ಕಥೆ

ಕಥೆ

ಹೆಜ್ಜೆ ಮೂಡದ ಹಾದಿ

ಮನೆಯ ಅಂಗಳದ ತುದಿಯಲ್ಲಿನ ಒಲೆಗೆ ನಿನ್ನೆ ರಾತ್ರಿ ಹಚ್ಚಿದ್ದ ಬೆಂಕಿ ಇನ್ನೂ ಆರಿರಲಿಲ್ಲ. ಒಳಗೆ ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಬಡಬಡಾಯಿಸುತ್ತಲಿತ್ತು. ಕಂಬನಿಯ ಒರೆಸಿಕೊಂಡ ಕೈ ಒದ್ದೆಯಾಗಿಯೇ ಇತ್ತು. ಆದರೂ ಮುಖದ ಮೇಲೆ ನಗುವೊಂದು ಮೂಡಲೇಬೇಕಿತ್ತು. ಅವಳು ಸೋತಿದ್ದಳು. ಬಾಡಿದ ಮುಖದ ಮೇಲೆ ಮೂಡುತ್ತಿದ್ದ ನಗು ಮನದ ಭಾವನೆಯ ಪ್ರತಿಫಲನವಂತೂ ಅಲ್ಲವಾಗಿತ್ತು. ಆದರೂ...

ಕಥೆ

ಗಜವದನ …

 ಒಂದೇ ದಿನದಲ್ಲಿ ಎರಡೂ ಅನುಭವಗಳು ಆಗಿದ್ದು ನನ್ನ ಜೀವಮಾನದಲ್ಲೇ ಇದೆ ಮೊದಲನೇ ಭಾರಿ. ಮೊದಲನೆಯದು ಅಗಾಧ ಶಕ್ತಿಯಿಂದ ಕೂಡಿದ್ದು, ಆಹ್ಲಾದಕರ ಅನುಭವ, ಹೊಸ ಜೀವದ ಆಗಮನದ ನಡುಕ ಅದು. ಆ ನಡುಕದಲ್ಲಿ ಅಮೂಲ್ಯ ಮತ್ತು ಅಪಾರ ಶಕ್ತಿಯನ್ನು ಕ್ರೋಢೀಕರಿಸಿದ ಸುವಾಸನೆ ಎಲ್ಲೆಡೆ ಹಬ್ಬಿದೆ. ಮಹಾದೇವಿಯ ಮನದ ಭಯಕೆಯ ಭಾವ ಈಡೇರಿದಾಗ ಈ ಕಂಪನ ಅನುಭವಿಸಿದ್ದೇನೆ. ಮಹಾದೇವಿಯ ಜೊತೆಗೆ...

ಕಥೆ

“ಉತ್ತರವಿಲ್ಲದೆ”

ನನಗೂ ನನ್ನ ಮಡದಿ ರಚನಾಳಿಗೂ ಮದುವೆಯಾಗಿ ಹದಿನಾರು ವರ್ಷಗಳೇ ಕಳೆದರೂ ಯಾವ ವಿಷಯಕ್ಕೂ ಗಂಭೀರವಾದ ಜಗಳವಾದದ್ದೇ ಇಲ್ಲ. ದಿನಾಲೂ ಮಕ್ಕಳಿಗಿಂತಲೂ ಕೆಟ್ಟದಾಗಿ ಜಗಳವಾಡುವ ವಿಷಯವೆಂದರೆ ಕನ್ನಡಿ. ನನಗೋ ಕನ್ನಡಿಯೆಂದರೆ ಕುತೂಹಲ. ಕನ್ನಡಿಯ ಮುಂದೆ ನಿಂತು ಏನನ್ನೇ ಮಾಡಿದರೂ ಅದು ಬೇಸರಿಸದೆ ಬಿಂಬಿಸುತ್ತದೆ. ನನಗೆ ಅದನ್ನು ನೋಡುವುದೇ ಖುಶಿ. ನನ್ನವಳಿಗೆ ನಾ ಕನ್ನಡಿಯ ಮುಂದೆ...

ಕಥೆ

  ಒಂಟಿಬೆಟ್ಟದ ಸ್ಮಶಾನ!

