ಅಂಕಣ

ಜಂಗಮ ವಾಣಿ…

ಟ್ರಿಣ್ ಟ್ರಿಣ್ … ಹಾ ನಾನು ಹೊರಾಗಿದಿನ್ರಿ… Hello How Are You?
ಸೆಲ್ ಫೋನ್…ಮೊಬೈಲ್..ಹ್ಯಾಂಡ್ಸೆಟ್.. ಜಂಗಮ ವಾಣಿ … ಇವತ್ತಿನ ದಿನ ನಮ್ಮ ದಿನನಿತ್ಯದ ಜೀವನದಲ್ಲಿ ಎಷ್ಟು ಬೆರತೋಗಿದೆಯೆಂದರೆ, ಮೊಬೈಲ್ ಇಲ್ಲದೆ ಮನೆ ಹೊರಗಡೆ ಕಾಲಿಡೋದಕ್ಕೆ ಒಂಥರಾ ಕಸಿ-ಬಿಸಿ …ಎಲ್ಲೊ ಕಳೆದು ಹೋದಂತೆ ಭಾಸ.. ಪ್ರತಿ ದಿನ ಆಫೀಸಿಗೆ ಹೊರಡುವಾಗ ನನಗೆ ಆಫೀಸ್ ಬ್ಯಾಗ್ ತೆಗದುಕೊಂಡೆನೋ ಇಲ್ಲವೋ ನೆನಪಿಸದಿದ್ದರು, ಮೊಬೈಲ್ ತೆಗೆದುಕೊಂಡ್ರ ಎಂದು ಕೇಳಿ ಖಚಿತ ಮಾಡಿಕೊಳ್ಳುವಳು ನನ್ನ ಹೆಂಡತಿ.

ಅದೇನೋ ಸತ್ಯ ರೀ .. ಏನ್ ಮಾಡೋಕಗೋಲ್ಲ ಹೇಳಿ ಈಗಿನ ಮೊಬೈಲ್’ನಲ್ಲಿ – ಬೇಕಾದ ಕ್ಷಣದಲ್ಲಿ ಬೇಕಾದ ಜಾಗದಲ್ಲಿ ಟ್ಯಾಕ್ಸಿ ಕರೆಸಬಹುದು, ಕೂತಲ್ಲೇ ರೈಲಿಗೆ ಟಿಕೆಟ್ ಕಾದಿರಿಸಬಹುದು, ಮನೆ ಮಂದಿಗೆಲ್ಲ ಹಬ್ಬದ ಬಟ್ಟೆ ಖರಿದಿಸಬಹುದು, ಅಂಗಡಿಗೆ ಹೋಗದೆ ಕಿರಾಣಿ, ತರಕಾರಿ ತರಸಿಕೊಳ್ಳಬಹುದು, ಅಗತ್ಯವಿರುವ ಮಿತ್ರನಿಗೆ ಬ್ಯಾಂಕಿಗೆ ಹೋಗದೆ ಹಣ ಕಳಿಸ ಬಹುದು.. ಒಂದ ಎರಡಾ? ಬರೆಯುತ್ತ ಹೋದರೆ ಪುಟಗಳೇ ಸಾಲದು .. ಒಟ್ಟಿನಲ್ಲಿ ಮೊಬೈಲ್ ದೂರದವರೊಡನೆ ಮಾತನಾಡೋದಕ್ಕೆ ಮಾತ್ರ ಮೀಸಲಾಗದೆ , ನಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಮಹತ್ವ ಪಡೆದಿರುವುದಂತು ನಿಜ. ಈ ಕಾರಣಕ್ಕೆ ಈಗ ಇದನ್ನು MLD (Multi-Purpose Device) ಎಂದು ಮರುನಾಮಕರಣ ಮಾಡಿದರೂ ಅಸಮಂಜಸವಾಗಲಾರದು.ಮತ್ತೇನು ಹೇಳಿ ಇದು ಅವತ್ತಿನ ಅಂಚೆ, ಟೆಲಿಗ್ರಾಂ, ಗಡಿಯಾರ, ರೇಡಿಯೋ, ಕ್ಯಾಮೆರಾ, ಕ್ಯಾಲ್ಕುಲೇಟರ್, Walkman, Video Game, ಅಸ್ಟೆ ಯಾಕೆ ಇತ್ತೀಚಿನ GPS ಅನ್ನು ಸಹ ತಕ್ಕ ಮಟ್ಟಿಗೆ ಬಲಿ ತೆಗೆದು ಕೊಂಡಿದೆ.

