Author - Guest Author

ಅಂಕಣ ಭಾವತರಂಗ

ಹಣೆಬರಹ

ನಾನು ಲತ, ಒಬ್ಬಳು ಪುಟ್ಟ ತಂಗಿ, ಅಪ್ಪ – ಅಮ್ಮ ಹೀಗೆ ಚಿಕ್ಕ ಚೊಕ್ಕ ಸಂಸಾರವಾಗಿತ್ತು ನಮ್ಮದು. ಬಡತನವೆಂಬುದು ಪಿತ್ರಾರ್ಜಿತವಾಗಿ ಬಂದ ವರದಾನವಾಗಿತ್ತು. ಇದೆಯೆಂಬುದಕ್ಕಿಂತ ಇಲ್ಲಗಳ ಸಂಖ್ಯೆಯೇ ಜಾಸ್ತಿಯಾಗಿದ್ದಿತು. ಹೊತ್ತಿನ ಊಟಕ್ಕೂ ತತ್ವಾರ.  ಊಟಕ್ಕೂ ಗತಿ ಇಲ್ಲ ಎನ್ನುವಂತಹ ಸ್ಥಿತಿಗೆ ನಮ್ಮನ್ನು ನಮ್ಮಪ್ಪನೇ ತಳ್ಳಿದ್ದು. ಅಪ್ಪ ಮಹಾ ಕುಡುಕ, ಅದ್ಯಾರು ಅವನಿಗೆ ಈ...

ಅಂಕಣ

ಹೇಗೆ ಆ ವ್ಯಕ್ತಿಯ ಮೇಲೆ ಅಷ್ಟೊ೦ದು ವಿಶ್ವಾಸ ನಿನಗೆ?

ಕೆಲದಿನಗಳಿ೦ದ ಈ ಪ್ರಶ್ನೆ ನನ್ನನ್ನ ಕಾಡುತ್ತಲೇ ಇತ್ತು. ಇದನ್ನು ಬಿಟ್ಟು ಬೇರೇನನ್ನೂ ಯೋಚಿಸಲೂ ಆಗುತ್ತಿರಲಿಲ್ಲ. ಪ್ರಶ್ನೆಯಿ೦ದ ಮುಕ್ತಿಯೇನೂ ಬೇಕಾಗಿರಲಿಲ್ಲ, ಕೇವಲ ಉತ್ತರಕ್ಕಾಗಿ ಹ೦ಬಲಿಸಿದ್ದೆ. “ಆ ವ್ಯಕ್ತಿಯ ಮೇಲೆ ವಿಶ್ವಾಸ ಹೇಗೆ’ ಎ೦ದು ಪ್ರಶ್ನೆ ಆರ೦ಭಗೊ೦ಡಿದ್ದರೂ ‘ಯಾವುದೇ ವ್ಯಕ್ತಿಯಾಗಿರಲಿ ವಿಶ್ವಾಸಕ್ಕೆ ಕಾರಣವೇನು ಎ೦ಬಲ್ಲಿಗೆ ಬ೦ದು ನಿ೦ತಿತ್ತು. ನಾನು...

ಅಂಕಣ

ಮೊಳಗಿತು ದಿಗ್ವಿಜಯ….

ಇದು ಸೆಪ್ಟೆಂಬರ್ ೧೮೯೩ರ ಮಾತು…… ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿವೇಕಾನಂದರು ಅಮೇರಿಕ್ಕಾಕ್ಕೆ ತೆರಳಿದ್ದರು. ಹೇಗೆ ಎಲ್ಲಾ ದೇಶಗಳಲ್ಲೂ,ಕಾಲದಲ್ಲೂ ಕೆಟ್ಟ ಬುದ್ಧಿಯುಳ್ಳವರು,ಒಳ್ಳೆಯ ಬುದ್ಧಿಯುಳ್ಳವರು ಇರುತ್ತಾರೋ ಹಾಗೆಯೇ ಅಮೇರಿಕಾದಲ್ಲೂ ಕೂಡ. ಅಮೇರಿಕ ಎಂಬ ದೇಶಕ್ಕೆ ಅವರು ಹೊಸಬರು. ಕೆಲವು ದುಷ್ಟಬುದ್ದಿಯುಳ್ಳ ಜನ ಅವರನ್ನ,ಅವರ...

