ಒಂದು ಕೆಲಸವಾಗಬೇಕಾದರೆ ನಾವು ಆಲೋಚಿಸಬೇಕು.ಆ ಚಿಂತನೆಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಇಳಿಸಬೇಕು.ಎಲ್ಲದಕ್ಕೂ ಚಿಂತನೆಯೇ ಮೂಲ.ಒಬ್ಬ ವ್ಯಕ್ತಿ ಯಾವ ರೀತಿ ಚಿಂತನೆ ಮಾಡುತ್ತಾನೆ ಎಂಬುದರ ಮೇಲೆ ಆತನ ಬೌದ್ಧಿಕ ಗುಣಮಟ್ಟ ನಿರ್ಧರಿಸಲ್ಪಡುತ್ತದೆ.ಹಲವು ಚಿಂತನೆಗಳು,ವಿವಿಧ ರೀತಿಯ ಬೌದ್ಧಿಕ ನೆಲೆಗಟ್ಟಿನಲ್ಲಿ ಸಮ್ಮಿಳಿತವಾಗಿ ಒಂದು ಅರ್ಥಪೂರ್ಣ ಮನಸ್ಥಿತಿ...
Author - Lakshmisha J Hegade
ಪಾಕ್ ಮೇಲೆ ದಾಳಿ ಮಾಡಬೇಕೆಂದು ಆಗ್ರಹಿಸುತ್ತಿರುವವರಿಗೆ ಒಂದಷ್ಟು ಕಿವಿಮಾತು
ಈಗ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ.ಮೋದಿಜೀ ಪಾಕ್ ಉಗ್ರರು ಪದೇ ಪದೇ ದಾಳಿ ಮಾಡುತ್ತಿದ್ದಾರೆ.ನೀವು ಮಾತ್ರ ಸುಮ್ಮನೇ ಕುಳಿತಿದ್ದೀರಿ.ಈ ವರ್ಷಾರಂಭದಲ್ಲೇ ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿಯಾಯಿತು. ಅದು ಮರೆಯುವ ಮೊದಲೆ ಕಾಶ್ಮೀರದ ಕುಪ್ವಾರ್’ನಲ್ಲಿ ಸೈನಿಕರ ಕಗ್ಗೊಲೆಯಾಯಿತು.ಮೊನ್ನೆ ಕಾಶ್ಮೀರದ ಪ್ಯಾಂಪೋರ್ ಮೇಲೆ ಉಗ್ರರು...
ದೇಶಪ್ರೇಮ, ದೇಶದ್ರೋಹ, ಅಭಿವ್ಯಕ್ತಿ ಸ್ವಾತಂತ್ರ್ಯದ ಕಲಸುಮೇಲೋಗರ
JNU ಕ್ಯಾಂಪಸ್ ನಲ್ಲಿ ಅಫ್ಜಲ್ ಗುರು ಪರವಾಗಿ ಘೋಷಣೆ ಕೂಗಿದವರನ್ನು ವಿರೋಧಿಸುವಲ್ಲಿಂದ ಶುರುವಾಗಿದ್ದು ಈಗ ಎಲ್ಲೆಲ್ಲಿಗೋ ಹೋಗಿ ಮುಟ್ಟಿದೆ.ಇದೇ ವಿಷಯವನ್ನು ತಮಗೆ ಬೇಕಾದಂತೆ ತಿರುಚಿ ದೊಡ್ಡದು ಮಾಡಿರುವ ಹಲವರು ತಮಗಾಗದವರ ವಿರುದ್ಧ ವೈಯಕ್ತಿಕ ದಾಳಿಗೆ ಇಳಿದಿದ್ದಾರೆ.ಎಷ್ಟೋ ಕಾಲದಿಂದ ಇದ್ದ ಸಿಟ್ಟು,ದ್ವೇಷಗಳನ್ನು ತೀರಿಸಿಕೊಳ್ಳಲು ಸರಿಯಾದ ಸಂದರ್ಭಕ್ಕೆ ಕಾಯುತ್ತಿದ್ದ...
