ಯಾವಾಗಲೂ ಗಿಜಿಗುಡುತ್ತಿದ್ದ ದೇರಣ್ಣನ ಚಾ ಅಂಗಡಿ, ಅಂದೇಕೋ ಬಿಮ್ಮೆಂದು ಕೂತಿತ್ತು. ಅಂಗಡಿಯೆಂದರೆ ನಾಲ್ಕು ಮೇಜುಗಳು, ಅದಕ್ಕೆ ಒತ್ತೊತ್ತಾಗಿ ಇಟ್ಟಿರುವ ಎಂಟು ಕುರ್ಚಿಗಳು, ಒಂದೆರಡು ಗಾಜಿನ ಡಬ್ಬಿ . ಅದರಲ್ಲಿ ಪೆಪ್ಪೆರ್ಮೆಂಟು, ಹಾಲ್ಕೊವ ಇತ್ಯಾದಿ. ಒಳಗೆ ದೇರಣ್ಣ ಕುಳಿತುಕೊಳ್ಳಲು ಒಂದು ಕುರ್ಚಿ, ಒಂದು ಮೇಜು. ಚಾ ಕಾಯಿಸುವ ಪಾತ್ರೆ ಇತ್ಯಾದಿ… ಹತ್ತಾರು ಜನ...
ಕಥೆ
ತೆರೆ
“ಮತ್ತೆ ಮುಂದೇನು ಅಂತ … “ಕಾಫಿ ಹೀರುತ್ತಾ ಎದುರು ಕುಳಿತಿದ್ದ ಕ್ಷಮಾಳ ಮುಖ ನೋಡಿದೆ. ಸುತ್ತಲಿನ ಪರಿಸರದಲ್ಲಿ ಕರಗಿ ಹೋದಂತೆ, ಎಲ್ಲೋ ದೂರದ ಪರ್ವತಗಳಿಂದ ಕೂಗಿ ಕರೆದ ಅನುಭವವಾಗುವಂತೆ ಅವಳು ಮಾತನಾಡತೊಡಗಿದಳು. “ನೋಡೋಣ … ಹೊರಗೆ ಹೋಗ್ಬೇಕು ಅಂತ ಹೇಳಿದ್ನಲ್ಲಾ … Europe ಗೆ ಅಪ್ಲೈ ಮಾಡ್ತಾ ಇದ್ದೀನಿ … “...
ಕಥೆ: ವಾಸ್ತವ
“Hello!” ಫೇಸ್ಬುಕ್ಕಿನಲ್ಲಿ ಅಪರಿಚಿತ ಪ್ರೊಫೈಲ್ ನಿಂದ ಮೆಸೇಜ್ ಬಂತು. ಸಾಮಾನ್ಯವಾಗಿ ನಾನು ಅಪರಿಚಿತ ವ್ಯಕ್ತಿಗಳಿಗೆ ಉತ್ತರಿಸುವುದಿಲ್ಲವಾದ್ದರಿಂದ ಪ್ರತಿಕ್ರಿಯಿಸಲು ಹೋಗಲಿಲ್ಲ. ಎರಡುನಿಮಿಷಗಳ ಬಳಿಕ “ಇವತ್ತು ನಿನ್ನನ್ನು ಬಸ್ ಸ್ಟಾಂಡ್ ನಲ್ಲಿ ನೋಡಿದೆ ” ಎಂಬ ಮೆಸೇಜ್. ಒಮ್ಮೆ ಗಾಬರಿಯಾದರೂ ಸಾವರಿಸಿಕೊಂಡು “ಯಾರು ನೀವು...
ಇದೊಂದು ಹೆಸರಿನ ಹಂಗಿಲ್ಲದ ಕಥೆ..
