ಬಿಸಿಯುಸಿರ ತುದಿಗೆ ಅಂಟಿಕೊಂಡಿಹ ಹೊಟ್ಟೆಕಿಚ್ಚಿನ ಹೊಗೆಯ ವಾಸನೆ.. ಅಸಹ್ಯವಾಗಿ ಮೈಯೆಲ್ಲಾ ಹರಡಿರುವ ನಾನೆಂಬ ಝೇಂಕಾರದ ಆಲಾಪನೆ.. ಮತ್ತೆಂದೂ ಎದೆಯ ತುಂಡಿನ ಬದಿಗೂ ಹುಟ್ಟದಂತೆ ಖಾಲಿಯಾಗಬೇಕೆಂದಿದ್ದೇನೆ… ನುಣುಪು ಸೀರೆಯ ಚಿತ್ತಾರದಾ ಅಂಚಲ್ಲಿ ಜಾರಿಬಿಡುವ ಜೋರು ತುಡಿತಗಳಿಗೆ ನನ್ನದಲ್ಲದ ಚಂದ್ರಬಿಂಬದ ಚಾವಡಿಯ ಒಳಗೆ ಹಚ್ಚೆ ಹಾಕುವ ಬೆರಳಿನೆಲ್ಲ ಉದ್ವೇಗಗಳಿಗೆ...
ಕವಿತೆ
ಹೊಸ ಬೆಳಗು
ಎಲ್ಲ ಮುಗಿದಿರುವಾಗ, ಹೊಸದು ಕಾದಿರುವಾಗ, ಹಳತೇ ಹೊನ್ನೆಂಬುದಿನ್ನೆಂಥ ಬ್ರಾಂತಿ!!! ಹಳೆಕೊಳೆಯ ನೋಡುತ್ತ, ಗತ ನೆನಪ ಜೀಕುತ್ತ, ಕುಳಿತಿದ್ದರೆಂತು ಸಾಧ್ಯ? ಹೊಸ ಬೆಸುಗೆ – ಪ್ರೀತಿ… ನನ್ನ ನಿಲುಕಿಗೆ ಸಿಗದ, ದ್ವಂದ್ವ ನಿಲುವಿನ ಮನದ, ನಿರ್ಧಾರಕಾರು ಹೊಣೆ, ಏನು ಗತಿ?? ಗಾಯ ಮಾದಿರುವಾಗ, ಮನಸು ಮಾಗಿರುವಾಗ, ಇನ್ನೇಕೆ ಆ ನೆನಪು, ಹಳೆ ಪ್ರೀತಿ...
ಇಳಿಸಂಜೆಯ ಹಾಡು…
ಬಲಿತು ಮಾಗಿದ ದೇಹ ಬಾಗಿದೆ ಕರೆ-ಕರೆದು ಕೂಗಿದೆ ಅಂತ್ಯಕೆ ನಿಡಿಸುಯ್ದ ಮನಸನ್ನು ಒದ್ದೆ ಮಾಡಿದ ಪರಿ – ಸರಿ ಸಮದ ಸಮಯದ ಕೊನೆ ಕಾಣುವ ತವಕದಲ್ಲಿ… ಸುಕ್ಕುಗಟ್ಟಿದ ಮೈಯ ಚರ್ಮ ಜೋಲಿದೆ ಹೊಳೆವ ಕನ್ನಡಿ ಮಾರು ದೂರಕೆ ಜೊತೆ ನೆರಳು ನಕ್ಕು ನಕ್ಕು ಅಣಕಿಸಿದ ಪರಿಹಾಸ್ಯದ ಅಪರಿಮಿತ ಸತ್ಯದ ಪ್ರತಿ ದಿನದ ಸೋಲುವಿಕೆಯಲ್ಲಿ.. ಬಾಳ ಹಾದಿಗೆ ಅನುಭವ ದೀಪ ತೋರಿದೆ ದೇವರು ಬರಿ ಮನಸಿನ...
ನೇತ್ರಾವತಿ ಅತ್ತ ಸದ್ದು..