ಅಂಕಣ

ಅತ್ಯಾಚಾರದ ಸುಳಿಯಲ್ಲಿ, ಮಹಿಳೆ ಮತ್ತು ಮಕ್ಕಳು

ತಾಯಿ, ತಂಗಿ, ಅಕ್ಕ, ಹೆಂಡತಿ, ಪ್ರೇಯಸಿ ಹೀಗೆ ಹೆಣ್ಣಿನ ಪಾತ್ರ ನಮ್ಮ ಬದುಕಿನಲ್ಲಿ ಹಲವು ರೂಪಗಳಲ್ಲಿ ಹತ್ತಾರು ಸೇವೆ ಮಾಡುವಲ್ಲಿ ತನ್ನ ಜೀವನ ಸವೆಯುತ್ತಿದ್ದಾಳೆ. ಅವಳೊಂದು ಅಂದದಗೊಂಬೆ, ನನ್ನ ಬಾಳು ಬೆಳಗುವ ದೀಪ, ಬದುಕಿನ ದಿಕ್ಕು ಬದಲಿಸುವ ಬಯಕೆ, ಪ್ರತಿಯೊಬ್ಬರ ಜೀವನದಲ್ಲಿ ಬರುವ ಅವಳು ನನ್ನ ಬದುಕಿನಲ್ಲಿಯೂ ಬಂದಳು ಅವಳ ಒಳಗಿನ ನೋವು  ನಲಿವುಗಳಿಗೆನಾನು ನನ್ನೊಳಗೆ...

ಕವಿತೆ

ಸುಬ್ಬಂಣನ ತ್ರಿಪದಿಗಳು

೧.ಭಿನ್ನ ಅಭಿರುಚಿಯ ಪತಿ|ತನ್ನತನವಿರದ ಸತಿ ಸನ್ನಡತೆಯಿರದವರ ಸಹವಾಸದಲಿ ಶಾಂತಿ ಶೂನ್ಯ ಕಾಣಯ್ಯ ಸುಬ್ಬಂಣ ೨.ತ್ಯಾಗವಿಲ್ಲದ ಯಾಗ|ರಾಗವಿಲ್ಲದ ಭೋಗ ಮೇಘವಿರದಾಷಾಢದಾಕಾಶದಿಂದ ಉಪಯೋಗವಿಲ್ಲೆಂದ ಸುಬ್ಬಂಣ ೩.ಬಂಗಾರ ಕಂಡಾಗ | ಅಂಗನೆಯು ತಾನೊಲಿಗು ಸಿಂಗರದಿ ನಲಿಗು ಬಲು ತೆರದಿ ಪತಿ ಬಡವನಿರೆ ಹಂಗಿಸುವಳೆಂದ ಸುಬ್ಬಂಣ ೪.ಕವಿಯ ಬಾಳಿನ ಬಗೆಯ |ಸವಿಯೆಂದು ತಿಳಿಯದಿರು ಸವಿಯ...

ಕವಿತೆ

ಕಬ್ಬಿಗನೂರಿದು ಕಾಣದ ಕಾವ್ಯ..

ನೆನಪನ್ನೇ ನೆಪವಾಗಿಸಿಕೊಂಡು ಕುಳಿತ ಘಳಿಗೆ ನೆನಪಾಗುತ್ತಿತ್ತು ಎಲ್ಲವೂ ಆ ಪುಟ್ಟ ಕೇರಿಯಲ್ಲಿ ಹವಣಿಸದೆ ಬಿಡದು ಮತ್ತೆ ತಲುಪಲು ಆ ಬೀದಿ ಹರಿವ ನೀರಿನಂತೆ ಪಯಣಿಸುತ್ತಿದೆ ಜೀವನ ಆಚರಣೆಯಲ್ಲಿ ನೆನಪಾಗುತ್ತಿತ್ತು ನನ್ನಲ್ಲೆ ಅಚ್ಚೆಯಾಗುಳಿದ ಬಾಲ್ಯ ನೆನಪಾಗುತ್ತಿತ್ತು ಗೆಳೆಯರೊಂದಿಗೆ ಬೆರೆತ ಕ್ಷಣ ನೆನಪಾಗುತ್ತಿತ್ತು ಭಿತ್ತಿಯ ಮೇಲೆ ನಾ ಚಿತ್ರಿಸಿದ ಚಿತ್ರ ವಾಸ್ತವಗಳ...

