ಅಂಕಣ

ಅತ್ಯಾಚಾರದ ಸುಳಿಯಲ್ಲಿ, ಮಹಿಳೆ ಮತ್ತು ಮಕ್ಕಳು

ತಾಯಿ, ತಂಗಿ, ಅಕ್ಕ, ಹೆಂಡತಿ, ಪ್ರೇಯಸಿ ಹೀಗೆ ಹೆಣ್ಣಿನ ಪಾತ್ರ ನಮ್ಮ ಬದುಕಿನಲ್ಲಿ ಹಲವು ರೂಪಗಳಲ್ಲಿ ಹತ್ತಾರು ಸೇವೆ ಮಾಡುವಲ್ಲಿ ತನ್ನ ಜೀವನ ಸವೆಯುತ್ತಿದ್ದಾಳೆ. ಅವಳೊಂದು ಅಂದದಗೊಂಬೆ, ನನ್ನ ಬಾಳು ಬೆಳಗುವ ದೀಪ, ಬದುಕಿನ ದಿಕ್ಕು ಬದಲಿಸುವ ಬಯಕೆ, ಪ್ರತಿಯೊಬ್ಬರ ಜೀವನದಲ್ಲಿ ಬರುವ ಅವಳು ನನ್ನ ಬದುಕಿನಲ್ಲಿಯೂ ಬಂದಳು ಅವಳ ಒಳಗಿನ ನೋವು  ನಲಿವುಗಳಿಗೆನಾನು ನನ್ನೊಳಗೆ ಹೆಣ್ಣಿನ ಅಂತರಂಗದೊಳಗಿನ ಅವಾಂತರವ ಕಂಡು ಕೊರಗಿದೆ.

ಹೆಣ್ಣು ಸಂಸಾರದ ಕಣ್ಣು ಎಂಬ ಗಾದೆ ಮಾತು ಜನಜನಿತವಾಗಿದೆ ಆದರೆ ಹೆಣ್ಣಿನ ಅಂತರಂಗದೊಳಗೆ ಆ ಭಗವಂತ ಎಂತೆಂತಹ ನೋವು ಅಡಗಿಸಿಟ್ಟಿರುವ ಎಂಬುವ ಸತ್ಯ ಅರಿತಾಗಲೇಅರಿವಾಗುವುದು ಅವಳ ನೈಜ ಬದುಕಿನಲ್ಲಿ ಅದೆಷ್ಟೋ ನೋವುಗಳು ಹೀಗೆ ಮರೆಯಾಗಿ ಅವಳನ್ನು ಮನೆಯ ಆಟಿಕೆ ಸಾಮಾನುಗಳಂತೆ ಬಳಸಿಕೊಳ್ಳುತ್ತಿರುವ ಸತ್ಯ ಪತ್ತೆಯಿಲ್ಲದೆ ಮರೆಯಾಗುತ್ತಿದೆ.

ಈ ಬೆಳೆದುನಿಂತ ಸಮಾಜದಲ್ಲಿ ಹೆಣ್ಣನ್ನು ಅವಳ ದು:ಖಗಳನ್ನು ಮರೆಮಾಚಲಾಗುತ್ತಿದೆ. ಹೆಣ್ಣಿಗೆ ಎಲ್ಲಿ ಗೌರವವಿದೆ ಎಂಬ ಮಾತು ಕೇಳಿದರೆ ನಮಗೆ ಸಿಗುವ ಉತ್ತರ ಮಾತ್ರ ಶೂನ್ಯವಾಗಿರುತ್ತದೆ.ಇಂದಿಗೂ ಹಳ್ಳಿಗಳಲ್ಲಿ ಅವಳಿಗೆ ಸಮಾನ ಕೂಲಿ ಸಿಗುತ್ತಿಲ್ಲ, ಕೆಲಸ ಮಾತ್ರ ಗಂಡಸನಿಗಿಂತ ಹೆಚ್ಚಿನ ಕೆಲಸವಿದೆ ಆದರೂ ಗಂಡು ಸಮಾಜ ಸುಮ್ಮನೆ ಕುಳಿತಿದೆ.