ಇಸ್ಟೆಲ್ಲಾ ಆಗಿದ್ದು ಕೇವಲ 20 ವರ್ಷಗಳೀಚೆಗೆ. ಇದರ ಇತಿಹಾಸದ ಪುಟ ಸ್ವಲ್ಪ ತಿರುವಿಹಾಕಿ ಬರೋಣ.
1973ರಲ್ಲಿ ಅಮೇರಿಕಾದ ಒಡೆತನದಲ್ಲಿದ್ದ ಮೊಟೊರೊಲಾದ (ಈಗ ಚೀನಾದ ಲೆನೋವ ಕಂಪನಿಯ ಒಂದು ಅಂಗ ಸಂಸ್ಥೆ) ಜಾನ್ ಮಿಛೆಲ್ ಮತ್ತು ಮಾರ್ಟಿನ್ ಕೂಪರ್ ಅವರು ಮೊದಲ ಪ್ರಾಯೋಗಿಕ ಮೊಬೈಲನ್ನು ಪ್ರದರ್ಶಿಸಿದರು. ಅದು ಬರೋಬ್ಬರಿ 1.5 KG ಭಾರ ತೂಗಿದರೆ! 30 ನಿಮಿಷ ಮಾತನಾಡಲು 10 ಗಂಟೆ ಚಾರ್ಜ್ ಮಾಡಬೇಕಿತ್ತು!! ಇದಾದ 10 ವರ್ಷದ ನಂತರ 1983ರಲ್ಲಿ ಮೊದಲ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಆಗ ಅದರ ಬೆಲೆ 3995 ಅಮೆರಿಕನ್ ಡಾಲರ್ (ಈಗಿನ ವಿನಿಮಯ ದರದಲ್ಲಿ ಸುಮಾರು 2.5 ಲಕ್ಷ ರೂಪಾಯಿ)!!

ಇನ್ನ ನಮ್ಮ ಭಾರತದಲ್ಲಿನ ಮೊಬೈಲ್ ವಿಕಾಸದೆಡೆಗೆ ಸ್ವಲ್ಪ ತಿರುಗಿ ನೋಡಿದರೆ, 1995ರ ಜುಲೈ 31ರಂದು ಆಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಶ್ರೀ ಜ್ಯೋತಿ ಬಸು ಅವರು ಕೊಲ್ಕತ್ತಾದಿಂದ ದೆಹಲಿಯೆಲ್ಲಿದ್ದ ಕೇಂದ್ರದ ಟೆಲಿಕಾಂ ಸಚಿವರಾದ ಸುಖರಾಮ್ ಅವರಿಗೆ ಮೊದಲ ಮೊಬೈಲ್ ಕರೆ ಮಾಡುವ ಮೂಲಕ ಭಾರತದ ಟೆಲಿಕಾಂ ಕ್ರಾಂತಿಗೆ ನಾಂದಿ ಹಾಡಿದರು. ಆಗ ಅದಿನ್ನು ಜನಸಾಮಾನ್ಯರಿಗೆ ಕೈಗೆಟಕದ ಹುಳಿ ದ್ರಾಕ್ಷಿ; ಒಂದು ನಿಮಿಷದ ಕರೆಗೆ ಸರಿ ಸುಮಾರು 16 ರೂಪಾಯಿ ಮತ್ತು ಒಳ ಬರುವ ಕರೆಗೂ ಸಹ ದಂಡ ತೆರಬೇಕಿತ್ತು!!