ಸಿಟಿಯ ಬಿಸಿಲಲ್ಲೇ ಹುಟ್ಟಿ ಬೆಳೆದಿದ್ದ ರಾಹುಲ್’ಗೆ ಹಾರರ್ ಮೂವಿಗಳೆಂದರೆ ಪಂಚಪ್ರಾಣ. ಪ್ರೀತಿ, ಪ್ರೇಮ, ಪ್ರಣಯ ಎಂಬ ಅಳಿಯ ಅಲ್ಲ ಮಗಳ ಗಂಡನೆನಿಸಿಕೊಳ್ಳುವ ಚಿತ್ರಗಳೆಂದರೆ ಆತ ಉರಿದುಬೀಳುತ್ತಿದ್ದ. ಬಿಟ್ಟಿಯಾಗಿ ಅಂತಹ ಚಿತ್ರದ ಟಿಕೆಟ್ ದೊರೆತರೂ ಹೋಗದೆ ಇರುವಂತಹ ಆಸಾಮಿ. ಆದರೆ ಸಿಟಿಯಲ್ಲಿ ಯಾವುದೇ ಇಂಗ್ಲಿಷ್ ಹಾರರ್ ಚಿತ್ರಗಳೂ ಬಂದರೂ ಬೆಂಬಿಡದೆ ನೋಡುವ ಖಯಾಲಿ...

ಕಥೆ

ನೆನಪುಗಳ ಸಹವಾಸ: ನನ್ನ ಪ್ರೀತಿಯ ಆಟೋಗ್ರಾಫ್

ಮೊನ್ನೆ ಊರಿನ ಹಳೆಪೇಟೆ ಬಸ್‌ಸ್ಟ್ಯಾಂಡ್ ಬಳಿ ನಿಂತಿದ್ದೆ. ಕಾಲು ಗಂಟೆ ಕಾದು ಕಾಲು ಸುಸ್ತಾದರೂ ಬಸ್ಸು ಕಾಣಲೇ ಇಲ್ಲ. ತುಸು ದೂರದಲ್ಲಿ ಒಬ್ಬಳು ಸ್ನಿಗ್ದ ಸೌಂದರ್ಯದ ಯುವತಿ ಬಿರುಬೀಸು ನಡಿಗೆಯಲ್ಲಿ ಬಂದವಳೇ ಮೊಬೈಲ್‌ನಲ್ಲಿ ರೀಚಿಡ್ ಬಸ್ ಸ್ಟ್ಯಾಂಡ್ ಡಿಯರ್ ಅಂದಳು. ತುಸು ದೂರದ ಮುಖ ಹತ್ತಿರ ಬಂದಾಗ ಪರಿಚಿತೆ, ಒಂದೊಮ್ಮೆ ಸಹಪಾಠಿಯಾಗಿದ್ದಳು ಎಂದು ತಿಳಿದು ಹಾಯ್ ಎಂದು...

ಕಥೆ

‘ಪ್ರೀತಿ’ಯೇ ನಿನ್ನ ವಿಳಾಸ ಎಲ್ಲಿ…?  

ಪ್ರೀತಿ- ಪ್ರೇಮ-ಅನುರಾಗ-ಅನುಬಂಧ: ಆಗ ತಾನೇ ಯವ್ವನದ ಹೊಸ್ತಿಲಲ್ಲಿ ಕಾಲಿಟ್ಟ ಹುಡುಗ(ಗಿ)ಯರ ಹದಿ ಹರೆಯದ ಮನದ ಕಾಮನೆಗಳು ಮೊಗ್ಗಾಗಿ ಚಿಗುರೊಡೆಯುವ ಕಾಲ. ಮಾಧ್ಯಮಿಕ ಶಾಲೆಯ ಕೊನೆಯ ಘಟ್ಟದಲ್ಲಿದ್ದಾಗ ಮೊಗ್ಗಾಗಿದ್ದ ಪ್ರೀತಿ ಪ್ರೇಮ, ಕಾಲೇಜ್’ನಲ್ಲಿ  ಸುಂದರ ಪುಷ್ಪವಾಗಿ ಅರಳುವ ಕಾಲ, ಅರಿಯದ ಆಳಕ್ಕಿಳಿಯದಿದ್ದರು ಇದರ ಸುಳಿಯ ಸೆಳೆತಕ್ಕೆ ಸಿಲುಕದವರಿಲ್ಲ!! ಮೊಬೈಲ್ ಮತ್ತು...

ಕಥೆ

ಗರಿ ಸುಟ್ಟ ತಾರೆ

“ಇವತ್ತು ಏನೇ ಆಗಲಿ ಒಂದಾದರೂ ಡ್ಯು ಬಾಕಿ ಇರೋನನ್ನು ವಸೂಲಿ ಮಾಡಬೇಕು” ಎನ್ನುತ್ತಲೇ ಓಮ್ನಿಯನ್ನು ನಾಲ್ಕನೇ ಗೇರಿಗೆ ಬದಲಾಯಿಸಿದ ಕಿಶೋರ್,ನೋಡಲು ಅಮವಾಸ್ಯೆ ಕತ್ತಲು,ಒರಟ ಅಷ್ಟೇ ದಢೂತಿ ದೇಹ,ಯಾರಾದರೂ ಒಮ್ಮೆ ಜುಂ ಅನ್ನಬೇಕು ಅಂತಹ ದೇಹಕಾಯ… ‘ಹೌದು,ಎಲ್ಲಿಗೆ ಹೋಗೋಣ ಮೊದಲು ಪಟ್ಟಿಯಲ್ಲಿ ನಾಲ್ಕು...

