ಅಂಕಣ

ಅಂಕಣ

ಸಂಜೆಗಡಲು-2

ಸಂಜೆಗಡಲು-1 ನನ್ನ ಅವನ ಬಾಂಧವ್ಯದಂತೆ ಈ ಕಡಲಿನೊಂದಿಗಿನ ಸಂಬಂಧ.. ಹಠಮಾಡಿ ಕಡಲ ತಡಿಯಲ್ಲೇ ಮಲಗಿದ ದಿನಗಳೆಷ್ಟಿಲ್ಲ?ನಾವು ಮೂವರೂ ಒಟ್ಟಾಗಿ ಕಳೆದ ಚಣಗಳೆಷ್ಟಿಲ್ಲ? ಈ ಕಡಲ ಮಡಿಲಲ್ಲಿ..! ಎಂದು ಅಂದುಕೊಳ್ಳುತ್ತಾ ಇರುವ ಸಮಯದಲ್ಲೇ,ಅಲ್ಲಿಗೆ ಒಬ್ಬ ಸಣ್ಣ ಹುಡುಗ ಬಲೂನುಗಳನ್ನು ಮಾರುತ್ತಾ ಬಂದ. ಕಡಲಿನ ಪ್ರಕ್ಷುಬ್ಧತೆ ಈಗ ಮಾಯವಾಗಿತ್ತು. ಸೂರಿ ಪಡುವಣದಿ ತನ್ನ ನಿರ್ಗಮನದ...

ಅಂಕಣ

‘ಸಂಜೆಗಡಲು’

        ….ಮಳಲ ಮೇಲೆ ಪ್ರೀತಿ,ಸಾವು ಮತ್ತು ನೆಳಲು…!           ಮುಸ್ಸಂಜೆಯ ಸಮಯ..ಬಾನ ತುಂಬೆಲ್ಲಾ ರಂಗುರಂಗಿನ ರಂಗವಲ್ಲಿ. ಒಂದೊಂದು ರೂಪದ ಒಂದೊಂದು ಚಿತ್ರಗಳೋ ಎಂಬಂತೆ ಮೋಡಗಳ ಹಾವಳಿ..ವಿವಿಧ ಬಣ್ಣಗಳ ಸಂಗಮದಿ ಸೃಷ್ಟಿ ರಚಿಸಿದ ಚಿತ್ರವೇ ಅದೆಂಥ ಮನೋಹರ. ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಬಣ್ಣಬಣ್ಣಗಳಲ್ಲೂ ಅದಾವ ಚಂಚಲತೆ?ಸೃಷ್ಟಿಯ ಕುಂಚದ ಹೊರಳಾಟಕ್ಕೆ...

ಅಂಕಣ

ನೆನಪಿನ ಬುತ್ತಿ..

ಜೀವನ ಅನ್ನೋದು ಅತ್ಯಂತ ಅಮೂಲ್ಯವಾದದ್ದು.  ಹುಟ್ಟಿನಿಂದ ಸಾಯುವವರೆಗೂ  ಅನುಭವಿಸುವ  ಒಂದೊಂದು  ಕ್ಷಣಗಳೂ ಆಗಾಗ ನೆನಪಿಗೆ ಬರುವಂಥವುಗಳು.  ಅವು ನಮ್ಮ ನೆರಳಿನಂತೆ ಹಿಂಬಾಲಿಸುತ್ತಿರುತ್ತವೆ.  ಎಷ್ಟೋ ನೆನಪುಗಳು ಸುಖ ತರಬಹುದು; ಇನ್ನು ಕೆಲವು ದುಃಖ ತರಬಲ್ಲವುಗಳು.  ಆದರೆ ಎಲ್ಲವೂ ನೆನಪುಗಳೇ ತಾನೆ! ಈ ನೆನಪನ್ನು ಉಳಿಸಿ ಹೋಗುವಂಥ ಮನುಷ್ಯ, ವಸ್ತು, ಘಟನೆ ಅಥವಾ ಪ್ರಾಣಿ...

ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೭ ಬದುಕಿಗಾರ್ ನಾಯಕರು ? ಏಕನೊ ಅನೇಕರೋ? | ವಿಧಿಯೊ, ಪೌರುಷವೊ, ಧರುಮವೊ, ಅಂಧಬಲವೋ? || ಕುದುರುವುದದೆಂತು ಈಯವ್ಯವಸ್ಥೆಯ ಪಾಡು ? | ಅದಿಗುದಿಯೆ ಗತಿಯೇನೊ? – ಮಂಕುತಿಮ್ಮ || ಬದುಕಿನ ನಾವೆ ನಡೆಸಲು ಚುಕ್ಕಾಣಿ ಹಿಡಿದಿರುವ ನಾಯಕರಾದರು ಯಾರು ? ಅದೇನು ಒಬ್ಬರಿಂದ ನಡೆಯುವ ಯಾನವೊ ಅಥವಾ ಅನೇಕರಿಂದಲೊ? ಅದನ್ನು...

