Featured

Featured ಅಂಕಣ

ಇಂಧನ ಕ್ಷೇತ್ರಕ್ಕೆ ಪಿಯುಷ

ಅದು ಕಳೆದ ವರ್ಷದ ಸ್ವಾತಂತ್ರ ದಿನಾಚರಣೆ, ಕೆಂಪುಕೋಟೆಯಲ್ಲಿ ಪ್ರದಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣ, ಭಾರತದ ಮುಂದಿನ ಯೋಜನೆಗಳ ಮಾತನಾಡುತ್ತಿದ್ದಾಗ ಒಂದು ಅಂಶ ಸ್ವಲ್ಪ ನನ್ನನ್ನೂ ದಂಗು ಬಡಿಸಿತ್ತು.” ಭಾರತ ಸ್ವಾತಂತ್ರಗೊಂಡು 68  ವರ್ಷಗಳು ಕಳೆದೇ ಹೋದರೂ ಇನ್ನು ಸುಮಾರು 18452 ಹಳ್ಳಿಗಳಿಗೆ ವಿದ್ಯುತ್ಶಕ್ತಿ ತಲುಪಿಯೇ ಇಲ್ಲ ” ಮುಂದುವರೆಸುತ್ತ...

Featured ಪ್ರಚಲಿತ

ಕಾನೂನು ಸಚಿವರಿಗೊಂದು ಬಹಿರಂಗ ಪತ್ರ

ಗೌರವಾನ್ವಿತ ಕಾನೂನು ಸಚಿವರಾದ ಶ್ರೀ ಡಿ.ವಿ ಸದಾನಂದ ಗೌಡರಿಗೆ ನಮಸ್ಕಾರಗಳು. ನೀವು ಯಾವ ಕ್ಷೇತ್ರದಿಂದ ರಾಜಕೀಯ ನೆಲೆ ಕಂಡು ಅಲ್ಲಿಂದ ಶಾಸಕರಾಗಿ ಇವತ್ತು ಕೇಂದ್ರದ ಕಾನೂನು ಮಂತ್ರಿಯಾಗುವವರೆಗೂ ಬೆಳೆದಿದ್ದೀರೋ ಅದೇ ಪುತ್ತೂರು ಕ್ಷೇತ್ರದ ನಿವಾಸಿಯಾಗಿರುವ ನಾನು, ಇವತ್ತು ದೇಶಕ್ಕೆ ಅತೀ ಅಗತ್ಯವಾಗಿ ಬೇಕಾಗಿರುವ ವಿಷಯವೊಂದರ ಕುರಿತಾಗಿ ಪತ್ರವೊಂದನ್ನು ಬರೆಯುತ್ತಿದ್ದೇನೆ...

Featured ಅಂಕಣ

ಕ್ಯಾನ್ಸರ್’ನ ನಂತರವೂ ಒಂದು ಸುಂದರ ಬದುಕಿದೆ…

“ಕ್ಯಾನ್ಸರ್ ಎಂದರೆ ಸಾವಿನ ಶಿಕ್ಷೆ ಅಲ್ಲ, ಉತ್ತಮವಾದುದನ್ನೇನೋ ಪಡೆಯುವ ದಾರಿಯಲ್ಲಿ ಒಂದು ಸ್ಪೀಡ್ ಬಂಪ್ ಇದ್ದಂತೆ” ಎಂದಿದ್ದಾನೆ ಶಾನ್. ನಿಜ, ಕ್ಯಾನ್ಸರ್ ಯಾವಾಗಲೂ ಸಾವಿನ ಶಿಕ್ಷೆಯೇ ಆಗಬೇಕೆಂದೇನಿಲ್ಲ. ಸ್ಪೀಡ್’ ಬಂಪ್’ನಂತೆ ಬಂದಾಗ ಬದುಕು ನಿಧಾನಿಸಿ, ಬದುಕಿನ ಬಗ್ಗೆ ಧೇನಿಸಲು, ಅದರ ಮೌಲ್ಯವನ್ನು ಅರಿಯಲು. ಬದುಕುವುದನ್ನು ಕಲಿಯಲು ಸಿಗುವ ಅವಕಾಶವಾಗಿ...

