ಸಿನಿಮಾ – ಕ್ರೀಡೆ

Featured ಸಿನಿಮಾ - ಕ್ರೀಡೆ

ಪುಷ್ಪಕ ವಿಮಾನ

’ಪುಷ್ಪಕ ವಿಮಾನ’ – ರಮೇಶ್ ಅರವಿಂದ್ ಎಂಬ ಕನ್ನಡ ಚಿತ್ರರಂಗದ ಎವರ್’ಗ್ರೀನ್ ಸುಂದರಾಗನ ನೂರನೇ ಚಿತ್ರ. ರವೀಂದ್ರನಾಥ್ ಎಂಬ ನಿರ್ದೇಶಕನ ಮೊದಲ ಚಿತ್ರ. ಈ ಇಬ್ಬರ ಸಮ್ಮಿಲನದಲ್ಲಿ ತಯಾರಾಗಿರುವ ಸಿನಿಮಾ ವಿಮಾನ ಈಗ ಹಾರಾಡುತ್ತಿರುವುದು ಪ್ರೇಕ್ಷಕನ ಎದೆಯ ಬಾಂದಳದಲ್ಲಿ.   ಒಬ್ಬ ಬುದ್ಧಿಮಾಂದ್ಯ ಅಪ್ಪ ಹಾಗೂ ಚೂಟಿ ಮಗಳ ನಡುವಿನ ಬಾಂಧವ್ಯ ಈ ಸಿನಿಮಾದ ಕಥಾ ಹಂದರ...

ಸಿನಿಮಾ - ಕ್ರೀಡೆ

ಅಪ್ಪನೆಂಬ ಅದ್ಭುತದೊಡನೆ ಯಾನ- ಈ ಪುಷ್ಪಕ ವಿಮಾನ

ಅಪ್ಪನೆಂಬ ಅದ್ಭುತದೊಡನೆ ಸಾಗುವ ಮಗಳ ಮಧುರ ಯಾನವೇ ಈ  ‘ಪುಷ್ಪಕ ವಿಮಾನ’. ಅನಂತರಾಮಯ್ಯ ಎಂಬ ಬುದ್ಧಿಮಾಂದ್ಯ ಅಪ್ಪ- ಅವನ ಮುದ್ದು ಮಗಳು ಪುಟ್ಟಲಕ್ಷ್ಮಿಯ ಮುದ್ದಾದ ಮಮತೆಯೊಡನೆ ಶುರುವಾಗುವ ಈ ಭಾವಯಾನ, ಅಪ್ಪ-ಮಗಳ ಸುಮಧುರ ಸುಗಂಧದ ಆಹ್ಲಾದವನ್ನು  ಕೊಡುವುದರ ಜೊತಗೆ,ಮುಗ್ಧ ಅಪ್ಪ ಅರಿವಿಲ್ಲದ ಜಾಲದಲ್ಲಿ ಸಿಕ್ಕಿ ಒದ್ದಾಡುವಾಗ ಸಂಕಟವನ್ನೂ ಕೊಡುತ್ತದೆ...

ಸಿನಿಮಾ - ಕ್ರೀಡೆ

ಹಿತವಾಗಿವಾಗಿ ನಗಿಸುವ, ಸಿಹಿಯಾಗಿ ಕಾಡುವ “ಕಿರಿಕ್ ಪಾರ್ಟಿ”

“ಕಿರಿಕ್ ಪಾರ್ಟಿ” ಇದು ಹಿತವಾಗಿ ನಗಿಸುವ, ಸವಿಯಾಗಿ ಕಾಡುವ ಚಂದದ ಸಿನಿಮಾ. ಈ ಸಿನೆಮಾದಲ್ಲಿ ನಿಮ್ಮ ಕಾಲೇಜಿನ ದಿನಗಳಲ್ಲಿದ್ದ ಕಿರಿಕ್ ಕಥೆಗಳಿವೆ, ಸ್ವೀಟ್ ಆದ ಪ್ರೇಮ ಕಥೆಯಿದೆ, ಸದಾ ಗುನುಗಬೇಕೆಂದೆನಿಸುವ ಅಪರೂಪದ ಹಾಡುಗಳಿವೆ. ನಿಮ್ಮ ಸುಂದರ ನೆನಪಿಗೊಂದು ಚಂದದ ರೂಪ ಕೊಡುವ ಕೆಲಸಮಾಡಿದ್ದು ಕತೆಗಾರ ರಕ್ಷಿತ್ ಶೆಟ್ಟಿ. ಒಂದು ಒಳ್ಳೆಯ ತಂಡ ಚಂದದ...

