ಕವಿತೆ

ಜಲವ್ಯೋಮಾಗ್ನಿ

ಅನಂತ ಕಡಲ ಒಡಲಿನಲ್ಲಿ
ಜಗದೇಕ ಅಗ್ನಿಘನ ಪ್ರತಾಪ;
ಉದಕದುದರವ ಮಥಿಸೆ ಬೆಂಕಿ
ಜೀವಕಣವು ತೇಜಚುಕ್ಕಿ||

ನೆಲದ ಮೇಲೆ ತೇಲೋ ನೀರು
ತಲದಿ ವ್ಯೋಮದಿವ್ಯ ಪದರು;
ಸುಡುವ ಜ್ವಾಲೆ ಜೊನ್ನ ಸೂಸೆ
ಅನು ಜೀವಕೂ ಚೇತಸ ಉಸಿರು||

ಅಗ್ನಿದಿವ್ಯ ತನ್ನೊಳು ತಾನಾಗೆ
ಜಲಪತ್ತಲದಲ್ಲಿ ಬಹು ಬಹು ರಂಗು;
ಬಣ್ಣದ ಬಿಂಬ ಪ್ರತಿಬಿಂಬವಾಗಿ
ಸುಮದ ಮೊಗದಿ ರಂಗಿನ ಬೆರಗು||

ಖಗಕಂಠ ತಂತು ತಾ ಮಿಡಿಯೆ
ವ್ಯೋಮಜಲದಿ ನಾದತರಂಗ;
ಕಾಗದದಾ ಹಕ್ಕಿ ಮುತ್ತಿಕ್ಕ ಬಯಸಿ
ತೆವಳುತಾ ತೆರಳಿದೆ; ಏನೀ ಅನುರಾಗ||

ಕಾಲ ಕಾಡಿಗೆ ಹಚ್ಚೆ ನಿಖಿಲ ತಲಕೆ

ಕತ್ತಲ ಹಿನ್ನೆಲೆಯಲಿ ಬೆಳ್ಳಿ ಸಮುದಯ;
ತಾಪದೀಪ ಕರಗಿ ಬಂದ ತಂಪು
ತಂದು ಸುಷುಪ್ತಿ, ಶಾಂತ ಜೀವಹೃದಯ||

ಜಲವ್ಯೋಮಾಗ್ನಿಯೇ ಜೀವಧಾತು
ಜಗ ಸಂಗೀತದ ಕಾರಣ ತಂತು;
ಆತ್ಮ ಜಲವ್ಯೋಮಾಗ್ನಿ ಸಮ್ಮಿಲನ
ಸೃಷ್ಟಿಯನಾಳೋ ಸಂಚೇತನ||

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!