ಕವಿತೆ

ಕವಿತೆ

ನೆನೆದಿದ್ದು ಮಳೆಯೋ, ಮನವೊ ?

ತುಂತುರು ಮಳೆಯಲಿ ನೆನೆಯುತ್ತ ಏನೇನನೊ ಮನದಲಿ ನೆನೆಯುತ್ತ ಸಾಗಿದ್ದೆ ತುಂತುರು ಹನಿ-ಸುತ್ತ ಮನಕೆ ನೆನಪಿನ ಹನಿ ಹನಿ ಎರಚಿತ್ತಾ ಮುದಕೆ ಯಾರನೊ ಮನಸದು ನೆನೆಸಿತ್ತು ತುಂತುರು ಹನಿ ತಲೆಯ ನೆನೆಸಿತ್ತು ನೆನೆದಿದ್ದು ಒಳಗೊ ಹೊರಗೊ ಗೋಜಲು ಒಳಗ್ಹೊರಗೆಲ್ಲ ಒದ್ದೆಯಾಗಿ ಜುಳು ಜುಳು.. ನೆನೆದಾಕೆಯ ನಗು ನೆನೆದಾ ವದನ ಹನಿ ಜತೆ ಬೆವರು ಸಾಲುಗಟ್ಟಿ ತೋರಣ ನೆನಪಿನಾ ತೋಟದಲೆಲ್ಲಾ...

ಕವಿತೆ

ನನ್ನಲ್ಲಿ ಈಗ…

ಎಲ್ಲಾ ಕನಸುಗಳು ಸ್ತಬ್ಧ ಎಲ್ಲಾ ಆಸೆಗಳೂ ನಿಶ್ಯಬ್ದ ಮನಸೊಂತರ ಪ್ರಾರಬ್ಧ ನಿಮಿಷಕ್ಕೊಮ್ಮೆ ಚಂಚಲತೆಯ ಶಬ್ದ ನನ್ನಲ್ಲಿ ಈಗ… ಶೂನ್ಯತೆಯ ಅನಾವರಣ ನಿನ್ನ ನೆನಪುಗಳ ನಿರ್ವಾಣ ನೀನೋಂತರ ನಿಧಾನಗತಿಯ ಪಾಷಾಣ ಆವರಿಸಿದೆ ನನ್ನದೇ ಪರ್ಯಾವರಣ ನನ್ನಲ್ಲಿ  ಈಗ.. ಮುನಿಸಷ್ಟೇ ಅಲ್ಲ ಕಾರಣ ಯಾರಿಗೆ ಗೊತ್ತು? ಗೊಂದಲಗಳು ನಿನ್ನನುಪಸ್ಥಿತಿಯ ಹೊತ್ತು ಮತ್ತೊಂದಿರಬಹುದು ನಿನ್ನ ಮನದ...

ಕವಿತೆ

ಜಲವ್ಯೋಮಾಗ್ನಿ

ಅನಂತ ಕಡಲ ಒಡಲಿನಲ್ಲಿ ಜಗದೇಕ ಅಗ್ನಿಘನ ಪ್ರತಾಪ; ಉದಕದುದರವ ಮಥಿಸೆ ಬೆಂಕಿ ಜೀವಕಣವು ತೇಜಚುಕ್ಕಿ|| ನೆಲದ ಮೇಲೆ ತೇಲೋ ನೀರು ತಲದಿ ವ್ಯೋಮದಿವ್ಯ ಪದರು; ಸುಡುವ ಜ್ವಾಲೆ ಜೊನ್ನ ಸೂಸೆ ಅನು ಜೀವಕೂ ಚೇತಸ ಉಸಿರು|| ಅಗ್ನಿದಿವ್ಯ ತನ್ನೊಳು ತಾನಾಗೆ ಜಲಪತ್ತಲದಲ್ಲಿ ಬಹು ಬಹು ರಂಗು; ಬಣ್ಣದ ಬಿಂಬ ಪ್ರತಿಬಿಂಬವಾಗಿ ಸುಮದ ಮೊಗದಿ ರಂಗಿನ ಬೆರಗು|| ಖಗಕಂಠ ತಂತು ತಾ ಮಿಡಿಯೆ...

