ಕನ್ನಡದ ವರನಟ ಡಾ.ರಾಜ್ ಕುಮಾರರನ್ನು ವೀರಪ್ಪನ್ ಕಾಡಿಗೆ ಕರೆದುಕೊ೦ಡು ಹೋಗಿದ್ದಾಗ ರಾಜ್ ಕೆಲವು ವಸ್ತುಗಳನ್ನು ತಮ್ಮ ಮನೆಯಿ೦ದ ಕೇಳಿತರಿಸಿಕೊ೦ಡರು. ಅದರಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ “ಭಾರತ ದರ್ಶನ” ಕ್ಯಾಸೆಟ್ಟೂ ಸಹ ಇತ್ತು. ಅವರು ಕಾಡಿನಲ್ಲಿದ್ದಾಗ ಇದನ್ನ ಹತ್ತಾರು ಬಾರಿ ಕೇಳಿದ್ದರ೦ತೆ. ಒಮ್ಮೆ ರಾಜ್ ರನ್ನು ಕಾಣಲು ಯಾವುದೋ ಕಾರಣಕ್ಕಾಗಿ...
Featured
ರಕ್ಷಣೆಗೊಬ್ಬ ಚಾಣಾಕ್ಷ- ಮನೋಹರ ಪರಿಕ್ಕರ್
ಅದು ದೆಹಲಿಯ ಪಂಚತಾರಾ ಹೋಟೆಲ್, ಮಾಹಿತಿಯ ಪ್ರಕಾರ ದೇಶದ ರಕ್ಷಣಾ ಸಚಿವರು ಒಂದು ಕಾರ್ಯಕ್ರಮದ ನಿಮಿತ್ತ ಆಗಮಿಸುವ ಮುನ್ಸೂಚನೆಯಂತೆ ಸಿದ್ದತೆಯಲ್ಲಿತ್ತು. ಅದೇ ಸಮಯದಲ್ಲಿ ಬಿಳಿ ಅಂಗಿ ತೊಟ್ಟ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ 60ರ ಹರೆಯದ ವ್ಯಕ್ತಿ ಒಳಗಡೆ ಹೊರಡಲು ಸಿದ್ಧನಾಗಿದ್ದ, ಗೇಟ್ ಬಳಿ ನಿಂತಿದ್ದ ಕಾವಲುಗಾರ ಅವನನ್ನು ತಡೆದು, ಒಳಗಡೆ ಸ್ವಲ್ಪ ಸಮಯದಲ್ಲಿ ರಕ್ಷಣಾ...
ವೆಲ್ ಡನ್ ವಾಮನ….!
( ಎರಡೂವರೆ ವರ್ಷದ ಹಿಂದೆ ಸಚಿನ್ ಎಲ್ಲ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದಾಗ ಬರೆದ ಅಕ್ಷರನಮನ. ಸಚಿನ್ ಹುಟ್ಟುಹಬ್ಬದ ದಿನವಾದ ಇಂದು, ಇದೋ ನಿಮಗೊಂದು ಓದು) ಬದಲಾವಣೆ ಜಗದ ನಿಯಮ. ಹೌದು, ಎಲ್ಲರೂ ಒಪ್ಪಿಕೊಳ್ಳಲೇಬೇಕು. ಜೀವನವೇ ಒಪ್ಪಿಸುತ್ತದೆ ಕೂಡ. ಬದಲಾವಣೆ ಸಕಾರಾತ್ಮಕವಾಗಿರಲಿ, ನಕಾರತ್ಮಕವಾಗಿರಲಿ ಹಳೆಯ ನೆನಪು ಕಾಡದಿರದು. ಮೊನ್ನೆ ಕ್ರಿಕೆಟ್...
‘ಇಂದು’ ಎನ್ನುವುದರ ಬೆಲೆ ಗೊತ್ತಾಗುವುದು ‘ನಾಳೆ’ ಇಲ್ಲವೆಂದಾದ ಮೇಲೆಯೇ..