ಮನೆಯ ಚಿಕ್ಕ ತಂಗಿ ಹನ್ನೆರಡು ವರ್ಷವಾಗುತ್ತಿದ್ದಂತೆ ನಾಚಿ ತಲೆಬಾಗಿ ನಡೆಯಬೇಕು, ಮನೆಯವರಿಗೆ ಎದುರು ಮಾತನಾಡುವಂತಿಲ್ಲ, ಕಟ್ಟುಪಾಡುಗಳ ಬದುಕು ಅವಾಗಲೇ ಅವ್ವ ಅಪ್ಪನಕಟ್ಟಪ್ಪಣೆಗಳು ಪ್ರಾರಂಭವಾಗುತ್ತವೆ. ಮನೆಯ ಹೊರಗೆ ಹೋಗಬೇಡ ಓಣಿಯ ಹುಡುಗರಿಂದ ದೂರವಿರು, ಬೇರೆ ಓಣಿ ಆಡಲು ಹೋಗಬೇಡ ಹೀಗೆ ಒಂದೇ ಎರಡೇ. ಒಂದು ವೇಳೆ ಕಾಲೇಜಿಗೆ ಹೋಗುವಹುಡುಗಿಯಾದರೆ ಸಂಜೆ ಮನೆಗೆ ಬೇಗ ಬರಬೇಕು, ಬೇರೆ ಗೆಳೆಯರ ಜೊತೆಗೆ ಸೇರಬೇಡ ಸೇರಿದರು ಅಲ್ಲಿ ಇಲ್ಲಿ ನಿಲ್ಲುವಂತಿಲ್ಲ ಎಂತಹ ದೊಡ್ಡ ಫಾರ್’ವರ್ಡ ಮನೆಯವರಾದರೂ, ಎಷ್ಟೆ ಓದಿರುವ ತಂದೆತಾಯಿಯಾದರೂ ತಮ್ಮ ಮಗಳು ದೊಡ್ಡವಳಾಗಿದ್ದಾಳೆ ಎಂಬ ವಿಷಯ ತಿಳಿದ ಮೇಲೆ ಅವರು ಹಾಕುವ ಕಟ್ಟು ಪಾಡುಗಳು ಮಾತ್ರ ಯಾವತ್ತು ಮರೆಯುವದಿಲ್ಲ. ಇದು ನಮ್ಮ ಹೆಣ್ಣಿನ ಸಬಲೀಕರಣ.

ಮನೆಯಲ್ಲಿ ಅಮ್ಮ ಅಡಿಗೆ ಕಲಿಯದಿದ್ದರೆ ಪಿರೆಡ್ ತೆಗೆದುಕೊಳ್ಳುತ್ತಾಳೆ. ನಾಳೆ ಮದುವೆಯಾದ ಮೇಲೆ ನೀ ಯಾವ ನೌಕರಿ ಮಾಡಿದರು ಮನೆಯ ಅಡಿಗೆ ಮಾಡಲೇಬೇಕು. ನೀನೆನು ಸಾಹೇಬತಿಆದರೂ ಗಂಡನೊಂದಿಗೆ ಹೆಂಡತಿಯಾಗಿರಲೇಬೇಕು. ಎಂಬ ಸತ್ಯ ಅವ್ವ ಆಗಾಗ ನೆನಪಿಸುತ್ತಾ ಇರುತ್ತಾಳೆ. ಅಪ್ಪನು ನನ್ನ ಮಗಳು ಮಗಳಲ್ಲಾ ಮಗ ಎಂದು ಜಂಬದಿಂದ ಹೇಳಿದರೂ ಮಗನಿಗೆ ನೀಡಿದಸ್ವಾತಂತ್ರ್ಯ ಮಾತ್ರ ಕೊಡುವುದಿಲ್ಲ. ಯಾವ ತಂದೆ ತಾನೆ ತನ್ನ ಮಗನಿಗೆ ನೀಡಿದಷ್ಟು ಮಹತ್ವ ಮಗಳಿಗೆ ನೀಡಿದ್ದಾನೆ ಹೇಳಿ, ಮಹತ್ವ ಕೊಟ್ಟರು ಮದುವೆಯಾಗುವರೆಗೂ ಮಾತ್ರ ಕೊಡುತ್ತಾರೆ.ಮದುವೆಯಾದ ಮೇಲೆ ಮತ್ತೆ ಅದೇ ಹಳೆ ಗಾದೆ ಮಾತು ಹೇಳಿ ಮರೆಯಾಗುತ್ತಾರೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು  ಅಲ್ಲವಾ?