ಕವಿತೆ

ಬರುತ್ತೇನಮ್ಮ ಊರಿಗೆ

ನಡು ನೆತ್ತಿ ಮೇಲೆ ಆಗಲೆ ಬಂದಾಗಿತ್ತು ಸೂರ್ಯ ಅಮ್ಮನಿಗೋ ನನ್ನ ಏಬ್ಬಿಸುವುದೇ ದೊಡ್ಡ ಕಾರ್ಯ ಅಪ್ಪನ ಸಿಟ್ಟಲ್ಲೂ ಪ್ರೀತಿ ಇತ್ತೆಂದು ತಿಳಿದಿತ್ತು ಅದಕೆ,ಕಳ್ಳ ನಿದಿರೆಯಲ್ಲೂ ನನ್ನ ಗೊರಕೆ ಜೋರಾಗಿತ್ತು ಏಳೋ ಮಾಣಿ,ಶಾಲೆಗೆ ರಜೆಯಾ?ಎಂದಳು ಅಜ್ಜಿ ಅಜ್ಜನ ನೋಡಿಯೇ, ಏದ್ದು ಬೇಗ ರೆಡಿಯಾದೆ ಹಲ್ಲುಜ್ಜಿ ಅಂಗಳದಲ್ಲಿ ನಿಂತು ನೋಡಿದೆ ಹಚ್ಚ ಹಸುರಾದ ತೋಟ ಮಲೆನಾಡಲ್ಲವೇ?ಆಗಾಗ...

ಕವಿತೆ

ನಾ ತಯಾರಿ ನಡೆಸಿದ್ದೇನೆ….

  ನಾನು ಮತ್ತೆ ಮತ್ತೆ ನೋಡಿದ್ದೆ ನಿನ್ನ ಕಣ್ಣುಗಳವು ಕೊಳದ ಭಾವಗಳ ಬಂಧನಗಳು ನಗುವು ನಲಿದರೂ, ಮನದೊಳಗಿನ ಆತಂಕಕ್ಕೆ ನಕ್ಕ ಜೀವದ ವೀಣೆಗೆ ಹೆಸರು ಹುಡುಕಲು…. ಕನಸುಗಳು ಆಕಾಶದೆತ್ತರದಲಿ ಗಾಳೀಪಟದಂತೆ ಗಿರಕಿ ಹೊಡೆದು ನವಿಲುಗರಿಯ ಮಿಂಚು ಬಣ್ಣದಲಿ ಹೊದ್ದ ಅಂಗಿಯ ವಸ್ತ್ರ, ಆಟಗೆ ಸಾಮಾನು ಸದ್ದಾಗಲು ಮಗ್ಗುಲು ಹೊರಳಿ ನಿದ್ದೆ ಮುರಿಯಿತು ಕನಸು; ಆದರೂ ಮನಸು...

ಕವಿತೆ

ಓ ನನ್ನ ಚೇತನ.

ಒಂದು ನಿಮಿಷವೂ ಸುಮ್ಮನೆ ಕೂರುತಿಲ್ಲ, ಅದೇನನ್ನೋ ಹುಡುಕುತ ಕನವರಿಸುತಿದೆ, ಎಲ್ಲವೂ ಇದೆಯಾದರೂ ಏನೂ ಇಲ್ಲವೆಂಬ ಭಾವ, ಕನಸುಗಳ ಒರತೆ ಬತ್ತಿಹೋಗಿದೆ ನನ್ನಲಿ….! ಎಲ್ಲರೂ ಜೊತೆಗಿದ್ದಾರೆ ಆದರೂ ನಾನು ತಬ್ಬಲಿ, ಎಲ್ಲವೂ ದೊರೆತಿದೆ ಆದರೂ  ಮನಸ್ಸಿಗೆ ಶಾಂತಿ ಇಲ್ಲ, ಕಾಣದ ಕೈಯ್ಯೊಂದು ನನ್ನನು ಆಡಿಸುತಿದೆ, ನನ್ನ ಆಸೆಗಳೇ ನನಗೆ ನೆನಪಿಲ್ಲದಂತಾಗಿದೆ…...

ಕವಿತೆ

ಶುಭೋದಯ

ಶುಭೋದಯ ತೊಳೆದು ಹಳೆದಿನದುಳಿದ ಬೇಸರ ಕಳೆಯ ಕೀಳಲು ಬಂತು ರಾತ್ರಿಯು ಕಳೆದು ಮರಳಿದ ಹೊಸತು ಸೂರ್ಯೋದಯವ ನೋಡಲ್ಲಿ | ಛಳಿಯ ಹೆದರಿಸೆ ಬಾನಮಾರ್ಗದೊ ಳೆಳೆದ ಗೆರೆಗಳು ಭುವಿಯ ಸೋಂಕಲು ಹೊಳೆದ ರಶ್ಮಿಯ ನೋಡುತೆದ್ದವು ಸಕಲ ಜೀವಕುಲ || ಸೇರಿ ಹಿಮಮಣಿ ಹನಿಯ ಮಾಲೆಯ ಸೀರೆ ಹಸುರಲಿ ಹೊದ್ದು ಸೆರಗನು ತೂರಿ ಗಾಳಿಗೆ ಸಿರಿಯ ಹರಡುತ ಬಂದ ರವಿತೇಜ | ಜಾರಿ ನಾಕದ ಬಣ್ಣ ಹಲವಿಧ ಸೋರಿ...

