ನಡು ನೆತ್ತಿ ಮೇಲೆ ಆಗಲೆ ಬಂದಾಗಿತ್ತು ಸೂರ್ಯ
ಅಮ್ಮನಿಗೋ ನನ್ನ ಏಬ್ಬಿಸುವುದೇ ದೊಡ್ಡ ಕಾರ್ಯ
ಅಪ್ಪನ ಸಿಟ್ಟಲ್ಲೂ ಪ್ರೀತಿ ಇತ್ತೆಂದು ತಿಳಿದಿತ್ತು
ಅದಕೆ,ಕಳ್ಳ ನಿದಿರೆಯಲ್ಲೂ ನನ್ನ ಗೊರಕೆ ಜೋರಾಗಿತ್ತು
ಏಳೋ ಮಾಣಿ,ಶಾಲೆಗೆ ರಜೆಯಾ?ಎಂದಳು ಅಜ್ಜಿ
ಅಜ್ಜನ ನೋಡಿಯೇ, ಏದ್ದು ಬೇಗ ರೆಡಿಯಾದೆ ಹಲ್ಲುಜ್ಜಿ
ಅಂಗಳದಲ್ಲಿ ನಿಂತು ನೋಡಿದೆ ಹಚ್ಚ ಹಸುರಾದ ತೋಟ
ಮಲೆನಾಡಲ್ಲವೇ?ಆಗಾಗ ಲೋಕಲ್ ಹಂದಿಗಳ ಕಾಟ
ಅಪ್ಪ ಆಗಲೇ Uniforme ಹಾಕಿ ಹೆಕ್ಕುತ್ತಿದ್ದ ಅಡಿಕೆ
ಕೆಲಸಗಾರ ಶಂಕರ ಬೆಳಿಗ್ಗೆಯೇ ಮಾಡುತ್ತಿದ್ದ ತೂಕಡಿಕೆ
ಮನೆಯ ಸೂತ್ತಲೂ ಕಣ್ಣಾಯಿಸಿದೆ, ಎಲ್ಲೆಲ್ಲೂ ಹಸಿರು ತೋರಣ
ಆಗಾಗ ದಮ್ಮು ಕಟ್ಟುತಿತ್ತು ಇದಕ್ಕೆ ಅಜ್ಜನ ಬೀಡಿಯೇ ಕಾರಣ
ತುಳಸಿ ಕಟ್ಟೆಯ ಮುಂದೆ ಅಮ್ಮ ಬಿಡಿಸಿದ್ದ ರಂಗೋಲಿ
Benzene ತರಹಾನೆ ಇತ್ತು,ನಡುವೇ ಮಾತ್ರ ತುಂಬಾ ಗೋಲಿ
ಏಲ್ಲರ ಎದುರಲ್ಲಿ ಅಮ್ಮ ಹಾಕಿದಳು ನನಗೆ ಬಿಸಿ ದೋಸೆ
ದೋಸೆಗಿಂತ ಚಿಕ್ಕಮ್ಮ ತಂದಿದ್ದ ಚಟ್ನಿ ಮೇಲೆ ಇತ್ತು ಆಸೆ
ನೆನಪಾಯ್ತು,ನಿನ್ನೆ ಕೊಟ್ಟ Homework ಕೇಳೊದಂತು ಖಾತ್ರಿ
ಬರುವುದೂ Doubt ,ನನ್ನ ನೆಚ್ಚಿನ ಗೆಳತಿ ಸಾವಿತ್ರಿ
ಒಲೆಯ ಮುಂದೆ ಕುಳಿತು, ಬಂದು ಹೇಳಿದೆ ನನಗಿಂದು ಜ್ವರ
ಏಲ್ಲರೂ ಗಾಬರಿಗೊಂಡು ಮಲಗಿಸಿ ಬಿಟ್ಟರು ಇದೇ ದೇವರು ಕೊಟ್ಟ ವರ
ಮತ್ತೆ ಎಚ್ಚರವಾದಾಗ ನೋಡುತ್ತೇನೆ ಸುತ್ತಲೂ ಕಾಸು
ಆಗಲೇ 10 missCallಕೊಟ್ಟಿದ್ದ ನನ್ನ ಕಂಪನಿ ಬಾಸು
ಸರ್, ನನಗಿಂದು ಜ್ವರ ಬರುವುದಿಲ್ಲ ನಾನು
ಕಂಪನಿ ನಿನ್ನ ಅಪ್ಪಂದಾ? ಬಂದು ನನ್ನ ಕಾಣು
ಮತ್ತೆ ಮಲಗಿದೆ ಇನ್ನೊಂದು ಬಾರಿ ಹೋಗಬೇಕಿತ್ತು ಮನೆಗೆ
ಏಲ್ಲರಿಗೂ ಹೇಳಬೇಕಿತ್ತು, ಸಾಕಾಯಿತು ಸಿಟಿಯ ಸಲಿಗೆ
ಅಡಿಕೆ ಹೆಕ್ಕಾದರೂ ಬದುಕುತ್ತೇನೆ ಬರುತ್ತೇನಮ್ಮ ಊರಿಗೆ… ಬರುತ್ತೇನಮ್ಮ ಊರಿಗೆ…