Author - Anoop Gunaga

ಕಥೆ

ಅನುಬಂಧ – ಭಾಗ ೨

ಅನುಬಂಧ – ಭಾಗ ೧ ಕರೆ ಬಂದಿದ್ದು ಆಸ್ಪತ್ರೆಯಿಂದ. ಅಕ್ಕನಿಗೆ ಅಪಘಾತವಾಗಿತ್ತು. ಬಸ್ ಹತ್ತುತ್ತಿರುವಾಗ ಬಸ್ ಚಲಿಸಿದ್ದರಿಂದ ಕಾಲು ಜಾರಿ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮೈಯೆಲ್ಲ ನಡುಕ ಬಂದಂತಾಗಿ ಮೊಬೈಲ್ ಹಿಡಿಯಲು ಸಹ ಅಶಕ್ಯನಾದಂತೆ ಅನಿಸಿತು. ಆದರೂ ಸುಧಾರಿಸಿಕೊಂಡು ಆಸ್ಪತ್ರೆಯ ಕಡೆ ದೌಡಾಯಿಸಿದೆ. ಅಲ್ಲಿ ತಲುಪಿದಾಗ...

ಕಥೆ

ಅನುಬಂಧ – ಭಾಗ ೧

ಆ ದಿನ ಅವಳ ಜೊತೆ ನಾ ಹೊರಟಾಗ ಕೇಳಿದ್ದೆ “ಅಕ್ಕಾ, ನಿನ್ನ ಹೆಸರೇನು?” ಅಂತ. “ನಂಗೆ ಹೆಸರಿಲ್ಲ” ಅಂದಳು ಅವಳು. “ಮತ್ತೆ ನಾ ನಿನ್ನ ಹೇಗೆ ಕರೀಲಿ?” ಅಂದೆ. “ಈಗಷ್ಟೇ ಕರೆದೆ ಅಲ್ವಾ ‘ಅಕ್ಕಾ…’ ಅಂತ. ಹಾಗೆ ಕರಿ” ಅಂದಳು. ನಾನು ಸುಮ್ಮನೆ ಒಂದು ನಗು ಬೀರಿ “ಸರಿ” ಎನ್ನುತ್ತಾ...

ಕಥೆ

ನೀ ಬದಲಾಗೆಯಾ…?

ನಮ್ಮ ಮದುವೆಯಾಗಿ ಎರಡು ವರ್ಷಗಳಾದುವು ಇಂದಿಗೆ. ಎರಡು ವರ್ಷಗಳ ಹಿಂದೆ ನನ್ನ ಸಹಧರ್ಮಿಣಿಯಾಗಿ ಜೊತೆ ಬಂದವಳು ನಿಶಾ. “ಚಿ.ತರುಣ್ ಹಾಗೂ ಚಿ.ಸೌ.ನಿಶಾ ಅವರ ವಿವಾಹವನ್ನು ದಿನಾಂಕ ೦೨-೦೨-೨೦೧೫ರಂದು ಘಂಟೆ ೧೨:೧೫ರ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ಗುರು-ಹಿರಿಯರ ಸಮ್ಮತಿಯೊಂದಿಗೆ ನಿಶ್ಚಯಿಲಾಗಿದೆ”ಎಂದು ಪುರೋಹಿತರು ಲಗ್ನಪತ್ರಿಕೆ ಓದಿದ ಆ ದಿನ ಅದೇನೋ...

ಅಂಕಣ

ಮುಂಜಾವು

ನಿಶೆಯ ನಶೆಗೆ ಸೋತು ನಿದ್ರೆಹೋಗಿದ್ದ ಜಗತ್ತು ಆಕಳಿಸುತ್ತ ಮೇಲೇಳುತ್ತಿದೆ. ಹಾಲು ಮಾರುವ ಹುಡುಗ ಕೆಲಸ ಮುಗಿಸಿ ಕಾಲೇಜಿಗೆ ಹೊರಟಿದ್ದಾನೆ. ಉದಯವಾಣಿ, ಪ್ರಜಾವಾಣಿ, ವಿಜಯವಾಣಿ, ವಿಜಯ ಕರ್ನಾಟಕ ಹೀಗೆ ಎಲ್ಲಾ ಬಗೆಯ ಪತ್ರಿಕೆಗಳೂ ತನ್ನ ಬಳಿಯೇ ಇದ್ದರೂ  ಪೇಪರ್ ಮಾರುವ ಹುಡುಗನಿಗೆ ಮಾತ್ರ ಯಾವ ಸುದ್ದಿಯನ್ನೂ ಓದಲು ಸಮಯವಿರಲಿಲ್ಲ. ರಾತ್ರಿ ಪಾಳಿ ಮುಗಿಸಿದ ಕಾಲ್ ಸೆಂಟರ್...