ಸ್ನೇಹಿತರೆ, ನಾವು ಎಷ್ಟೆ ಮುಂದುವರೆದಿರಬಹುದು ಆದರೆ ನಮ್ಮ ಮನಸ್ಸಿನ ಪುಟದಲ್ಲಿ ಮಾತ್ರ ಹೆಣ್ಣಿನ ಬಗ್ಗೆ ಇರುವ ಭಾವನೆ ಮಾತ್ರ ಹಳೆಯದೆ, ನಮ್ಮ ಮಹಿಳೆಯ ಬಗ್ಗೆ ನಮಗಿರುವಪೂರ್ವಾಗೃಹ ಬದಲಾಗಬೇಕು, ನಮ್ಮ ಒಳಗಿನ ಹೃದಯ ಗಟ್ಟಿ ಮಾಡಿಕೊಂಡು ಅವಳಿಗೆ ಸಮಾನ ಅವಕಾಶಗಳನ್ನು ನೀಡಬೇಕು. ಆಗ ಮಾತ್ರ ಅವಳು ನಮ್ಮೊಳಗೆ ಒಬ್ಬಳು ಎಂಬ ಕಲ್ಪನೆ ನಮ್ಮಸಮಾಜದಲ್ಲಿ ಮೂಡಿ ಬರುತ್ತದೆ. ಇಲ್ಲವಾದಲ್ಲಿ ನಾವೆಲ್ಲ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡು ಸಾಯುವದಂತು ಅತ್ಯಂತ ಘೋರ ಸತ್ಯವೆಂಬುವದರಲ್ಲಿ ಎಳ್ಳು ಕಾಳಿನಷ್ಟು ತಪ್ಪಿಲ್ಲ.

ಯತ್ರ ನಾರೆಸ್ತೊ ತತ್ರ ದೇವತಾ ಎಂಬ ಮಾತು ಇತಿಹಾಸದ ಪುಟದಲ್ಲಿ ಕೇಳಿದ್ದೇವೆ. ನಮ್ಮ ಕರ್ನಾಟಕದ ಇತಿಹಾಸದಲ್ಲಿ ಮಹಿಳೆಗೆ ಅತ್ಯಂತ ದೊಡ್ಡ ಸ್ಥಾನವಿದೆ. ಅವಳನ್ನು ಪೂಜಿಸುತ್ತಾ ಬಂದಿದ್ದೇವೆ. ಮಹಿಳೆ ನಮ್ಮ ಜೀವನದ ಪ್ರತಿಯೊಂದು ಘಟ್ಟದಲ್ಲೂ ಹಾಸುಹೊಕ್ಕಾಗಿದ್ದಾಳೆ. ಅವಳ ಜೀವನ ಪುರುಷ ಸಮಾಜಕ್ಕೆ ಅಪರಾಜಿತವಾಗಿದೆ. ಅವಳ ಗುಣಗಾನದಲ್ಲಿ ಅನೇಕ ಗ್ರಂಥಗಳು,ಪುರಾಣಗಳು ಮುಳುಗಿಹೋಗಿವೆ. ಹಾಗಾದರೆ ಅವಳು ಎಲ್ಲಿ ಸೇಫ್ ಇದ್ದಾಳೆ ನಾವು ಹೇಗೆ ಅವಳನ್ನು ನೋಡಿಕೊಳ್ಳುತ್ತಿದ್ದೇವೆ ಎಂಬ ವಿಚಾರ ಮಾಡಬೇಕಾದ ಅಗತ್ಯವಿದೆ. ಬರಿ ಮಾತಿನಲ್ಲಿ ಮಹಿಳೆಯಬಗ್ಗೆ ಮಾತನಾಡಿದರೆ ಸಾಲದು ಅದನ್ನು ಕೃತಿಗಿಳಸಬೇಕಾದ ಅಗತ್ಯವಿದೆ ಅಲ್ಲವೇ?

 

  • ಕೆ.ಎಂ.ವಿಶ್ವನಾಥ ಮರತೂರ.
    mankavi.vishwa@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!