ಲಾ ತಮಾಷೆಗಾಗಿ

ಕತ್ತರಿಸುವವರು ಕಣ್ಣೀರು ಹಾಕಲಿ ಎಂದು ವರ ಕೇಳಿದೆಯೆ ಈರುಳ್ಳಿ?

ಕೇಳೋದೆಲ್ಲಾ ತಮಾಷೆಗಾಗಿ – 2   ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದು ಏಕೆ? ಬುದ್ಧಿವಂತನಿಗೆ ಮೂರು ಕಡೆ ಎಂಬ ಜನಪದ ಕತೆ ನೀವು ಕೇಳಿರಬಹುದು. ಕಳ್ಳನೊಬ್ಬ ಹೋಗಿ ಹೋಗಿ ಒಂದು ಈರುಳ್ಳಿ ಮಂಡಿಯಿಂದ ಗೋಣಿಚೀಲದಷ್ಟು ಈರುಳ್ಳಿ ಕದ್ದನಂತೆ. ಕದ್ದವನು ಸಿಕ್ಕಿಬೀಳದೇ ಇರುತ್ತಾನೆಯೇ? ಸಿಕ್ಕಿಬಿದ್ದ. ಅವನನ್ನು ಕದ್ದ ಮಾಲಿನ ಸಮೇತ ರಾಜರ ಸಮ್ಮುಖಕ್ಕೆ ತರಲಾಯಿತು...

Featured ಅಂಕಣ

ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್

ಮೊದಲ ಭಾಗ:  ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್  ರಾಕ್ ಬ್ಯಾಂಡ್ ಎಂದರೆ – ಇಂಗ್ಲಿಷ್ ಹಾಡುಗಳು ಎನ್ನುವುದು ಸಾಮಾನ್ಯನ ಅರಿವು; ಅದನ್ನೂ ಮೀರಿ ಕನ್ನಡ ಜಾನಪದ ಹಾಡುಗಳು, ಷರೀಫರ ತತ್ತ್ವಯುತ ಹಾಡುಗಳು ಮುಂತಾದವುಗಳನ್ನು ಆಯ್ಕೆ ಮಾಡುವ ಧೈರ್ಯ ಆಲೋಚನೆ ಹೇಗೆ ಬಂತು? ಧೈರ್ಯ ಇರಲಿಲ್ಲ. ಒಮ್ಮೆ ನಾನು ಅತ್ತೆ ಮನೆಯಲ್ಲಿದ್ದೆ, ಅಲ್ಲೊಂದು...

ಅಂಕಣ

ಅರಸುವುದಿದ್ದರೆ ಅರಸು, ನಿನ್ನೊಳಗಿಹ ಸಾಕ್ಷಾತ್ಕರಿಸು !

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೮೧   ಮರೆತಿಹನೆ ಬೊಮ್ಮ? ಮರೆತಿಲ್ಲ ; ಮರೆತವೊಲಿಹನು | ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ || ಅರಸಿಕೊಳುವವೊಲಿಹುದು ; ದೊರೆತವೋಲ್ ತೋರೆ ಸುಖ | ದೊರೆವವರೆಗಾಯಸವೊ- ಮಂಕುತಿಮ್ಮ || ೦೮೧ ||   ‘ನಮ್ಮನ್ನೆಲ್ಲ ಸೃಷ್ಟಿ ಮಾಡಿದ್ದು ಪರಬೊಮ್ಮ ಎಂದಾದ ಮೇಲೆ ನಮ್ಮನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿಯೂ ಅವನದೇ ತಾನೆ? ಹಾಗಿದ್ದ...