Featured ಸಿನಿಮಾ - ಕ್ರೀಡೆ

ಪುಷ್ಪಕ ವಿಮಾನ

’ಪುಷ್ಪಕ ವಿಮಾನ’ – ರಮೇಶ್ ಅರವಿಂದ್ ಎಂಬ ಕನ್ನಡ ಚಿತ್ರರಂಗದ ಎವರ್’ಗ್ರೀನ್ ಸುಂದರಾಗನ ನೂರನೇ ಚಿತ್ರ. ರವೀಂದ್ರನಾಥ್ ಎಂಬ ನಿರ್ದೇಶಕನ ಮೊದಲ ಚಿತ್ರ. ಈ ಇಬ್ಬರ ಸಮ್ಮಿಲನದಲ್ಲಿ ತಯಾರಾಗಿರುವ ಸಿನಿಮಾ ವಿಮಾನ ಈಗ ಹಾರಾಡುತ್ತಿರುವುದು ಪ್ರೇಕ್ಷಕನ ಎದೆಯ ಬಾಂದಳದಲ್ಲಿ.   ಒಬ್ಬ ಬುದ್ಧಿಮಾಂದ್ಯ ಅಪ್ಪ ಹಾಗೂ ಚೂಟಿ ಮಗಳ ನಡುವಿನ ಬಾಂಧವ್ಯ ಈ ಸಿನಿಮಾದ ಕಥಾ ಹಂದರ...

ಸಿನಿಮಾ - ಕ್ರೀಡೆ

ಕಿರಿಕ್ ಪಾರ್ಟಿ

‘ಕಿರಿಕ್ ಪಾರ್ಟಿ’ – ಕರ್ನಾಟಕದಾದ್ಯಂತ ಎಲ್ಲ ಸಿನಿಮಾ ಪ್ರಿಯರ ಬಾಯಲ್ಲೂ ಇದರದ್ದೇ ಸುದ್ದಿ ಈಗ. ಸಿನಿಮಾ ತೆರೆಕಾಣುವ ಮುಂಚೆಯೇ ಹುಚ್ಚು ಹಿಡಿಸುವ ಮೆಚ್ಚು ಹಾಡುಗಳಿಂದ ಅಪಾರವಾದ ನಿರೀಕ್ಷೆ ಮೂಡಿಸಿತ್ತು. ಇದೀಗ ಆ ಎಲ್ಲ ನಿರೀಕ್ಷೆಗಳನ್ನು ಅಚ್ಚುಕಟ್ಟಾಗಿ ಪೂರ್ತಿಗೊಳಿಸಿರುವ ಈ ಚಿತ್ರ ಕನ್ನಡದ ಚಿತ್ರ ಪ್ರೇಕ್ಷಕರಿಗೆ ಹಳೆ ವರ್ಷಾಂತ್ಯ ಹಾಗೂ ಹೊಸ...

ಅಂಕಣ

ಪುನರಾಗಮನ

ಅದೊಂದು ಬೆಟ್ಟದ ತಪ್ಪಲು. ನಿರ್ಜನ ಪ್ರದೇಶ. ಜೋರಾಗಿ ಬೀಸುತ್ತಿರುವ ಗಾಳಿ ಒಮ್ಮೆ ಹಿತ ಎನಿಸಿದರೆ ಮರುಕ್ಷಣ ಸಣ್ಣ ಭಯ. ಈ ಭಯ ಹೊರಗೆ ಬೀಸುತ್ತಿರುವ ಆ ಗಾಳಿಯ ರಭಸಕ್ಕೋ ಅಥವಾ ತನ್ನೊಳಗೆ ಬೀಸುತ್ತಿರುವ ಆಂತರಿಕ ಬಿರುಗಾಳಿಯಿಂದಲೋ ಅರಿಯದೇ ತೊಳಲಾಡುತ್ತಿದ್ದ ನಕುಲ್. ನಕುಲ್’ಗೆ ಇನ್ನೂ ಇಪ್ಪತ್ತೊಂಭತ್ತರ ಹರೆಯ. ಆದರೆ ಅದೇನೋ ಅರಿಯದ ವೈರಾಗ್ಯ ಅವನನ್ನಾವರಿಸಿತ್ತು...