ಕವಿತೆ

ದೂರದಿಂದ ಪ್ರೀತಿಯಂತೆ ಕಂಡಿತ್ತು…

ವಾರದಲ್ಲಿಂದು ಮೂರನೆಯ ತಲೆಸ್ನಾನ ನೋಡಲು ಬರುವರಂತೆ ಭಾವನ ಕಡೆಯವರು ರೇಷಿಮೆಯ ಕೂದಲನ್ನು ಮತ್ತೆ ಸರಿಪಡಿಸಿಕೊಂಡೆ ಸೀರೆ ಕೆಳಗಾಯಿತೆಂದು ಕನ್ನಡಿ ಕೊಂಕು ಮಾಡಿತ್ತು ಕಾರಿನ ಸದ್ದೇಕೊ ವಾದ್ಯದಂತೆ ಕೇಳಿಸಿತು ಇಂದೇನು ಭಯವಿಲ್ಲ ನೋಡಲು ಕಾತರವಷ್ಟೆ ಕಿಟಕಿ ತೋರಿಸಿದ್ದು ಕಪ್ಪಂಗಿ ಮುಚ್ಚಿದ ಬೆನ್ನು ದಿಟ್ಟಿಸಿ ನೋಡುವಾಗ ಥಟ್ಟನೆ ತಿರುಗಿದ್ದ ಸರಳುಗಳ ಸೀಳಿ ಬಂದಿತ್ತು ದೃಷ್ಟಿ...

ಕವಿತೆ

ಕಂದಪದ್ಯ

ಕನಸಿನ ತಾರೆ ಹೃದಯವೆಂಬ ಮನೆಗೆ ಬಂದ ಅತಿಥಿ ನೀ ಯಾರೇ? ಬಂದು ಮನವ ಕದ್ದೊಯ್ದ ನೀರೆ ನೀ ಯಾರೇ? ಚೆಲುವೆ ನೀ ಯಾರೆ? ಜನುಮ-ಜನುಮದ ಈ ಸಂಬಂಧಕೆ ಧಾರೆ ಎರೆದವರಾರೆ? ಎಲ್ಲೋ ಇದ್ದ ನನ್ನ ಮನಸ ನಿನ್ನತ್ತ ಸೆಳೆದ ನೀ ಯಾರೇ? ನನ್ನ ಮನಕೆ ಬಾಣ ಹೂಡಲು ಗುರಿ ಇಟ್ಟು ಕೊಟ್ಟವರಾರೆ? ಗಾಯವನ್ನು ಮಾಯ ಮಾಡಲು ಔಷಧಿ ಇತ್ತವರಾರೆ? ಒಂದೇ ನೋಟಕೆ ಮಿಂಚ ಹರಿಸಿದ ಅಕ್ಷಿರಾಣಿ ಯಾರೇ...

ಕಥೆ

ಇದೊಂದು ಹೆಸರಿನ ಹಂಗಿಲ್ಲದ ಕಥೆ..

ಇದೊಂದು ಹೆಸರಿನ ಹಂಗಿಲ್ಲದ ಕಥೆ.. ಮೊದಲೇ ನೀಡುವ ಎಚ್ಚರಿಕೆ ಏನೆಂದರೆ, ಕಥೆ ತುಂಬಾ ದೊಡ್ಡದಾಗಿದೆ. ಇದರಲ್ಲಿನ ಯಾವ ಭಾಗವನ್ನು ತುಂಡರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಮೇಲೆ, ಹಾಗೆಯೇ ಬಿಟ್ಟುಬಿಟ್ಟಿದ್ದೇನೆ.. ಟೇಬಲ್ ಮೇಲಿದ್ದ ಫೋನ್ ಹೊಡೆದುಕೊಳ್ಳುತ್ತಿತ್ತು. ಎದುರುಗಡೆಯ ಗೋಡೆ ಮೇಲೆ ಐದು ಟೀವಿಗಳಲ್ಲಿ ಬೇರೆ ಬೇರೆ ಸುದ್ದಿಗಳ ವೀಡಿಯೊ ಫೂಟೆಜ್...

ಅಂಕಣ

ಬದುಕೆಂಬ ಮಾಯೆ!!!

ಬದುಕು; ಒಂದು ಮಾಯೆ. ‘ಮಾಯೆ’ ಎನ್ನಲು ಕಾರಣವಿದೆ. ಅದೇನೆಂದರೆ, ಈ ಬದುಕು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುತ್ತದೆ. ಹುಟ್ಟುತ್ತಲೇ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥವಾಗಿ,ಏಕಾಂಗಿಯಾಗಿ ಬೆಳೆದ ಒಂದು ಮಗುವಿಗೆ ಬದುಕು ಕ್ರೂರಿಯಾಗಿ ಕಂಡರೆ, ತಾಯಿಯ ಎದೆಹಾಲಿನ ಸವಿ ಸವಿದು, ತಂದೆಯ ಭುಜಗಳ ಮೇಲೆ ಸವಾರಿ ಮಾಡುತ್ತಾ, ಅಣ್ಣನ ಕಾಳಜಿಯಲ್ಲಿ, ಅಕ್ಕನ ಪ್ರೀತಿಯ...