ಅಂಕಣ

ಮಾಗಿದ ವ್ಯಕ್ತಿತ್ವಕ್ಕೆ ಮಾತ್ರ ಬಾಗುವುದೆಲ್ಲಿ,ಬೀಗುವುದೆಲ್ಲಿ ಎಂದು ಗೊತ್ತು

ಎಲ್ಲ ಸಮಯದಲ್ಲೂ ಒಂದೇ ತೆರನಾಗಿದ್ದರೆ ವ್ಯಕ್ತಿ ಸಮಾಜದ ವಿವಿಧೆಡೆಗಳಲ್ಲಿ ಬೆರೆಯುವುದು ಕಷ್ಟ. ಸಮಯ, ಪರಿಸ್ಥಿತಿ, ಪರಿಸರ ಇತ್ಯಾದಿಗಳಿಗನುಗುಣವಾಗಿ ನಡೆದಾಗಲೇ ಎಲ್ಲರೊಳಗೊಂದಾಗಲು ಸಾಧ್ಯ. ನಮ್ಮಲ್ಲಿ ಅಧಿಕಾರ, ಹಣ, ಶಕ್ತಿ, ಜಾಣ್ಮೆ ,ಸಾಮರ್ಥ್ಯಗಳೆಲ್ಲ ಇದ್ದರೂ ನಾವು ಯಾವಾಗ ಅವುಗಳನ್ನು ಪ್ರಯೋಗಿಸಬೇಕು ಎಂಬ ಅರಿವಿದ್ದಾಗಲೇ ವಿಶ್ವಮಾನ್ಯರಾಗಲು ಸಾಧ್ಯ. ಹಿಂದೆ...

Featured ಅಂಕಣ

ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ:  ರಘು ದೀಕ್ಷಿತ್

ಜನಪ್ರಿಯತೆ ಎನ್ನುವ ಕುದುರೆಯ ಹಿಂದೆ ಓಡದೆ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಗೆಲವಿನ ಶಿಖರವನ್ನು ತಲಪಿರುವ ರಘು ದೀಕ್ಷಿತ್, ತಾನು ಸಾಧಿಸಿದ್ದೇನೆ ಎಂದರೆ ಅದು ಅಹಂ ಆಗುತ್ತದೆ ಎನ್ನುವ ಹಂಬಲ ವ್ಯಕ್ತಿ. ಅಪ್ಪಟ ಅಯ್ಯಂಗಾರೀ ಮನೆತನದಿಂದ ಬಂದಿರುವ ಇವರು ತಮ್ಮ ಅಂತರಾಳದಲ್ಲಿ ಭಾರತೀಯತೆಯ ಬಗ್ಗೆ ಆಳವಾದ ಪ್ರೀತಿ-ಗೌರವ ಬೆಳೆಸಿಕೊಂಡು ಬಂದಿದ್ದಾರೆ. ಭಾರತೀಯತೆ...

ಅಂಕಣ

 ನೋಟ್ಯಂತರ ಆಗದೇ ಹೋಗಿದ್ದರೆ?!

ನೋಟುಗಳ ಬಗೆಗಿನ ಜನರ ಸಾಮಾನ್ಯ ನೋಟ ಹಾಗೂ ಒಳನೋಟಗಳನ್ನೆಲ್ಲಾ ಬದಲಾಯಿಸಿ, ನೋಟುಗಳನ್ನು ಬದಲಾಯಿಸುವಂತೆ ಹಾಗೂ ಒಳಗೊಳಗೆ ಹುದುಗಿಟ್ಟಿದ್ದ ನೋಟುಗಳೂ ಬದಲಾವಣೆಗೆ ಒಡ್ಡಿಕೊಳ್ಳುವಂತೆ ಮಾಡಿದ್ದ ನೋಟ್ ಬ್ಯಾನ್ ಗೆ ಮೊನ್ನೆ ಮೊನ್ನೆಯಷ್ಟೇ ವರುಷ ತುಂಬಿತು. ಇದು ನಿಜಕ್ಕೂ ಭಾರತದ ಇತಿಹಾಸದಲ್ಲಿಯೇ ಒಂದು ಮಟ್ಟಿಗೆ ‘ನೋಟ್’ಬಲ್ ದಿನವೇ ಸರಿ. ‘ಹಣ ನೋಡಿದರೆ...