ಕಾಶ್ಮೀರಿ ಪಂಡಿತರ ಆತ್ಮಗಳ ಸ್ವಗತ
ನಾವು ಕಾಶ್ಮೀರದಲ್ಲಿ ಮತಾಂಧ ಜಿಹಾದಿಗಳ ಆಕ್ರಮಣಕ್ಕೆ ಸಿಲುಕಿ ಹತರಾದ ಹತಭಾಗ್ಯ ಕಾಶ್ಮೀರಿ ಪಂಡಿತರ ಆತ್ಮಗಳು. ನಾವಿಂದು ನಮ್ಮ ಕಥೆಯನ್ನು ಹೇಳಲು ಬಂದಿದ್ದೇವೆ. ಜಗತ್ತಿನ ಜನರಿಗೆ, ಅಷ್ಟೇ ಏಕೆ ಭಾರತದ ಬಹುತೇಕ ಜನರಿಗೆ ತಿಳಿದಿರದ, ವರ್ತಮಾನ ಪತ್ರಿಕೆಗಳಲ್ಲಿ ಎಲ್ಲೂ ವರದಿಯಾಗದ, ಇದುವರೆಗೂ ಸತ್ತವರಿಗೆ, ಅವರ ಕುಟುಂಬದವರಿಗೆ ನ್ಯಾಯ ಸಿಗದ ಹೇಯ ಕ್ರೌರ್ಯದ ಕರುಣಾಜನಕ...
ಅರ್ಥ ಕಳೆದುಕೊಳ್ಳುತ್ತಿವೆ ಮನುಷ್ಯ ಸಂಬಂಧಗಳು
ಅನಾದಿಕಾಲದಿಂದ ಪ್ರಸ್ತುತದವರೆಗೆ ಮಾನವನ ಬದುಕು ಸಾಗುತ್ತಾ ಬಂದಂತೆ ಆತನಲ್ಲಿ ಹಲವು ಬದಲಾವಣೆಗಳಾಗಿವೆ.ಆತನ ಸುತ್ತಮುತ್ತಲಿನ ಸಮಾಜ,ಪರಿಸರ ಎಲ್ಲವೂ ಬದಲಾಗುತ್ತಲೇ ಬಂದಿವೆ.ಬದುಕಂತೂ ಹಲವು ಸಂಕ್ರಮಣಗಳ ಕಾಲಘಟ್ಟದಲ್ಲಿ ಹಲವು ಏರಿಳಿತಗಳನ್ನು ಕಂಡಿದೆ. ಈ ಎಲ್ಲ ಬದಲಾವಣೆಗಳ ನಡುವೆಯೂ ಮನುಷ್ಯನ ಅಸ್ತಿತ್ವಕ್ಕೆ ಸದಾ ಬೆಂಗಾವಲಾಗಿ ನಿಂತಿದ್ದು ಆತನ ಇಚ್ಛಾಶಕ್ತಿ, ಆತನ...
ಗನ್ ಹಿಡಿಯುವ ಕೈಗೆ ಪೆನ್ ಕೊಡಿ
ಜಗತ್ತು ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಕ್ಷೋಭೆಗೊಳಗಾಗಿದೆ.ಅದಕ್ಕೆ ಕಾರಣವೂ ಅನೇಕರಿಗೆ ತಿಳಿದೇ ಇದೆ.ಇಸ್ಲಾಮಿಕ್ ಭಯೋತ್ಪಾದನೆಯ ಕಪಿಮುಷ್ಟಿಗೆ ಸಿಲುಕಿ ಪ್ರಪಂಚ ನರಳುತ್ತಿದೆ.ಭಾರತವೂ ಇದಕ್ಕೆ ಹೊರತಲ್ಲ.ಧರ್ಮದ ಹೆಸರಿನಲ್ಲಿ ಅಮಾಯಕರ ಹತ್ಯೆ ಮಾಡುವುದಲ್ಲದೇ ಅದನ್ನವರು ಸಮರ್ಥಿಸಿಕೊಳ್ಳುತ್ತಾರೆ ಕೂಡಾ.ಭಾರತದಲ್ಲಿ ಅವರಿಗೆ ಕೆಲವು ಢೋಂಗಿ ವಿಚಾರವಾದಿಗಳ ಮತ್ತು...
ಹೆಸರಿಲ್ಲದ ನ್ಯಾನೋ ಕಥೆಗಳು-1
ಗಂಡ ಹೆಂಡತಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಬೈಕ್ ನಲ್ಲಿ ಮಾರ್ಕೆಟ್ ಗೆ ಬಂದಿದ್ದರು.ಖರೀದಿ ಮುಗಿದ ನಂತರ ಹೆಂಡತಿ ಬೈಕ್ ನಲ್ಲಿ ಹಿಂಬದಿ ಕೂರುವ ಮೊದಲೇ ಗಂಡ ತನ್ನವಳು ಕುಳಿತಿದ್ದಾಳೆ ಎಂದು ತಿಳಿದು ಬೈಕ್ ಚಲಾಯಿಸಿಕೊಂಡು ಹೋಗೇ ಬಿಟ್ಟ.ಹೆಂಡತಿ ಎಷ್ಟು ಕೂಗಿದರೂ ಅವನಿಗೆ ಕೇಳಲೇ ಇಲ್ಲ.ತುಸು ದೂರ ಹೋಗುವಷ್ಟರಲ್ಲಿ ಎದುರಿನಿಂದ ಬಂದ ಲಾರಿಗೆ ಢಿಕ್ಕಿ ಹೊಡೆದು ಇಹಲೋಕ...