ಅಂಕಣ

ಕುಡ್ಯೋಕೆ ನೀರಂತೂ ಇಲ್ಲ.. ಎಣ್ಣೆನಾದ್ರೂ ಕೊಡ್ರಿ ಸಿವಾ!!!

ಕುರಿ ಕೋಳೀನ ಸೋಮ್ವಾರ ಶನ್ವಾರ ಕಡ್ಯೋಂಗಿಲ್ಲ.. ಅಂತಾ ಭಾಳಾ ಜೋಶ್ನಲ್ಲಿ ಸಾಂಗೇಳುತ್ತಾ ಗೋಪಾಲಣ್ಣ  ಒಸ್ದಾಗಿ ಶುರು ಮಾಡಿರೋ ಪಾನ್ ಬೀಡಾ ಶಾಪ್ ಮುಂದೆ ವಕ್ಕರ್ಸ್ಕೊಂಡು ಬಿಡ್ತು ಮುರುಗನ್. ಏನಲಾ ಅಮ್ವಾಸೆ ನನ ಮಗನೇ?? ಕುರೀ ಕಡೀಬಾರ್ದು, ಮೇಕೆ ಕೋಳಿ ಕತ್ತರ್ಸ್ಬಾರ್ದು ಅಂತಾ ಯೋಳ್ತಿದೀಯಾ?? ಏನಲಾ ಮಾಟರ್ರು?? ಅಂತ ಮಾತು ಆರಂಭಿಸ್ತು ಗೋಪಾಲಣ್ಣಿ. ಅದೆಲ್ಲೋ ಯಾಗ ಮಾಡೋವಾಗ...

Featured ಅಂಕಣ

ಬ್ರಾಹ್ಮಣರಿಗೆ ನಿಜವಾಗಿಯೂ ಮೀಸಲಾತಿ ಬೇಕಾ?

ಒಂದು ನೈಜ ಉದಾಹರಣೆಯೊಂದಿಗೆ ಆರಂಭಿಸುತ್ತೇನೆ. ನನಗೆ ಪಿಯುಸಿಯಲ್ಲಿ ಇಬ್ಬರು ಸ್ನೇಹಿತರಿದ್ದರು. ಒಬ್ಬ ಸರಕಾರದ ದೃಷ್ಟಿಯಲ್ಲಿ  ಮೇಲ್ವರ್ಗಕ್ಕೆ ಸೇರಿದ ಬಡ ಬ್ರಾಹ್ಮಣ, ಮತ್ತೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದವನು, ಆದರೆ ಬಹಳಾ ಶ್ರೀಮಂತ. ಪಿಯುಸಿಯ ಪರೀಕ್ಷೆಯಲ್ಲಿ ಇಬ್ಬರಿಗೂ ತೊಂಬತ್ತು ಶೇಕಡಾ ಅಂಕ ಬಂದಿತ್ತು. ಅದ ನಂತರದ ಸಿಇಟಿಯಲ್ಲಿ ಬ್ರಾಹ್ಮಣ ವರ್ಗಕ್ಕೆ ಸೇರಿದವನಿಗೆ...

Featured ಅಂಕಣ

ಇಚ್ಛಾಶಕ್ತಿಯೆಂಬ ರೆಕ್ಕೆಗಳಿವೆಯಲ್ಲ..

‘ಮನುಷ್ಯನಿಗೂ ರೆಕ್ಕೆಗಳಿದ್ದಿದ್ದರೆ ಎಷ್ಟು ಚನ್ನಾಗಿರುತ್ತಿತ್ತು.’ ಕಿಟಕಿಯಿಂದಾಚೆ ನೋಡುತ್ತಿದ್ದವಳಿಗೆ ಪಕ್ಷಿಗಳ ಹಾರಾಟ ಕಂಡು ಯೋಚನೆಯೊಂದು ಬಂದಿತ್ತು. ‘ನನಗೂ ಕೂಡ ರೆಕ್ಕೆಗಳಿದ್ದಿದ್ದರೆ, ಅವುಗಳಂತೆ ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಾಡಬಹುದಿತ್ತು’ ಎಂದು ಯೋಚಿಸುತ್ತಿದ್ದೆ. ಆದರೆ ಪಕ್ಕದಲ್ಲಿದ್ದ ಕ್ರಚಸ್ ವಾಸ್ತವವನ್ನು ನೆನಪಿಸುತ್ತಿತ್ತು. ನಡೆಯಲೂ ಆಗದವಳು ಹಾರುವ...