“ಗುಣಪಡಿಸಲಾಗದ ಖಾಯಿಲೆ ಎಂದರೆ ಬದುಕು ಮುಗಿದಂತಲ್ಲ” ಹೀಗಂತ ಹೇಳಿದ್ದು, ನ್ಯೂಜೆರ್ಸಿಯ ಡೇವಿಡ್ ಕ್ಲಾರ್ಕ್. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಆತನಿಗೆ ಬರುವ ಮೊದಲ ಯೋಚನೆ, ತನಗೆ ಟರ್ಮಿನಲ್ ಕ್ಯಾನ್ಸರ್ ಇದೆ ಎಂಬುದು. ಅದರ ನಂತರ ಎರಡನೆಯ ಯೋಚನೆಯೇ “ಈ ದಿನವನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳುವುದು?” ಎಂದು. ಸಾವನ್ನ ಬೆನ್ನ ಹಿಂದೆಯೇ ಇಟ್ಟುಕೊಂಡು ಇನ್ನೇನನ್ನ ತಾನೆ...
ತಲೆ ಅಂದ್ರೆ ಶಕುಂತಲೆ!
ಶಕುಂತಲಾ ದೇವಿಯವರು ನಿಧನರಾದಾಗ ಬರೆದ ನುಡಿನಮನ ಬಸವನಗುಡಿಯ ನನ್ನ ಮನೆಗೆ ಕೂಗಳತೆ ಎನ್ನುವಷ್ಟು ದೂರದಲ್ಲಿ ಅಪಾರ್ಟ್’ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಶಕುಂತಲಾ ದೇವಿ, 2013ರ ಎಪ್ರೀಲ್ 21ರಂದು ಭಾನುವಾರ ಸಂಜೆ, ಈ ಲೋಕದ ಎಲ್ಲ ಲೆಕ್ಕ ಚುಕ್ತಾ ಮಾಡಿ ಹೊರಟೇಹೋದರು. ಅವರು ಬದುಕಿದ್ದಾಗ ನಾನು ಎಂದೂ ಅವರನ್ನು ಭೇಟಿಯಾಗಲು, ಮಾತುಕತೆಯಾಡಲು ಪ್ರಯತ್ನಿಸಲಿಲ್ಲವಲ್ಲ ಎಂದು...
ಬೇಸಿಗೆ ರಜೆಯಲ್ಲಿ ಈ ಪುಸ್ತಕಗಳು ನಿಮ್ಮ ಮಕ್ಕಳ ಕೈಗೆಟುಕುವಂತಿರಲಿ!
ಮಕ್ಕಳಿಗೆ ಏನನ್ನು ಓದಿಸೋದು ಸಾರ್ ಎಂದು ಅನೇಕರು ಆಗಾಗ ಕೇಳುತ್ತಾರೆ. ಇದು ಬಹಳ ಕಷ್ಟದ ಪ್ರಶ್ನೆ. ಥಿಯರಿ ಆಫ್ ರಿಲೇಟಿವಿಟಿಯನ್ನು ನಮ್ಮ ಹುಡುಗನಿಗೆ ವಿವರಿಸಿ ಅಂದರೆ ಪ್ರಯತ್ನಪಡಬಹುದೇನೋ, ಆದರೆ ಈ ಹುಡುಗನಿಗೆ ಏನನ್ನಾದರೂ ಓದಿಸಿ ಅಂದರೆ ಓದಿಸುವುದು ಹೇಗೆ? ಬೇಸಿಗೆ ಶಿಬಿರ, ಕ್ರಿಕೆಟ್ ತರಬೇತಿ, ತಬಲಾ ಕ್ಲಾಸು, ಮುಂದಿನ ವರ್ಷದ ತರಗತಿಗೆ ಟ್ಯೂಷನ್ ಕ್ಲಾಸು, ಕಾಲ...
ಸ್ವಲ್ಪ ಲೆಕ್ಕಾಚಾರ ಮಾಡಿಕೊಳ್ಳೋಣ ಎಂದು ಬಂದ ಕ್ಯಾನ್ಸರ್!!
ಅವರ ಆ ಅಯಾಸಗೊಂಡ ದೇಹ, ನೋವನ್ನು ಸಾರಿ ಹೇಳುತ್ತಿದ್ದ ಮುಖ, ಮೂಗಿನ ಮೂಲಕ ಹೋಗಿದ್ದ ಕೃತಕ ಆಹಾರನಳಿಕೆ, ಇದನ್ನೆಲ್ಲಾ ದೂರದಲ್ಲಿ ನಿಂತು ನೋಡುತ್ತಿದ್ದವಳು ಅಳು ತಡೆಯಲಾಗದೇ ರೂಮಿಗೆ ಓಡಿದೆ. ಅಮ್ಮ ಊಟಕ್ಕೆ ಕರೆಯಲು ಬಂದಾಗ ರೂಮಿನ ಮೂಲೆಯಲ್ಲಿ ಕುಳಿತು, ಮಂಡಿಯೊಳಗೆ ಮುಖ ಹುದುಗಿಸಿ ಬಿಕ್ಕುತ್ತಿದ್ದೆ. “ಯಾಕೆ ಅಳ್ತಾ ಇದೀಯಾ?” ಎಂದರು ಅಮ್ಮ ಹತ್ತಿರ ಬಂದು. “ಅಜ್ಜನಿಗೆ...