ಅಮ್ಮಾ ನೀನೇಕೆ ಹೀಗೆ ಮಾಡಿದೆ?
ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತಾ ನಭವತಿ(ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಎಂದಿಗೂ ಹುಟ್ಟಲಾರಳು) ಎಂಬ ಮಾತನ್ನು ಆದಿ ಶಂಕರಾಚಾರ್ಯರು ಭಾರತದಲ್ಲಿ ಮಾತ್ರ ಹೇಳಲು ಸಾಧ್ಯವಾಯಿತು.ಸನ್ಯಾಸಿಗಳು ಎಲ್ಲವನ್ನೂ ತೊರೆದವರಾದರೂ ಶಂಕರರಿಗೆ ತಮ್ಮ ತಾಯಿಯ ಮೇಲಿನ ವ್ಯಾಮೋಹವನ್ನು ತೊರೆಯಲಾಗಲೇ ಇಲ್ಲ. ಶಂಕರರನ್ನು ಮೊಸಳೆ ಕಚ್ಚಿ ಹಿಡಿದು ಸನ್ಯಾಸಿಯಾದರೆ ಮಾತ್ರ...
ಶಾಸ್ತ್ರೀಜಿ ಸಾವಿನ ರಹಸ್ಯವೂ ಬಯಲಾಗಲಿ
ಅವರದ್ದೂ ಗಾಂಧೀಜಿಯವರದ್ದೂ ಹುಟ್ಟಿದ ಹಬ್ಬ ಒಂದೇ ದಿನ.ಅವರು ಗಾಂಧೀಜಿಯ ಅನುಯಾಯಿಯಾಗಿದ್ದೂ ಗಾಂಧೀಜಿಯ ಎಲ್ಲ ಸಿದ್ಧಾಂತಗಳನ್ನು ಸುಮ್ಮನೇ ಕಣ್ಣುಮುಚ್ಚಿ ಒಪ್ಪಲಿಲ್ಲ.ಎಲ್ಲ ಸಮಯದಲ್ಲೂ ಶಾಂತಿಮಂತ್ರ ಪಠಿಸಲಿಲ್ಲ. ಗಾಂಧೀಜಿಯಂತೆ ಅತ್ಯಂತ ಸರಳವಾಗೇ ಬದುಕಿದರು.ಬದುಕಿದ್ದಷ್ಟು ದಿನವೂ ತಮ್ಮನ್ನು ರಾಷ್ಟ್ರಸೇವೆಯಲ್ಲಿಯೇ ತೊಡಗಿಸಿಕೊಂಡವರು.ಯಾರ ವಿರೋಧವನ್ನೂ ಕಟ್ಟಿಕೊಂಡವರಲ್ಲ...
ಗಣೇಶ ನೆಂಬ ದೇವರಂಥ ಗೆಳೆಯ
ಆತ ದೇವರಾಗಿ ಗುಡಿಯಲ್ಲಿದ್ದರೂ ಕೇವಲ ಅಷ್ಟಕ್ಕೇ ಸೀಮಿತವಾಗಲಿಲ್ಲ.ನಾನಾ ಥರದ ಸೇವೆಗಳನ್ನು,ನೀತಿ-ನಿಯಮಗಳನ್ನು ಭಕ್ತರಿಂದ ಎಂದೂ ಅಪೇಕ್ಷಿಸಿದವನಲ್ಲ.ಒಂದು ಕಟ್ಟು ಗರಿಕೆಗೆ,ಒಂದಷ್ಟು ಭಕ್ಷ ಭೋಜ್ಯಗಳಿಗೆ ಸಂತ್ರಪ್ತನಾಗುವ ಮಗುವಿಂಥ ಮನಸ್ಸು ಆತನದ್ದು. ವ್ಯಾಸರ ಬಾಯಿಯಿಂದ ಬಂದ ಮಹಾಭಾರತವನ್ನು ಬರಹರೂಪಕ್ಕೆ ಇಳಿಸಿ ಅದು ಅಜರಾಮರವಾಗಲು ಕಾರಣವಾದವನು ಅವನು. ಎಲ್ಲ...