ಅತ್ತವಳೆ ನೇತ್ರಾವತಿ ಗೊಳೋ ಬೆತ್ತಲೆ ನೆಲವಾಗೊ ಸಂಕಟಕೆ ತಂದಿಕ್ಕಿದೆ ಆತಂಕ ಭವಿತದ ರಚ್ಚೆ ಭೀತಿ ಎತ್ತಿನ ಹೊಳೆಯಲಿ ಕೊಚ್ಚೆ.. ಜೀವನಾಡಿಯಾದವಳು ಮಾತೆ ಕರಾವಳಿಗವಳು ಕನ್ನಡಿಯಂತೆ ಕಣ್ಣಾಗ್ಹರಿಸಿಹಳು ಜೀವ ಜಲಧಾರೆ ನೇತ್ರದಿ ನೆತ್ತರ ಹರಿಸೆ ದಿಕ್ಕಿನ್ಯಾರೆ ? ಧರ್ಮಸ್ಥಳದಲಿ ಮುಳುಗು ಹಾಕಿ ಮೀಯುವ ಭಕ್ತರ ತೋಯಿಸೊ ಶಕ್ತಿ ಬತ್ತಿಸೆ ಪಾತ್ರ ಕುಗ್ಗಿ, ಮಬ್ಬುಕಣ್ಣ ಮಂಜೆ...
ಆಹಾ! ಹೊಸ ಮಳೆಯ ಹಸಿ ಮಣ್ಣು…
ಆಹಾ! ಹೊಸ ಮಳೆಯ ಹಸಿ ಮಣ್ಣು… ಮನಸು ಹಿಗ್ಗುತ್ತದೆ…ನಾಸಿಕವರಳುತ್ತದೆ ಹೊಸ ಮಣ್ಣಿನ ಹಸಿ ಘಮದ ನೆನಪು ಮರುಕಳಿಸಿ ಬ೦ದು! ಅ೦ದೆಲ್ಲ ಆಘ್ರಾಣಿಸಿದ ಆ ಪರಿಮಳವು, ಆ ಹಸಿಯು ಇ೦ದೂ ಅಷ್ಟೇ ಹೊಸದೆ೦ದು, ಅದು ಹೇಗೆ೦ದು? ಯಾಕಿರಬಹುದೆ೦ದು ಅಚ್ಚರಿಪಡುತ್ತದೆ ಮನ! ಬೆರಗುವಡೆಯುತ್ತದೆ.. ಅ೦ದಿನ ಮಳೆಗೂ ಇ೦ದಿನ ಮಳೆಗೂ ವ್ಯತ್ಯಾಸವು೦ಟೆ? ಇರಬಹುದೇ? ಇಲ್ಲ..ಅದೇ ಆಕಾಶ, ಅದೇ...
ಕಳ್ಳರ ಸಂತೆ
ಉದ್ಯೋಗ ಖಾತ್ರಿ ಕೊಳ್ಳೆ ಹೊಡೆದರು ರಾತ್ರೋ ರಾತ್ರಿ ಕಂಟ್ರಾಕ್ಟರ್ ಮೆಂಬರ್ ಗಳು ಬಲು ಛತ್ರಿ ಚೆಂದಿದ್ದ ರೋಡ್ ನ ಕೆರೆದರು ದಿನ ಪೂರ್ತಿ ಕಾರ್ಯದರ್ಶಿ ಇಂಜಿನಿಯರ್ ಗೆ ಕಾರು ಬಾರು ಖಾತ್ರಿ ತಹಸಿಲ್ದಾರ್, ಎಂ ಎಲ್ ಎ ಗೊ ಕಳಿಸಿದರು ಬುತ್ತಿ || ಶೋ ಕೊಡಲು ಬರ್ತಾರೆ ಜನನಾಯಕರು ಹೇಳ್ತಾರೆ ರೈತರ ನಾಯಕ ನಾನೆಂದು ಇವ್ರು ಬರೋದು ಅ ರೈತ ಸತ್ತಾಗ ಮಾತ್ರ ಅಲ್ಲೂ ಬೊಳ್ಳು...
ಹೇ ವರ್ಷದಾಯೀನಿ
ಎದೆನೋವು ಏನಿದರ ಅರ್ಥ? ನಿನ್ನ ಪ್ರೀತಿಯ ಮಾಯೆಯೋ ಇದು ವ್ಯರ್ಥ! ಸೋತೆ ನಾ ನಿನ್ನ ಜಾಲಕೇ. ಬಳಿ ಬಂದು ಹೋಗು ಒಮ್ಮೆ ನನ್ನ ಮನದ ಕುಲಕ್ಕೆ . ಕೂಗಿದರು ಕೇಳಿಸದು ನಿನಗೀಗ! ನಾ ಬೇಡ! ಅವ ಬಂದ ನಿನ್ನ ಜೀವಕೀಗ. ನಾನಾರು ನಿನಗೆ ಮಾತನಾಡಿಸಲು ? ಕೇವಲ ಕೆಲವು ದಿನದ ಪ್ರೇಮಿ ಅಲ್ಲವೇ. ಸ್ವಾರ್ಥ ತೊರೆದು ತ್ಯಾಗ ಮಾಡಿ ಹೋದರೆನಾಯ್ತು. ಪ್ರೀತಿ ತೊರೆದಮೇಲೆ ಜೀವನವೇ ಇಲ್ಲವಾಯ್ತು...