ಕಥೆ

ಕ್ಷಣಿಕ

ಅರ್ಧ ತೆರೆದ ಸ್ಲೈಡಿಂಗ್ ವಿಂಡೋದಿಂದ ತಂಪಾದ ಗಾಳಿ ಬೀಸುತ್ತಿತ್ತು. ಕಿಟಿಕಿ ಬದಿಗೆ ಕಟ್ಟಿದ್ದ ಕರ್ಟನ್ ಅದನ್ನು ಸೂಚಿಸುತ್ತಾ ಅತ್ತಿತ್ತ ಸರಿದಾಡುತ್ತಿತ್ತು. ಹೊರಗೆ ಶುಭ್ರ ಆಕಾಶ, ಹುಣ್ಣಿಮೆ ಚಂದ್ರನ ಬೆಳಕಿಗೆ ಹೊಳೆಯುತ್ತಿತ್ತು. ಹಾಸಿಗೆಯಲ್ಲಿ ಮಲಗಿ ಆಕಾಶವನ್ನೂ ಹಾಗೆ ದೂರ ದೂರದವರೆಗೆ ತಣ್ಣನೆ ಚಾಚಿಕೊಂಡಿರುವ ಬೃಹತ್ ನಗರವನ್ನು ದಿಟ್ಟಿಸುವುದು ಎಷ್ಟೊಂದು ಆಹ್ಲಾದಕರ...

ಕಥೆ

ಬಾಲಿಶತನ

“ಮೇಡಂ, ಸ್ವಲ್ಪ ’ಪರ್ಸನಲ್’ನ ಸ್ಪೆಲ್ಲಿಂಗ್ ಹೇಳ್ತೀರಾ?” ಫೈಲಿನಲ್ಲಿ ಕಾಗದಗಳನ್ನು ಜೋಡಿಸುತ್ತಿದ್ದವಳು ತಬ್ಬಿಬ್ಬಾಗಿ ಪ್ರಿನ್ಸಿಪಾಲರತ್ತ ನೋಡಿದೆ. ಅವರು ತಲೆ ತಗ್ಗಿಸಿ ತಮ್ಮ ಕ್ಯಾಜುವಲ್ ಲೀವ್ ಫಾರ್ಮ್ ತುಂಬುತ್ತಿದ್ದರು. ಅಪ್ರಯತ್ನವಾಗಿ ನನ್ನಿಂದ ಉತ್ತರ ಹೊರಬಂತು. ” P E R S O N A L“. ಪ್ರಿನ್ಸಿಪಾಲರು ಬರೆದು ಮುಗಿಸಿದರು. ಒಂದು...

ಕಥೆ

ಯಾವೂರು,ಯಾರ ಮನೆ, ಹೋಗಲಿ ಕೊನೆ ಪಕ್ಷ ನಿನ್ನ ಹೆಸರೇನಯ್ಯ ಅಂತಾನೂ ಕೇಳಲಿಲ್ಲ ಆಸಾಮಿ…

ಅಲ್ಲಾ, ಜಿಗ್ರಿ ಒಬ್ಬ ಡ್ರಾಪ್ ಕೊಡ್ತೀನಿ ಬಾರೋ ಅಂತ ಅಷ್ಟ್ ಕರೆದ. ಆಪರೂಪಕೊಮ್ಮೆ ಬರೋ ಬೇಸಿಗೆ ಮಳೆ ತರ ಯಾವಾಗ್ಲಾದ್ರೂ  ಒಮ್ಮೆ ಕರುಣೆ ಬಂದು ಆಫೀಸಿನ ಯಾರಾದರೊಬ್ಬ ಪುಣ್ಯಾತ್ಮ ಡ್ರಾಪ್ ಕೇಳ್ದ ಚಾನ್ಸ್ ಮಿಸ್ ಮಾಡ್ಕೊಂಡು, ಮೊಬೈಲು, ಪರ್ಸು, ಲ್ಯಾಪ್ಟಾಪ್ ಅಂತಷ್ಟೇ ಅಲ್ಲದೆ ಇನ್ನು ಯಾವ್ಯಾವ ಜಾಗದ ಮೇಲೋ ಏಕಾಗ್ರತೆ, ರಕ್ಷಣೆ ಎರಡನ್ನು ಮಾಡಿಕೊಳ್ಳುತ್ತಾ ಬಿಎಂಟಿಸಿಯ...