Featured ಅಂಕಣ

ಬೆಂಗಳೂರಿಗೆ ಬಣ್ಣ ಬಳಿದ ಜರ್ಮನ್ ಹೂವಯ್ಯ

ನಾಲ್ಕೈದು ವರ್ಷದ ಹಿಂದೆ ಚಂಡೀಗಢದ ವಿಮಾನ ನಿಲ್ದಾಣದಿಂದ ಇಳಿದು ಟ್ಯಾಕ್ಸಿ ಹಿಡಿದು ಸಾಗುತ್ತಿದ್ದಾಗ, ಅದರ ಚಾಲಕ ನನ್ನನ್ನು ಮಾತಿಗೆಳೆಯುತ್ತ “ಸರ್ ನೀವು ನಮ್ಮ ಊರಿಗೆ ಹಿಂದೆ ಬಂದಿದ್ದಿರಾ?” ಎಂದು ಕೇಳಿದ. ಇಲ್ಲ, ಇದೇ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದೇನೆ ಎಂದು ನಾನು ಹೇಳಿದ್ದೇ ತಡ, ಅವನಿಗೆ ಲಸ್ಸಿ ಕುಡಿದಷ್ಟು ಸಂತೋಷವಾಗಿರಬೇಕು! ಮುಖ ಅರಳಿತು...

Featured ಅಂಕಣ

ಸತ್ಯ ಒಪ್ಪಿಕೊಳ್ಳಲು ಸೋಗಲಾಡಿತನವೇಕೆ?

“ರಾಘವೇಶ್ವರ ಭಾರತಿ ಸ್ವಾಮೀಜಿ-ಪ್ರೇಮಲತಾ ಪ್ರಕರಣ ಆರಂಭವಾದಾಗಿನಿಂದಲೂ ಶ್ರೀಗಳ ಜೊತೆಗೆ ಇದ್ದವರು ಶ್ರೀ ಚಕ್ರವರ್ತಿ ಸೂಲಿಬೆಲೆಯವರು. ಆ ಹೊತ್ತಿನಲ್ಲಿ ಸುತ್ತಲಿನ ಜನ ನೂರೆಂಟು ಮಾತನಾಡಿದವರೇ. ಅಂತಹಾ ಸಂದರ್ಭದಲ್ಲಿ ಬಲವಾದ ಗೋಡೆಯಂತೆ ನಿಂತ ಅನೇಕರಲ್ಲಿ ಅವರೂ ಒಬ್ಬರು. ಆ ಹೊತ್ತಿನ ತಮ್ಮ ಮನೋಗತವನ್ನು ರೀಡೂ ಕನ್ನಡ ಓದುಗರಿಗಾಗಿ ತೆರೆದಿಟ್ಟಿದ್ದಾರೆ. -ಸಂ”...

Featured ಅಂಕಣ

ಚೊಕ್ಕಾಡಿಯ ಕಾವ್ಯವೃಕ್ಷ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ಐದು ಮಹನೀಯರನ್ನು ಗುರುತಿಸಿ ಅವರಿಗೆ ಗೌರವ ಪ್ರಶಸ್ತಿ ಕೊಡುವುದು ಪದ್ಧತಿ. ಆದರೆ ಕಳೆದ ವರ್ಷ ಪ್ರಶಸ್ತಿಗೂ ಕನ್ನಡಿಗರ ಪ್ರೇಮಾದರಗಳಿಗೂ ಅರ್ಹರಲ್ಲದವರಿಗೆ ಕೊಟ್ಟು ಆ ಪ್ರಶಸ್ತಿಗಳ ಮೌಲ್ಯವನ್ನು ಮಣ್ಣುಗೂಡಿಸಿ ಅಕಾಡೆಮಿ ಹೆಸರು ಮಾಡಿತ್ತು. ಕೆಟ್ಟ ಮೇಲೆ ಬುದ್ಧಿ ಬಂತೋ ಅಥವಾ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ...

Featured ಪ್ರಚಲಿತ

ನಿಮ್ಮ ಮೇಲೂ ಸುಳ್ಳು ಕೇಸು ದಾಖಲಿಸುತ್ತಿದ್ದರೆ ಈ ಥರ ವರ್ತಿಸುತ್ತಿದ್ದಿರಾ ರಂಗನಾಥ್?

ಮಿ. ರಂಗನಾಥ್ … “ಪ್ರೀತಿಯ ರಂಗನಾಥ್ ಎಂದು ಸಂಭೋದಿಸಬೇಕೆಂದು ಅಂದುಕೊಂಡಿದ್ದೆ. ಯಾಕೋ ಮನಸ್ಸು ಬರುತ್ತಿಲ್ಲ. ಯಾಕಂದ್ರೆ ಅಂತಹಾ ಪ್ರೀತಿ ನನಗ್ಯಾವತ್ತೂ ನಿಮ್ಮ ಮೇಲೆ ಬಂದಿರಲಿಲ್ಲ. ಬರುವಂತಹ ಕೆಲಸವನ್ನೂ ನೀವು ಮಾಡಿಲ್ಲ.  ಪ್ರೀತಿ, ಗೌರವವನ್ನು ಪಡೆದುಕೊಳ್ಳುವ ಯಾವ ಯೋಗ್ಯತೆಯನ್ನೂ ನೀವು ಉಳಿಸಿಕೊಂಡಿಲ್ಲ. ಬಿಡಿ, ಪಬ್ಲಿಕ್ ಟಿವಿಯ ಹೆಡ್ ಎನ್ನುವ ಕಾರಣಕ್ಕಾಗಿ...