ಕಥೆ

ಮುಗುಳು ನಗೆ…

ಸಿದ್ಧಾಂತ್ ಅಂದು ಎಂದಿನಂತೆ ಆಫೀಸ್ ಕೆಲಸಗಳನ್ನು ಮುಗಿಸಿ ಮನೆಗೆ ಹೊರಟಿದ್ದ. ಬಸ್’ನಲ್ಲಿ ಕುಳಿತು ಕಿವಿಗೊಂದು ಇಯರ್’ಫೋನ್ ಸಿಕ್ಕಿಸಿಕೊಂಡು ಹಾಡು ಕೇಳತೊಡಗಿದ. ಒಂದೆರಡು ನಿಲ್ದಾಣಗಳು ಕಳೆದ ನಂತರ ಇಳಿಬಿಟ್ಟ ಕೂದಲಿನ ಸುಂದರಿಯೊಬ್ಬಳು ಬಸ್ಸನ್ನೇರಿದಳು. ಸಿದ್ಧಾಂತ್’ನ ಪಕ್ಕದಲ್ಲೇ ಬಂದು ಕುಳಿತಳು. ಸಿದ್ಧಾಂತ್ ಹಾಡು ಕೇಳುವುದರಲ್ಲಿ...

ಕವಿತೆ

ಹೊಸಬೆಳಗು

ನಿಶೆಯ ಛಾದರವ ಕೊಡವಿ ಉಲಿದಿದೆ; ಜಗವು ಜಾಗರದ ಚಿಲಿಪಿಲಿ.! ಸೂರ್ಯಕಿರಣಗಳು ಮರಳಿ ತಂದಿವೆ, ನವ ಚೈತನ್ಯದ ಕಚಗುಳಿ.! ಬೆಳ್ಳಿ‌ ಇಬ್ಬನಿಯು ತೆಳ್ಳಗಾಗುತಿದೆ ಹೊನ್ನ ಕಿರಣಗಳ ಶಾಖಕೆ.! ಬಾನ ಕೆನ್ನೆಯದು ರಂಗೇರುತಿದೆ ಮೊಗದಿ ಮೂಡಿದೆ ನಾಚಿಕೆ.! ಹೂವ ದಳಗಳು ತೋಳ ಚಾಚಿವೆ, ಮಧುಗುಂಜನದಾಲಿಂಗನಕೆ! ಸಕಲ ಜೀವಗಳು ಸಜ್ಜುಗೊಂಡಿವೆ ಹೊಸಬೆಳಕಿನ ಸುಸ್ವಾಗತಕೆ! ಬೆಳ್ಳಕ್ಕಿಗಳ ಬಳಗವು...

ಅಂಕಣ

ಮಾಯಾ ಸುಂದರಿ

ಅವಳೊಬ್ಬಳು ಮಾಯಾ ಸುಂದರಿ. ಅವಳೆಂದರೆ ಎಲ್ಲರಿಗೂ ಹಿತ.  ತಾನು ಎಲ್ಲೇ ಹೋದರೂ, ಹೋದಲ್ಲೆಲ್ಲ ಎಲ್ಲರನ್ನೂ ಖುಷಿಪಡಿಸುವ ಲವಲವಿಕೆಯ ಅವ್ಯಕ್ತ ರೂಪ ಆಕೆ. ಸುತ್ತಮುತ್ತ ಓಡಾಡುತ್ತಿದ್ದರೂ ಕೈಗೆ ಸಿಗದವಳು ಅವಳು. ಅದಕ್ಕೆ ಅವಳನ್ನ ಕರೆದದ್ದು ಮಾಯಾ ಸುಂದರಿ ಎಂದು. ಯಾರವಳು ಎನ್ನುತ್ತಿದ್ದೀರಾ? ಅವಳ ಹೆಸರೇ ‘ತಂಗಾಳಿ’. ತಂಗಾಳಿ ಎಂಬ ಸುಂದರಿ ಸೋಕಿದಾಗೆಲ್ಲ ಮನದ...