ಅಂಕಣ

ಸಿಂಹಾದ್ರಿಯ ನರಸಿಂಹ

ನೆರೆಯ ರಾಜ್ಯ ಆಂಧ್ರಪ್ರದೇಶದ ವಿಶಾಖಪಟ್ಟಣದ ಹತ್ತಿರವಿರುವ ದೇಶದ ಎರಡನೆಯ(ತಿರುಪತಿಯ ನಂತರ) ಅತಿ ಶ್ರೀಮಂತ ಹಿಂದೂ ದೇವಾಲಯವಾದ ಸಿಂಹಾಚಲ ಸಿಂಹಾದ್ರಿಯ ವರಾಹ ಲಕ್ಷ್ಮೀನರಸಿಂಹ ಸ್ವಾಮೀ ದೇವಸ್ಥಾನದಲ್ಲಿ ಈಗ ಜಾತ್ರಾ ಸಂಭ್ರಮ. ತ್ರಿಭಂಗಿ ರೂಪದಲ್ಲಿ, ಅ೦ದರೆ ಸಿ೦ಹದ ತಲೆ ಹಾಗೂ ಮಾನವ ಶರೀರಕ್ಕೆ ವರ್ಷವಿಡೀ ಶ್ರೀಗಂಧ ಲೇಪಿತವಾಗಿರುವ ದೇವರ ಮೂರ್ತಿಯನ್ನು, ವರ್ಷಕ್ಕೊಮ್ಮೆ...

ಅಂಕಣ

ನಮ್ಮ ಶಾಂತಿಯನ್ನು ಕದಡಲು ಯಾರಿಗೂ ಸಾಧ್ಯವಿಲ್ಲ!

ಸ್ವಾಮಿ, ಏನೇ ಆಗ್ಲಿ ನಾವು ಕುಂತಲ್ಲಿಂದ ಏಳೋರಲ್ಲ. ಊರಿಗೆ ಊರೇ ನಮ್ಮನ್ನ ಬಹಿಷ್ಕರಿಸಿದ್ರೂ ನಾವು ಅಲ್ಲಾಡೋರಲ್ಲ. ಇದ್ದ-ಬಿದ್ದ ಜೀವಿಗಳೆಲ್ಲಾ ಬುದ್ದಿಯಿದೆ, ಎಂದು ಕೊಂಡವರೆಲ್ಲಾ ನಮ್ಮ ಮೇಲೆ ಏರಿ ಬಂದ್ರೂ ಅವರನ್ನು ಸವಿ ಸವಿ ನುಡಿಯಿಂದಲೇ ಮಾತನಾಡಿಸುತ್ತೀವಿ. ಏ ಭಟ್ಟ ಕೋಳಿ ಸುಟ್ಟ ಊರಿಗೆಲ್ಲ ನಾಥ ಕೊಟ್ಟ.. ಜುಟ್ಟೂ, ಡೊಳ್ಳು ಹೊಟ್ಟೆ, ದಾರ, ಕಚ್ಚೆ ಲಂಗೋಟಿ ಎಂದೆಲ್ಲಾ...

ಅಂಕಣ

ವಿಕಾಸ’ವಾದ’ – ನಿದ್ದೆ ಬಂದಿಲ್ಲ

” ಥೂ ಏನ್ ತಿಗಣೆ ಮಾರಾಯ . ರಾತ್ರಿ ನಿದ್ದೇನೆ ಬಂದಿಲ್ಲ ನಂಗೆ ” , ಹೊಸದಾಗಿ ನನ್ನ ರೂಮಿಗೆ ಬಂದಿದ್ದ ಜೀವನ್ ತನ್ನ ಅಳಲು ತೋಡಿಕೊಳ್ಳುತ್ತಿದ್ದ . ” ನಿನ್ಕಿಂತ ಮೊದ್ಲೇ ಅವು ನನ್ ರೂಂ ಮೇಟ್ ಕಣಯ್ಯಾ ” ಎಂದು ನಾನು ನಕ್ಕೆ . ಮೊದ-ಮೊದಲು ನನಗೂ ಹೀಗೆ ಆಗಿತ್ತು . ಹಾಸ್ಟೆಲ್ ಸೇರುವ ಮೊದಲು ನಾನು ತಿಗಣೆಗಳನ್ನು ನೋಡಿಯೇ ಇರಲಿಲ್ಲ . ಒಂದು...