ಮನುಷ್ಯ ಪಕ್ಷಿಯಂತೆ ಹಾರುವುದನ್ನು ಕಲಿತ. ಮೀನಿನಂತೆ ಈಜುವುದನ್ನು ಕಲಿತ. ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರಗಳ ಜೊತೆಗೆ ವಿಭಿನ್ನವಾಗಿ ಗುರುತಿಸಿಕೊಂಡ. ವಿಕಾಸದ ವಿವಿಧ ಹೆಜ್ಜೆಗಳನ್ನಿಟ್ಟು ಉಳಿದ ಜೀವಿಗಳಿಗಿಂತ ವಿಶಿಷ್ಟವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡ. ಹೊಸ ಶತಮಾನದ ಹೊಸದೊಂದು ಕಾಲಘಟ್ಟದಲ್ಲಿರುವ ಮನುಷ್ಯನ ಸಾಧ್ಯತೆಗಳು ವಿವಿಧ ಬಗೆಗಳಲ್ಲಿ...
ಇತ್ತೀಚಿನ ಲೇಖನಗಳು
ಮಾಯಾಲೋಕದ ಮಾಂತ್ರಿಕ ಜೋಡಿಯ ಯಶೋಗಾಥೆ(ವ್ಯಥೆ)
ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವೆಂಬಷ್ಟರ ಮಟ್ಟಿಗೆ ಬೆಳೆದು ನಿಂತಿರುವ ಬಾಲಿವುಡ್-ನ ಮಾಯಾಲೋಕದ ಥಳುಕು ಬಳುಕಿನ ಸೆಳೆತಕ್ಕೊಳಗಾಗದೆ ಇರುವವರು ತುಂಬಾ ಅಪರೂಪ. ಮೊದಲಿನಿಂದಲೂ ಹಿಂದಿ ಚಿತ್ರಗಳಲ್ಲಿ ಸಂಗೀತಕ್ಕೆ ವಿಶೇಷ ಪ್ರಾಧಾನ್ಯತೆ, ಖಯ್ಯಾಮರ ಖಯಾಲಿಯಿಂದ, ಆರ್.ಡಿ.ಬರ್ಮನ್-ರ ಹಂಸಧ್ವನಿಯವರಿಗೂ, ಶಂಕರ ಜಯಕಿಶನರ ಶಂಖನಾದದಿಂದ ಬಪ್ಪಿ ಲಹರಿಯ ಬೊಂಬಾಟದ ತನಕ...
ನಾನು – ನನ್ನದು
ಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ. ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೊ ಅಲ್ಲಿಯವರೆಗೆ ಅದರ ಹುಳುಕು ನಮಗೆ ಗೊತ್ತಾಗೋದೆ ಇಲ್ಲ. ಒಂದಾ ಶಾಂತವಾಗಿ ಕುಳಿತು ಯಾವ ತಾರತಮ್ಯವಿಲ್ಲದೆ ವಿಮರ್ಷಿಸುವ ಬುದ್ಧಿ ಹೊಂದಿರಬೇಕು. ಇಲ್ಲ ಬೇರೆಯವರು ಬೊಟ್ಟು ಮಾಡಿ...
ದೇಶದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಗಳೇನು?
ನೀರು. ಸಕಲ ಜೀವರಾಶಿಗಳಿಗೂ ಅರಿಯುವ ಏಕಮಾತ್ರ ಪದ. ಅದು ಚಿಗುರುವ ಸಸ್ಯವಾಗಿರಲಿ ಅಥವಾ ಬಲಿತ ಮರವಾಗಿರಲಿ, ಮಾನವನಾಗಿರಲಿ ಅಥವಾ ಪ್ರಾಣಿ ಪಕ್ಷಿಗಳಾಗಿರಲಿ, ಶಾಕಾಹಾರಿ, ಮಾಂಸಾಹಾರಿ ಹೀಗೆ ಭೂಮಿಯ ಪ್ರತಿಯೊಂದು ಜೀವಕ್ಕೂ ಬೇಕಾಗಿರುವ ಜೀವನಧಾರ ಈ ನೀರು. ನೀರಿನ ವಿನಃ ಎಲ್ಲವೂ ಅಸ್ತಿರ. ಜೀವನವೇ ದುಸ್ತರ! ನವೀಕರಿಸಬಹುದಾದ ಸಂಪನ್ಮೂಲಗಳಲ್ಲೊಂದಾಗಿದ್ದ ಜಲ ಇತ್ತೀಚಿನ...
ಪ್ರಜಾವಾಣಿಯ ಸಂಪಾದಕರಿಗೊಂದು ಪತ್ರ
ಶ್ರೀಯುತ ಪದ್ಮರಾಜ ದಂಡಾವತಿ ಯವರಿಗೆ ನಮಸ್ಕಾರಗಳು ಮಾನ್ಯರೇ , ಎಂದಿನಂತೆ ಇವತ್ತಿನ ಪ್ರಜಾವಾಣಿ ಪತ್ರಿಕೆ ಯನ್ನು ನೋಡಿದೆ. ಶ್ರೀ ರಾಮಚಂದ್ರಾಪುರ ಮಠದ ‘ಶಪಥ ಪರ್ವ” ಕಾರ್ಯಕ್ರಮದ ಕುರಿತಾಗಿ ಬಂದ ವರದಿಗಳನ್ನು ಓದಿದ ಮೇಲೆ ಇದನ್ನು ತಮಗೆ ಹೇಳಲೇ ಬೇಕು ಎಂದು ಪತ್ರವನ್ನು ಬರೆಯುತ್ತಿದ್ದೇನೆ . ನನ್ನ ಈ ಅಭಿಪ್ರಾಯ ತಮ್ಮ ಪತ್ರಿಕೆಯ ಬಹುತೇಕ ಓದುಗರ...
*ಸಿಂಗಪ್ಪಯ್ಯರ ಅಭ್ಯಂಜನ*
ಅದೊಂದು ಶರದೃತುವಿನ ದಿನ. ದೀಪಾವಳಿ ಕಳೆದು ಕೆಲದಿನಗಳಾಗಿತ್ತಷ್ಟೇ. ನೀಲಾಕಾಶದ ಮಧ್ಯೆ ಅಲ್ಲಲ್ಲಿ ಕಾಣುವ ಬೆಳ್ಳಗಿನ ಮೋಡಗಳು ಯಾವುದೋ ಗುರಿಯ ತಲುಪಲು ನಿರ್ಧರಿಸಿವೆಯೇನೋ ಎಂಬಂತೆ ಒಂದೇ ದಿಕ್ಕಿನಲ್ಲಿ ತೇಲಿ ಹೋಗುತ್ತಿತ್ತು. ಸಿಂಗಪ್ಪಯ್ಯ ಮೈಗೆ ಎಳ್ಳೆಣ್ಣೆ ಅಭ್ಯಂಜನ ಮಾಡಿಕೊಳ್ಳಲು ಎಣ್ಣೆ ಬಟ್ಟಲಿನ ಸಮೇತ ಮನೆಯ ಮುಂದಿನ ಅಂಗಳದ ತುದಿಯಲ್ಲಿರುವ ಅಡಕೆ ಬೇಯಿಸುವ ಹಂಡೆಯ ಬಳಿ...