ಇದೊಂದು ಹೆಸರಿನ ಹಂಗಿಲ್ಲದ ಕಥೆ.. ಮೊದಲೇ ನೀಡುವ ಎಚ್ಚರಿಕೆ ಏನೆಂದರೆ, ಕಥೆ ತುಂಬಾ ದೊಡ್ಡದಾಗಿದೆ. ಇದರಲ್ಲಿನ ಯಾವ ಭಾಗವನ್ನು ತುಂಡರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಮೇಲೆ, ಹಾಗೆಯೇ ಬಿಟ್ಟುಬಿಟ್ಟಿದ್ದೇನೆ.. ಟೇಬಲ್ ಮೇಲಿದ್ದ ಫೋನ್ ಹೊಡೆದುಕೊಳ್ಳುತ್ತಿತ್ತು. ಎದುರುಗಡೆಯ ಗೋಡೆ ಮೇಲೆ ಐದು ಟೀವಿಗಳಲ್ಲಿ ಬೇರೆ ಬೇರೆ ಸುದ್ದಿಗಳ ವೀಡಿಯೊ ಫೂಟೆಜ್...
ರಕ್ತಪ್ರವಾಹ
“ಈ ಮನ್ಯಾಗೆ ಯಾರಿಗೂ ನನ್ ಚಿಂತೀ ಅರ್ಥಾನೇ ಆಗಲ್ಲ. ನಾಳೆ ಮನ್ಯಾಗೆ ಪೂಜಾ ಇದೆ. ಅಯ್ಯನೋರು ಪೂಜೆಗೆ ಒಂದು ಕೊಡ ಹೊಳೀ ನೀರು ಬೇಕಂತ ಹೇಳಿದಾರೆ. ಆ ಹಾಳು ರಂಗಂಗೆ ಹೇಳಿಒಂದು ಕೊಡ ನೀರು ತರಿಸಬಾರ್‍ದೇನು?” ಎಂದು ಗೌಡತಿ ಅರಚುವುದನ್ನು ಕೇಳಿದ ಸಿದ್ದೇಗೌಡರು, ಹೆಂಡತಿಯ ಬೊಂಬಾಯಿಯಂಥ ಬಾಯಿಗೆ ಅಂಜಿ, ಮನದಲ್ಲೇ ಅವಳನ್ನು ಶಪಿಸುತ್ತಾ ಆಳುರಂಗನನ್ನು ಅರಸುತ್ತಾ...
ಯಶೋದರ
ಮಹೇಶ್ವರಿ, ಕರ್ನಾಟಕ ರಾಜ್ಯದ ಶೇಕಡಾ ೫೦ರಷ್ಟು ಭೂ ಭಾಗವನ್ನು ಹೊಂದಿರುವ ಬಯಲು ಸೀಮೆಯ ಒಂದು ಪುಟ್ಟ ತಾಲ್ಲೂಕು ಕೇಂದ್ರ . ರಾಜಧಾನಿಯಿಂದ ಹೊರಡುವ ರಾಷ್ಟ್ರೀಯ ಹೆದ್ದಾರಿ ಪಟ್ಟಣವನ್ನು ಹಾದುಹೋಗುತ್ತದೆ .ಊರನ್ನು ರಾಜಧಾನಿಯ ಕಡೆಯಿಂದ ಪ್ರವೇಶಿಸುವಾಗಲೇ ಮನಸ್ವಿನಿ ನದಿಯ ಕೃಪೆಯಿಂದ ತುಂಬಿದ ಕೆರೆಯನ್ನು ಕಾಣಬಹುದು ,ಕೆರೆಯ ಪಕ್ಕದಲ್ಲೇ ಕರದಲ್ಲಿಶಂಖ ,ಚಕ್ರಗಳನ್ನು...
ಯುಗಾದಿ
“ಮೂದೇವಿ … ಈಗ ಅಳುವಂತದ್ದು ಏನ್ ಆಗೈತೆ ಅಂತ … ಯಾಕ್ ಹಿಂಗ್ ಸಾಯ್ತಿ ನೀನು…” ಬುಡ್ಡಿ ದೀಪದಬೆಳಕಲ್ಲಿ ಕಾಕಿ ಅಳುದ್ ಕಂಡ ಮಾದ ಅವಳ ಮೇಲೆ ಉರಿದು ಬಿದ್ದ.. . ಆದರೆ ಕಾಕಿ ಗೆ ಇದೇನುಹೊಸತಲ್ಲವಲ್ಲ … ಪ್ರತಿದಿನದ ಗೋಳು … ಕಾಕಿ ಗುಡಿಸಿಲಿನ ಮೂಲೇಲಿ ಕುಳಿತು ಒಲೆಗೆ ಸೌದೆ ಹಾಕಿ “ಉಫ್” ಅಂತ ಊದ್ತಾ … ಕಣ್ಣು...