ಒಂದು ಗಿಡದ ಕಥೆ
ಹೂದೋಟದಲ್ಲಿ ನಾನೂ ಇದ್ದೆ ಹೊಂಬಿಸಿಲಿನೊಂದಿಗೆ ಆಡುತ್ತಿದ್ದೆ ಯಾರೋ ಬಂದರು,ಎತ್ತಿಕೊಂಡು ಹೊದರು ಪ್ರೀತಿಯಿಂದ ಸವರುತ್ತ ನನ್ನ ಕೆಳಗಿಟ್ಟರು ಅದೊಂದು ಖಾಲಿ-ಖಾಲಿ ಬಯಲು ನೀರಿಲ್ಲದೆಯೇ ಒಣಗಿದ ಬೆತ್ತಲೆ ಒಡಲು ಗಿಡಗಳಿಲ್ಲ,ಮರಗಳಿಲ್ಲ,ಹಕ್ಕಿಗಳೂ ಇರಲಿಲ್ಲ ರಾತ್ರಿ ಎಲ್ಲ ಸ್ಮಶಾನ ಮೌನ ಯಾರೂ ಇರಲಿಲ್ಲ. ಉಷೆ ಮೂಡಿತು,ಬೆಳಗಾಯಿತು ಸುತ್ತಲೂ ಸದ್ದು ಮೈಕಿನ,ಜನಜಂಗುಳಿಯ ಸದ್ದೆ...
ಕವಿತೆ
ಓ ಸೂರ್ಯ ದೇವನೇ ಇಷ್ಟೇಕೆ ಮುನಿಸು ಒಮ್ಮಿಂದೊಮ್ಮೆಲೇ.. ಬಿಸಿಲ ಧಗೆಗೆ ಬೆಂದು ಹೋಗುತಿರುವೆವು ಕೃಪೆ ತೋರು ನಮ್ಮ ಮೇಲೆ.. ಬಾಯಾರಿಸೆ ಹನಿ ನೀರು ಕುಡಿಯಲಾಗುತ್ತಿಲ್ಲ ಜೀವಜಲವೇ ಬಿಸಿಯಾಗಿದೆ .. ಸುಟ್ಟು ಬೂದಿಯಾಗುವೆವೋ ಎನ್ನುವ ಭಯವಾಗಿದೆ.. ಬಲಿಯಾಗುತಿವೆ ಜೀವಗಳು ನಿನ್ನ ಕೋಪದ ತಾಪ ತಾಳಲಾರದೇ ಒಂದಿನಿತು ಶಾಂತಭಾವ ತಾಳು ನಮ್ಮ ನೋಡಿದರೆ ದಯಬಾರದೇ ಭೂತಾಯಿಯ ಒಡಲು...
ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೬
ಒಗಟೆಯೇನೀ ಸೃಷ್ಟಿ ? ಬಾಳಿನರ್ಥವದೇನು | ಬಗೆದು ಬಿಡಿಸುವರಾರು ಸೋಜಿಗವನಿದನು ? || ಜಗವ ನಿರವಿಸಿದ ಕೈಯೊಂದಾದೊಡೇಕಿಂತು ? | ಬಗೆ ಬಗೆಯ ಜೀವಗತಿ – ಮಂಕುತಿಮ್ಮ || ಈ ಸೃಷ್ಟಿಯೇನಿದ್ದರು ಬರಿಯ ಒಗಟಾಗಿಯೆ ಇರುವಂತದ್ದೇನು? ಆ ಒಗಟಿನೊಳಗೆ ಬೆಸೆದುಕೊಂಡ ಈ ಬಾಳಿಗೇನಾದರೂ ಅರ್ಥವಿದೆಯೆ? ಈ ಒಗಟಿನ ಗುಟ್ಟನ್ನು ಹರಿದು, ಈ ಸೃಷ್ಟಿಯ, ಬಾಳಿನ ಸೋಜಿಗದ ಸೂತ್ರವನ್ನು...