Featured ಅಂಕಣ

ಭಾವನೆಗಳನ್ನು ಘಾಸಿಗೊಳಿಸಬಹುದು, ನಂಬಿಕೆಗಳನ್ನಲ್ಲ!

ಕಡೆಗೂ ಆ ದಿನ ಬಂದೇ ಬಿಡ್ತು. ಅಂತಹಾ ಒಂದು ಕ್ಷಣಕ್ಕಾಗಿಯೇ ಶಿಷ್ಯ ಕೋಟಿ ಒಂದೂವರೆ ವರ್ಷಗಳಿಂದ ಕಾಯುತ್ತಾ ಇದ್ದಿದ್ದು. ಅಂತಹಾ ಒಂದು ಸನ್ನಿವೇಶಕ್ಕಾಗಿ ನಾವು ಮಾಡದ ಪೂಜೆಗಳಿಲ್ಲ, ಪ್ರಾರ್ಥನೆಗಳಿಲ್ಲ, ಜಪ-ತಪ, ಕುಂಕುಮಾರ್ಚನೆಗಳಿಲ್ಲಾ. ನಮ್ಮ ಪರಮೋಚ್ಛ ಗುರುಗಳಾದ ಶ್ರೀ ರಾಘವೇಶ್ವರ ಸ್ವಾಮೀಜಿಯವರ  ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರನ್ನು ಹೃದಯದಲ್ಲಿಟ್ಟು...

Featured ಅಂಕಣ

ಯುವರಾಜ್ ಸಿಂಗ್  ಕ್ಯಾನ್ಸರ್ ಪೀಡಿತರಿಗೆ ಐಕಾನ್ ಆಗೋದಾದ್ರೆ ಶೃತಿ ಯಾಕಾಗ್ಬಾರ್ದು?

ಅದೇಕೋ ಗೊತ್ತಿಲ್ಲ. ಈ ಭಾರಿಯ ಕ್ಯಾನ್ಸರ್ ದಿನದಂದು (ಫೆಬ್ರವರಿ ೪) ನನ್ನ ಮನಸ್ಸು ಬಹಳ ಗೊಂದಲದಲ್ಲಿತ್ತು. ಮೂಳೆ ಮಾಂಸದ ತಡಿಕೆಯಾಗಿರುವ ಮಾನವನಿಗೆ ಅದೇಕೆ ಕ್ಯಾನ್ಸರ್ ಎನ್ನುವ ಮಹಾಮಾರಿ ಬರುತ್ತದೆಯೋ ಎಂಬ ಪ್ರಶ್ನೆ ನನ್ನ ಗೊಂದಲಕ್ಕೆ ಕಾರಣವಾಗಿತ್ತು. ಯಾಕಾದ್ರೂ ಈ ರೋಗ ಬರುತ್ತದೆ, ಅದರ ನೋವು ಏನು? ಅದು ಬಂದ್ರೆ ಸಾಯದೇ ಬೇರೆ ದಾರಿಯೇ ಇಲ್ಲವೇ? ಎಂಬಿತ್ಯಾದಿ...

Featured ಅಂಕಣ

ಏನೇನೋ ಆಗಬಹುದಾಗಿದ್ದರೂ ಆ ಹುಚ್ಚಪ್ಪ ದೇಶಭಕ್ತನಾಗಿ ಬಿಟ್ಟನಲ್ಲ!

ಮೇಜರ್ ಜನರಲ್ ಗಗನ್‍ದೀಪ್ ಭಕ್ಷಿ ಅಂದು ಟೈಮ್ಸ್ ನೌ ಟಿವಿ ಚಾನೆಲಿನ ನ್ಯೂಸ್ ಅವರ್ ಕಾರ್ಯಕ್ರಮದಲ್ಲಿ ಕಣ್ಣೀರಾಗಿಬಿಟ್ಟಿದ್ದರು. ದೇಶದ ಕೇಂದ್ರೀಯ ವಿಶ್ವವಿದ್ಯಾಲಯ ಗಳ ಮೇಲೆ ಭಾರತದ ಧ್ವಜ ಹಾರಿಸಬೇಕೇ ಬೇಡವೇ ಎಂಬ ಚರ್ಚೆ ನಡೆಯುತ್ತಿತ್ತು. “ಕೂಡದು! ಇದು ನಮ್ಮ ಸೆಕ್ಯುಲರ್ ತತ್ತ್ವಗಳಿಗೆ ವಿರುದ್ಧವಾದದ್ದು” ಎಂದೊಬ್ಬ ಬುದ್ಧಿವಂತ ವಾದ ಮುಂದಿಟ್ಟಿದ್ದ...