ಸಿನಿಮಾ - ಕ್ರೀಡೆ

ಕಿರಿಕ್ ಪಾರ್ಟಿ

‘ಕಿರಿಕ್ ಪಾರ್ಟಿ’ – ಕರ್ನಾಟಕದಾದ್ಯಂತ ಎಲ್ಲ ಸಿನಿಮಾ ಪ್ರಿಯರ ಬಾಯಲ್ಲೂ ಇದರದ್ದೇ ಸುದ್ದಿ ಈಗ. ಸಿನಿಮಾ ತೆರೆಕಾಣುವ ಮುಂಚೆಯೇ ಹುಚ್ಚು ಹಿಡಿಸುವ ಮೆಚ್ಚು ಹಾಡುಗಳಿಂದ ಅಪಾರವಾದ ನಿರೀಕ್ಷೆ ಮೂಡಿಸಿತ್ತು. ಇದೀಗ ಆ ಎಲ್ಲ ನಿರೀಕ್ಷೆಗಳನ್ನು ಅಚ್ಚುಕಟ್ಟಾಗಿ ಪೂರ್ತಿಗೊಳಿಸಿರುವ ಈ ಚಿತ್ರ ಕನ್ನಡದ ಚಿತ್ರ ಪ್ರೇಕ್ಷಕರಿಗೆ ಹಳೆ ವರ್ಷಾಂತ್ಯ ಹಾಗೂ ಹೊಸ...

ಸಿನಿಮಾ - ಕ್ರೀಡೆ

ಪಿಲಿಬೈಲಲ್ಲಿ ಹಾಸ್ಯದ್ದೇ ಗತ್ತು ಗಮ್ಮತ್ತು…

ಚಿತ್ರ : ಪಿಲಿಬೈಲ್ ಯಮುನಕ್ಕ ತಾರಾಗಣ : ಪ್ರಥ್ವಿ ಅಂಬರ್, ಸೋನಾಲ್, ನವೀನ್ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜುರ್, ಸತೀಶ್ ಬಂದಲೆ ಮತ್ತಿತರರು. ನಿರ್ದೇಶನ : ಸೂರಜ್ ಶೆಟ್ಟಿ ****** ಹಿಂದಿನ ಎಕ್ಕಸಕ್ಕದ ಯಶಸ್ಸಿನ ಹಿನ್ನಲೆಯಿಟ್ಟುಕೊಂಡು ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ತೆರೆಗೆ ಬಂದ ‘ಪಿಲಿಬೈಲ್ ಯಮುನಕ್ಕ’, ಹಳೇ ಮಲಯಾಳಂ ಚಿತ್ರಗಳ...

ಸಿನಿಮಾ - ಕ್ರೀಡೆ

ಬಾಲಿವುಡ್ ಬಡಾ ಜೋಡಿ : ಸಲಿಂ-ಜಾವೇದ್.

ಅದು ಎಪ್ಪತ್ತರ ದಶಕದ ಆರಂಭದ ವರ್ಷಗಳು. ಭಾರತದಲ್ಲಿ ವಾಕ್ ಚಿತ್ರಗಳು ಶುರುವಾಗಿ ಅದಾಗಲೇ ನಾಲ್ಕು ದಶಕಗಳು ಕಳೆದಿದ್ದವು. ಶಾಂತಿ ಪ್ರಿಯ, ಕಾದಂಬರಿ ಆಧಾರಿತ, ಪ್ರೀತಿ ಪ್ರೇಮಗಳ ತ್ಯಾಗಮಯಿ  ಚಿತ್ರಗಳಷ್ಟೇ ಹೆಚ್ಚು ಹೆಚ್ಚಾಗಿ ಮೂಡುತ್ತಿದ್ದವು. ಪ್ರೇಕ್ಷಕರು ತದೇಕ ಚಿತ್ತದಿಂದ ಚಿತ್ರವನ್ನು ನೋಡಿ  ಕೊನೆಗೆ ಚಿತ್ರದಲ್ಲಿರುವ ಸಂದೇಶವನ್ನು ಅರಿಯಬೇಕಿತ್ತು. ಇಂದಿನಂತೆ...

ಸಿನಿಮಾ - ಕ್ರೀಡೆ

ಆವತ್ತು ಆರ್.ಜೆ, ಈಗ ಕ್ರಿಕೆಟರ್!!

ಪದವಿಗೆ ಕಾಲಿರಿಸುವವರೆಗೆ ಯಾವುದೇ ಗುರಿಯನ್ನು ಹೊಂದಿರದ ರಕ್ಷಿತಾಗೆ, ಡಿಗ್ರಿ ಅಭ್ಯಾಸದ ವೇಳೆ ಜ್ಞಾನೋದಯವಾಗಿದ್ದು.. ‘ನಾನು ಇನ್ನೂ ಹೀಗೆಯೇ ಇದ್ದರೆ ಮುಂದೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ’ ಎಂಬ ಅರಿವಿನ ಬೆಳಕು ಆಕೆಯ ಹೃದಯದಲ್ಲಿ ಮಿಂಚಿ ಮರೆಯಾದಾಗ ಸಾಧನೆ ಮಾಡುವುದರ ಕುರಿತಂತೆ ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿದರಂತೆ. ಮಾತನಾಡುವುದರಲ್ಲಿ ಎತ್ತಿದ...