ವಿಪರ್ಯಾಸ
ಕೈಯೊಂದು ಭುಜದ ಮೇಲೆ ಬಡಿದಂತಾಗಲು ರಪ್ಪನೆ ಹಿಂದಿರುಗಿ ನೋಡಿದಾಗ ,”ಏನ್ರೀ ನಾಗರತ್ನಮ್ಮ,ನಾನ್ ಕಣ್ರೀ ಇದು! ಇಷ್ಟೊಂದು ಬೆಚ್ಚಿ ಬೀಳ್ತಿದೀರಲ್ಲಾ?”, ದೊಡ್ಡ ಕುಂಕುಮ ಬೊಟ್ಟಿನ ಮಹಿಳಾಮಣಿ ಲಕ್ಷ್ಮೀ ಕೇಳಿದರು. “ಹೌದು, ನಾನೂ ಬೆಳಗಿನಿಂದ ನೋಡ್ತಾ ಇದೀನಿ. ಫಂಕ್ಷನ್ ಅಲ್ಲಿ ಇನ್ವೋಲ್ವ್ ಆಗಿಲ್ಲ ನೀವು, ಏನಾದ್ರೂ ಸಮಸ್ಯೆಯೇ?” ಲತಾಂಗಿ ಉಲಿದಳು...
ಮಾಯಾಕೋಲ
ದೇವರಗುಡ್ಡೆ ಗ್ರಾಮದ ಕಾಡಿನ ಮಧ್ಯೆ ಇರುವ ಪಂಜುರ್ಲಿ ದೈವದ ಸ್ಥಾನ (ದೈವದ ದೇವಸ್ಥಾನ) ದಲ್ಲಿ ತೆಂಬರೆ, ನಾಗಸ್ವರ, ಡೋಲುಗಳ ಸದ್ದು ಮುಗಿಲು ಮುಟ್ಟಿತ್ತು. ಕದೋನಿ, ಗರ್ನಾಲ್ಗಳು ಕಿವಿಗಡಚಿಕ್ಕುವಂತೆ ಅಪ್ಪಳಿಸುತ್ತಿದ್ದವು. ಇಡೀ ಗ್ರಾಮದ ಎಲ್ಲಾ ಜನರೂ ಅಲ್ಲಿ ನೆರೆದಿದ್ದರು.ಅಲ್ಲದೇ ಪರವೂರಿನ ಅನೇಕ ಗ್ರಾಮಸ್ಥರು, ಸ್ನೇಹಿತರು, ಬಂಧು ಬಳಗದವರು ಆಗಮಿಸಿದ್ದರು. ಸಮಯ...
ಕಥೆ: ಭಾವ
” ಹೊರಟಿರುವುದು ಎಲ್ಲಿಗೆ …. ? “, ಜೀನ್ಸ್ ಏರಿಸಿಕೊಳ್ಳುತಿದ್ದ ಭಟ್ಟನನ್ನು ಕೇಳಿದೆ. ” ಗೊತ್ತಿಲ್ಲ ಕಣೋ … ನೇಹಾ ಏನೋ ಹೇಳ್ತಾ ಇದ್ಲು … ನಂಗ್ ಮರ್ತೋಯ್ತು ” ಅಂದ. ಅಂದು ಶನಿವಾರ. ಸುಮಾರು ಏಳು ಘಂಟೆಯ ಸಮಯ. ಆಗ ತಾನೇ ಪಡುವಣದ ಕೆಂಪು ಕರಗಿ ಎಲ್ಲೆಡೆ ನಿಷೆ ಆವರಿಸುತ್ತಿದ್ದಳು. ಹೊರಗೆ ಕೊರೆಯುವ ಚಳಿ. ಬೆಚ್ಚಗಿನ...