ಗೊನೆ ಮಾಗಿ ಬಾಳೇ ಜೀವನ್ಮುಕ್ತ
“ಎಲೆ ಹಳದಿ ತಿರುಗಿದೀ ಹಲಸು ನಿಂತಿದೆ ಹೆಳವ; ಹದ ಬಿಸಿಲು ಸಾರಾಯಿ ನೆತ್ತಿಗೇರಿ; ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ” ಶ್ರೀಮಾನ್‍ಜಿ ತನ್ನ ಫೇವರಿಟ್ ಕವನದ ಸಾಲುಗಳನ್ನು ಓದಿದಾಗ ಘಾ ಸಾಹೇಬರಿಗೆ ಸುಮ್ಮನಿರಲಾಗಲಿಲ್ಲ. “ಆಹಾ ಎಂಥಾ ಪದ್ಯ! ಒಂದು ಗೊನೆ ಹಾಕಿ ಜೀವಕಳಕೊಳ್ಳುವ ಈ ಬಾಳೆಗಿಡ ತನ್ನ ಸಂತತಿಯನ್ನು ಹಿಂಡುಹಿಳ್ಳುಗಳಲ್ಲಿ...
ಜಾತ್ರೆಯೆಂಬುದು ಎಂದಿಗೂ ಬಿಡಲಾಗದ ಕಮಿಟ್’ಮೆಂಟು..
ಜಾತ್ರೆಗಳೆಂದರೆಯೇ ಹಾಗೆ.. ಇನ್ನಿಲ್ಲದ ಸಂಭ್ರಮ, ಇನ್ನಿಲ್ಲದ ಸಡಗರ.. ಈ ಹಬ್ಬ ಹರಿದಿನಗಳೆಂದರೆ ಮಾಮೂಲಿಯಾಗಿ ಪೂಜೆ ಪುನಸ್ಕಾರಗಳಿರುತ್ತವೆ. ಜೊತೆಗೆ ಪಾಯಸದೂಟ. ಅದು ಬಿಟ್ಟರೆ ಹೆಚ್ಚೇನೂ ಸಂಭ್ರಮವಿರುವುದಿಲ್ಲ. ಒಂದೆರಡು ದಿನಕ್ಕೆ ಅದು ಮುಗಿದು ಹೋಗುತ್ತದೆ. ಜಾತ್ರೆಯಷ್ಟು ಅಬ್ಬರ ಹಬ್ಬಗಳಲ್ಲಿರುವುದಿಲ್ಲ. ಜಾತ್ರೆಗಳೆಂದರೆ ಹಬ್ಬ ಹರಿದಿನಗಳಿಗಿಂತ ಒಂದು ತೂಕ ಹೆಚ್ಚೇ...
ನೀರು ಕೊಡಿ
ಏಪ್ರಿಲ್ ಬಂದಾಯಿತು, ಬೇಸಿಗೆಯ ಕಾವು ದಿನೇ ದಿನೇ ಏರುತ್ತಿದೆ. ಉತ್ತರ ಭಾರತಕ್ಕೆ ಸೀಮಿತವಾಗಿದ್ದ sun stroke ನಮ್ಮೆಡೆಗೆ ಕೂಡಾ ಧಾವಿಸಿ ಬರುತ್ತಿದೆ. ಈಗಾಗಲೇ ಮಂಗಳೂರಿನಲ್ಲಿ 5 ಜನ ಆಸ್ಪತ್ರೆ ಸೇರಿದ್ದಾರಂತೆ. ಶಿವಮೊಗ್ಗವಂತೂ 48 ಡಿಗ್ರೀ ತಾಪದಲ್ಲಿದೆ. ಸದಾ ತಂಪಾಗಿರುವ ಮೈಸೂರು 40ಡಿಗ್ರಿಯ ಆಸುಪಾಸಿನಲ್ಲಿದೆ. ಎಲ್ಲರ ಬಾಯಲ್ಲಿ ಒಂದೇ ಉದ್ಗಾರ, ಎಂಥಾ ಸೆಖೆ...