2000ರಲ್ಲಿ ಸರ್ಕಾರ ಟೆಲಿಕಾಂ ನೀತಿಯಲ್ಲಿ ತಂದ ಉದಾರೀಕರಣ, ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಜಾಗತಿಕ ಮಾರುಕಟ್ಟೆಯಲ್ಲಿ ವಿದೇಶಿ ಟೆಲಿಕಾಂ ಕಂಪೆನಿಗಳ (ವೊಡಫೋನ್, TELSTRA, ವರ್ಜಿನ್, ಯುನಿನಾರ್) ಗಮನಸೆಳೆದವು.2001ರಲ್ಲಿ 37 ದಶಲಕ್ಷ ಮೊಬೈಲ್ ಬಳಕೆದಾರರಿದ್ದದ್ದು ಈಗ 100 ಕೋಟಿಯೆನ್ನು ಮೀರಿ ಪ್ರಪಂಚದಲ್ಲೇ ಎರಡನೇ ಅತೀ ಹೆಚ್ಚು ಮೊಬೈಲ್ ಬಳಕೆದರರಿರುವ ದೇಶ ನಮ್ಮದಾಗಿದೆ!!!

ಈ ಮೊಬೈಲ್ ಅವಲಂಬಿಸಿ ಅದೆಸ್ಟೋ ಉದ್ಯಮಗಳು ತಲೆಯತ್ತಿವೆ. ಈಗ ಟ್ಯಾಕ್ಸಿ ಎಂದರೆ ಮನೆ ಮಾತಾಗಿರುವ ಊಬರ್, ಓಲ, ಟ್ಯಾಕ್ಸಿ ಫಾರ್ ಶೂರ್ ಗಳು, ಆನ್ಲೈನ್-ಶಾಪಿಂಗ್ ಅಂಗಡಿಗಳಾದ ಮಿಂತ್ರ, ಫ್ಲಿಪ್ಕಾರ್ಟ್, ಅಮೆಜಾನ್, ಹಸಿದಾಗ ಇದ್ದಲ್ಲಿಗೆ ಊಟ ತಂದು ಕೊಡುವ ಫುಡ್-ಪಾಂಡ, ಟೈನಿ-ಓವ್ಲ್, ಜೋಮ್ಯಾಟು, ನಾಯಿ ಕೊಡೆಯಂತೆ ತಲೆಯೇತ್ತುರಿವ ನೂರಾರು ಇ-ಕಾಮರ್ಸ್ ಉದ್ಯಮಗಳು ನಂಬಿರಿವುದು ಇದೇ ಮೊಬೈಲೆನ್ನು ಮತ್ತು ಅದಕ್ಕೆ ಬೆನ್ನೆಲುಬಾಗಿರುವ ಇಂಟರನೆಟ್ಟನ್ನು!! ಮೊಬೈಲ್ ಟೆಕ್ನಾಲಜಿ ಬೆಳೆಯುತ್ತಿರುವ ವೇಗ ನೋಡಿದರೆ ಮುಂಬರುವ ದಿನಗಳಲ್ಲಿ ಮೊಬೈಲ್ ನಮ್ಮ ಆಧೀನದಲ್ಲಲ್ಲ, ನಾವುಗಳು ಅದರ ಆಧೀನದಲ್ಲಿರುವವೇನೋ ಎಂದರೆ ಅತಿಶಯೋಕ್ತಿ ಆಗಲಾರದು. ಏನೇ ಆಗಲಿ ಶರವೇಗದಲ್ಲಿ ಬೆಳೆಯುತ್ತಿರುವ ಈ ಟೆಕ್ನಾಲಾಜಿಯೇನ್ನು ನಮ್ಮ ಏಳಿಗೆಗೆ ಬಳಸೋಣವೇ ಹೊರತು ವಿನಾಶಕ್ಕಲ್ಲ.

ಕೊಟ್ರೇಶ್ ಕಾಡಪ್ಪನವರ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!