Author - Harikiran H

ಕಥೆ

ಕ್ಷಣಿಕ

ಅರ್ಧ ತೆರೆದ ಸ್ಲೈಡಿಂಗ್ ವಿಂಡೋದಿಂದ ತಂಪಾದ ಗಾಳಿ ಬೀಸುತ್ತಿತ್ತು. ಕಿಟಿಕಿ ಬದಿಗೆ ಕಟ್ಟಿದ್ದ ಕರ್ಟನ್ ಅದನ್ನು ಸೂಚಿಸುತ್ತಾ ಅತ್ತಿತ್ತ ಸರಿದಾಡುತ್ತಿತ್ತು. ಹೊರಗೆ ಶುಭ್ರ ಆಕಾಶ, ಹುಣ್ಣಿಮೆ ಚಂದ್ರನ ಬೆಳಕಿಗೆ ಹೊಳೆಯುತ್ತಿತ್ತು. ಹಾಸಿಗೆಯಲ್ಲಿ ಮಲಗಿ ಆಕಾಶವನ್ನೂ ಹಾಗೆ ದೂರ ದೂರದವರೆಗೆ ತಣ್ಣನೆ ಚಾಚಿಕೊಂಡಿರುವ ಬೃಹತ್ ನಗರವನ್ನು ದಿಟ್ಟಿಸುವುದು ಎಷ್ಟೊಂದು ಆಹ್ಲಾದಕರ...

ಕಥೆ

ನಿರ್ಭಯ

ಆ ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದರೂ ಇನ್ನು ಮನಸ್ಸಿನ ಆಳದಲ್ಲಿ ಹಸಿರಾಗೇ ಇದೆ. ಅದಕ್ಕೆ ಕಾರಣ ಇಲ್ಲದಿಲ್ಲ.ಅದರಿಂದಾಗಿ ನನ್ನ ಜೀವನದ ಚಿತ್ರಣವೇ ಬದಲಾಗಿಹೋಯಿತೆಂದರೂ ಸುಳ್ಳಲ್ಲ. ಕಳೆದ ವರ್ಷ ಹೆಚ್ಚು ಕಮ್ಮಿ ಇದೇ ಸಮಯ. ಮಳೆಗಾಲ ಕಳೆದು ಪ್ರಕೃತಿಯೂ ಹಸಿರಾಗೇ ಇತ್ತು. ಚಳಿಗಾಲದ ಕೊನೆಯಲ್ಲಿ ನನ್ನ ತಂಗಿಯ ಮದುವೆ ನಿಶ್ಚಯವಾಗಿದ್ದರಿಂದ ನನ್ನ ಓಡಾಟ ಸ್ವಲ್ಪ ಹೆಚ್ಚೇ...

ಸಿನಿಮಾ - ಕ್ರೀಡೆ

ಸ್ಟೋಕರ್ (೨೦೧೩) – ಒಂದು ವಿಚಿತ್ರ ಕುಟುಂಬದ ವಿಲಕ್ಷಣ ಕಥೆ

೨೦೧೩ ರಲ್ಲಿ ತೆರೆ ಕಂಡಂತಹ ಈ ಬ್ರಿಟಿಶ್ ಅಮೆರಿಕನ್ ಚಿತ್ರವನ್ನು ಹಾಲಿವುಡ್ಡಿನ ಖ್ಯಾತ ನಿರ್ದೇಶಕರಾದ  ಸ್ಕಾಟ್ ಸಹೋದರರು(ರಿಡ್ಲಿ ಮತ್ತು ಟೋನಿ) ನಿರ್ಮಿಸಿದ್ದಾರೆ. ಈ ಚಿತ್ರದೊಂದಿಗೆ ಈಗಾಗಲೇ ಸೌತ್ ಕೊರಿಯನ್ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿದ್ದ ಪಾರ್ಕ್ ಚಾನ್ ವೂಕ್ ತನ್ನ ಹಾಲಿವುಡ್ ಪ್ರವೇಶ ಮಾಡಿದರು.ಕೆಲವೊಂದು ಹಾಲಿವುಡ್ ಚಿತ್ರಗಳಲ್ಲಿ ಹಾಗೂ ಪ್ರಿಸನ್ ಬ್ರೇಕ್...

