ಕವಿತೆ

ಓ ನನ್ನ ಚೇತನ.

ಒಂದು ನಿಮಿಷವೂ ಸುಮ್ಮನೆ ಕೂರುತಿಲ್ಲ,
ಅದೇನನ್ನೋ ಹುಡುಕುತ ಕನವರಿಸುತಿದೆ,
ಎಲ್ಲವೂ ಇದೆಯಾದರೂ ಏನೂ ಇಲ್ಲವೆಂಬ ಭಾವ,
ಕನಸುಗಳ ಒರತೆ ಬತ್ತಿಹೋಗಿದೆ ನನ್ನಲಿ….!

ಎಲ್ಲರೂ ಜೊತೆಗಿದ್ದಾರೆ ಆದರೂ ನಾನು ತಬ್ಬಲಿ,
ಎಲ್ಲವೂ ದೊರೆತಿದೆ ಆದರೂ  ಮನಸ್ಸಿಗೆ ಶಾಂತಿ ಇಲ್ಲ,
ಕಾಣದ ಕೈಯ್ಯೊಂದು ನನ್ನನು ಆಡಿಸುತಿದೆ,
ನನ್ನ ಆಸೆಗಳೇ ನನಗೆ ನೆನಪಿಲ್ಲದಂತಾಗಿದೆ….

ಆಧುನಿಕತೆ ನಿನ್ನ ಕರೆದವರಾರು,  ಏಕೆ ನೀ ಜಗವ ಆವರಿಸಿದೆ,
ಬಂಧನಗಳೇ ಬಂಧುಗಳೇ ಇಲ್ಲದ ಜಗತ್ತಿನೊಳಗೆ,
ತಂತ್ರಜ್ಞಾನವೆಂಬ ಕಾಣದ ಕಣ್ಣುಗಳಿಂದ,
ಜಗವ ನೋಡುತಿಹೆನು ನಾನು…..

ಮೌಲ್ಯಗಳನು ಯಾರಿಗೆ ಮಾರಿದೆನೋ ನಾನು,
ಪ್ರೀತಿ ತೋರುವ ಮನಸಿಗೆ ಕತ್ತಲೆ ಆವರಿಸಿದೆ,
ಸತ್ವವಿಲ್ಲದೆ ಬದುಕುತಿರುವೆ ನಾನು,
ಅದೆಲ್ಲಿ ಮರೆಯಾದೆ ಓ ನನ್ನ ಚೇತನ.

ಮಂಜುನಾಥ್ ಮಧ್ಯಸ್ಥ
ತೀರ್ಥಹಳ್ಳಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!