Featured ಸಿನಿಮಾ - ಕ್ರೀಡೆ

“ರಾಮಾ ರಾಮಾ ರೇ” ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ..

ಚಿತ್ರ: ರಾಮಾ ರಾಮಾ ರೇ ನಿರ್ದೇಶನ: ಡಿ. ಸತ್ಯಪ್ರಕಾಶ್ ಸಂಗೀತ: ವಾಸುಕಿ ವೈಭವ್ ಕ್ಯಾಮೆರಾ: ಲವಿತ್ ತಾರಾಗಣ: ನಟರಾಜ್ ಭಟ್, ಜಯರಾಜ್, ಧರ್ಮಣ್ಣ ಕಡೂರು, ಬಿಂಬಶ್ರೀ, ಎಂ.ಕೆ ಮಠ ಸ್ನೇಹಿತರಿಬ್ಬರು ನಿರ್ಧರಿಸಿದಂತೆ ಭಾನುವಾರ ಮಂಗಳೂರಿಗೆ ಹೋಗುವುದೆಂದು ಫಿಕ್ಸ್ ಆಗಿತ್ತು. ಮಧ್ಯಾಹ್ನ ಮಂಗಳೂರು ತಲುಪಿದರೆ ಸಿಟಿ ಸೆಂಟರ್ ಅಲ್ಲಿ ಇಲ್ಲಿ ಅಲೆದು ರಾತ್ರಿಯ ವೇಳೆಗೆ ಮನೆ...

ಸಿನಿಮಾ - ಕ್ರೀಡೆ

ನಾಟಕೀಯತೆಯೇ ಮಳೆಯಾದಾಗ

ಚಿತ್ರ : ಬರ್ಸ (ತುಳು) ತಾರಾಗಣ : ಅರ್ಜುನ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೇವದಾಸ್ ಕಾಪಿಕಾಡ್ ನಿರ್ದೇಶನ : ದೇವದಾಸ್ ಕಾಪಿಕಾಡ್ ನಿರ್ಮಾಣ : ಬೊಳ್ಳಿ ಮೂವೀಸ್ ******ಕೆಲ ವರುಷಗಳ ಹಿಂದೆ ತುಳು ಚಿತ್ರಗಳೆಂದರೆ ನಾಟಕೀಯ ಚಿತ್ರಗಳು ಎಂಬ ಮಾತಿತ್ತು.. ಅಲ್ಲಲ್ಲಿ ನಾಟಕೀಯ ಛಾಯೆ ಎದ್ದು ಕಾಣುತ್ತಿತ್ತು. ಕ್ರಮೇಣ ಅಂತಹ ಅಪವಾದವನ್ನು ತೊಡೆದು...

ಸಿನಿಮಾ - ಕ್ರೀಡೆ

‘ಪ್ರಕಾಶ’ಮಾನವಾಗುವುದೂ ಕಷ್ಟವೇ !

ಒಬ್ಬ ಅಭೂತಪೂರ್ವ ನಟ ! ಕಷ್ಟ ಪಟ್ಟು ಮೇಲೆ ಬಂದವರು ಎಲ್ಲಾ ಸರಿ. ಆದರೆ , ಒಂದು ಹೇಳಿಕೆ ! ಎಷ್ಟೋ ಜನರ ಅಭಿನಯ,ಅಹೋರಾತ್ರಿಯ ಕೆಲಸವನ್ನ ಸಿನಿಮಾಪ್ರಿಯರು ಓರೆಗಣ್ಣಿಂದಲೂ ನೋಡ್ತಿಲ್ಲ. ಕ್ಯಾರೇ ಅನ್ನಂಗಿಲ್ಲ ಜನ ಅನ್ನೋ ಪರಿಸ್ಥಿತಿ ಇದೊಳ್ಳೆ ರಾಮಾಯಣಕ್ಕೆ ಒದಗಿ ಬಂತಲ್ವೇ? ಇನ್ನೇನು ಚಿತ್ರಕ್ಕೆ ಒಂದೆರಡು ದಿನಗಳಲ್ಲೇ ಭಾರೀ ಪ್ರಶಂಸೆ ವ್ಯಕ್ತವಾಗತ್ತೆ , ಇರೋ ಪರೀಕ್ಷೆಗಳು...