ಅಂಕಣ

ಕಾಡುವ ಪೈಜಾಮ ಹುಡುಗ

ಅಮಾನುಷ ಸಾಹಸ ಸನ್ನಿವೇಶಗಳು, ಅಸಾಧಾರಣ ಗ್ರಾಫಿಕ್ಸ್ ಗಳ ಭರಾಟೆಯಲ್ಲಿ ಕಳೆದು ಹೋದ ಹಾಲಿವುಡ್ ಚಿತ್ರಗಳ ನಡುವೆ ದಿ ಬಾಯ್ ಇನ್ ಸ್ಟ್ರೈಪ್ಡ್ ಪೈಜಾಮ ದಂತಹ ಸೂಕ್ಷ್ಮ ಸಂವೇದಿ ಸಿನಿಮಾಗಳು ನಮ್ಮ ಮನಸನ್ನು ತಟ್ಟಿ ಹಲವಾರು ದಿನಗಳು ಕಾಡುತ್ತಲೇ ಇರುತ್ತವೆ. ಮನೋರಂಜನೆಯೊಂದೇ ಸಿನೆಮಾಗಳ ಗುರಿ ಅಲ್ಲದೇ  ಅದನ್ನು ಮೀರಿ ಏನೋ ಒಂದು ಸಂದೇಶ ಅಥವಾ ಭಾವನೆಗಳ ಸಂಘರ್ಷ ನಮ್ಮ...

ಕಥೆ

ಉರುಳು ಭಾಗ -೨

ಉರುಳು ಭಾಗ-೧ ಕೆಲಸ ಮಾಡಲು ಸುತರಾಂ ಮನಸ್ಸೇ ಇಲ್ಲ. ರಜದ ಮೇಲೆ ರಜಾಹಾಕಿದ. ಎಲ್ಲ ದಿನ ಬ್ಯಾಂಕಿಗೆ ಹೋಗಿ ಹಣ ಬಂತೆ ಎಂದುವಿಚಾರಿಸುವುದೇ ಅವನ ಈಗಿನ ಪ್ರಮುಖ ಕೆಲಸ. ಎಂಟನೇದಿನ ಒಂದು ಫೋನ್ ಕಾಲ್ ಬಂತು. ಒಬ್ಬಳು ಮಹಿಳೆಯ ದ್ವನಿ ,ತಾನು ರಿಸರ್ವ್  ಬ್ಯಾಂಕಿನ ಏಜೆಂಟ್ ಅಂತಪರಿಚಯಿಸಿಕೊಂಡಳು. “ಸರ್ ನಿಮಗೆ ಜೆಮೈಲ್  ಲಾಟರಿಯ ಎರಡು ಕೋಟಿ ರುಪಾಯಿಬಹುಮಾನ ಬಂದಿದೆ...

ಕಥೆ

ಉರುಳು ಭಾಗ-೧

ಕಿರ್… ಕಿರ್… ಕಿರ್… ತಲೆ ಮೇಲೆ ಹಳೇ ಫ್ಯಾನ್ ಜೋರಾಗಿ ಕಿರುಚುತ್ತಾ , ಅತ್ತಿಂದಿತ್ತ ತನ್ನ ಅಕ್ಷದಲ್ಲೇ ತೂಗಾಡುತ್ತಾ ಮೆಲ್ಲನೆ ತಿರುಗುತ್ತಿತ್ತು. ಮ್ಯೂಸಿಯಮ್’ಗಳಲ್ಲಿರುವ ಪುರಾತನ ವಸ್ತುಗಳ ಪ್ರಾಯವಿರಬಹುದು ಅದಕ್ಕೆ. ಗಾಳಿ ಬರದಿದ್ದರೂ ಫ್ಯಾನಿನ ಕರ್ಕಶ ಶಬ್ದ ಕೇಳುತ್ತಾ ನಿದ್ರಿಸುವುದು ಅಭ್ಯಾಸವಾಗಿ ಹೋಗಿತ್ತು ಸುದಾಮನಿಗೆ. ಆದರೆ ಅವನ ಮಡದಿ...