ಕವಿತೆ

ಪೃಥೆ…..,

ತನುವ ಕಾಂತಿ ಸೆಳೆಯುವಂತೆ ಹೊಳೆಯುತಿವೆಯಾ  ಕುಂಡಲಗಳು ಕರ್ಣಗಳಲಿ ಮಿರುಗುತಿದೆ ತನುವ ತಬ್ಬಿಹ ಕವಚ ಕಾಂತಿಗೆ ಕರುಳ ಬಳ್ಳಿಯಲಡಗಿದ ನೋವು ನರನರಗಳಲ್ಹರಡಿ ಇರಿದು ಬಂದಂತೆ ತನ್ನೊಡಲ ಕಂದ ನಗುವ ತಂದಂತೆ ಮರೆತೆಲ್ಲವನು ಬರೀ ನೆನಪಲ್ಲವವೆಲ್ಲ! ಮೊದಲುದಿಸಿದ ಮಮತೆಯ ಹೊನಲೋ ಭವಿತವ್ಯದ  ದಿಗಿಲೋ ಕನ್ಯಾಮಣಿಗೆ ಪೆಟ್ಟಿಗೆಯೊಳಗಣ ತೊಟ್ಟಿಲು ಹಸುಗೂಸಿಗೆ ತೇಲಿ ಬಿಟ್ಟಳದನಂದು ಗಂಗಾ...

ಕವಿತೆ

ಕಾಲ

ಕಾಲ ಎಲ್ಲರಿಗೂ ಸಮಾನವಲ್ಲ ಕಾಲದ ಹೊಳೆಯಲಿ ಮೀಯುವರೆಲ್ಲಾ , ಅಲ್ಲಲ್ಲಿ ನಿಂತೆ ನಿಲ್ಲುವರು ನೋವು ಮಾಗಲೋ , ನೆನಪನಳಿಸಲೋ ಹೊಸತನದ ಹೂವರಳಲು . ಆಗಾಗ ಮತ್ತೆದೇ ಕಾಲದ ಬಯಕೆ ಕಾಲದ ಸಾಲಕ್ಕೂ ಹರಕೆ ಸಂಭ್ರಮ ಸಿರಿ ಘಳಿಗೆ ಬಾಚಲು ಅರಿವಿನ ಗರಿ ಬಿಚ್ಚಲು ಜಿಪುಣ ಕಾಲ , ನೀಡದು ಅರೆಘಳಿಗೆ ಕಾಲದೋಟಕೆ ನಮ್ಮ ಹತಾಶ ನಡಿಗೆ. ಆಗ ಒಂಟಿ ಕಾಲಲಿ ಕುಂಟೆಬಿಲ್ಲೆ ಆಡಿದ ಕಾಲವೊಂದಿತ್ತು...

ಕವಿತೆ

ಜೀವನ

ಬಗೆಹರಿಯದ ಒಗಟು, ದಡವರಿಯದಾ ಯಾನ.. ಈ ಎಲ್ಲ ಮನುಜಕುಲ ಬಿಡಿಸುವಲಿ ತಲ್ಲೀನ… ಬರಿಯ ಸಂತಸವಲ್ಲ ಕುಡಿದಂತೆ ಸವಿಪಾನ ನೋವಿನ ಮುಗಿಲಲ್ಲ ಸಿಹಿಕಹಿಯ ಲೇಪನ… ಎಲ್ಲ ತೊಂದರೆಗಳಿಗೂ ಸಿಗದಿಲ್ಲಿ ಕಾರಣ ದಾಟಬೇಕಿದೆ ಶರಧಿ ಹತ್ತಿಕ್ಕಿ ತಲ್ಲಣ ಕ್ಲೇಶದ ಬೆಟ್ಟಗಳ ಏರುತಲಿ ದಿನದಿನ ಮುಗಿಸಲೇ ಬೇಕು ಈ ಬದುಕೆಂಬ ಚಾರಣ ಕಂಡೆಲ್ಲ ಸ್ವಪ್ನಗಳ ಸಾಕಾರಗೊಳಿಸಲು ಈಜಲೇ ಬೇಕಿಂದು ಈ...